ಅಮೇರಿಕಾದ ಸ್ವಾರಸ್ಯಗಳನ್ನು ಹ೦ಚಿಕೊಳ್ಳುವಾಗ ಉತ್ತಮವಾಗಿ ಸ್ಪ೦ದಿಸುತ್ತಿರುವ ಎಲ್ಲ ಓದುಗರಿಗೂ ನನ್ನ ವ೦ದನೆಗಳು. ಹಲವು ಓದುಗರು ತಮ್ಮ ಅನುಭವಗಳನ್ನೂ ಹ೦ಚಿಕೊ೦ಡಿದ್ದಾರೆ ಅವರಿಗೆ ನನ್ನ ವಿಶೇಷ ಕೃತಜ್ನತೆಗಳು. ಅವರಿ೦ದಾಗಿ ನಾನು ಹೊಸ ವಿಷಯಗಳನ್ನು ತಿಳಿದುಕೊ೦ಡ೦ತಾಗಿದೆ. "ಅವರವರ ಅನುಭವ ಅವರವರಿಗೆ" ಎ೦ಬ ಸೂತ್ರದ೦ತೆ ಅದೇ ಅನುಭವ ನಮಗೂ ಆಗಬಹುದು, ಅಗದೆ ಇರಲೂಬಹುದು. ಆದಾಗ್ಯೂ ನಮ್ಮ ತಿಳಿವಳಿಕೆ/ಅನುಭವವೇ ಅ೦ತಿಮವಲ್ಲ. ಪ್ರತಿಕ್ಷಣವೂ ಹೊಸತನ್ನು ನೋಡುವ,
ಅಮೇರಿಕಾ ಕಾಫಿ ಕುಡಿಯುವವರ ಸ್ವರ್ಗ. ಇಲ್ಲಿಯ ಜನ ಹೆಚ್ಚಾಗಿ ಕಾಫಿಯನ್ನು ಕುಡಿಯುತ್ತಾರೆ, ಆದರೆ ಇಲ್ಲಿ ಬೈಟು ಪದ್ದತಿ ಇಲ್ಲ. ಏನೇ ಕುಡಿದರೂ ದೊಡ್ಡ ದೊಡ್ಡ ಲೋಟದಲ್ಲಿ ಕುಡಿಯುತ್ತಾರೆ. ಹಲವು ಕಡೆ ಕಾಫಿ ಉಚಿತವಾಗಿ ಸಿಗುತ್ತದೆ. ಇಲ್ಲಿ ಕಾಫಿಗೆ ಹಾಲು ಸೇರಿಸಿ ಕುಡಿಯುವುದಿಲ್ಲ, ಬದಲಾಗಿ ಕೆಲವರು ಹಾಲಿನ ಕೆನೆಯನ್ನು (ಕ್ರೀಮರ್) ಕೊಂಚ ಸೇರಿಸಿಕೊಳ್ಳುತ್ತಾರೆ. ಪ್ರತೀ ಕಡೆಯೂ ಹಲವಾರು ರುಚಿಗಳ
ಅಮೇರಿಕಾ ಅ೦ದ ತಕ್ಷಣ ಅನೇಕರಿಗೆ ಅದು ಶೀತಲ ದೇಶ (ಕೋಲ್ಡ್ ಕ೦ಟ್ರಿ). ಆದರೆ ವಾಸ್ತವದಲ್ಲಿ ಇಲ್ಲಿ ಎಲ್ಲ ರೀತಿಯ ಹವಾಮಾನವಿದೆ. ಡಲ್ಲಾಸ್(ಡ್ಯಾಲಸ್) ಇರುವುದು ದಕ್ಷಿಣದ ಟೆಕ್ಸಾಸ್ ನಲ್ಲಿ, ಡೆಟ್ರಾಯಿಟ್ ಇರುವುದು ಉತ್ತರದ ತುದಿಯಲ್ಲಿ, ಕೆನಡಾದ ಅ೦ಚಿನಲ್ಲಿ. ಅವತ್ತು ಡಲ್ಲಾಸ್ ನ ಬಿಸಿ ಬೇಗುದಿಯಿ೦ದಾಗಿ ಹತ್ತಿಯ ಬರೀ ತೆಳು ಬಟ್ಟೆಯನ್ನು ತೊಟ್ಟು ಹೊರಟಿದ್ದ ನನಗೆ ಡೆಟ್ರಾಯಿಟ್ ನ
ಈ ಲೋಕವೇ ಒಂದು ವಿಚಿತ್ರ. ನಾವೇನು ಅಂದ್ರೊಂಡಿರ್ತೀವೋ ಅದು ಹಾಗಿರುವುದಿಲ್ಲ. ದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲ.. ಎನ್ನುವ ಗುರು ಶಿಷ್ಯರು ಚಿತ್ರದ ಹಾಡು ಕೇಳಿರಬೇಕಲ್ಲ? ಹಾಗೆಯೇ! ಪ್ರತಿಯೊಬ್ಬರಿಂದಲೂ ಪ್ರತಿಯೊಂದು ವಿಷಯದಿಂದಲೂ ಕಲಿಯುವುದು ಇದ್ದೇ ಇರುತ್ತದೆ. ಭೂಮಿ ಗುಂಡಗಿದೆಯಲ್ಲವೆ? ವೆಂಕಟೇಶ್ ದೊಡ್ಮನೆಯವರು ಉಣಬಡಿಸಿದ್ದ ದೊಡ್ಡಣ್ಣನ ಮನೆಯ ವಿಸ್ಮಯಗಳ ಮುಂದುವರಿದ ಭಾಗದಲ್ಲಿ ಈ ವಿಷಯ ಮನದಟ್ಟಾಗುತ್ತದೆ. ಮೊದಲ ಭಾಗದಲ್ಲಿ ಅನೇಕರು
ಭಾರತದಿಂದ ಅಮೆರಿಕಾಕ್ಕೆ ಮೊದಲ ಬಾರಿ ಹೋದವರಿಗೆ ಅಲ್ಲಿನ ಜೀವನಶೈಲಿಗೆ ಒಗ್ಗಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ಅಲ್ಲಿನವರ (ಅಮೆರಿಕದಲ್ಲಿಯೇ ನೆಲೆನಿಂತ ಭಾರತೀಯರೂ ಸೇರಿ) ಜೀವನಕ್ರಮ, ರೀತಿರಿವಾಜು ಎಲ್ಲ ವಿಭಿನ್ನ. ಹೊಂದಿಕೊಳ್ಳುವವರೆಗೆ ಒಬ್ಬೊಬ್ಬರಿಗೂ ಒಂದೊಂದು ರೀತಿ ವಿಶಿಷ್ಟ ಅನುಭವ ಆಗುತ್ತಲೇ ಇರುತ್ತದೆ. ಅಮೆರಿಕಾ ಮಾತ್ರವಲ್ಲ ಬೇರೆ ದೇಶಗಳಿಗೆ ಹೋದರೂ ವಿಭಿನ್ನ ಅನುಭವಗಳಿಗೆ, ಸ್ವಾರಸ್ಯಕರ ಘಟನೆಗಳಿಗೆ ತೆರೆದುಕೊಳ್ಳಬೇಕಾಗುತ್ತದೆ. ಅಮೆರಿಕಾದಲ್ಲಿ ಘಟಿಸಿದ ಸ್ವಾರಸ್ಯಕರ
ನೀವು ’ಯಕ್ಷಗಾನ’ವನ್ನು ನೋಡಿರಲೇಬೇಕು. ಇನ್ನೂ ನೋಡಿಲ್ಲವಾದರೆ ಕರ್ನಾಟಕದವರಾಗಿಯೂ ನಮ್ಮದೇ ಆದ ಒ೦ದು ಅದ್ಭುತ ಕಲೆಯನ್ನು ತು೦ಬಾ ಮಿಸ್ ಮಾಡಿಕೊ೦ಡಿದ್ದೀರ ಎ೦ದೇ ಅರ್ಥ. ಪ್ರತಿಯೊ೦ದು ಕಲೆಗೂ ಅದರದೇ ಆದ ವೈಶಿಷ್ಟತೆ ಇದೆ. ಆದರೆ ಪೌರಾಣಿಕ ಪಾತ್ರಗಳನ್ನು ಇಷ್ಟು ಪರಿಣಾಮಕಾರಿಯಾಗಿ ಬಹುಶಃ ಬೇರಾವ ಮಾಧ್ಯಮದಲ್ಲೂ ಅಭಿನಯಿಸಿ ತೋರಿಸಲು ಆಗದು. ಕೇರಳಕ್ಕೆ ಮೋಹಿನಿಆಟ್ಟ೦, ತಮಿಳರಿಗೆ ಕುಚುಪುಡಿ/ಭರತ ನಾಟ್ಯಮ್, ಒರಿಯಾದವರಿಗೆ ಕಥಕ್ಕಳಿ, ಪ೦ಜಾಬಿಗಳಿಗೆ
(ಮುಂದುವರಿದಿದೆ...)ತಾಳಮದ್ದಳೆ(ಲೆ)ಯಲ್ಲಿ ಮುಮ್ಮೇಳದ ಪಾತ್ರಗಳು ’ವೇಷ-ಭೂಷಣ’ಗಳನ್ನು ಧರಿಸಿರುವುದಿಲ್ಲ. ನಮ್ಮನಿಮ್ಮ೦ತೆಯೇ ಇದ್ದು ಸಾ೦ಪ್ರದಾಯಿಕ ಉಡುಗೆ ತೊಟ್ಟಿರುತ್ತಾರೆ. ಹಾಗೇ ಪಾತ್ರಗಳು ಹೆಜ್ಜೆ ಹಾಕುವುದಾಗಲಿ, ನೃತ್ಯಮಾಡುವುದಾಗಲಿ ಇರುವುದಿಲ್ಲ. ಹಿಮ್ಮೇಳದಲ್ಲಿ ಯಥಾಪ್ರಕಾರ ಚ೦ಡೆ-ಮದ್ದಳೆಯವರು, ಭಾಗವತರು ಕುಳಿತಿರುತ್ತಾರೆ. ಭಾಗವತರ ಪದ್ಯಗಳಿಗೆ ಪಾತ್ರಧಾರಿಗಳು ಅರ್ಥಹೇಳುತ್ತಾ ಸ೦ಭಾಷಿಸುತ್ತಾರೆ. ತಾಳ ಮದ್ದಳೆ ಸಾಮಾನ್ಯವಾಗಿ 2-3 ಗಂಟೆಯ ಅವಧಿಯದಾಗಿರುತ್ತದೆ. ಕೆಲವೊಮ್ಮೆ ರಾತ್ರಿಯಿ೦ದ ಬೆಳಗಿನ ತನಕ ನಡೆದ ಪ್ರಸ೦ಗಗಳೂ ಇವೆ.ಇದಕ್ಕೆ ಸರ್ವಸಜ್ಜಿತ ರ೦ಗಸ್ಥಳದ
ಸರಿಯಾಗಿ ಹದಿನಾಲ್ಕು ವರ್ಷಗಳ ಹಿ೦ದೆ, ನನ್ನ ಮನ ಕಲಕಿದ ಒ೦ದು ದೃಶ್ಯವನ್ನು ಅಕ್ಷರಗಳಲ್ಲಿ ಸೆರೆಹಿಡಿದಿದ್ದು ಹೀಗೆ.* ವೆ೦ಕಟೇಶ್ ದೊಡ್ಮನೆಹರಕು ಚಾಪೆಯಮೇಲೆಸುಖನಿದ್ರೆ ಉ೦ಡ ಸಣ್ಣಮರಿ ಛ೦ಗನೆ ಎದ್ದುಹೊರಟಿತು ಪುಟ್ಟ ಪುಟ್ಟ ಹೆಜ್ಜೆ ಇಡುತಕೈಯಲ್ಲಿ ಕಣ್ಣು ಮೂಗು ಉಜ್ಜುತ...ಮರಳುಗುಡ್ಡೆಯ ಮೇಲೆ ಹೊರಳಾಡಿನುಣುಪು ಕಲ್ಲುಗಳ ಹೆಕ್ಕಿಲ೦ಗದ ಮಡುವಿನಲ್ಲಿ ತು೦ಬಿದರೆ ಆಯಿತುಅದಕೊ೦ದು ಆಟ.’ಗೊ೦ಬೆ’ ಎ೦ದರೆ ಏನು?ಚೆ೦ಡ೦ದರೆ ಏನು?ಬ್ಯಾಟ೦ತೆ, ಏನು ಹಾಗ೦ದರೆ?ಪಕ್ಕದ ಹುಡುಗಿಯ ಪ್ರಶ್ನೆಗೆ
ಆ೦ಧ್ರ-ಮಹಾರಾಷ್ಟ್ರ ಗಡಿಯ ಒ೦ದು ಊರು. ಕಡುಬಡವರಾದ ಆ ಊರಿನ ರೈತ ದ೦ಪತಿಗಳಿಗೆ ವಿದ್ಯೆಯಲ್ಲಿ ಶ್ರೀಮ೦ತನಾಗಿದ್ದ ಒಬ್ಬನೇ ಮಗ ಇದ್ದ. ಎಲ್ಲಾ ತರಗತಿಯಲ್ಲೂ ಮೊದಲ ಸ್ಥಾನಗಳಿಸಿ ಸ್ಕಾಲರ್ಶಿಪ್ಪಿನಲ್ಲೇ ಎ೦ಜಿನಿಯರಿ೦ಗ್ ಮಾಡಿಮುಗಿಸಿದಾಗ ತ೦ದೆ-ತಾಯಿಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಇನ್ನೇನು ಮಗ ಕೆಲಸಕ್ಕೆ ಸೇರಿಕೊ೦ಡು ತಮ್ಮ ಜೀವನಕ್ಕೆ ಆಧಾರವಾಗಿರುತ್ತಾನೆ ಅ೦ದುಕೊಳ್ಳುತ್ತಿರುವಾಗ ಹುಡುಗ ಬೇರೆಯದೇ ಯೋಚನೆ ಮಾಡಿದ. ಆ೦ಧ್ರದ ಬಹುತೇಕ ಹುಡುಗರ೦ತೆ ಅವನೂ
ಒ೦ದು ಮಾತ್ರ ಸತ್ಯ. ತಾಯಿಯ ಹಾಲಿಗೆ ಹೇಗೆ ಯಾವ ಹಾಲೂ ಸಾಟಿಯಲ್ಲವೋ ಹಾಗೇ, ತಾಯಿ (ಪೋಷಕರು) ಹೇಳಿಕೊಡುವ ನಾಲ್ಕಕ್ಷರಕ್ಕೆ ಯಾವ ಡಿಗ್ರಿಯೂ ಸಾಟಿಯಿಲ್ಲ. ಮನೆಯಲ್ಲಿನ ಮನೆಯಲ್ಲಿನ ಸ್ವಚ್ಚ ವಾತಾವರಣ, ಸ೦ಸ್ಕೃತಿ, ತಾಜಾತನಕ್ಕೆ ಬೇರೆ ಯಾವ ಶಿಬಿರವೂ ಸಾಟಿ ಅಲ್ಲ, ಇಲ್ಲೇ ನಮ್ಮ ಮಕ್ಕಳ ಅರ್ಧ ಭವಿಷ್ಯ ನಿರ್ಧಾರವಾಗುವುದು. ಮಕ್ಕಳ ಎಳೆಯ ಮನಸ್ಸು ಎಲ್ಲವನ್ನೂ ಹೀರಿಕೊಳ್ಳುವುದೇ ನಮ್ಮ ಈ