ಪ್ರಿಯ ವಿದ್ಯಾರ್ಥಿನಿಯರೇ, ಐದು ವರ್ಷದ ನಮ್ಮ ನಿಮ್ಮ ಸಂಬಂಧ ಕೊನೆಗೆ ಬರುತ್ತಿದೆ. ಇಲ್ಲಿಯವರೆಗೆ ಎಲ್ಲರೂ ಒಂದು ಕುಟುಂಬದ ಸದಸ್ಯರಂತೆ ಇದ್ದೆವು. ಎಷ್ಟೋ ಬಾರಿ ಕಾಲೇಜಿನ ಪ್ರಾಧ್ಯಾಪಕರು ನಿಮ್ಮನ್ನು ಬಯ್ದಿದ್ದೇವೆ, ನೀವು ಮಾಡುತ್ತಿರುವುದು ತಪ್ಪಿದ್ದಲ್ಲಿ ತಪ್ಪೆಂದು ತೋರಿಸಿದ್ದೇವೆ. ಅದು ನಿಮ್ಮ ಕೋಪಕ್ಕೆ ಕಾರಣವಾಗಿರಲಿಕ್ಕೂ ಸಾಕು. ನಮ್ಮ ಬೆನ್ನ ಹಿಂದೆ ನೀವೆಲ್ಲರೂ ನಮ್ಮನ್ನು ನಿಂದಿಸಿರಲೂಬಹುದು. ಆದರೆ ನಮಗೆ ಅದಕ್ಕೆ ಬೇಸರವಿಲ್ಲ.
ಮುಂದೊಂದು ದಿನ ವಿಜ್ಞಾನಿಯಾಗಿ ಅಬ್ದುಲ್ ಕಲಾಂ ಅಥವಾ ಕಲ್ಪನಾ ಚಾವ್ಲಾ ಅಥವಾ ಸುನೀತಾ ವಿಲಿಯಮ್ಸ್ ಆಗುವ ಕನಸು ಹೊತ್ತಿರುವ ಹುಡುಗಿಗೆ ಕನಸು ನನಸಾಗಿಸಿಕೊಳ್ಳುವ ಆತ್ಮವಿಶ್ವಾಸವಿದೆ. ಸಾಧಿಸೇ ಸಾಧಿಸುತ್ತೇನೆಂಬ ಛಲವೂ ಇದೆ. ಆದರೆ ಇಲ್ಲವಿರುವುದು ಹೆಚ್ಚಿನ ವಿದ್ಯೆಯನ್ನು ಗಿಟ್ಟಿಸಿಕೊಳ್ಳಲು ಅಗತ್ಯವಿರುವ ಹಣಬಲವೊಂದೇ.ವಿಪರ್ಯಾಸವೆಂದರೇ ಇದೇ ಅಲ್ವೆ? ಕನಸುಗಳ ಮೂಟೆ ಹೊತ್ತು ಮುಂದೇನು ಮಾಡಬೇಕೆಂದು ತೋಚದಿರುವ ಸಂಕಷ್ಟಮಯ ಸ್ಥಿತಿಯಲ್ಲಿ ನಿಂತಿಹಳು ಭಾರ್ಗವಿ
*ವಿಶಾಖ ಎನ್.ಬದುಕು ಜಟಕಾಬಂಡಿ ವಿಧಿಯದರ ಸಾಹೇಬ ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗರು ಅಂತ ಡಿ.ವಿ.ಗುಂಡಪ್ಪ ಅರ್ಧ ಶತಮಾನದ ಹಿಂದೆಯೇ ಹೇಳಿದ್ದು ಇವತ್ತಿನ ಸಿನಿಮಾ ಮಂದಿಗೂ ಅನ್ವಯಿಸುತ್ತದೆ. ಮೊನ್ನೆಯ ಬುಧವಾರವನ್ನು ಉದಾಹರಣೆಯಾಗಿ ತೆಗೆದುಕೊಂಡಲ್ಲಿ ... ತಾರಾ ಹಾಗೂ ಭಾವನಾ ನೆಲಮಂಗಲದ ಸಮಾರಂಭವೊಂದರ ವೇದಿಕೆ ಮೇಲೆ ಕುಂತು ನಗುತ್ತಿದ್ದರು. ಶಿಲ್ಪಾ ಶ್ರೀನಿವಾಸ್ ಕೀರಲಾಟದಿಂದ ಬಸವಳಿದಿದ್ದ ಪ್ರೇಮಾ ಬೆವರುತ್ತಲೇ ಇದ್ದರು.
*ವಿಶಾಖ ಎನ್.ಸುಧಾರಾಣಿ ಅಮ್ಮ ಆಗಿದ್ದಾರೆ. ಸೆಪ್ಟೆಂಬರ್ 21ರ ಶುಕ್ರವಾರ ಮಂಜುನಾಥ ಎಂಬ ಖಾಸಗಿ ನರ್ಸಿಂಗ್ ಹೋಂನಲ್ಲಿ ಹೆಣ್ಣುಮಗುವಿಗೆ ಜನ್ಮ ಕೊಟ್ಟಿದ್ದಾರೆ. ಗೋವರ್ಧನ ಹಾಗೂ ಸುಧಾ ದಾಂಪತ್ಯಕ್ಕೆ ಇದೀಗ ಸಂಪೂರ್ಣ ಅರ್ಥ ಸಿಕ್ಕಿದೆ. ವರ್ಷದ ಹಿಂದೆ ಸುಧಾ ಮರುಮದುವೆ ವಿಷಯ ಸಾಕಷ್ಟು ಸದ್ದು ಮಾಡಿತ್ತು. ಅಮೆರಿಕಾದ ಅರಿವಳಿಕೆ ತಜ್ಞ ಡಾ.ಶಾಸ್ತ್ರಿ ಅವರೊಟ್ಟಿಗೆ ಬಾಳಿದ ನಾಲ್ಕು ವರ್ಷಗಳ ಬದುಕು ಏಕಾಏಕಿ
‘ಇಲ್ಲ ಕಣ್ರೀ. ಆ ಹುಡುಗಿಗೆ 14 ತುಂಬಿರಲಿಲ್ಲ . ಅಂಥ ಚಿಕ್ಕ ವಯಸ್ಸಲ್ಲೇ ಆಕೆ ಚಿತ್ರರಂಗಕ್ಕೆ ಬಂದಳು. ಮೊದಲ ಸಿನಿಮಾದಲ್ಲೇ ನಾಯಕಿ ಆಗಿಬಿಟ್ಲು . ಪುಟ್ಟ ಪುಟ್ಟ ಹೆಜ್ಜೆಯ ಈ ಪುಟಾಣಿ ಹುಡುಗಿ ನಾಯಕಿಯನ್ನ- ಇಡೀ ಚಿತ್ರರಂಗ ‘ಸುಧಾರಾಣೀ’ ಅಂತ ಕರೀತು. ಹತ್ತು ಜನರ ಅಭಿಮಾನ, ಇಪ್ಪತ್ತು ಜನರ ಹಿತನುಡಿ, ಅದೆಷ್ಟೋ ಸಾವಿರ ಜನರ ಹಾರೈಕೆ ಜತೆಯಾಯಿತಲ್ಲ
ಒಂದು ಕಾಲದಲ್ಲಿ ಮಲ್ಲೇಶ್ವರಂನ ಗಲ್ಲಿ ಗಲ್ಲಿಗಳಲ್ಲಿ ಚೀಲ ತಗಲಿ ಹಾಕಿಕೊಂಡು ಲೂನಾ ಮೇಲೆ ಓಡಾಡುತ್ತಾ, ಬೈಟೂ ಕಾಫಿ ಕುಡಿಯುತ್ತಲೇ ಸಿನಿಮಾ ಕನಸು ಕಂಡಿದ್ದ ಪ್ರಕಾಶ್ ರೈ, ಪ್ರಕಾಶ್ ರಾಜ್ ಆದ ಮೇಲೆ ಕನ್ನಡ ಸಿನಿಮಾಗೇ ಮಾಡಿದ್ದಾದರೂ ಏನು?ಈ ಪ್ರಶ್ನೆ ಅವಾಗವಾಗ ಎರಗಲು ಕಾರಣವೂ ಇದೆ. ಎಲ್ಲೋ ಅಲ್ಲೊಂದು ಇಲ್ಲೊಂದು ಕನ್ನಡ ಸಿನಿಮಾ ಶೂಟಿಂಗ್ಗೆ ಅಂತ ಬಂದು ಹೋದಾಗಲೂ
*ದಟ್ಸ್ಕನ್ನಡ ಬ್ಯೂರೊಜನವರಿ 29ರ ಬುಧವಾರ ವಿಷ್ಣುವರ್ಧನ್ ಚೆನ್ನೈನಲ್ಲಿ ಪಂಡರಮ್ಮನವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಅಲ್ಲಿಂದ ಬೆಂಗಳೂರಲ್ಲಿ ಇಳಿದವರೇ ಕಾರಲ್ಲಿ ಮಲ್ಲೇಶ್ವರಂನ ಕೆ.ಕಲ್ಯಾಣ್ ಹೊಸ ಮನೆಗೆ ಬಂದರು. ಅಲ್ಲಿ ಮೇರು ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಕೂಡ ಇದ್ದರು. ಪಂಡರಮ್ಮ ಅಗಲಿದ ದಿನವೇ ಕಲ್ಯಾಣ್ರ ಹೊಸಮನೆ ಕಂ ಆಫೀಸಿನ ಅಧಿಕೃತ ಗೃಹಪ್ರವೇಶ. ಮಲ್ಲೇಶ್ವರಂನ ಎಂಪಿಎಲ್ ಶಾಸ್ತ್ರಿ ರಸ್ತೆಯಲ್ಲಿ ಕಲ್ಯಾಣ್ ಕಚೇರಿ ಇದೆ. ಇವರ
ಇದು ಹೀಗೇ ಕೊನೆಯಾಗುತ್ತೆ ಎಂದು ಅಂದೇ ಅಂದುಕೊಂಡಿದ್ದೆ !ಸುಧಾರಾಣಿಯವರ ಮರು ಮದುವೆ ಕುರಿತು ಹರಿದು ಬರುತ್ತಿರುವ ಅನ್ನಿಸಿಕೆಗಳಲ್ಲಿ ಗಮನ ಸೆಳೆಯುವಂಥಾ ಅಭಿಪ್ರಾಯ ಇಲ್ಲಿದೆ. ಸುಧಾರಾಣಿ ಹಾಗೂ ಡಾ. ಸಂಜಯ್ರ ವೈವಾಹಿಕ ಜೀವನ ಸೋಡಾ ಚೀಟಿಯಲ್ಲೇ ಕೊನೆಯಾಗುತ್ತದೆಂದು ಅವರು ಮದುವೆಯಾದಾಗಲೇ ನಾನು ನಿರೀಕ್ಷಿಸಿದ್ದೆ ಎಂದು ಸ್ವಾಮಿ ಬಾಳೆ ಬರೆದಿದ್ದಾರೆ. ಅವರ ಅನ್ನಿಸಿಕೆಗಳು ಅಮೆರಿಕದ ಹುಡುಗನ ಕುರಿತು ಕನಸು ಕಾಣುವ
ಕರ್ನಾಟಕದ 28ಲೋಕಸಭಾ ಸದಸ್ಯರ ಹೆಸರು, ದೂರವಾಣಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಇಲ್ಲಿದೆ. ನಿಮ್ಮ ಅಹವಾಲು, ಅಭಿಪ್ರಾಯ, ಅನಿಸಿಕೆಯನ್ನು ನಿಮ್ಮನ್ನಾಳುವ ಜನಪ್ರತಿನಿಧಿಗಳಿಗೆ ನೇರವಾಗಿ ತಲುಪಿಸಿ... ಯಾಕೆ ಅಂದ್ರೆ - ಫೆ.15ರ ನಂತರ ನಮ್ಮ ಸಂಸದರು ಬಾಯಿಬಿಡುತ್ತಾರಂತೆ!ಲೋಕಸಭಾ ಪ್ರತಿನಿಧಿಕ್ಷೇತ್ರ ದೂರವಾಣಿ ಸೆಲ್ ಫೋನ್01ಬೀದರ್ (ಮೀಸಲು) ನರಸಿಂಗನ ರಾವ್ ಸೂರ್ಯವಂಶಿ08484-225012 94481 2546602ಕಲಬುರ್ಗಿ ಇಖ್ಬಾಲ್ ಅಹಮದ್ ಸರಡಗಿ08472-28570984400998603ರಾಯಚೂರು - ಎ.
ರಾಜಧಾನಿ ನಗರದ ಟ್ರಾಫಿಕ್ ಕಿರಿಕಿರಿ, ಕಾಂಕ್ರೀಟ್ ಗೋಪುರಗಳನ್ನು ಕಂಡಿರುವ ಇಂದಿನ ಬೆಂಗಳೂರಿಗರಿಗೆ, ನೆನ್ನೆಯ ಬೆಂಗಳೂರು ಹೇಗಿತ್ತು ಎಂದು ತೋರಿಸುವ ಪ್ರಯತ್ನ ಇಲ್ಲಿದೆ. ಕಾಲಚಕ್ರ ಇಲ್ಲಿ ಹಿಂದಕ್ಕೆ ಉರುಳುತ್ತಿದೆ...!!!ಮಾಹಿತಿ-ಚಿತ್ರ ಸಂಗ್ರಹ : ಮಹೇಶ್ ಮಲ್ನಾಡ್‘ನಮ್ಮ ಕಾಲದಲ್ಲಿ ಹಿಂಗಿರಲಿಲ್ಲ ಬಿಡೂ’ ಎಂದು ನಮ್ಮ ಹಿರಿಯರು ಹೇಳುವುದನ್ನು ಕೇಳುತ್ತಿರುತ್ತೇವೆ. ಅದೂ ನಿಜವೇನೊ ಹೌದು. ಯಾಕೆಂದರೆ, ಇನ್ನು ಸ್ಪಲ್ಪ ವರ್ಷಗಳು ಉರುಳಿದರೆ, ಆ