ಶಿವಮೊಗ್ಗ, ನ.20 : ಕೋಟೆ ಪೊಲೀಸ್ ಠಾಣೆ, ದೊಡ್ಡಪೇಟೆ ಪೊಲೀಸ್ ಠಾಣೆ, ಜಯನಗರ ಪೊಲೀಸ್ ಠಾಣೆ ಹಾಗೂ ಹೊಳೆಹೊನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಂದೇ ರಾತ್ರಿಯಲ್ಲಿ ಸರಣಿ ದರೋಡೆ ನಡೆದಿದ್ದು, ನಗ ನಾಣ್ಯ ಲೂಟಿ ಮಾಡಲಾಗಿದೆ.ಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಂಕರಮಠ ರಸ್ತೆಯಲ್ಲಿರುವ ಶಂಕರ ಮಠದ ದೇವಸ್ಥಾನದ ಬಾಗಿಲನ್ನು ಮುರಿದು, ದೇವರ ವಿಗ್ರಹಕ್ಕೆ ಹಾಕಲಾಗಿದ್ದ ಸುಮಾರು
ಬೆಂಗಳೂರು, ನ. 18 : ಕೇಂದ್ರ ಸರಕಾರದ ಪ್ರತಿಯೊಂದು ಇಲಾಖೆಗಳಲ್ಲೂ ಪ್ರತ್ಯೇಕ ಅಂಗವಿಕಲರ ವಿಭಾಗ ಇರಬೇಕು. ಆ ವಿಭಾಗಕ್ಕೆ ಒಬ್ಬ ಅಧಿಕೃತ ಅಧಿಕಾರಿಯನ್ನು ಇಲಾಖೆ ನೇಮಿಸಿ ಆದೇಶ ಹೊರಡಿಸಬೇಕು ಎಂದು ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಆದೇಶಿಸಿದೆ.ಸರಕಾರದ ನಾನಾ ಕ್ಷೇತ್ರಗಳಲ್ಲಿ ಹಲವಾರು ಮಂದಿ ಅಂಗವಿಕಲರು ದುಡಿಯುತ್ತಿದ್ದು ಅವರ ಕ್ಷೇಮ ಅಭಿವೃದ್ಧಿ ಮತ್ತು ಸೇವಾ
ಶಿವಮೊಗ್ಗ, ನ. 17: ಬದಲಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಜಾಗತಿಕ ತಾಪಮಾನ, ವಾಯುಮಾಲಿನ್ಯ ಹೆಚ್ಚುತ್ತಿರುವುದಕ್ಕೆ ನಾವೆಲ್ಲ ಕಾರಣ ಎಂದು ಜಿಲ್ಲಾಧಿಕಾರಿ ಪಂಕಜಕುಮಾರ್ ಪಾಂಡೆ ಹೇಳಿದರು. ಸಾರಿಗೆ ಇಲಾಖೆ, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಮತ್ತು ಶಿವಮೊಗ್ಗ ರೌಂಡ್ ಟೇಬಲ್ ಇವರ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಮತ್ತು ಸುರಕ್ಷತೆ ನಿಯಮಗಳ ತಿಳುವಳಿಕೆ ಕಾರ್ಯಕ್ರಮವನ್ನು
ಹೊನ್ನಾವರ, ನ. 16: ಉತ್ತರ ಕನ್ನಡ ಜಿಲ್ಲೆಯ ಮಾವಿನಗುಂಡಿ ಬಳಿಯ ಸೂಳಕೇರಿ ಎಂಬಲ್ಲಿ ಭೀಕರ ರಸ್ತೆ ದುರಂತ ನಡೆದಿದೆ. ಶಿವಮೊಗ್ಗದಿಂದ ಬಂಗಾರುಮಕ್ಕಿಗೆ ತೆರಳುತ್ತಿದ್ದ ಬಸ್ 60 ಅಡಿ ಆಳದ ಪ್ರಪಾತಕ್ಕೆ ಬಸ್ ಉರುಳಿದೆ. ಐವರಿಗೆ ತೀವ್ರಗಾಯಗಳಾಗಿದೆ, ಮಿಕ್ಕಂತೆ 50ಕ್ಕೂ ಅಧಿಕ ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.ಬ್ರೇಕ್ ಫೇಲ್ ಆಗಿರುವ ಶಂಕೆ:ಸುಮಾರು 80
ಶಿವಮೊಗ್ಗ, ನ. 14 : ಇಲ್ಲಿಗೆ ಸಮೀಪದ ಹಸೂಡಿ ಎಸ್.ಆರ್.ಕೆ.ಮಾಡೆಲ್ ಸ್ಕೂಲ್ನಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರ್ಲಾಲ್ ನೆಹರು ಅವರ ಜನ್ಮ ದಿನದ ಅಂಗವಾಗಿ ಮಕ್ಕಳ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.ಮಕ್ಕಳ ದಿನಾಚರಣೆಯಂದು ಮುಖ್ಯ ಅತಿಥಿಯೊಬ್ಬರನ್ನು ಕರೆಸಿ ಚಾಚಾ ನೆಹರೂ ಬಗ್ಗೆ, ಮಕ್ಕಳ ದಿನಾಚರಣೆ ಬಗ್ಗೆ ಭಾಷಣ ಬಿಗಿಸುವುದು ರೂಢಿಯಾಗಿದೆ. ಆದರೆ, ಇಂದು ಮಕ್ಕಳೇ ಮುಖ್ಯ ಅತಿಥಿಗಳಾಗಿ ವೇದಿಕೆಯನ್ನು
ಶಿವಮೊಗ್ಗ, ಅ. 31 : ಮುಂದುವರಿಯುತ್ತಿರುವ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳು ಭಾರತಕ್ಕೆ ಪ್ರವೇಶಿಸುತ್ತಿದ್ದು ಆ ಸವಾಲನ್ನು ಎದುರಿಸಲು ಕಾಲೇಜು ಹಾಗೂ ವಿ.ವಿ.ಗಳ ಅಧ್ಯಾಪಕರು ಸಿದ್ಧರಾಗಬೇಕೇಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿ.ಜಿ.ತಲವಾರ ಕರೆ ನೀಡಿದ್ದಾರೆ.ಅವರು ನಗರದ ಕಮಲಾ ನೆಹರು ಮಹಿಳಾ ಕಾಲೇಜಿನ ಕುವೆಂಪು ಗ್ರಂಥಾಲಯ ಆಯೋಜಿಸಿದ್ದ 'ಬದಲಾಗುತ್ತಿರುವ ತಂತ್ರಜ್ಞಾನದಲ್ಲಿ ಶೈಕ್ಷಣಿಕ ಗ್ರಂಥಪಾಲಕರ ಸವಾಲುಗಳು' ಎಂಬ ವಿಷಯದ
ಶಿವಮೊಗ್ಗ, ಅ.13 : ಉತ್ತರ ಕರ್ನಾಟಕದಲ್ಲಿ ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದಾಗಿ ಲಕ್ಷಾಂತರ ಜನರು ಮನೆ-ಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಸಂತ್ರಸ್ತರಿಗೆ ನೆಲೆ ಕಲ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜ್ಯ ಘಟಕದ ವತಿಯಿಂದ 50 ಗ್ರಾಮಗಳನ್ನು ದತ್ತು ತೆಗೆದುಕೊಂಡು 5 ಸಾವಿರ ಮನೆಗಳನ್ನು ನಿರ್ಮಿಸಿಕೊಡಲು ಮುಂದಾಗಿರುವುದಾಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪಟ್ಟಾಭಿರಾಮ್ ತಿಳಿಸಿದ್ದಾರೆ.ಮಂಗಳವಾರ ಕರೆಯಲಾಗಿದ್ದ
ಶಿವಮೊಗ್ಗ, ಅ. 13 : ರಾಜ್ಯದ ಸಂಸದರು ತಮ್ಮ ಸಂಸದರ ನಿಧಿಯಿಂದ ನೆರೆ ಸಂತ್ರಸ್ತರ ಪರಿಹಾರಕ್ಕಾಗಿ 25 ಲಕ್ಷ ರೂ.ಗಳನ್ನು ನೀಡಲು ತೀರ್ಮಾನಿಸಿದ್ದು, ಇದಕ್ಕಾಗಿ ಸಭಾಪತಿ ಮೀರಾ ಕುಮಾರಿ ಜೊತೆ ಚರ್ಚಿಸಿ, ವಿಶೇಷ ಅನುಮತಿ ಪಡೆದು ಹಣವನ್ನು ನೀಡುವುದಾಗಿ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.ಮಂಗಳವಾರ ಬೆಳಿಗ್ಗೆ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರ ನಿಧಿಯಿಂದ ಜಿಲ್ಲೆಯ ಅಭಿವೃದ್ಧಿಗಾಗಿ ಬಳಸಬೇಕೆಂಬ
ಶಿವಮೊಗ್ಗ, ಸೆ. 29 : ಬರುವ ಅಕ್ಟೋಬರ್ ತಿಂಗಳಲ್ಲಿ ಉತ್ತರ ಪ್ರದೇಶದ ಲಖನೌದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸುವ ಕರ್ನಾಟಕ ರಾಜ್ಯ ಮಟ್ಟದ ತಂಡದ ಆಯ್ಕೆ ಶಿಬಿರ ಇಲ್ಲಿಯ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಮಲಾ ನೆಹರು ಮಹಿಳಾ ಕಾಲೇಜಿನ ಆಶ್ರಯದಲ್ಲಿ ಆರಂಭವಾಗಿದೆ.ಆಟಗಾರರ ಆಯ್ಕೆ ಈ ಶಿಬಿರಕ್ಕೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ವಿ.ತಿಮ್ಮಯ್ಯ
ಶಿವಮೊಗ್ಗ, ಸೆ. 23 : ಶಿವಮೊಗ್ಗ ನಗರಸಭೆಯಲ್ಲಿದ್ದು ಸಾಕಷ್ಟು ಸುದ್ದಿಮಾಡಿದ್ದ, ಪದೇಪದೇ ವರ್ಗಾವಣೆಯಾದರೂ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪರವರ ಪ್ರಭಾವದಿಂದ ವರ್ಗಾವಣೆ ತಡೆ ಹಿಡಿದು ಮತ್ತದೇ ಸ್ಥಳದಲ್ಲಿ ಆಯುಕ್ತನಾಗಿ ಕುಳಿತುಕೊಳ್ಳುತ್ತಿದ್ದ, ಇದೀಗ ಹಾಸನದ ನಗರಸಭೆಯಲ್ಲಿ ಆಯುಕ್ತನಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎಂ. ಧರ್ಮಪ್ಪ ಕೊನೆಗೂ ಲೋಕಾಯುಕ್ತ ಬಲೆಗೆ ಸಿಕ್ಕಿಕೊಂಡಿದ್ದಾರೆ.ರಾಜ್ಯ ಇಂಧನ ಸಚಿವ ಕೆ.ಎಸ್. ಈಶ್ವರಪ್ಪನವರ ಸಮೀಪವರ್ತಿಯಾಗಿದ್ದ ಕೆ.ಎಂ. ಧರ್ಮಪ್ಪ ಶಿವಮೊಗ್ಗದ