ಅತ್ತೆ, ಸೊಸೆಯರ ಜಗಳ, ಭಿನ್ನಾಭಿಪ್ರಾಯ ಪ್ರತಿಮನೆಯ ದೋಸೆ ತೂತಿನಷ್ಟೇ ಸಹಜ. ಅತ್ತೆ ಮಾಡಿದ್ದು ಸೊಸೆಗೆ ಹಿಡಿಸಿರಲ್ಲ, ಸೊಸೆ ಮಾಡಿದ್ದು ಅತ್ತೆಗೆ ಬೇಕಾಗಿರುವುದಿಲ್ಲ. ಇದು ಮನೆಮನೆಯ ಕಥೆ. ಅಂಥದ್ದರಲ್ಲಿ ಅತ್ತೆ ಮತ್ತು ಸೊಸೆಯರಿಬ್ಬರೂ ಸೇರಿ ಅಡುಗೆ ಮಾಡಿದರೆ ರುಚಿ ಕೆಟ್ಟಂತೆಯೇ ಅಂದುಕೊಂಡಿರಾ? ಹಾಗಂದುಕೊಂಡವರು ನವೆಂಬರ್ 1ರಂದು ಪ್ರಸಾರವಾಗುತ್ತಿರುವ 'ರುಚಿ ಅಭಿರುಚಿ' ಬೆಸ್ಟ್ ಅತ್ತೆ ಸೊಸೆ ಜೋಡಿ ಅಡುಗೆ ಕಾರ್ಯಕ್ರಮವನ್ನು
ಜೀ ಕನ್ನಡ ವಾಹಿನಿಯ ಹೊಸ ಹಾಸ್ಯ ಧಾರಾವಾಹಿ ''ಪುರಂದರ ವಿಠಲ'' ಹೊಸ ವಿವಾದದಲ್ಲಿ ಸಿಕ್ಕಿಕೊಂಡಿದೆ. ಪುರಂದರದಾಸರ ಅಂಕಿತನಾಮವನ್ನು ಹಾಸ್ಯ ಧಾರಾವಾಹಿಯ ಶೀರ್ಷಿಕೆಯಾಗಿ ಬಳಸಿಕೊಂಡಿರುವುದರ ಬಗ್ಗೆ ''ಶ್ರೀ ಸುಮಧ್ವ ಸೇವಾ ಸಮಿತಿ ಟ್ರಸ್ಟ್' ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪುರಂದರ ವಿಠಲ ಹಾಸ್ಯ ಧಾರಾವಾಹಿ ನವೆಂಬರ್ 2ರಿಂದ ಪ್ರಸಾರವಾಗಲಿದೆ. ''ನಾರದ ಮಹರ್ಷಿಗಳ ಅಪರಾವತಾರ ಪುರಂದರದಾಸರು.
ಹಿಂದಿಯ ಜನಪ್ರಿಯ ವಾಹಿನಿ ಜೀ ಟಿ.ವಿ.ಯಲ್ಲಿ ಪ್ರಸಾರ ಕಾಣುತ್ತಿರುವ 'ಡಾನ್ಸ್ ಇಂಡಿಯಾ ಡಾನ್ಸ್' ತನ್ನ ಮೊದಲ ಸುತ್ತಿನ ಅಭೂತ ಪೂರ್ವ ಯಶಸ್ಸಿನ ನಂತರ ಎರಡನೇ ಸುತ್ತಿಗೆ ಅಣಿಯಾಗುತ್ತಿದೆ. ವೀಕ್ಷಕರ ಬಹುನಿರೀಕ್ಷಿತ ನೃತ್ಯಾಧಾರಿತ ಕಾರ್ಯಕ್ರಮ "ಡಾನ್ಸ್ ಇಂಡಿಯಾ ಡಾನ್ಸ್" ಮತ್ತೊಮ್ಮೆ ಕಿರುತೆರೆ ಮೇಲೆ ವಿಜೃಂಭಿಸಲು ಎಲ್ಲಾ ಸಿದ್ದತೆಗಳು ನಡೆದಿದ್ದು ಇದಕ್ಕೆ ಪೂರ್ವಭಾವಿಯಾಗಿ ದೇಶದಾದ್ಯಂತ ನೃತ್ಯಪಟುಗಳಿಗಾಗಿ ಆಡಿಷನ್ ನಡೆಸಲಾಗುತ್ತಿದ್ದು
ಬೆಂಗಳೂರು, ಅ. 16 : ಬಂಧುಬಾಂಧವರ ಅಣತಿಯನ್ನು ಧಿಕ್ಕರಿಸಿ ಪ್ರೇಮಿಸುವ ಹುಡುಗ ಹುಡುಗಿಯ ಮದುವೆ ದೇವಸ್ಥಾನಗಳಲ್ಲಿ, ಅಥವಾ ಪೊಲೀಸರ ಸಹಾಯದಿಂದ ಪೊಲೀಸು ಸ್ಟೇಷನ್ ನಲ್ಲಿ ನಡೆಯುವುದು ಅಪರೂಪವೇನಲ್ಲ. ಆದರೆ, ರಿಯಾಲಿಟಿ ಶೋನಲ್ಲಿಯೇ ಪ್ರೇಮಿಗಳು ಸಪ್ತಪದಿ ತುಳಿದಿದ್ದು ಅಪರೂಪ. ಇಂಥದೊಂದು ಅಪರೂಪದ ಗಳಿಗೆಗೆ ಜೀ ಕನ್ನಡದಲ್ಲಿ ಬರುತ್ತಿರುವ ಬದುಕು ಜಟಕಾ ಬಂಡಿ ಸಾಕ್ಷಿಯಾಗಿದೆ.ಸೋಮವಾರ ಮಧ್ಯಾಹ್ನ 1.30ಕ್ಕೆ ಪ್ರಸಾರ ಕಾಣುತ್ತಿರುವ
ತೀವ್ರ ಕುತೂಹಲ ಕೆರಳಿಸಿದ್ದ ಜೀ ಕನ್ನಡ ವಾಹಿನಿಯ 'ಸರಿಗಮಪ ಲಿಟ್ಲ್ ಚಾಂಪ್' ಕಾರ್ಯಕ್ರಮಕ್ಕೆ ಭಾನುವಾರ(ಸೆ.13) ತೆರೆಬಿತ್ತು. ಸರಿಗಮಪ ಲಿಟ್ಲ್ ಚಾಂಪ್ಸ್ 6ನೇ ಸೀರೀಸ್ ನಲ್ಲಿ ಜೀ ಕನ್ನಡ ಕರ್ನಾಟಕ ಬೆಸ್ಟ್ ಯುಗಳ ಧ್ವನಿಯನ್ನು ಹುಡುಕುವ ಪಣ ತೊಟ್ಟಿತ್ತು. ಬಾಲಕರಲ್ಲಿ ಪ್ರಥಮ ಬಹುಮಾನವನ್ನು ಯೋಗೇಂದ್ರ ಹಾಗೂ ಎರಡನೇ ಬಹುಮಾನವನ್ನು ಸಚಿನ್ ಅವರಿಗೆ ನೀಡಲಾಯಿತು. ಬಾಲಕಿಯರಲ್ಲಿ ಸಂಜನಾ (8)
ಮೂರ್ಖರ ಪೆಟ್ಟಿಗೆ ಇದೀಗ ಪ್ರೇಕ್ಷಕರ ಪಾಲಿಗೆ ಕಣ್ಣೀರ ಪೆಟ್ಟಿಗೆಯಾಗಿದೆ! ಸಲಿಂಗಕಾಮ, ವ್ಯಭಿಚಾರ, ಕಚೇರಿಯಲ್ಲಿ ಲೈಂಗಿಕ ಕಿರುಕುಳ, ಹದಿಹರಯದ ಸಮಸ್ಯೆಗಳು, ಏಡ್ಸ್ ,ಪತಿಯ ದಬ್ಬಾಳಿಕೆಯಂತಹ ಸಮಸ್ಯೆಗಳು ಸಂಜೆಯಾಗುತ್ತಿದ್ದಂತೆ ಪ್ರಸಾರವಾಗಲು ಪ್ರಾರಂಭಿಸುತ್ತವೆ. ಒಂದಾದ ನಂತರ ಒಂದು ರಿಯಾಲಿಟಿ ಕಾರ್ಯಕ್ರಮಗಳ ನಡುವೆ ಪೈಪೋಟಿ ಆರಂಭವಾಗುತ್ತದೆ. ಸಂಜೆ 7 ಗಂಟೆಯಾಗುತ್ತಿದ್ದಂತೆ ಜೀ ಕನ್ನಡಲ್ಲಿ ಮಾಳವಿಕಾ ನಡೆಸಿಕೊಡುವ 'ಬದುಕು ಜಟಕಾ ಬಂಡಿ'
ಕಿರುತೆರೆಯ ಜನಪ್ರಿಯ ನಟಿ ಜ್ಯೋತಿ ರೈ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುವ ಸಿದ್ಧತೆಯಲ್ಲಿದ್ದಾರೆ. ಕಿರುತೆರೆಯಲ್ಲಿ ಇವರು ಈಗಾಗಲೇ ಪ್ರಬುದ್ಧ ಪಾತ್ರಗಳನ್ನುಪೋಷಿಸಿದ್ದಾರೆ ಮನೆಮಾತಾಗಿದ್ದಾರೆ. ಬೆಳ್ಳಿತೆರೆಯಲ್ಲೂ ಇದೇ ರೀತಿಯ ಪಾತ್ರಗಳಲ್ಲಿ ಅಭಿನಯಿಸಬೇಕು ಎಂಬುದು ಜ್ಯೋತಿ ಅವರ ಒಲವು.ಜೀ ಕನ್ನಡ ವಾಹಿನಿಯ 'ಜೋಗುಳ' ಧಾರಾವಾಹಿಯಲ್ಲಿ ದೇವಕಿಯಾಗಿ ಹಲವು ಮಹಿಳೆಯರ ಮನಗೆದ್ದಿದ್ದಾರೆ ಜ್ಯೋತಿ. ಈ ಧಾರಾವಾಹಿಯಲ್ಲಿ ಜ್ಯೋತಿ ಅವರದು ಬಾಡಿಗೆ ತಾಯಿಯ ಪಾತ್ರ. ಅದನ್ನು
ಜೀ ಕನ್ನಡ ವಾಹಿನಿಯ 'ಜೋಗುಳ' ಧಾರಾವಾಹಿ ಯಶಸ್ವಿ 200 ಕಂತುಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ವಿನು ಬಳಂಜ ತಂಡ ಬೆಂಗಳೂರಿನ ಸಾಲಿಟೇರ್ ಹೋಟೆಲ್ ನಲ್ಲಿ ಶನಿವಾರ ಸಂಜೆ ಆಚರಿಸಿಕೊಂಡು ಖುಷಿಪಟ್ಟಿತು. ಇದೇ ಸಂದರ್ಭದಲ್ಲಿ ಖ್ಯಾತ ರಂಗಭೂಮಿ ಕಲಾವಿದೆ ಬಿ ಜಯಶ್ರೀ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಮಂಜುನಾಥ ಹೆಗಡೆ ಅವರನ್ನು ಜೋಗುಳ ತಂಡ
'ನಮ್ಮಮ್ಮ ಶಾರದೆ' ಎಂಬ ಅತ್ಯಾಕರ್ಷಕ ಶೀರ್ಷಿಕೆಯ ದೈನಿಕ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಆಗಸ್ಟ್ 17ರಿಂದ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಗಂಡು ಮಗುವಿಗಾಗಿ ಹಂಬಲಿಸುವ, ಹೆಣ್ಣು ಭ್ರೂಣ ಹತ್ಯೆಯಂತಹ ಪ್ರಚಲಿತ ಸಮಸ್ಯೆಗಳೇ ಈ ಮೆಗಾ ಧಾರಾವಾಹಿ ಹೂರಣ.ಜೀ ಕನ್ನಡ ಆಮಂತ್ರಣ ಪತ್ರದಲ್ಲಿ'ನಮ್ಮಮ್ಮ ಶಾರದೆಗೊಂದು ಗಂಡು ಮಗು ಬೇಕಾಗಿದೆ' ಎಂಬ ಒಕ್ಕಣೆ ನೋಡಿ ಹಲವು ಪತ್ರಕರ್ತರು
ಟಿವಿ ವಾಹಿನಿಯಲ್ಲಿ ರಿಯಾಲಿಟಿ ಶೋ. ತೀರ್ಪುಗಾರರ ಸಾಲಿನಲ್ಲಿ ಕೂತಿದ್ದವರು ಹಂಸಲೇಖ. ಅಲ್ಲಾದ ತಮಾಷೆ ನೋಡಿ; ಒಂದು ಮಗು ಪ್ರೀತೀನೆ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಹಾಡಿತು. ಹಾಡು ಮುಗಿದ ಮೇಲೆ ಹಂಸ್ ಉದ್ದುದ್ದವಾಗಿ ಮಾತಾಡಿದರು. ದಿನವು ನಿತ್ಯ ಉಗಾದಿನೇ ಎಂಬ ದ್ವಿರುಕ್ತಿಯನ್ನು ಸಾಹಿತಿ ಬಹಳ ಚೆನ್ನಾಗಿ ಬಳಸಿದ್ದಾರೆ ಎಂದರು. ಖುದ್ದು ಚಿ.ಉದಯಶಂಕರ್ ಹತ್ತಿರ ಅವರು