ಪೈರಸಿ ತಡೆಗೆ ಗೂಂಡಾ ಕಾಯಿದೆ ಜಾರಿಗೆ ತಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕನ್ನಡ ಚಿತ್ರೋದ್ಯಮ ಮಂಗಳವಾರ ಆತ್ಮೀಯವಾಗಿ ಸನ್ಮಾನಿಸಿತು. ಹಾಡು ಕುಣಿತದೊಂದಿಗೆ ಹೃದಯ ಸ್ಪರ್ಶಿ ಕೃತಜ್ಞತೆಗಳನ್ನು ಮುಖ್ಯಮಂತ್ರಿಗಳಿಗೆ ತಿಳಿಸಲಾಯಿತು. ಅರಮನೆ ಮೈದಾನದ ಗಾಯತ್ರಿ ವಿಹಾರ ಮಂಗಳವಾರ ಸಂಜೆ ರಂಗೇರಿತ್ತು. ಈ ಸಂದರ್ಭದಲ್ಲಿ ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಮಾತನಾಡುತ್ತಾ, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು
ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಹಮ್ಮ್ಮಿಕೊಂಡ ಕರ್ನಾಟಕದ ಘನ ಸರಕಾರವನ್ನು ಅಭಿನಂದಿಸಬೇಕು ಎಂಬುದು ಚಲನಚಿತ್ರ ವಾಣಿಜ್ಯ ಮಂಡಳಿಯ ಬಹುದಿನಗಳ ತುಡಿತ. ಇದೀಗ ಆ ಮಿಡಿತ ಈಡೇರುವ ಸಮಯ ಹತ್ತಿರವಾಗಿದೆ. ಮಂಗಳವಾರ ಸಂಜೆ ಒಂದು ಗಂಟೆ ಕಾಲಾವಧಿಯ ಹಾಡಿನ ಪ್ರದರ್ಶನದ ಮೂಲಕ ಸರಕಾರಕ್ಕೆ ಕೃತಜ್ಞತೆ ತಿಳಿಸಲಿದೆ. ಇದಕ್ಕಾಗಿ
ಪುನೀತ್ ರಾಜಕುಮಾರ್ ಪ್ಲಸ್ ಪ್ರೇಮ್ ಕಾಂಬಿನೇಷನ್ನ ರಾಜ್- ದಿ ಶೋಮ್ಯಾನ್ ಚಿತ್ರದ ಬಿಡುಗಡೆ ದಿನ ಸನ್ನಿಹಿತವಾಗುತ್ತಿರುವಂತೆ ಚಿತ್ರದ ಪ್ರಚಾರ ತಂತ್ರಗಳೂ ಹೆಚ್ಚುತ್ತಿವೆ. ಈಚಿನ ಹೊಸ ತಂತ್ರ- ಸಿನಿಮಾ ಬಿಡುಗಡೆಯಾಗುತ್ತಿರುವ ಸಂತೋಷ್ ಚಿತ್ರಮಂದಿರದ ಆವರಣದಲ್ಲಿ ವರನಟ ರಾಜಕುಮಾರ್ ಪ್ರತಿಮೆಯ ಅನಾವರಣ.ರಾಜಕುಮಾರ್ಗೂ ರಾಜ್ ಚಿತ್ರಕ್ಕೂ ಎತ್ತಣ ನಂಟು? ಸಂಬಂಧ ಇರುವುದು ಭಾವನೆಗಳಲ್ಲಿ ಎನ್ನುವುದು ನಿರ್ದೇಶಕ ಪ್ರೇಮ್ ಸ್ಪಷ್ಟನೆ. ಈ ಪ್ರತಿಮೆ
ಲಗೋರಿ ಚಿತ್ರ ಪ್ರಾರಂಭಿಸಿದಾಗಿನಿಂದ ದಿನದಿಂದ ದಿನಕ್ಕೆ ಅದರ ಬಗ್ಗೆ ಜನರಲ್ಲಿ ಕುತೂಹಲ ಮೂಡುತ್ತಿದೆ. ಮೊದಲಬಾರಿಗೆ ಕಾಡು- ಮೇಡು. ಹೊಳೆ-ತೊರೆ, ಮುಂಗಾರು, ಮಳೆ, ನಿಸರ್ಗವನ್ನು ತೊರೆದು, ನಾಗರೀಕ ಜೀವನದ ಅದ್ಭುತಗಳನ್ನು ತೆರೆಯ ಮೇಲೆ ತರಲು ಯೋಗರಾಜ್ ಭಟ್ ಪ್ರಯತ್ನಿಸುತ್ತಿದ್ದಾರೆ. ಚಿತ್ರಕ್ಕೆ ಪುನೀತ್ ಅವರು ಅಭಿನಯಿಸುತ್ತಿರುವುದು ವಿಶೇಷ ಎಂದು ಎನಿಸಿದರೆ, ಇನ್ನೊಂದು ವಿಶೇಷ ಕಾದಿದೆ ಎನ್ನುತ್ತಾರೆ ಭಟ್ಟರು. ಈ
*ದಟ್ಸ್ಕನ್ನಡ ಬ್ಯೂರೊಬೆಂಗಳೂರು ಮೂಲದ ನಾಯಕಿಯರ ಪೈಕಿ ಸದ್ಯಕ್ಕೆ ಹೆಚ್ಚು ವಿಮಾನ ಯಾನ ಮಾಡುತ್ತಿರುವುದು ರಕ್ಷಿತ. ಹೀಗಾಗಿ ಆಕೆಯ ಕೆರಿಯರ್ರು ಸುರಕ್ಷಿತ ಅನ್ನುವುದು ಆಕೆಯ ಕುರಿತು ಹುಟ್ಟಿಕೊಂಡಿರುವ ಹೊಸ ಒನ್ಲೈನರ್ರು. ಒಂದೆಡೆ ಅಪ್ಪು ಸೆಂಚುರಿ ಹೊಡೆದ ಖುಷಿ. ಇನ್ನೊಂದೆಡೆ ಅದರ ತೆಲುಗು ರೀಮೇಕ್ ‘ಈಡಿಯಟ್’ ಶೂಟಿಂಗ್ನಲ್ಲಿ ಬ್ಯುಸಿ. ಈ ಸಂಭ್ರಮದ ಮಧ್ಯೆ ‘ಧಮ್’ ಚಿತ್ರದಲ್ಲಿ ಸುದೀಪ್ ಗೈಡೆನ್ಸು. ರಕ್ಷಿತಾಗೆ
ಮತ್ತೆ ಕನ್ನಡ ಚಿತ್ರರಂಗದತ್ತ ಮುಖಮಾಡಿದ್ದಾಳೆ ಮೀರಾ. ಕೇರಳದ ಈ ಚೆಂದುಳ್ಳಿ ಚೆಲುವೆ, ಚಿತ್ರನಟಿ ಮೀರಾ ಜಾಸ್ಮಿನ್ ಅವರನ್ನು ಸ್ಯಾಂಡಲ್ವುಡ್ಗೆ ಕರೆತರುವಲ್ಲಿ ಕೆ.ಮಂಜು ಯಶಸ್ಸು ಪಡೆದಿದ್ದಾರೆ!ವಿಷ್ಣುವರ್ಧನ್ ಪಾಳಯದಲ್ಲಿ ಗುರ್ತಿಸಿಕೊಂಡಿರುವ ಕೆ.ಮಂಜು, ಅವರ ಅಳಿಯ ಅನಿರುದ್ಧನನ್ನು ಹೀರೋ ಮಾಡುವ ಸಾಹಸಕ್ಕೆ ಮುಂದಾಗಿದ್ದಾರೆ. ಇನ್ನೂ ಹೆಸರಿಡದ ಈ ಕನ್ನಡ ಚಿತ್ರದಲ್ಲಿ ಮೀರಾ ವಿಷ್ಣುವರ್ಧನ್ ಅವರ ತಂಗಿಯಾಗಿ, ವಿಷ್ಣು ಅಳಿಯ ಅನಿರುದ್ಧ ಅವರ
ಅಂಬಿಗೆ ಐವತ್ತು !ಕನ್ನಂಬಾಡಿಯಲ್ಲಿ ನೀರು ಕಡಿಮೆಯಾಗಿರಬಹುದು ; ಕಬ್ಬಿನ ನಗರಿ ಮಂಡ್ಯದಲ್ಲಿ ಮಾತ್ರ ಸಂಭ್ರಮ ತುಳುಕುತ್ತಿದೆ. ಮೇ 29 ರ ಸಂಜೆ 5 ಗಂಟೆಗೆ, ವಿಶ್ವೇಶ್ವರಯ್ಯ ಆಟದ ಮೈದಾನದಲ್ಲಿ ‘ಅಂಬಿ-50’ ವಿಶೇಷ ಕಾರ್ಯಕ್ರಮ. ಪ್ರಸಿದ್ಧ ಚಿತ್ರನಟರು ಹಾಗೂ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅಂಬಿ ಹುಟ್ಟುಹಬ್ಬದ
‘ಅಪ್ಪು ಈಗ ನಂಬರ್ ಒನ್. ಚೆನ್ನಾಗಿ ಹೋಗ್ತಿದೆ. ನಂಗೆ ಆನಂದ್ನಲ್ಲಿ ಸಿಕ್ಕ ಸ್ವಾಗತವೇ ಪುನೀತ್ಗೂ ಸಿಕ್ಕಿದೆ.’- ಶಿವಣ್ಣ ಖುಷಿಯಾಗಿದ್ದರು. ಅಪ್ಪು ಯಶಸ್ಸು ಅವರಿಗೆ ಖುಷಿ ತಂದಿತ್ತು . ಅಂದಹಾಗೆ, ಅದು ಅಪ್ಪು ಚಿತ್ರದ ಸಂತೋಷ ಕೂಟವಲ್ಲ ; ಕೋದಂಡರಾಮ ಚಿತ್ರದ ಸಂತೋಷ ಕೂಟ. ಸಿನಿಮಾ ನೂರು ದಿನ ಓಡದ
*ದಟ್ಸ್ಕನ್ನಡ ಬ್ಯೂರೋಒಂದೆಡೆ ಹೆಜ್ಜೇನಿನ ಕಾಟ, ಇನ್ನೊಂದೆಡೆ ಭಜರಂಗ ದಳದ ಭಕ್ತರ ಕಾಟವೋ ಕಾಟ! ಶಿವಣ್ಣ ಸುಸ್ತೋ ಸುಸ್ತು . ಹುಟ್ಟುಗೆಟ್ಟ ಜೇನುನೊಣಗಳ ದಾಳಿಯಿಂದ ತಪ್ಪಿಸಿಕೊಳ್ಳಲು ವಾಹನದೊಳಗೆ ತೂರಿಕೊಂಡರೆ, ರೊಚ್ಚಿಗೆದ್ದ ಭಜರಂಗ ದಳದ ಸದಸ್ಯರು ಹುಚ್ಚಾಪಟ್ಟೆ ಕಲ್ಲು ತೂರಿದರು. ಅದು ಸೀತಾಳಯ್ಯನಯ್ಯನ ಗಿರಿ. ದತ್ತಪೀಠದ ಸಮೀಪವೇ ಇದೆ. ಅಲ್ಲಿ ಅ.27 ರ ಭಾನುವಾರ ಶಿವರಾಜ್ಕುಮಾರ್ ಅಭಿನಯದ ‘ಡಾನ್’ ಚಿತ್ರದ
‘ಅಭಿಮಾನಿಗಳ ಪ್ರೀತಿಗೆ ನಾನು ಋಣಿ’‘ವರುಣನ ಕೃಪೆಗೂ ನಾನು ಋಣಿ’41 ನೇ ಹುಟ್ಟುಹಬ್ಬದ ಸಡಗರದಲ್ಲಿದ್ದ ಶಿವರಾಜ್ಕುಮಾರ್ ಅಭಿಮಾನಿಗಳ ಪ್ರೀತಿಯ ಮಳೆಯಲ್ಲಿ ತೋಯುತ್ತಿದ್ದರು. ಅದಕ್ಕೆ ಸ್ವಲ್ಪ ಹೊತ್ತು ಮುಂಚೆಯಷ್ಟೇ ಮಳೆ ಸುರಿದಿತ್ತು . ಎಲೆಯ ಮೇಲಿನ ಹನಿ ಮುತ್ತುಗಳು ಮಣ್ಣಿಗಿಳಿಯುತ್ತಿದ್ದವು. ಅಭಿಮಾನಿಗಳಿಗೂ, ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟ ಮಳೆರಾಯನಿಗೂ ಶಿವಣ್ಣ ಏಕಮನದಿಂದ ಕೃತಜ್ಞತೆ ಅರ್ಪಿಸಿದರು. ಪಕ್ಕದಲ್ಲಿ ಪತ್ನಿ ಗೀತಾ ಮುಗುಳ್ನಗುತ್ತಿದ್ದರು. ಅಭಿಮಾನಿಗಳು