ತುಮಕೂರು, ನ. 13 : ಭೀಕರ ಮಳೆಯಿಂದ ತತ್ತರಿಸಿ ಹೋಗಿರುವ ಉತ್ತರ ಕರ್ನಾಟಕದ ಜನತೆ ತುತ್ತು ಅನ್ನಕ್ಕೆ ಪರದಾಡುತ್ತಿರುವ ಸಂದರ್ಭದಲ್ಲಿ ಆಡಳಿತ ನಡೆಸುವವರು ಎರಡು ಪಕ್ಷಗಳಾಗಿ ಹೈದರಾಬಾದ್ ಗೋ ಇನ್ನೆಲ್ಲಿಗೋ ಹೋಗುವುದು ಇದ್ಯಾವ ಧರ್ಮ, ಇದೇನಾ ನಮ್ಮ ಸಂಸ್ಕೃತಿ. ಮನುಷ್ಯ ಮೊದಲು ಮಾನವನಾಗಿ ಬದುಕುವುದನ್ನು ಕಲಿತು ಕೊಳ್ಳಬೇಕು ಎಂದು ತ್ರಿವಿಧ ದಾಸೋಹಿ ತುಮಕೂರು ಸಿದ್ದಗಂಗಾ ಮಠದ
ಬೆಂಗಳೂರು, ನ.5: ತುಮಕೂರು ಬಳಿ ಜಪಾನ್ ಕೈಗಾರಿಕೆ ಪಾರ್ಕ್ಗೆ ಒಂದು ಸಾವಿರ ಎಕರೆ ಜಮೀನು ನೀಡಲು ಸರಕಾರ ಮುಂದಾಗಿದೆ. ಕೈಗಾರಿಕೆ ಬೆಳವಣಿಗೆಗೆ ರಾಜ್ಯ ನೀಡುತ್ತಿರುವ ಉತ್ತೇಜನ ಹಾಗೂ ಬಂಡವಾಳ ಹೂಡಿಕೆಗೆ ಪೂರಕ ವಾತಾವರಣ ಇರುವುದರಿಂದ, ಜಪಾನ್ನ ಕಂಪನಿಗಳು ಆಸಕ್ತಿ ತೋರಿಸಿವೆ. ರಾಜ್ಯ ಹಾಗೂ ಜಪಾನ್ ನಡುವೆ ಒಪ್ಪಂದ ಏರ್ಪಟ್ಟಲ್ಲಿ, ತುಮಕೂರು ಬಳಿ ಕೈಗಾರಿಕೆ ಪಾರ್ಕ್ ತಲೆ ಎತ್ತಲಿದೆ.ಜಪಾನ್
ಬೆಂಗಳೂರು, ಸೆ.5: ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ (ಎನ್ಎಚ್4) ರಸ್ತೆ ಅಗಲೀಕರಣ ಹಾಗೂ ರಸ್ತೆ ಮೇಲ್ಸೆತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣ ವಾಹನಗಳ ಸಂಚಾರವನ್ನು ಬೇರೆಡೆಗೆ ತಿರುಗಿಸಲಾಗಿದೆ. ಸೋಮವಾರದಿಂದ (ಸೆ.7) ಈ ಬದಲಾವಣೆ ಜಾರಿಯಾಗಲಿದೆ.*ತುಮಕೂರಿನಿಂದ ಹೈದರಾಬಾದ್ ಮತ್ತು ಓಲ್ಡ್ ಮದ್ರಾಸ್ ರಸ್ತೆ ಕಡೆಗೆ ಹೋಗುವ ಬೃಹತ್ ಸರಕು ಸಾಗಣೆ ವಾಹನಗಳು ದಾಬಾಸ್ ಪೇಟೆ ಬಳಿ
ರಾಮನಗರ, ಆ. 4 : ಡ್ರಾಪ್ ಕೊಡುವ ನೆಪದಲ್ಲಿ ರಾಮನಗರದ ಶಾಲಾ ಶಿಕ್ಷಕಿ ಕುಮುದಾ ಎಂಬುವವರನ್ನು ಅಪಹರಿಸಿ ಕಾಮದಾಟವಾಡಿ ಆಭರಣಗಳನ್ನ ದೋಚಿ ಕೊಲೆ ಮಾಡಿದ್ದ 8 ಮಂದಿ ಕಾಮುಕರು ರಾಮನಗರ ಪೋಲೀಸರ ಅತಿಥಿಯಾಗಿದ್ದಾರೆ. ದುಷ್ಕರ್ಮಿಗಳ ಬಂಧನದಿಂದ ಕಳೆದ ವರ್ಷ ನಡೆದ ಕುಣಿಗಲ್ ನ ಶಿಕ್ಷಕಿಯ ಕೊಲೆಯಲ್ಲಿಯೂ ಇವರು ಭಾಗಿಯಾಗಿದ್ದರೆಂಬುದು ಬಯಲಾಗಿದೆ.ಮೂರು ದಿನಗಳ ಹಿಂದೆ ಕುಮುದಾ ನಾಪತ್ತೆಯಾಗಿ ಸೋಮವಾರ
ಓ ಮಳೆಯ ಮೋಡಗಳೆ ಮಾತನಾಡಿಮುಂದೆ ಸಾಗುವ ಮುನ್ನಒಂದಿಷ್ಟು ಮಳೆಹನಿಯ ಸುರಿಸಿ ಸಾಗಿಮುದುಡಿದ ಮಲ್ಲಿಗೆಗೆ ಮುದವ ನೀಡಿಬಾಡಿದ ಬನಕೆ ಭವ್ಯ ಕಳೆ ನೀಡಿಬಾಯಾರಿದ ಭುವಿಗೆ ತಣೆವ ನೀಡಿಧರೆಯು ರವಿಯ ಬಿಸಿಯುಸಿರಿಗೆ ಬರುಡಾಗುತಿದೆಸಂಜೆಗತ್ತಲ ನೋಟವೆಲ್ಲ ಕರಾಳ ಬದುಕಾಗುತಿದೆಹಸಿರೆಲ್ಲವು ಹಸಿದವರ ಮಕ್ಕಳಂತೆ ಬಾಡುತಿವೆಭಾಸ್ಕರನ ಬಿಸಿಲಿಗೆ ಬರವಿಲ್ಲದಂತಾಗಿದೆಕಾಡೆಲ್ಲವು ಕೊರಗಿ ಕೊರಡಾಗಿದೆಬಾನೆಲ್ಲವು ಭಸ್ಮದ ಧೂಮದಂತೆ ಬಿಳುಚು ಬಿಳುಚಾಗಿದೆಹಟಕ್ಕೆ ಬಿದ್ದು ಅಳುವ ಮಗುವಿನಂತೆನವರ್ರಾತಿಯಲ್ಲಿ ಭೋರ್ಗರೆವ ಆಸೆಯಂತೆಜೀವಾಣು
ಬೆಂಗಳೂರು, ಜೂ. 18 : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ವೀರಣ್ಣ ಸೋಮಣ್ಣ ಕುಟುಂಬ ಸಮೇತ ಮಧ್ಯಾಹ್ನ ತುಮಕೂರಿನ ಸಿದ್ಧಗಂಗಾ ಮಠಕ್ಕೆ ತೆರಳಿ ಜಗದ್ಗುರು ಶಿವಕುಮಾರ ಸ್ವಾಮೀಜಿಗಳ ಆರ್ಶೀವಾದ ಪಡೆದರು. ಜನರ ನಿರೀಕ್ಷೆ ಅರಿತು ಜನಸೇವೆ ಮಾಡಿ ಎಂದು ಶಿವಕುಮಾರ ಶ್ರೀಗಳು ಸೋಮಣ್ಣ ಅವರಿಗೆ ಕಿವಿಮಾತು ಹೇಳಿದರು.
ಬೆಂಗಳೂರು, ಜೂ. 12 : ಯುವಜನರನ್ನು ರಕ್ಷಣಾ ಸೇವೆಗೆ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೇರುವಂತೆ ತರಬೇತಿಗೊಳಿಸಲು ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ, ಮುಖ್ಯ ನಿರ್ವಹಣಾಧಿಕಾರಿ, ಜಿಲ್ಲಾ ವಾರ್ತಾಧಿಕಾರಿಯನ್ನೊಳಗೊಂಡ ಸಮಿತಿ ರಚನೆ ಮಾಡಿ, ಜಿಲ್ಲಾ ಯುವಜನ ಸೇವಾ ಅಧಿಕಾರಿಯು ಇದಕ್ಕೆ ಸಮನ್ವಯಾಧಿಕಾರಿಯಾಗಿ ಯುವಕರಿಗೆ ರಕ್ಷಣಾ ಸೇವೆಯ ಪ್ರವೇಶ ಪರೀಕ್ಷೆಗೆ ಅಗತ್ಯವಾದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲು ಕಾರ್ಯಕ್ರಮ ರೂಪಿಸುವ ವ್ಯವಸ್ಥೆ ಮಾಡುವ ಬಗ್ಗೆ
ಗುಬ್ಬಿ, ಜೂ. 9 : ಹಲಸಿನ ಹಣ್ಣು ಹಣ್ಣಾಗಿ ಬಳಕೆಯಾಗುವುದರ ಜತೆಗೆ ಆಹಾರವಾಗಿಯೂ ಬಳಕೆಯಾಗಬೇಕು ಎಂದು ಸಾವಯುವ ಕೃಷಿ ತಜ್ಞ ಎ.ಪಿ ಚಂದ್ರಶೇಕರ್ ತಿಳಿಸಿದರು. ತಾಲೂಕಿನ ನಿಟ್ಟೂರು ಶ್ರೀ ವಿನಾಯಕ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತೋಟಗಾರಿಕಾ ಇಲಾಖೆ, ತಿಪಟೂರಿನ ಬೈಫ್ ಗ್ರಾಮೀಣಾಭಿವೃದ್ದಿ ಸಂಸ್ಥೆ, ಹಾಗೂ ತಾಲೂಕಿನ ಹಲಸು ಬೆಳೆಗಾರರ ಸಹಯೋಗದಲ್ಲಿ ನಡೆದ ಹಲಸು ಮೇಳ ಕಾರ್ಯಕ್ರಮದಲ್ಲಿ
ಬೇಲಿಯೇ ಎದ್ದು ಹೊಲ ಮೇಯ್ದ ಗಾದೆಗೆ ಪ್ರತ್ಯಕ್ಷ ಸಾಕ್ಷಿಯಂತಿದೆ ಗುಬ್ಬಿ ತಾಲೂಕಿನಲ್ಲಿ ಅಕ್ರಮವಾಗಿ ಗಣಿಗಾರಿಕೆಗೆ ಅನುಮತಿ ನೀಡಿದ ಪ್ರಕರಣ. ಗಣಿಧಣಿ ಮತ್ತು ಸರಕಾರಿ ಅಧಿಕಾರಿಗಳ ಅನೈತಿಕ ಮೈತ್ರಿಯನ್ನು ಈ ಪ್ರಕರಣ ಬೆತ್ತಲು ಮಾಡಿದೆ. ಇಷ್ಟು ಸಾಲದೆಂಬಂತೆ ಉಚ್ಚ ನ್ಯಾಯಾಲಯಕ್ಕೆ ಕೂಡ ತಪ್ಪು ಮಾಹಿತಿ ನೀಡಲಾಗಿದೆ. ಈ ಪ್ರಕರಣದ ತನಿಖೆ ಮಾಡಬೇಕೆಂದು ರೈತರು ದುಂಬಾಲು ಬಿದ್ದಿದ್ದಾರೆ. ರೈತರಿಗೆ ನ್ಯಾಯ
ಬೆಂಗಳೂರು, ಮೇ. 16 : ತುಮಕೂರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ಜಯಗಳಿಸಿದ್ದಾರೆ. ತಮ್ಮ ಸಮೀಪಿದ ಪ್ರತಿಸ್ಪರ್ಧಿ ಜೆಡಿಎಸ್ ನ ಮುದ್ದುಹನುಮೇಗೌಡ ಅವರನ್ನು ಸುಮಾರು 30 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ. ಆರಂಭದಿಂದ ಕೊನೆ ಕ್ಷಣದವರೆಗೂ ಕಾಂಗ್ರೆಸ್ ಅಭ್ಯರ್ಥಿ ಎಸ್ ಎಸ್ ಮಲ್ಲಿಕಾರ್ಜುನ ಮುಂದಿದ್ದರು. ಆದರೆ ಪವಾಡಸದೃಶ ರೀತಿಯಲ್ಲಿ ಮೇಲೆದ್ದ ಬಿಜೆಪಿಯ ಜಿ