ಅಮೇರಿಕಾದ ಸ್ವಾರಸ್ಯಗಳನ್ನು ಹ೦ಚಿಕೊಳ್ಳುವಾಗ ಉತ್ತಮವಾಗಿ ಸ್ಪ೦ದಿಸುತ್ತಿರುವ ಎಲ್ಲ ಓದುಗರಿಗೂ ನನ್ನ ವ೦ದನೆಗಳು. ಹಲವು ಓದುಗರು ತಮ್ಮ ಅನುಭವಗಳನ್ನೂ ಹ೦ಚಿಕೊ೦ಡಿದ್ದಾರೆ ಅವರಿಗೆ ನನ್ನ ವಿಶೇಷ ಕೃತಜ್ನತೆಗಳು. ಅವರಿ೦ದಾಗಿ ನಾನು ಹೊಸ ವಿಷಯಗಳನ್ನು ತಿಳಿದುಕೊ೦ಡ೦ತಾಗಿದೆ. "ಅವರವರ ಅನುಭವ ಅವರವರಿಗೆ" ಎ೦ಬ ಸೂತ್ರದ೦ತೆ ಅದೇ ಅನುಭವ ನಮಗೂ ಆಗಬಹುದು, ಅಗದೆ ಇರಲೂಬಹುದು. ಆದಾಗ್ಯೂ ನಮ್ಮ ತಿಳಿವಳಿಕೆ/ಅನುಭವವೇ ಅ೦ತಿಮವಲ್ಲ. ಪ್ರತಿಕ್ಷಣವೂ ಹೊಸತನ್ನು ನೋಡುವ,
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕನ್ನಡಿಗರನ್ನು ಆಯ್ಕೆ ಮಾಡಿ ನೀಡಲಾಗುವ ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ "ಮಯೂರ" ಪ್ರಶಸ್ತಿ. ಈ ಬಾರಿ ಕನ್ನಡ ಭಾಷೆ, ಕಲೆ, ಸಂಸ್ಕೃತಿ, ಸಂಘಟನೆ, ಸಮಾಜಸೇವೆಯಲ್ಲಿ ಸದಾ ಕ್ರಿಯಾಶೀಲರಾಗಿರುವ ಶಾರ್ಜಾ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ಗಣೇಶ್ ರೈ ಯವರಿಗೆ 2009 ನೇ ಸಾಲಿನ "
“ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ಕವಿ ನುಡಿಯಂತೆ, ಕನ್ನಡಿಗರು ತಾಯ್ನಾಡಲ್ಲಿರಲಿ ಅಥವಾ ವಿದೇಶದಲ್ಲಿರಲಿ, ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಅಂತೆಯೇ ನೆದರ್ಲ್ಯಾಂಡ್ಸ್ ನ ಶ್ರೀಗಂಧ ಕನ್ನಡ ಬಳಗದ ಸದಸ್ಯರೂ ಕೂಡಿ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಅಭಿಮಾನದಿಂದ ಆಚರಿಸಿದರು.* ಶೆಲ್ವನಾರಾಯಣ, ನೆದರ್ಲ್ಯಾಂಡ್ಸ್ಕನ್ನಡ ಭಾಷೆಯನ್ನು ಮಾತಾಡುವ ಭೂಪ್ರದೇಶಗಳನ್ನು ಒಗ್ಗೂಡಿಸಲು ನಡೆದ ಏಕೀಕರಣ ಚಳವಳಿಯ ಫಲವಾಗಿ
ತನ್ನದೇ ಆದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ನೀಡುತ್ತಾ ಕನ್ನಡಿಗರ ಮೆಚ್ಚುಗೆಯನ್ನು ಪಡೆದಿರುವ ಕರ್ನಾಟಕ ಸಂಘ ಶಾರ್ಜಾ, ಕಿಕ್ಕಿರಿದು ತುಂಬಿದ್ದ ಏಶ್ಯನ್ ಪ್ಯಾಲೆಸ್ ಸಭಾಂಗಣದಲ್ಲಿ ಕನ್ನಡಿಗರೆಲ್ಲರೂ ಬಹುಕಾಲ ನೆನಪಿಡುವ ಸಂತೋಷ ಸಂಭ್ರಮದ ವಾತಾವರಣವನ್ನು ಸೃಷ್ಠಿ ಮಾಡಿತ್ತು. ಸಂದರ್ಭ : ಶಾರ್ಜಾ ಕರ್ನಾಟಕ ಸಂಘದ ವಾರ್ಷಿಕೋತ್ಸವ ಮತ್ತು ರಾಜ್ಯೋತ್ಸವ ಕಾರ್ಯಕ್ರಮ.ಕರ್ನಾಟಕವನ್ನು ಪ್ರತಿನಿಧಿಸುವ ಕನ್ನಡ, ತುಳು, ಕೊಂಕಣಿ, ಕೊಡವ, ಬ್ಯಾರಿ
ನಲ್ಮೆಯ ಯುನೈಟೆಡ್ ಕಿಂಗ್ ಡಂ ಸ್ನೇಹಿತರೆ,ನಮ್ಮ ಕರ್ನಾಟಕದಲ್ಲಿ ಈಗಿನ ಪರಿಸ್ಥಿತಿ ಯಾವ ದೃಷ್ಟಿಕೋನದಲ್ಲಿ ನೋಡಿದರೂ ಸರಿಯಿದ್ದಂತಿಲ್ಲ. ಫಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಭಾರೀ ನೈಸರ್ಗಿಕ ಅನಾಹುತದಿಂದ ನಮ್ಮ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಚೇತರಿಸಿಕೊಂಡಿಲ್ಲ. ನೆರೆ ಪರಿಹಾರ ಕಾರ್ಯಗಳು ಅಲ್ಲಲ್ಲಿ ಆರಂಭವಾಗುತ್ತಿರುವ ಸುದ್ದಿಗಳನ್ನು ನಾವಿಲ್ಲಿ ಕುಳಿತು ಓದುತ್ತೇವಷ್ಟೆ. ಪ್ರವಾಹದ ಮಟ್ಟ ತಗ್ಗಿದರೂ ಸಂತ್ರಸ್ತರ ಬವಣೆ ತಪ್ಪಿಲ್ಲ. ಇಂಥ ಪರಿಸ್ಥಿತಿಯಲ್ಲಿಯೂ,
ಕನ್ನಡಿಗರ ನೆಚ್ಚಿನ ಹಬ್ಬ ದೀಪಾವಳಿಯೊಂದಿಗೆ ನಮ್ಮ ನಾಡಿನ ಕನ್ನಡದ ಹಬ್ಬ ಕನ್ನಡ ರಾಜೋತ್ಸವವನ್ನು ಒಟ್ಟೊಟಿಗೆ ಮಾಡಿದಾಗ, ಕಣ್ಮನಗಳಿಗೆ ಸಿಗುವ ಅದ್ದೂರಿ ಸಂಭ್ರಮ ನೋಡಬೇಕಾಗಿದ್ದರೆ ನೀವು ಅಲ್ಲಿ ಇರಬೇಕಿತ್ತು. ಹೊಯ್ಸಳ ಕನ್ನಡ ಕೂಟ ಕನೆಕ್ಟೀಕಟ್ ವತಿಯಿಂದ 2009ನೇ ನವೆಂಬರ್ 7ರಂದು ಸೌತ್-ವಿಂಡಸರ್ನ ಭವ್ಯವಾದ ರಂಗಮಂದಿರದಲ್ಲಿ ಈ ಹಬ್ಬಗಳ ಪ್ರಯುಕ್ತ ಆಯೋಜಿಸಲಾದ ಕನ್ನಡದ ಸಂಸ್ಕೃತಿ, ಇತಿಹಾಸ, ಸೊಗು-ಸೊಡಗು ಮತ್ತು ಇಂದಿನ
ದೀಪಾವಳಿ ಹಾಗೋ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಿಂಗಪುರ ಕನ್ನಡಸಂಘ ನವೆಂಬರ್ 1, ಡಿ.ಬಿ.ಎಸ್. ಸಭಾಂಗಣದಲಿ ಭಾನುವಾರ ಸಂಜೆ ಜ್ಯೂ.ಬೀchi ಎಂದೇ ಖ್ಯಾತರಾಗಿರುವ ಗಂಗಾವತಿ ಪ್ರಾಣೇಶ್, ನಗೆಚಟಾಕಿಗೆ ಹೆಸರಾಗಿರುವ ಪ್ರೊ. ಕೃಷ್ಣೇಗೌಡ ಹಾಗೂ ರಿಚರ್ಡ್ ಲೂಯಿಸ್ ಅವರಿಂದ ಹಾಸ್ಯೋತ್ಸವ ಕಾರ್ಯಕ್ರಮ ಆಯೋಜಿಸಿತ್ತು. ಸಿಂಗಪುರ ಕನ್ನಡಸಂಘದ ಅಧ್ಯಕ್ಷರಾದ ಡಾ.ವಿಜಯಕುಮಾರ್ ಅವರಿಂದ ಸ್ವಾಗತ ಭಾಷಣ, ಆಹ್ವಾನಿತರ ಪರಿಚಯ. ಕುಮಾರಿ ಖುಷಿ
ನವೆ೦ಬರ್ ಒ೦ದನೇ ತಾರೀಕು ಕೆನಡಾದಲ್ಲಿ ಇರುವ ಟೊರೋ೦ಟೊ ನಗರದಲ್ಲಿ "ರಾಘವೇ೦ದ್ರ ವಿಜಯ" ಎ೦ಬ ಸ೦ಸ್ಕೃತ ನೃತ್ಯ ರೂಪಕವನ್ನು ಇಲ್ಲಿನ ಶ್ರೀ ಲಾಸ್ಯ ಅಕಾಡೆಮಿಯ ಡಾಕ್ಟರ್ ಅಲಕನ೦ದಾ ಮತ್ತು ಅವರ ಶಿಷ್ಯ ವ್ರ೦ದದವರು ರ೦ಗದ ಮೇಲೆ ಭವ್ಯವಾಗಿ ನಿರೂಪಿಸಿದರು. ಟೊರೋ೦ಟೊ ನಗರದಲ್ಲಿ ಶ್ರೀ ರಾಘವೇ೦ದ್ರ, ಪ್ರಾಣ ದೇವರು ಹಾಗೂ ಉಡುಪಿ ಕಡಗೋಲು ಶ್ರೀ ಕೃಷ್ಣನನ್ನು ಒಳಗೊ೦ಡ ದೇವಸ್ಥಾನದ ನಿರ್ಮಾಣದ
ಅಮೇರಿಕಾ ಕಾಫಿ ಕುಡಿಯುವವರ ಸ್ವರ್ಗ. ಇಲ್ಲಿಯ ಜನ ಹೆಚ್ಚಾಗಿ ಕಾಫಿಯನ್ನು ಕುಡಿಯುತ್ತಾರೆ, ಆದರೆ ಇಲ್ಲಿ ಬೈಟು ಪದ್ದತಿ ಇಲ್ಲ. ಏನೇ ಕುಡಿದರೂ ದೊಡ್ಡ ದೊಡ್ಡ ಲೋಟದಲ್ಲಿ ಕುಡಿಯುತ್ತಾರೆ. ಹಲವು ಕಡೆ ಕಾಫಿ ಉಚಿತವಾಗಿ ಸಿಗುತ್ತದೆ. ಇಲ್ಲಿ ಕಾಫಿಗೆ ಹಾಲು ಸೇರಿಸಿ ಕುಡಿಯುವುದಿಲ್ಲ, ಬದಲಾಗಿ ಕೆಲವರು ಹಾಲಿನ ಕೆನೆಯನ್ನು (ಕ್ರೀಮರ್) ಕೊಂಚ ಸೇರಿಸಿಕೊಳ್ಳುತ್ತಾರೆ. ಪ್ರತೀ ಕಡೆಯೂ ಹಲವಾರು ರುಚಿಗಳ
ನಾಳಿನ ಕನಸುಗಳ ಗಾರೆ ಇಟ್ಟಿಗೆಗಳಿಂದಇಂದ್ರ ಧನುಷ್ಯದ ಕಮಾನು ಕಟ್ಟುವ ಮನಸುಆಕಾಶಗಂಗೆಯ ತೃಣಮಾತ್ರ ಸ್ಥಳದಿಂದನೀಹಾರಿಕೆಗಳಿಗೆ ಸೇತು ರಚಿಸುವ ಹುರುಪು ಕನಸುಗಣ್ಣುಗಳಿಂದ ಕರ್ಮ ಲೋಕಕೆ ಹೋಗಿಮರೀಚಿಕೆಯ ಜಲಧಾರೆ ಆಶಿಸುವ ಹೊಂಗನಸುಕ್ಷಿಪಣಿ ವೇಗದಿ ಸಾಗಿ ತನುಮನವ ದುಡಿಸಿಕೀರ್ತಿ ಸಿರಿಯನ್ನೆಲ್ಲ ಬಾಚುವ ಹುಮ್ಮಸ್ಸು ಉತ್ತುಂಗದಿಂದಿಳಿವಾಗ ಆಗೊಮ್ಮೆ ಈಗೊಮ್ಮೆಅಂದಿನ ಮುಗ್ಧತೆಯ ಸರಳತೆಯ ನೆನಪುಅಹಮಿಕೆಯ ಸ್ಪರ್ಧೆಯ ಕ್ಷಣಗಳಲ್ಲೊಮ್ಮೆಬಾಲ್ಯದಲಿ ಘ್ರಾಣಿಸಿದ ಹೂವುಗಳ ಹೊಳಹು ಕೌಮಾರ್ಯದ ಮಧುರ ಅನುಭೂತಿ