ಹೈದರಾಬಾದ್, ಜ. 7 : ತೀವ್ರ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಸತ್ಯಂ ಕಂಪ್ಯೂಟರ್ಸ ಗೆ ಇಂದು ಕರಾಳ ದಿನ ಎನ್ನಬಹುದು. ಕಂಪನಿ ಸಂಸ್ಥಾಪಕ ಚೇರಮನ್ ರಾಮಲಿಂಗರಾಜು ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಸತ್ಯಂ ಕಂಪ್ಯೂಟರ್ಸ್ ನ ಷೇರುಗಳು ಪಾತಾಳ ಕಂಡಿವೆ. ಈ ಮೂಲಕ ಸತ್ಯಂ ಮೇಲೆ ಮತ್ತೊಂದು ಬಲವಾದ ಪೆಟ್ಟು ಬಿದ್ದಂತಾಗಿದೆ. ಇಂದು ಬೆಳಗ್ಗೆ
ನವದೆಹಲಿ, ಜ.8: ಸತ್ಯಂ ಕಂಪ್ಯೂಟರ್ಸ್ ಕಂಪನಿಯನ್ನು ಖರೀದಿಸುವ ಯಾವುದೇ ಆಲೋಚನೆ ನಮಗಿಲ್ಲ ಎಂದು ಇನ್ಫೋಸಿಸ್ ನ ಮುಖ್ಯ ಸಲಹೆಗಾರರಾದ ಎನ್ ಆರ್ ನಾರಾಯಣ ಮೂರ್ತಿ ಬುಧವಾರ ಸ್ಪಷ್ಟಪಡಿಸಿದ್ದಾರೆ.ಈ ಕುರಿತು ನಾರಾಯಣಮೂರ್ತಿ ಮಾತನಾಡುತ್ತಾ, ''ಸತ್ಯಂ ಕಂಪ್ಯೂಟರ್ಸ್ ಗೆ ಆಗಿರುವ ಅನಿರೀಕ್ಷಿತ ಆಘಾತ ಭಾರತದ ಮಾಹಿತಿ ತಂತ್ರಜ್ಞಾನದ ಮೇಲೆ ಯಾವುದೆ ಪರಿಣಾಮ ಬೀರುವುದಿಲ್ಲ. ಪ್ರತಿಯೊಂದು ಕಂಪನಿ, ಮುಖ್ಯವಾಗಿ ಬೃಹತ್ ಕಂಪನಿಗಳು
ಹೈದರಾಬಾದ್, ಜ. 8 :7 ಸಾವಿರ ಕೋಟಿ ರೂ ಕಾರ್ಪೋರೇಟ್ ಹಗರಣದಲ್ಲಿ ಸಿಲುಕಿ ತೊಳಲಾಡುತ್ತಿರುವ ಸತ್ಯಂ ಕಂಪ್ಯೂಟರ್ಸ್ ಕಂಪನಿ ಇಂದು ಸಂಜೆ ಸಾರ್ವಜನಿಕರ ಮುಂದೆ ಪ್ರತ್ಯಕ್ಷವಾಯಿತು.ಹೈದರಾಬಾದಿನಲ್ಲಿ ಗುರುವಾರ ಸಂಜೆ 5 ಗಂಟೆಗೆ ಕಂಪನಿಯ ವಕ್ತಾರರು ಪತ್ರಿಕಾಗೋಷ್ಠಿ ನಡೆಸಿದರು. ಗೋಷ್ಠಿಯ ಮುಖ್ಯಾಂಶಗಳು ಕೆಳಕಂಡಂತಿವೆ :*ಪತ್ರಿಕಾಗೋಷ್ಠಿ ಗುರುವಾರ ಸಂಜೆ 5 ಗಂಟೆಗೆ ಸತ್ಯಂ ಕಂಪ್ಯೂಟರ್ಸ್ ನ ಪ್ರಧಾನ ಕಾರ್ಯಾಲಯದಲ್ಲಿ ಆರಂಭವಾಯಿತು.*ಸತ್ಯಂ
ನವದೆಹಲಿ, ಜ. 11 : ಸತ್ಯಂ ಕಂಪನಿಯ ಆಡಳಿತ ಮಂಡಳಿಯನ್ನು ವಜಾಗೊಳಿಸಿರುವ ಕೇಂದ್ರ ಸರ್ಕಾರ ಇಂದು ಮೂರು ಸದಸ್ಯರನ್ನು ಒಳಗೊಂಡ ನೂತನ ಸ್ವಾತಂತ್ರ್ಯ ನಿರ್ದೇಶಕ ಆಡಳಿತ ಮಂಡಳಿಯನ್ನು ರಚಿಸಿದೆ. ನಾಸ್ಕಾಂನ ಮಾಜಿ ಅಧ್ಯಕ್ಷ ಕಿರಣ್ ಕಾರ್ನೀಕ್, ಎಚ್ ಡಿ ಎಫ್ ಸಿ ಬ್ಯಾಂಕ್ ನ ಚೇರಮನ್ ದೀಪಕ್ ಪಾರೇಖ್ ಹಾಗೂ ಸೆಬಿಯ ಮಾಜಿ ಸದಸ್ಯ ಸಿ ಅಚ್ಯುತನ್
ಹೈದರಾಬಾದ್, ಜ. 12 : ಸತ್ಯಂ ಕಂಪನಿಯ ಮಾಜಿ ಚೇರಮನ್ ರಾಮಲಿಂಗರಾಜು ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜನವರಿ 16 ಕ್ಕೆ ಪ್ರಕರಣವನ್ನು ಮುಂದೂಡಿದೆ. ಈ ಮಧ್ಯೆ ಹೈದರಾಬಾದ್ ಸಿಐಡಿ ಪೊಲೀಸರು ಸತ್ಯಂ ಕಂಪನಿಯ ಮುಖ್ಯ ಕಚೇರಿ ಹಾಗೂ ರಾಜು ನಿವಾಸಕ್ಕೆ ದಾಳಿ ನಡೆಸಿ ಇನ್ನಷ್ಟು ದಾಖಲೆ
ಹೈದರಾಬಾದ್, ಜ. 12 : ಸತ್ಯಂ ಕಂಪನಿಯಲ್ಲಿ ನಡೆದ ಅವ್ಯವಹಾರ ನಂತರ ಕೇಂದ್ರ ಸರ್ಕಾರದಿಂದ ರಚಿತಗೊಂಡಿರುವ ಮೂವರನ್ನೊಳಗೊಂಡ ನಿರ್ದೇಶಕ ಮಂಡಳಿ ಜಂಟಿಯಾಗಿ ಇಂದು ಸಂಜೆ ನಡೆಸಿದ ಪತ್ರಿಕಾಗೋಷ್ಠಿಯ ಸಾರಾಂಶ. ನಾಸ್ಕಾಂ ಮಾಜಿ ಅಧ್ಯಕ್ಷ ಕಿರಣ ಕಾರ್ನೀಕ್, ಎಚ್ ಡಿ ಎಫ್ ಸಿ ಚೇರಮನ್ ದೀಪಕ್ ಪಾರೇಖ್ ಹಾಗೂ ಸೆಬಿಯ ಮಾಜಿ ಸದಸ್ಯ ಸಿ ಅಚ್ಯುತನ್ ಅವರನ್ನು ಕೇಂದ್ರ
ಹೈದರಾಬಾದ್, ಜ. 21 : ಸತ್ಯಂ ಕಂಪನಿಯ ಮಾಜಿ ಮುಖ್ಯಸ್ಥ ರಾಮಲಿಂಗರಾಜು ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಜನವರಿ 22 ಕ್ಕೆ ಹೈದರಾಬಾದ್ ನ್ಯಾಯಾಲಯ ಮುಂದೂಡಿದೆ ಹಾಗೂ ಈ ಅವಧಿಯವರೆಗೊ ಪೊಲೀಸ್ ಬಂಧನವನ್ನು ಕೂಡ ವಿಸ್ತರಿಸಿದೆ. ಹಾಗೆಯೇ ರಾಮಲಿಂಗರಾಜು ಅವರ ವಿಚಾರಣೆಗೆ ಅನುಮತಿ ನೀಡಬೇಕು ಎಂದು ಸೆಬಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನೂ ಸಹ ನ್ಯಾಯಾಲಯ ಜನವರಿ
ಹೈದರಾಬಾದ್, ಜ. 23 : ಸತ್ಯಂ ಕಂಪನಿಯ ಮಾಜಿ ಚೇರಮನ್ ರಾಮಲಿಂಗರಾಜು ಅವರನ್ನು ಸೇಬಿ (SEBI) ವಶಕ್ಕೆ ನೀಡಲು ನ್ಯಾಯಾಲಯ ಸ್ಪಷ್ಟವಾಗಿ ನಿರಾಕರಿಸಿದೆ. ಹಾಗೂ ರಾಜು ಸಹೋದರರ ಜಾಮೀನು ಅರ್ಜಿಯನ್ನು ಜನವರಿ 27 ರವರಿಗೆ ಮುಂದೂಡಿದೆ. ಸತ್ಯಂ ಹಗರಣ ಗಂಭೀರ ಸ್ವರೂಪದ ಪ್ರಕರಣವಾಗಿದೆ. ಈ ಹಿನ್ನಲೆಯಲ್ಲಿ ಇಂತಹ ಪ್ರಕರಣದಲ್ಲಿ ಮೂರನೇ ವ್ಯಕ್ತಿಗಳು ಭಾಗಿಯಾಗುವುದು ಸರಿಯಲ್ಲ ಎಂದು
ಹೈದರಾಬಾದ್, ಫೆ. 4 : ಸತ್ಯಂ ಕಂಪನಿಯ ಮಾಜಿ ಮುಖ್ಯಸ್ಥ ರಾಮಲಿಂಗರಾಜು ಹಾಗೂ ಅವರ ಸಹೋದರ ರಾಮರಾಜು ಅವರ ವಿಚಾರಣೆಯನ್ನು ಸೆಬಿ (ಭಾರತೀಯ ಮಾರುಕಟ್ಟೆ ಹಾಗೂ ಭದ್ರತಾ ಮಂಡಳಿ) ಇಂದು ಆರಂಭಿಸಿದೆ. 7800 ಕೋಟಿ ರುಪಾಯಿಗಳ ಅವ್ಯವಹಾರ ಮಾಡಿದ ಆರೋಪ ಎದುರಿಸುತ್ತಿರುವ ರಾಮಲಿಂಗರಾಜು ಅವರ ವಿಚಾರಣೆ ನಡೆಸಲು ಮಂಗಳವಾರ ಸುಪ್ರಿಂಕೋರ್ಟ್ ಅನುಮತಿ ನೀಡಿತ್ತು. ಹೈದರಾಬಾದ್ ಪೊಲೀಸರ ಸಮ್ಮುಖದಲ್ಲಿ
ಹೈದರಾಬಾದ್, ಫೆ. 5 : ಸತ್ಯಂ ಕಂಪ್ಯೂಟರ್ಸ್ ಜಾಗತಿಕ ಮಾರುಕಟ್ಟೆ ವ್ಯವಹಾರಗಳ ಮುಖ್ಯಸ್ಥ (COO) ಎಎಸ್ ಮೂರ್ತಿ ಅವರನ್ನು ಸತ್ಯಂ ಕಂಪನಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಮೂರ್ತಿ ಅವರ ವಿಶೇಷ ಸಲಹೆಗಾರರಾಗಿ ಮುರುಗಪ್ಪ ಗುಂಪಿನ ಮಾಜಿ ಹಣಕಾಸು ಅಧಿಕಾರಿ ಪಾರ್ಥೋ ಎಸ್ ದತ್ತ ಹಾಗೂ ಟಾಟಾ ಕೆಮಿಕಲ್ಸ್ ನ ಮಾಜಿ ವ್ಯವಸ್ಥಾಪಕ ನಿರ್ದೇಶಕ