ಬೆಂಗಳೂರು, ಅ.. 9 : ಹೆಸರಾಂತ ಕ್ರಿಕೆಟ್ ಬರಹಗಾರ ಮತ್ತು ಕ್ರೀಡಾ ವರದಿಗಾರ ರಾಜನ್ ಬಾಲ ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಿಧನಹೊಂದಿದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಎರಡುವಾರದ ಹಿಂದೆ ಹೃದಯಾಘಾತಕ್ಕೆ ತುತ್ತಾಗಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಡಯಲಾಲಿಸ್ ಪಡೆಯುತ್ತಿದ್ದ ಅವರು ಕೋಮಾ ಸ್ಥಿತಿ ತಲುಪಿದ್ದರು. ಮತ್ತೆ ಚೇತರಿಸಿಕೊಳ್ಳಲು ಆಗಲೇ ಇಲ್ಲ. ಅವರ
ಶಾರ್ಜಾ : ಧ್ವನಿ ಪ್ರತಿಷ್ಠಾನದವತಿಯಿಂದ ಗಾನಗಂಗೆ ಗಂಗೂಬಾಯಿ ಹಾನಗಲ್ ಅವರಿಗೆ ಶಾರ್ಜಾದಲ್ಲಿ ಸಂಗೀತ ಪ್ರೇಮಿಗಳು, ಕನ್ನಡ ಲೇಖಕರು ಹಾಗೂ ಕಲಾವಿದರು ಸೇರಿ ಶ್ರದ್ಧಾಂಜಲಿ ಅರ್ಪಿಸಿದರು. ಇಲ್ಲಿನ ಅರಬ್ ಉಡುಪಿ ಹೋಟೆಲಿನ ಸಭಾಗೃಹದಲ್ಲಿ ನೆರವೇರಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗೀತ ವಿದೂಷಿ ಸುಮಾ ನಾರಾಯಣ ಅವರು ವಹಿಸಿದ್ದರು. ರಂಗ ನಿರ್ದೇಶಕ, ಸಾಹಿತಿ ಹಾಗೂ ಸಂಘಟಕ ಪ್ರಕಾಶ್ ರಾವ್ ಪಯ್ಯಾರ್,
ದುಬೈ, ಜು, 22 : ಸ್ಥಳೀಯ ಕನ್ನಡ ಸಂಘದ ಸಕ್ರಿಯ ಕಾರ್ಯಕರ್ತ, ವೃತ್ತಿಯಿಂದ ಹೆಸರಾಂತ ಲೆಕ್ಕ ಪರಿಶೋಧಕರಾಗಿದ್ದ ಸುರೇಶ್ ಕುಕ್ಕಿಲಾಯ ಅವರು ಹೃದಯಾಘಾತದಿಂದ ನಿಧನಹೊಂದಿದರು. ಬೆಂಗಳೂರಿಗೆ ತಡವಾಗಿ ತಲುಪಿದ ವರದಿಗಳ ಪ್ರಕಾರ ಸುರೇಶ್ ಅವರು ಕಳೆದ 16ರಂದು ಹೃದಯಾಘಾತಕ್ಕೆ ತುತ್ತಾದರು. ಅಂತ್ಯಕ್ರಿಯೆ ಇಂದು ದುಬೈನಲ್ಲಿ ನಡೆಯಲಿದೆ.ಸುರೇಶ್ ಅವರು ಶಿವಳ್ಳಿ ಬ್ರಾಹ್ಮಣ ವರ್ತುಲಕ್ಕೆ ಸೇರಿದವರು. ಉಡುಪಿ ಸಮೀಪದ ಉಪ್ಪೂರಿನವರಾಗಿದ್ದ
ಸಿಡ್ನಿಯ ಭಾರತೀಯರ ಪೈಕಿ, ಅದರಲ್ಲೂ ಕನ್ನಡಿಗರಿಗೆ ಅತ್ಯಂತ ಜನಪ್ರಿಯರಾಗಿದ್ದ ಮತ್ತು ಜನಾನುರಾಗಿಯಾಗಿದ್ದ ಡಾ|| ಶಂಕರ್ ಸಂಗಮೇಶ್ವರ ಅವರು ಇದೇ ಜುಲೈ 15ರಂದು ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಅವರಿಗೆ 71 ವರ್ಷವಯಸ್ಸಾಗಿತ್ತು.ಮೂಲತಃ ಭೂಗರ್ಭಶಾಸ್ತ್ರ ಪರಿಣಿತರಾದ ಶಂಕರ್ ಇಲ್ಲಿನ University of technologyಯಲ್ಲಿ ಅಧ್ಯಾಪಕರಾಗಿದ್ದು 1993ರಲ್ಲಿ ನಿವೃತ್ತರಾಗಿದ್ದರು. ಕಲೆ, ಸಂಗೀತ ಕ್ರೀಡೆ ಮುಂತಾಗಿ ನಾನಾ ಕ್ಷೇತ್ರಗಳಲ್ಲಿ ಆಸಕ್ತಿಹೊಂದಿದ್ದ ಇವರು
*ಸತ್ಯವ್ರತ ಹೊಸಬೆಟ್ಟುಆ ದೊಡ್ಡ ಮನೆಯಲ್ಲಿ ಆತ ಒಬ್ಬನೇ ಕುಳಿತು ಕುಡಿಯುತ್ತಿದ್ದ. ಇಡೀ ಜಗತ್ತು ತನಗೆ ಮೋಸ ಮಾಡುತ್ತಿದೆ. ಎಲ್ಲರೂ ತನ್ನನ್ನು ಬೇಟೆಯಾಡಲು ಹೊಂಚು ಹಾಕುತ್ತಿದ್ದಾರೆ ಎಂದು ಅನುಮಾನಿಸುತ್ತಿದ್ದ. ಅಂಥವರೆಲ್ಲರನ್ನು ತಾನೊಬ್ಬನೇ ಮಟ್ಟ ಹಾಕಬಲ್ಲೆ ಎಂದು ಅಭಿಮಾನದಿಂದ ಎದೆತಟ್ಟಿಕೊಳ್ಳುತ್ತಿದ್ದ. ನಡುರಾತ್ರಿ ಒಂಟಿಯಾಗಿ ಹೊರಬಂದು, 36 ಪಿಸ್ತೂಲನ್ನು ಎಡಗೈಯಲ್ಲಿಯೂ, ಡಬಲ್
ಹಿರಿ ತಲೆಮಾರಿನ ಕನ್ನಡ ಚಿತ್ರ ನಿರ್ದೇಶಕ ವಿ.ಸೋಮಶೇಖರ್ ಶುಕ್ರವಾರ (ಆ.21) ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಕಿಡ್ನಿ ವೈಫಲ್ಯದಿಂದ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ಹೆಂಡತಿ, ಇಬ್ಬರು ಪುತ್ರರು ಹಾಗೂ ಕೆಲವು ಒಳ್ಳೆಯ ಚಿತ್ರಗಳನ್ನು ಅವರು ಬಿಟ್ಟು ಹೋಗಿದ್ದಾರೆ.ನಲವತ್ತು ವರ್ಷಗಳ ಸಿನಿಮಾ ಜೀವನದಲ್ಲಿ 49 ಚಿತ್ರಗಳನ್ನು ಸೋಮಶೇಖರ್ ನಿರ್ದೇಶಿಸಿದ್ದಾರೆ. ಬಂಗಾರದ ಪಂಜರ, ಪ್ರೇಮದ ಕಾಣಿಕೆ, ಶಂಕರ್
ಬಾಲಿವುಡ್ನ ಕಚಗುಳಿಗಾರ ಜಾನಿ ವಾಕರ್ ಮಂಗಳವಾರ (ಜು.29) ಮುಂಬಯಿಯಲ್ಲಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.ಈತನ ಹೆಸರು ಬದ್ರುದ್ದೀನ್ ಕಾಜಿ ಅನ್ನೋದು ಅನೇಕ ಸಿನಿಮಾಭಿಮಾನಿಗಳಿಗೆ ಗೊತ್ತಿರಲಿಕ್ಕಿಲ್ಲ. ಮಂಗಳೂರು ಮೂಲದ ಗುರುದತ್ ಈತನಿಗೆ ಆಗ ಹೆಸರಾಗಿದ್ದ ವಿಸ್ಕಿ ಬ್ರಾಂಡ್ನ ಹೆಸರನ್ನು ಇಟ್ಟು, ಸಿನಿಮಾ ಲೋಕಕ್ಕೆ ಕಚಗುಳಿಯಿಡಲು ತಂದು ಬಿಟ್ಟರು. ಬಸ್ ಕಂಡಕ್ಟರಾಗಿದ್ದ ಬದ್ರುದ್ದೀನ್ ‘ಬಾಜಿ’ ಚಿತ್ರದ ಬ್ರೇಕ್ನ ನಂತರ
ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ಛಾಯಾಗ್ರಾಹಕ ಡಿ.ವಿ. ರಾಜಾರಾಂ (74) ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ (ನ.25) ಮೃತಪಟ್ಟರು. ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘದ ಅಧ್ಯಕ್ಷರೂ ಆಗಿದ್ದ ರಾಜಾರಾಂ, 1952 ರಲ್ಲಿ ಸಂತ ತುಕಾರಾಂ ಚಿತ್ರದ ಮೂಲಕ ಛಾಯಾಗ್ರಾಹಕರಾಗಿ ಚಿತ್ರೋದ್ಯಮವನ್ನು ಪ್ರವೇಶಿಸಿದ್ದರು. ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು, ಮುತ್ತಿನಹಾರ, ಬಂಧನ, ಶರಪಂಜರ, ಮಿಸ್ ಲೀಲಾವತಿ,
ಇವತ್ತು ಮತ್ತೆ ಸಾಹಿತ್ಯಕ್ಕೊಂದು ಕಳೆ ಮತ್ತು ಬೆಲೆ ಬರಬೇಕಿದ್ದರೆ ತೇಜಸ್ವಿ ಕಂಪ್ಯೂಟರ್ನಿಂದ ಕಥಾಸಂಕಲನವೋ ಕಾದಂಬರಿಯೋ ಹೊರಬರಬೇಕು ಅಂದ್ಕೊತಿದ್ವಿ. ಆದರೆ, ಅವರ ಇತ್ತೀಚಿನ ಕೃಷಿ ನೋಡುತ್ತಿದ್ದರೆ ಆ ಸೂಚನೆ ಕಾಣಿಸುತ್ತಿರಲಿಲ್ಲ. ಇನ್ನು ಅವರೇ ಇಲ್ಲವಲ್ಲ. ಯಾಕೋ ಇಷ್ಟು ಬೇಗ, ಮಾಯಾಲೋಕ ಕರಗಿಹೋಯಿತು! ಕನ್ನಡಿಗರಿಗೆ ಅದೃಷ್ಟ ಕಡಿಮೆ ಬಿಡಿ...ಸತ್ಯವ್ರತ ಹೊಸಬೆಟ್ಟುಕುವೆಂಪು ಅವರ ಮೇರು ಕೃತಿ ಯಾವುದು ಎಂಬ ಪ್ರಶ್ನೆಗೆ ಅವರ
*ಸತ್ಯವ್ರತ ಹೊಸಬೆಟ್ಟುವಡ್ಡರ್ಸೆ ರಘುರಾಮ ಶೆಟ್ಟಿ ತೀರಿಕೊಂಡಿದ್ದಾರೆ. ದೊರಗು ದನಿಯ, ಎತ್ತರದ ನಿಲುವಿನ, ಚೂಪು ಕಣ್ಣಿನ ಶೆಟ್ಟರು ಅಪ್ಪಟ ಪತ್ರಕರ್ತರಾಗಿದ್ದವರು. ಪತ್ರಿಕೋದ್ಯಮ ಗೊತ್ತಿದ್ದಷ್ಟು ಗಿಮಿಕ್ಕುಗಳು ಗೊತ್ತಿಲ್ಲದೆ ಇದ್ದವರು. ದುಡ್ಡಿದ್ದರೆ, ಪ್ರಾಮಾಣಿಕತೆ ಇದ್ದರೆ, ಕಷ್ಟಪಟ್ಟು ಕೆಲಸ ಮಾಡಿದರೆ ಜನ ಯಾಕೆ ಪೇಪರು ಕೊಳ್ಳುವುದಿಲ್ಲ , ನೋಡಿಯೇ ಬಿಡೋಣ ಎಂದು ಮುಗ್ಧತೆಯಿಂದ ಮಾತಾಡುತ್ತಿದ್ದ ಶೆಟ್ಟರಿಗೆ, ಪೈಗಳ ವ್ಯಾಪಾರ