ನವದೆಹಲಿ, ಜೂ 2 : ಕೋಟ್ಯಂತರ ರುಪಾಯಿ ಅವ್ಯವಹಾರಕ್ಕೆ ತುತ್ತಾಗಿ ಚೇತರಿಸಿಕೊಳ್ಳುತ್ತಿರುವ ಸಾಫ್ಟ್ ವೇರ್ ಕಂಪನಿ ಸತ್ಯಂನಲ್ಲಿ ಉದ್ಯೋಗ ಕಡಿತಕ್ಕೆ ಸಂಬಂಧಿಸಿದಂತೆ ಹಸ್ತಕ್ಷೇಪ ಮಾಡಲು ಕೇಂದ್ರ ಸರಕಾರಕ್ಕೆ ಅಧಿಕಾರವಿದೆಯೇ? ಅಥವಾ ಹಸ್ತಕ್ಷೇಪ ಮಾಡುತ್ತಿರುವುದು ಸರಿಯೆ? ಎಂಬ ಜಿಜ್ಞಾಸೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಸತ್ಯಂ ಕಂಪನಿಯಲ್ಲಿ 10 ಸಾವಿರಕ್ಕೂ ಹೆಚ್ಚಿನ ಉದ್ಯೋಗಿಗಳು ಕಂಪನಿಗೆ ಭಾರವಾಗಿದ್ದು ಅವರನ್ನು ಕೆಲಸದಿಂದ
ಹೈದರಾಬಾದ್, ಮಾ.21: ಸತ್ಯಂ ಕಂಪ್ಯೂಟರ್ಸ್ ನ ಮಾಜಿ ಅಧ್ಯಕ್ಷ ರಾಮಲಿಂಗರಾಜು ಮತ್ತವರ ಸಹೋದರರ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲದ ಕಾರಣ ಮಾಜಿ ಸಿಎಫ್ ಒ ಹಾಗೂ ಅವರನ್ನು 4 ದಿನಗಳ ಕಾಲ ತಮ್ಮ ಕಸ್ಟಡಿಗೆ ಒಪ್ಪಿಸಬೇಕು ಎಂದು ಸಿಬಿಐ ಮನವಿ ಮಾಡಿಕೊಂಡಿತ್ತು. ಈ ಮೇರೆಗೆ ಸ್ಥಳೀಯ ನ್ಯಾಯಾಲಯ ಎರಡು ದಿನಗಳ ವಿಚಾರಣೆಗೆ ಅನುಮತಿ ನೀಡಿದೆ.ಶನಿವಾರ ಮುಂಜಾನೆ
ನವದೆಹಲಿ, ಜ. 7 : ವಂಚನೆ ಹಾಗೂ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಭಾರಿ ಟೀಕೆಗೆ ಗುರಿಯಾಗಿದ್ದ ದೇಶದ ಪ್ರತಿಷ್ಠಿತ ಸಾಫ್ಟವೇರ್ ಕಂಪನಿ ಸತ್ಯಂ ಕಂಪ್ಯೂಟರ್ಸ್ ನ ಸಂಸ್ಥಾಪಕ ಹಾಗೂ ಚೇರಮನ್ ರಾಮಲಿಂಗರಾಜು ಅವರು ಕಂಪನಿಯ ಅಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ಸತ್ಯಂ ಕಂಪ್ಯೂಟರ್ಸ್ ಭಾರಿ ಸುದ್ದಿಯಲ್ಲಿತ್ತು. ಸತ್ಯಂ ಚೇರಮನ್
ಹೈದರಾಬಾದ್, ಜ. 7 : ತೀವ್ರ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಸತ್ಯಂ ಕಂಪ್ಯೂಟರ್ಸ ಗೆ ಇಂದು ಕರಾಳ ದಿನ ಎನ್ನಬಹುದು. ಕಂಪನಿ ಸಂಸ್ಥಾಪಕ ಚೇರಮನ್ ರಾಮಲಿಂಗರಾಜು ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಸತ್ಯಂ ಕಂಪ್ಯೂಟರ್ಸ್ ನ ಷೇರುಗಳು ಪಾತಾಳ ಕಂಡಿವೆ. ಈ ಮೂಲಕ ಸತ್ಯಂ ಮೇಲೆ ಮತ್ತೊಂದು ಬಲವಾದ ಪೆಟ್ಟು ಬಿದ್ದಂತಾಗಿದೆ. ಇಂದು ಬೆಳಗ್ಗೆ
ನವದೆಹಲಿ, ಜ. 7 : ಸತ್ಯಂ ಕಂಪ್ಯೂಟರ್ ನಲ್ಲಿ ನಡೆದಿರುವ ಭಾರಿ ಮಟ್ಟದ ಅವ್ಯವಹಾರದ ಸಮಗ್ರ ತನಿಖೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಸತ್ಯಂ ಪ್ರಕರಣವನ್ನು ಕೇಂದ್ರದ ಹಣಕಾಸು ಅವ್ಯವಹಾರ ತನಿಖಾ ಇಲಾಖೆಗೆ ( Serious Fraud Investigation Office) ವಹಿಸಲು ಕೇಂದ್ರ ತೀರ್ಮಾನಿಸಿದೆ. ಸತ್ಯಂ ಘಟನೆ ನಾಚಿಕೆಗೇಡಿನ ಸಂಗತಿಯಾಗಿದೆ.
ನವದೆಹಲಿ, ಜ.8: ಸತ್ಯಂ ಕಂಪ್ಯೂಟರ್ಸ್ ಕಂಪನಿಯನ್ನು ಖರೀದಿಸುವ ಯಾವುದೇ ಆಲೋಚನೆ ನಮಗಿಲ್ಲ ಎಂದು ಇನ್ಫೋಸಿಸ್ ನ ಮುಖ್ಯ ಸಲಹೆಗಾರರಾದ ಎನ್ ಆರ್ ನಾರಾಯಣ ಮೂರ್ತಿ ಬುಧವಾರ ಸ್ಪಷ್ಟಪಡಿಸಿದ್ದಾರೆ.ಈ ಕುರಿತು ನಾರಾಯಣಮೂರ್ತಿ ಮಾತನಾಡುತ್ತಾ, ''ಸತ್ಯಂ ಕಂಪ್ಯೂಟರ್ಸ್ ಗೆ ಆಗಿರುವ ಅನಿರೀಕ್ಷಿತ ಆಘಾತ ಭಾರತದ ಮಾಹಿತಿ ತಂತ್ರಜ್ಞಾನದ ಮೇಲೆ ಯಾವುದೆ ಪರಿಣಾಮ ಬೀರುವುದಿಲ್ಲ. ಪ್ರತಿಯೊಂದು ಕಂಪನಿ, ಮುಖ್ಯವಾಗಿ ಬೃಹತ್ ಕಂಪನಿಗಳು
ಹೈದರಾಬಾದ್, ಜ.8: ಸತ್ಯಂ ಕಂಪ್ಯೂಟರ್ಸ್ ರಾಮಲಿಂಗಾರಾಜು ಭಾರಿ ಅವ್ಯವಹಾರಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಸಮಗ್ರ ವಿಚಾರಣೆ ನಡೆಸಬೇಕೆಂದು ಸೆಬಿ ನಿರ್ಣಯಿಸಿತ್ತು. ಈ ಸಂಬಂಧ ಆದಷ್ಟು ಶೀಘ್ರವಾಗಿ ವಿಚಾರಣೆ ನಡೆಸಬೇಕೆಂದು ಸೆಬಿ ಅಧಿಕಾರಿಗಳು ಗುರುವಾರ ಮುಂಜಾನೆಯೇ ಹೈದಾರಾಬಾದ್ ಸೇರಿಕೊಂಡರು. ಆದರೆ ಸತ್ಯಂ ಕಂಪ್ಯೂಟರ್ಸ್ ನ ರಾಮಲಿಂಗಾರಾಜು ನಾಪತ್ತೆ!!!ರಾಮಲಿಂಗಾರಾಜು ಎಲ್ಲಿದ್ದಾರೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು
ಹೈದರಾಬಾದ್, ಜ. 9 : ಸತ್ಯಂ ಕಂಪನಿಯ ಮಾಜಿ ಚೇರಮನ್ ರಾಮಲಿಂಗರಾಜು ಅಲಿಯಾಸ್ ಗೋಲ್ ಮಾಲ್ ರಾಜು ಮಾಡಿರುವ ಆನಾಹುತಕ್ಕೆ ಅಮಾಯಕ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸನ್ನಿವೇಶ ಎದುರಾಗಿದೆ. ಆರ್ಥಿಕ ಬಿಕ್ಕಟ್ಟಿನಿಂದ ತಲ್ಲಣಗೊಂಡಿರುವ ಸಾಫ್ಟವೇರ್ ಉದ್ಯಮದ ಮೇಲೆ ರಾಮಲಿಂಗರಾಜು ಅಳಿಸಲಾರದ ಬರೆ ಎಳೆದಿರುವುದು ಸುಳ್ಳಲ್ಲ. ಸತ್ಯಂ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಮುಂದಿನ ತಿಂಗಳು ಸುಮಾರು 10
ಹೈದರಾಬಾದ್, ಜ. 9 : ಸತ್ಯಂ ಕಂಪನಿಯ ಮಾಜಿ ಚೇರಮನ್ ರಾಮಲಿಂಗರಾಜು ಅವರನ್ನು ಬಂಧಿಸುವಂತೆ ಆಂಧ್ರಪ್ರದೇಶ ಸರ್ಕಾರದ ಮೇಲೆ ಭಾರಿ ಒತ್ತಡ ಶುರುವಾಗಿದೆ. ಅನಾಮತ್ತು ಏಳು ಸಾವಿರ ಕೋಟಿ ರುಪಾಯಿಗಳನ್ನು ಮಂಗಮಾಯ ಮಾಡಿರುವ ಗೋಲ್ ಮಾಲ್ ರಾಜುನನ್ನು ಕೂಡಲೇ ಬಂಧಿಸುವಂತೆ ಷೇರುದಾರರು ಸೇರಿ ಸಾರ್ವಜನಿಕರು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ ಅವರನ್ನು ಒತ್ತಾಯಿಸಿದ್ದಾರೆ. ಜನವರಿ 7
ಹೈದರಾಬಾದ್, ಜ. 10 : ಕಟ್ಟಿದ ಕಂಪನಿಗೇ 7000 ಕೋಟಿ ರು. ಪಂಗನಾಮ ಹಾಕಿದ ಸತ್ಯಂ ಸಂಸ್ಥಾಪಕ ಬಿ. ರಾಮಲಿಂಗ ರಾಜು ಶುಕ್ರವಾರ ರಾತ್ರಿ ಪೊಲೀಸ್ ಮಹಾನಿರ್ದೇಶಕ ಎಸ್.ಎಸ್.ಪಿ ಯಾದವ್ ಅವರ ಮುಂದೆ ಶರಣಾಗತರಾಗಿದ್ದಾರೆ. ರಾಜು ಅವರು ಬಂಧನಕ್ಕೆ ಹೆದರಿ ಭೂಗತರಾಗಿದ್ದಾರೆ, ದೇಶ ತೊರೆದಿದ್ದಾರೆ ಎಂಬಿತ್ಯಾದಿ ಊಹಾಪೋಹಗಳಿಗೆ ಅವರ ಬಂಧನ ತೆರೆ ಎಳೆದಿದೆ.ರಾಜು ಅವರು ತಮ್ಮ ಸಹೋದರನೊಂದಿಗೆ