ನಮ್ಮ ಮನೆಯಲ್ಲಿ ಎಲ್ಲರಿಗೂ ಹಾಡಿನ ಹುಚ್ಚು. ಹಾಗೆಂದರೆ ಹಾಡುವ ಹುಚ್ಚಲ್ಲ , ಹಾಡು ಕೇಳುವ ಹುಚ್ಚು. ಹಾಡು ಯಾವುದಾದರೂ ಆಗಿರಲಿ, ಸಾಹಿತ್ಯ, ಸಂಗೀತ ಹಿತ ಮಿತವಾಗಿ, ಹದವಾಗಿ ಬೆರೆತ ಸುಮಧುರ ಗೀತೆಗಳು. ಇಂತಹ ಗೀತೆಗಳಿಗೆ ಭಾಷೆಯ ಬೇಲಿ ಇಲ್ಲ. ನಮ್ಮವರೇ ಆದ ಪುತ್ತೂರು ನರಸಿಂಹ ನಾಯಕ್, ಸುಬ್ಬಣ್ಣ, ಅಶ್ವಥ್, ಸಂಗೀತಾ ಕಟ್ಟಿ, ಛಾಯಾ, ಅರ್ಚನಾ ಉಡುಪರು ಹಾಡಿದ್ದಾದರೂ
ಇದು ಆಡಳಿತ ಪಕ್ಷದ ಪ್ರಾರ್ಥನಾಗೀತೆಯಲ್ಲ. ಕೆಸರಿನ ಕಮಲದ ಹಾಡು. ಸಿನೆಮಾ ಮನೋರಂಜನ ಕ್ಷೇತ್ರ. ಇದರಿಂದ ತಿಳಿದುಕೊಳ್ಳುವುದು ಏನಿಲ್ಲ ಎನ್ನುವ ಮಂದಿಗೆ ‘ಕೆಸರಿನ ಕಮಲ‘ ಉತ್ತರ ನೀಡಲಿದೆ. ಚಿತ್ರದ ‘ನಾಮಧಾತೆ ಶಾರದಮಾತೆ ಲೋಕವಿಧೆಯತೆ ನಿನ್ನಯ ಗೀತೆ‘ ಎಂಬ ಹಾಡಿನ ಚಿತ್ರೀಕರಣ ಮಾಸ್ಟರ್ ಶ್ರೀನಿವಾಸ್ ಅಭಿನಯದಲ್ಲಿ ಕಡಬಗೆರೆಯ ಪ್ರೌಡಶಾಲೆಯಲ್ಲಿ ಚಿತ್ರೀಕೃತವಾಯಿತು. ಈ ಗೀತೆಯನ್ನು ಆಲಿಸಿದ ಶಾಲಾ ಮುಖ್ಯೋಪಾದ್ಯಾಯರು ಮೇಲಿನ ಗೀತೆಯನ್ನು
ಭೂತಯ್ಯನ ಮಗ ಅಯ್ಯು (1974) ಕನ್ನಡ ಚಿತ್ರರಂಗದಲ್ಲಿ ಒಂದು ಹೆಗ್ಗುರುತು. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕಾದಂಬರಿ ಆಧಾರಿತ ಚಿತ್ರ. ಗುಳ್ಳನ ಪಾತ್ರದಲ್ಲಿ ವಿಷ್ಣುವರ್ಧನ್, ಅಯ್ಯು ಪಾತ್ರದಲ್ಲಿ ಲೋಕೇಶ್, ಭೂತಯ್ಯನ ಪಾತ್ರದಲ್ಲಿ ಎಂ.ಪಿ.ಶಂಕರ್ ರ ನಟನೆ ಅದ್ಭುತವಾಗಿ ಮೂಡಿಬಂದಿತ್ತು. ಸಿದ್ಧಲಿಂಗಯ್ಯ ನಿರ್ದೇಶನದಲ್ಲಿ ಬಂದಂತಹ ಮತ್ತೊಂದು ಅವಿಸ್ಮರಣೀಯ ಚಿತ್ರ. ಜಿ.ಕೆ.ವೆಂಕಟೇಶ್ ಸಂಗೀತ, ಆರ್.ಎನ್.ಜಯಗೋಪಾಲ್ ಸಾಹಿತ್ಯಕ್ಕೆ ಜತೆಯಾದ ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ