ಕಪ್ಪು ಬಿಳುಪು ಚಿತ್ರದಲ್ಲಿ ಕಾಮನಬಿಲ್ಲು ಎಡದಿಂದ ಬಲಕ್ಕೆ: ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿ.ವಿ. ಗುಂಡಪ್ಪ, ಕುವೆಂಪು, ವಿ. ಸೀತಾರಾಮಯ್ಯ, ಕೆ. ಶಿವರಾಮ ಕಾರಂತ, ಅ.ನ. ಕೃಷ್ಣರಾವ್ ಮತ್ತು ಜಿ.ಪಿ.ರಾಜರತ್ನಂ. ಛಾಯಾಚಿತ್ರ ಕ್ಲಿಕ್ಕಿಸಿದ ಟಿ.ಎಸ್. ನಾಗರಾಜನ್ ಮೇಲಿನ ಚಿತ್ರದ ಬಗ್ಗೆ ಹೇಳ್ತಾರೆ: ಅದು
ಗುರುಕಿರಣ್ಗೆ ಸಂಗೀತದಲ್ಲಿ ಮೂರು ಹಾಡುಗಳು ಕೇಳುವಂತಿವೆ. ವೇಣು ಫೋಟೊಗ್ರಫಿ ಸುದೀಪ್ ಅಭಿನಯಕ್ಕೆ ಸಮ. ಹೊಡೆದಾಟದ ದೃಶ್ಯಗಳನ್ನು ಅವರು ಕೆಮೆರಾದಲ್ಲಿ ಹಿಡಿದ ರೀತಿ ಸೂಪರ್ಬ್. ರಕ್ಷಿತಾ ಬರೀ ತನ್ನ ದೇಹವನ್ನು ಬಂಡವಾಳ ಮಾಡಿಕೊಳ್ಳುವುದನ್ನು ಹೀಗೆಯೇ ಮುಂದುವರೆಸುವುದು ಅವರ ಭವಿಷ್ಯಕ್ಕೆ ಒಳ್ಳೆಯದಲ್ಲ . ಮನೆಮಂದಿಯೆಲ್ಲ ಮುಜುಗರ ಪಡದೆ ನೋಡಿ ಆನಂದಿಸಬೇಕಾದರೆ ‘ಧಮ್’ ನೋಡುವುದು ಉತ್ತಮ. ಯಾಕೆಂದರೆ ಇದರಲ್ಲಿ ಧಮ್ ಇದೆ
‘ಭಕ್ತ ಕನಕದಾಸ’ದಿಂದ ಹಿಡಿದು ‘ಶಾಂತಿಕ್ರಾಂತಿ’ವರೆಗೆ ತಮ್ಮ ಕೆಮೆರಾ ಕಣ್ಣಿನಿಂದ ಸಿನಿಮಾಭಿಮಾನಿಗಳ ಮನಗೆದ್ದ ಆರ್.ಮಧುಸೂದನ್ ಗುರುವಾರ ರಾತ್ರಿ ಚೆನ್ನೈನಲ್ಲಿ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಪತ್ನಿ, ಮಗ, ಮಗಳು ಮತ್ತು ಅಪಾರ ಸಿನಿಮಾ ಸ್ನೇಹಿತರನ್ನು ಮಧುಸೂದನ್ ಅಗಲಿದ್ದಾರೆ. ರಾಷ್ಟ್ರ ಮಟ್ಟದ ಛಾಯಾಗ್ರಹಣಕಾರರಾದ ಎಸ್.ಡಿ.ಲಾಲ್ ಮತ್ತು ದ್ವಾರಕಾ ದ್ವಿವೇಜ ಜೊತೆ ಕೆಲಸ ಮಾಡಿದ ಅಪರೂಪದ ಪ್ರತಿಭೆ
‘ಕನ್ನಡ ನಿರ್ಮಾಪಕರ ಸಂಘ’ ಹೇರಿದ ಸ್ಯಾಂಡಲ್ವುಡ್ನಿಂದ ಮೂರು ತಿಂಗಳ ಬಹಿಷ್ಕಾರ ಹಾಗೂ 25 ಸಾವಿರ ರುಪಾಯಿ ದಂಡದ ಶಿಕ್ಷೆಯ ಬೆನ್ನಿಗೇ ದಿನೇಶ್ಬಾಬು ವೃತ್ತಿ ಭವಿಷ್ಯಕ್ಕೆ ಮತ್ತೊಂದು ಬರೆ ಬಿದ್ದಿದೆ. ಈ ಸಾರಿ ‘ದಂಡ ’ ಕೈಗೆತ್ತಿಕೊಂಡಿರುವುದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್ಸಿಸಿ). ದೂರನ್ನು ಗಂಭೀರವಾಗಿ ಪರಿಗಣಿಸಿರುವ ಮಂಡಳಿ ದಿನೇಶ್ಬಾಬುಗೆ ಸ್ಯಾಂಡಲ್ವುಡ್ನಿಂದ 6 ತಿಂಗಳ
* ಎಸ್ಕೆ. ಶಾಮಸುಂದರ‘ಕನ್ನಡ ನಿರ್ಮಾಪಕರ ಸಂಘ’ ಎನ್ನುವ ಸದಾ ಅಪಸ್ವರ ಕೇಳಿಬರುವ ಅವಿಭಕ್ತ ಮನೆಯಲ್ಲಿ ಅಪರೂಪಕ್ಕೊಮ್ಮೆ ಅಸ್ತಿತ್ವವನ್ನು ಪ್ರದರ್ಶಿಸಿದ ಒಗ್ಗಟ್ಟಿನ ಖುಷಿ ಕಾಣಿಸಿಕೊಂಡಿದೆ. ಕನ್ನಡ ನಿರ್ಮಾಪಕರು ತಮ್ಮ ಹಕ್ಕು ಚಲಾಯಿಸಿದ ಹುಮ್ಮಸ್ಸಿನಲ್ಲಿ ಎದೆಯೆತ್ತಿ ನಡೆಯುತ್ತಿದ್ದಾರೆ. ಕಲಾವಿದರನ್ನು ಗೋಳು ಹುಯ್ದುಕೊಳ್ಳುವಲ್ಲಿ ಎತ್ತಿದಗೈ ಎನ್ನುವ
*ಮಲ್ಲಿಕಾರ್ಜುನ ಡಿ.ಜಿ.ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ಮೂರು ಕಿಲೋ ಮೀಟರ್ ದೂರದಲ್ಲಿನ ಕೈಮರದ ಹತ್ತಿರ ತೇಜಸ್ವಿಯವರ ತೋಟದ ಮನೆ. ನಾವು ಅಲ್ಲಿಗೆ ತಲುಪಿದಾಗ ಬೆಳಗ್ಗೆ 9 ಗಂಟೆ. ಗೇಟ್ಗೆ ಚೈನ್ ಬಿಗಿದಿತ್ತು . ಯಾರೂ ಕಾಣಿಸಲಿಲ್ಲ . ಚೈನು ಬಿಡಿಸಿ ಒಳಗೆ ಹೋದೆವು. ಅಕ್ಕಪಕ್ಕ ಬರೀ ಕಾಫಿ ಗಿಡಗಳು. ಮುಂದೆ ಕಾಲುದಾರಿ. ಆಹ್ಲಾದಕರವಾದ ಮಲೆನಾಡ ವಾತಾವರಣ. ಎಲ್ಲೆಲ್ಲೂ
(ಮುಂದುವರಿದ ಭಾಗ)ಛಾಯಾಗ್ರಹಣದಲ್ಲಿ ಛಾಯಾಗ್ರಾಹಕನ ಮನಃಸ್ಧಿತಿ ಎಷ್ಟು ಮುಖ್ಯವೋ ಪ್ರಕೃತಿಮಾತೆಯ ಸಹಕಾರವೂ ಅಷ್ಟೇ ಮುಖ್ಯ ಎನ್ನುವುದು ಪ್ರವೀಣ್ ಅವರ ಅಭಿಪ್ರಾಯ. ‘ಅದೃಷ್ಟ’ ಕೂಡ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂಬುದು ಅವರು ಅನುಭವದಿಂದ ಕಂಡುಕೊಂಡ ಸಂಗತಿ.‘‘ಛಾಯಾಗ್ರಹಣಕ್ಕೆ ಹೊರಟ ಸಮಯ ಅತ್ಯಂತ ಪ್ರಶಸ್ತವಾಗಿದ್ದರೂ ಕೆಲಬಾರಿ ಸಡನ್ನಾಗಿ ಮಳೆ ಬರುವುದುಂಟು, ಮಳೆ ಬರದಿದ್ದರೂ ಮೋಡ ಮುಸುಕಿದ ವಾತಾವರಣ
*ಪ್ರಸಾದ ನಾಯಿಕಛಾಯಾಗ್ರಹಣ ರಂಗದಲ್ಲಿ ಅತ್ಯುತ್ತಮ ಸಾಧನೆ ತೋರಿಸಿದವರನ್ನು ಈಗ ಬೆಲ್ಜಿಯಂನಲ್ಲಿರುವ ‘ಎಫ್ಐಎಪಿ’ ಅನೇಕ ವರ್ಷಗಳಿಂದ ಗುರುತಿಸಿ, ಗೌರವವನ್ನು ನೀಡುತ್ತ ಬಂದಿದೆ. ಎಎಫ್ಐಎಪಿ ಮೊದಲ ಹಂತದ ಡಿಸ್ಟಿಂಕ್ಷನ್ ಆದರೆ, ‘ಇಎಫ್ಐಎಪಿ’ (ಎಕ್ಸೆಲೆನ್ಸ್ , ಫೆಡರೇಷನ್ ಇಂಟರನ್ಯಾಷನಲ್ ಡಿ-ಲಾ ಆರ್ಟ್ ಫೋಟೋಗ್ರಫಿಕ್) ಎರಡನೇ ಹಂತದ ಗೌರವ ಮತ್ತು ‘ಎಮ್ಎಫ್ಐಎಪಿ’ (ಮಾಸ್ಟರ್, ಫೆಡರೇಷನ್ ಇಂಟರನ್ಯಾಷನಲ್ ಡಿ-ಲಾ ಆರ್ಟ್ ಫೋಟೋಗ್ರಫಿಕ್) ಅತ್ಯುನ್ನತ ಗೌರವ.
*ಪ್ರಸಾದ ನಾಯಿಕಛಾಯಾಚಿತ್ರಕಲೆಯಲ್ಲಿ ತನ್ನ ಸ್ಥಾನ ಏನೆಂಬುದನ್ನು ಕರ್ನಾಟಕ ವಿಶ್ವಕ್ಕೆ ಮೇಲಿಂದ ಮೇಲೆ ತೋರಿಸಿಕೊಟ್ಟಿದೆ. ಈಗ ಈ ಕಲೆಗಾರಿಕೆಗೆ, ರಾಜ್ಯಕ್ಕೆ ಮತ್ತೊಮ್ಮೆ ಮನ್ನಣೆ ದೊರಕಿಸಿಕೊಟ್ಟಿದ್ದಾರೆ ಬೆಂಗಳೂರಿನ ಎಚ್. ವಿ. ಪ್ರವೀಣ್ ಕುಮಾರ್.ಕ್ಯಾಮೆರಾ ಕಣ್ಣನ್ನು ಹೆಗಲಿಗೇರಿಸಿ, ಪ್ರಕೃತಿ ಸೌಂದರ್ಯವನ್ನು ಕಣ್ರೆಪ್ಪೆಯಲ್ಲಿ ತುಂಬಿಸಿ, ವಿಶ್ವದಾದ್ಯಂತ ಆ ಸೌಂದರ್ಯವನ್ನು ಬಿಂಬಿಸಿ, ಪ್ರಶಸ್ತಿ- ಗೌರವಗಳನ್ನು ಬಗಲಿಗಿಳಿಸಿ ದಾಪುಕಾಲಿಕ್ಕಿಕೊಂಡು ಸಾಗುತ್ತಿದ್ದಾರೆ ಪ್ರವೀಣ್. ಛಾಯಾಚಿತ್ರಕಲೆಯಲ್ಲಿನ ಐದು ವರ್ಷಗಳ
ಮುಖಪುಟ --> ಸಾಹಿತ್ಯ ಸೊಗಡು --> ಜನ ಈ ದಿನ --> ವ್ಯಕ್ತಿ ಚಿತ್ರಮೇ 15, 2003ಜಗತ್ತಿಗೆ ಭಾರತೀಯ ವೆಬ್ಕಿಟಕಿ ಯಾವುದು?ಅಮೆರಿಕೆಯ 20 ವಿಶ್ವವಿದ್ಯಾಲಯಗಳು ಕಾಮತ್ ಡಾಟ್ಕಾಂ ಎನ್ನುತ್ತಿವೆ. ನಮ್ಮ ಸಂಸ್ಕೃತಿಯ ಬೇರುಗಳ ಬಿಚ್ಚಿಡುವ ಈ ವೆಬ್ಸೈಟ್ ಒಡೆಯನೊಡನೆ ಇ-ಮಾತುಕತೆ.ಪ್ರದೀಪ್ ಬೆಳ್ಳಾವೆ, ಬೆಂಗಳೂರುE- Mail : bkp1974@hotmail.comಐದು ಸಾವಿರ ವರ್ಷಗಳಷ್ಟು ಇತಿಹಾಸ ಅಡಗಿಸಿಟ್ಟುಕೊಂಡಿರುವ ಭಾರತ ಇವತ್ತಿಗೂ ಜಗತ್ತಿನ ಸಂಸ್ಕೃತಿಯ ತೊಟ್ಟಿಲು. ಜ್ಞಾನ, ಸೌಂದರ್ಯ, ಸಂಪತ್ತು-