ಫೋಸು(ಕೊಂಕಣಿ), ಜುನ್ನು(ತೆಲುಗು), ಕರ್ವಸ್(ಮರಾಠಿ) ಹೆಸರಿನ ಹಸುವಿನ ಗಿಣ್ಣು-ಹಾಲು ಕರು ಹಾಕಿದ 5 ದಿನಗಳ ಹಾಲು. ಬಹಳ ಪೌಷ್ಠಿಕ ಎಂದು ಗಿಣ್ಣು ತಯಾರಿಸಿ ತಿನ್ನುವುದುಂಟು. ಕರು ಹಾಕಿದ ಕೂಡಲೇ ಹಸುವಿನ ಕೆಚ್ಚಲಿನಿಂದ ಸ್ರವಿಸಲ್ಪಡುವ ಮೊದಲ ಹಾಲನ್ನು ಗಿಣ್ಣದ ಹಾಲು ಅಂತಾರೆ. ಈ ಹಾಲು ಅತ್ಯಧಿಕ ಪೋಷಕಾಂಶಗಳಿಂದ ಕೂಡ್ದಿದು ಇದರಲಿ ಪ್ರೊಟೀನು, ಕೊಬ್ಬು, ಖನಿಜಗಳು ಮತ್ತು ರೋಗ ನಿರೋಧಕ ಅಂಶಗಳಿರುತ್ತವೆ.*
ಕಾರ್ತೀಕ ಮಾಸ ಕೊನೆಯ ಸೋಮವಾರ, ಅಂದರೆ ಇಂದು ಬಸವನಗುಡಿಯಲ್ಲಿ ಸಂಭ್ರಮದ ಕಡಲೆಕಾಯಿ ಪರಿಷೆ. ಮದುವೆಯಾಗಿದ್ದರೆ ಹೆಂಡತಿ ಮಕ್ಕಳೊಂದಿಗೆ, ಮದುವೆಯಾಗಿರದಿದ್ದರೆ ಸ್ನೇಹಿತರೊಂದಿಗೆ ಪರಿಷೆಗೆ ಹೋಗಿ ಶೇರುಗಟ್ಟಲೆ ಕಡಲೆಕಾಯಿ ಅಥವಾ ಶೇಂಗಾ ಕೊಂಡು ಮಸ್ತ್ ಮಜಾ ಉಡಾಯಿಸುವ ಸುಸಂಧಿ. ಮಕ್ಕಳಿಗೆ ಬಲೂನು, ಹೆಂಡತಿಗೆ ನಾಲ್ಕು ಶೇರು ಕಡಲೆಕಾಯಿ ಕೊಡಿಸಿದರೆ ನಿಮ್ಮ ಜವಾಬ್ದಾರಿ ಅಲ್ಲಿಗೆ ಮುಗಿಯಿತು. ಹೆಂಡತಿ ನಿಮಗಾಗಿ ಕಡಲೆಬೀಜದ ಖಾರಾ
ಪಾವ್ ಭಾಜಿ ಈಗ ಮುಂಬೈಕರುಗಳ ದಿನನಿತ್ಯದ ತಿಂಡಿಯಾಗಿ ಉಳಿದಿಲ್ಲ. ಕರ್ನಾಟಕದ ಪಟ್ಟಣಗಳು ಮಾತ್ರವಲ್ಲ ಹಳ್ಳಿಗಳ ಜನರ ಬೀದಿಬದಿಯ ಫೆವರಿಟ್ ತಿಂಡಿಗಳಲ್ಲಿ ಅಗ್ರಸ್ಥಾನ ಪಡೆದಿದೆ. ಭಾಜಿ ಅಂದ್ರೆ ಪಲ್ಯ, ಪಾವ್ ಅಂದ್ರೆ ಬ್ರೆಡ್ ಜಾತಿಗೆ ಸೇರಿದ ಇನ್ನೊಂದು ತಿನಿಸು. ಇರಡೂ ಸೇರಿದರೆ ಪಾವ್ ಭಾಜಿ. ಬರೀ ಬ್ರೆಡ್ ಪಲ್ಯ ತಿನ್ನಲು ಜನ ಇಷ್ಟು ಆಸೆಪಡುತ್ತಾರೆನ್ನುವುದಕ್ಕೆ ಭಾಜಿಯ ರುಚಿಯೇ ಕಾರಣ.
* ಸುನಂದ ಅರುಣಕುಮಾರ್ ಗೋಸಿ, ಬೆಂಗಳೂರುಬೇಕಾಗುವ ಸಾಮಗ್ರಿಗಳು :* ನೆನೆಸಿದ ಕಡಲೆಕಾಳು - 1/2 ಕಪ್* ಬದನೆಕಾಯಿ - 2* ಈರುಳ್ಳಿ - 2* ಅಚ್ಚ ಕಾರದಪುಡಿ - 1/2 ಚಮಚ* ಗರಂ ಮಸಾಲ - 1/4 ಚಮಚ* ದನಿಯ ಪುಡಿ - 1/2 ಚಮಚ* ಹುಚ್ಚೆಳ್ಳು ಪುಡಿ - 1/2 ಚಮಚ* ಅರಿಶಿಣ ಪುಡಿ
ಏನೇನು ಬೇಕು : ಕಡಲೆ ಹಿಟ್ಟು (ಒಂದು ಬಟ್ಟಲು), ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್, ಚಿರೋಟಿ ರವೆ (ಇವೆಲ್ಲ ಸ್ವಲ್ಪ), ಅಡುಗೆ ಸೋಡಾ, ಜೀರಿಗೆ, ಅರಿಷಿಣ (ಚಿಟಿಕೆಯಷ್ಟು), ರುಚಿಗೆ ಉಪ್ಪು ಮತ್ತು ಕರಿಯಲು ಎಣ್ಣೆ. ಮಿರ್ಚಿ ಅಂದ್ರೆ ಹಚ್ಚ ಹಸಿರು ಮೆಣಸಿನ ಕಾಯಿ (ಬೆಂಗಳೂರು ಕಡೆ ಸಿಗುವ ತಿಳಿಹಸಿರು ಮೆಣಸಿನ ಕಾಯಿ ಅಲ್ಲ) ಮರೆತೀರಿ ಜೋಕೆ.ಮಾಡುವ ರೀತಿ
* ಸುನಂದ ಅರುಣಕುಮಾರ್ ಗೋಸಿ, ಬೆಂಗಳೂರುಬೇಕಾಗುವ ಸಾಮಗ್ರಿಗಳು : * ಹೆಸರುಕಾಳು - 1/2 ಕಪ್* ದಂಟಿನಸೊಪ್ಪು - 2 ಕಟ್ಟು* ಈರುಳ್ಳಿ - 2* ಬೆಳ್ಳುಳ್ಳಿ - 4 ಎಸಳು (ನಿಮ್ಮಿಷ್ಟ)* ಗರಂ ಮಸಾಲ - ೧/೪ ಚಮಚ* ಹಸಿಮೆಣಸಿನಕಾಯಿ - 4* ಅರಿಶಿಣ ಸ್ವಲ್ಪ* ರುಚಿಗೆ ತಕ್ಕ
ವೈವಿಧ್ಯಮಯ ಪಲ್ಯಗಳನ್ನು ತಯಾರಿಸುವುದರ ಜೊತೆಗೆ ಈ ತರಕಾರಿಯಲ್ಲಿರುವ ಪೌಷ್ಟಿಕಾಂಶಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಅವರಿಗೆ ತಿನ್ನಿಸುವುದನ್ನು ರೂಢಿ ಮಾಡಿಸುವುದು ದೊಡ್ಡವರ ಕರ್ತವ್ಯ. ಯಾಕೆಂದರೆ, ಗೋಬಿ ಮಂಚೂರಿಯನ್ನು ಚಪ್ಪರಿಸಿ ತಿನ್ನುವ ಮಕ್ಕಳು (ದೊಡ್ಡವರು ಕೂಡ) ಹೂಕೋಸಿನ ಪಲ್ಯ ಅಂದ ಕೂಡಲೆ ಮುಖ ಸಿಂಡರಿಸುತ್ತಾರೆ.ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ತರಕಾರಿಗಳು ಬಹು ಅವಶ್ಯಕ. ಅದರಲ್ಲೂ, ಹೂಕೋಸು ತಿನ್ನುವುದರಿಂದ ಹೃದಯ ಸುಸ್ಥಿತಿಯಲ್ಲಿರುತ್ತದೆ ಮತ್ತು
ಕಹಿ ಕಹಿ ಕಹಿಯೆಂದು ದೂರಮಾಡದಿರಿ, ಈ ಮೆಂತೆಸೊಪ್ಪಿನ ಕಹಿಯ ಮಹಿಮೆಯನೇದಾರೂ ಬಲ್ಲಿರಾ ಬಲ್ಲಿರಾ? ಪ್ರೊಟೀಸ್ ಮತ್ತು ಸಿ ಅನ್ನಾಂಗದಿಂದ ಶ್ರೀಮಂತವಾಗಿರುವ ಮೆಂತೆಯನ್ನು ಶತಮಾನಗಳಿಂದ ಆರೋಗ್ಯವೃದ್ಧಿಗಾಗಿ ಉಪಯೋಗಿಸಲಾಗುತ್ತಿದೆ. ಭಾರತೀಯ ಆಯುರ್ವೇದದಲ್ಲಿ ಮೆಂತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಪುರುಷರಲ್ಲಿ ವೀರ್ಯೋತ್ಪಾದನೆಯಿಂದ ಹಿಡಿದು ಅಜೀರ್ಣತೆ, ಗಂಟಲುನೋವು ಮತ್ತು ಮಧುಮೇಹಕ್ಕೆ ಕೂಡ ಮೆಂತೆ ರಾಮಬಾಣ. ಗಮನಿಸಿ, ಮೆಂತೆ ಹೃದಯಬೇನೆಗೆ ಕೂಡ ಉಪಶಮನಕಾರಿ.* ಸುನಂದ
ಉತ್ತರ ಕರ್ನಾಟಕದ ಅಡುಗೆಗಳಲ್ಲಿ ಹುಚ್ಚೆಳ್ಳು ಪುಡಿ ಬಳಸುವುದು ವಾಡಿಕೆ. ಈ ಎಳ್ಳಿನಿಂದ ಚಟ್ನಿಪುಡಿ ಮಾಡುವುದೂ ಉಂಟು. ನಮ್ಮ ಓದುಗರೇನಕರಿಗೆ ಈ ಎಳ್ಳಿನ ವಿಚಾರ ಹೊಸದು. ಹೆಸರುಬೇಳೆ ಮತ್ತು ಮೆಂತೆ ಪಲ್ಯ ಲೇಖನದಲ್ಲಿ ಅನೇಕರು ಹುಚ್ಚೆಳ್ಳು ಅಂದ್ರೇನು ಅಂತ ವಿಚಾರಿಸಿದ್ದರು. ವಿವರಣೆ ಕೇಳಿದ ಅನೇಕರ ಪ್ರಯೋಜನಕ್ಕಾಗಿ ಎಳ್ಳಿನ ಬಗೆಗೆ ಕಿರು ಮಾಹಿತಿ ಇಲ್ಲಿದೆ- ಸಂಪಾದಕ.* ಸುನಂದ ಅರುಣ್ ಕುಮಾರ್
ಎಲೆಕ್ಟ್ರಿಕ್ ಕುಕ್ಕರ್ ನಲ್ಲಿ ಅಕ್ಕಿ ತೊಳೆದಿಟ್ಟು ಹದಿನೈದು ನಿಮಿಷಕ್ಕೆ ಅನ್ನ ಉಂಬೈಯುವುದರೊಳಗೆ ಒಂದು ದಿಢೀರ್ ಹಸಿಗೊಜ್ಜು ಮಾಡಿ ಊಟಕ್ಕೆ ತಟ್ಟೆ ಹಾಕೋಣ. ಎರಡು ಎಳೆ ಸೌತೆಕಾಯಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಬದಿಗೆ ಇಟ್ಟುಕೊಳ್ಳಿ. ಈ ಕಡೆ ಅರ್ಧ ಲೋಟ ಹುರಿಗಡಲೆ, ಅರ್ಥ ಲೋಟ ತೆಂಗಿನ ತುರಿ, ಚೂರು ಅರಿಶಿನ, ಆರು ಒಣಮೆಣಸಿನಕಾಯಿ, ಚೂರು ಹುಣಿಸೆಹಣ್ಣು, ಚಿಟಿಕೆ