ಕೊಪ್ಪ (ಚಿಕ್ಕಮಗಳೂರು), ಜು. 24 : ಅಂಗಡಿಗೆ ಬರುತ್ತಿದ್ದ ಯುವತಿಯರ ಚಿತ್ರಗಳನ್ನು ತೆಗೆದು ಮೊಬೈಲ್ ನಲ್ಲಿ ರವಾನೆ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಗೂಸಾ ನೀಡಿದ ಸಾರ್ವಜನಿಕರು ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೊಪ್ಪ ಪಟ್ಟಣದಲ್ಲಿ ನಡೆದಿದೆ.ಕೊಪ್ಪ ಪಟ್ಟಣದ ಪ್ರಮುಖ ರಸ್ತೆಯಲ್ಲಿರುವ ಅರಳೀಮರದ ಎದುರು ಚಪ್ಪಲಿ ಅಂಗಡಿ ಹೊಂದಿರುವ ಸುರೇಶ ಶೆಟ್ಟಿ ತನ್ನ ಚಪ್ಪಲಿ ಅಂಗಡಿಗೆ ಬರುವ ಯುವತಿಯರನ್ನು
ಮಂಗಳೂರು, ಸೆ. 23 : ರಾಜ್ಯದ ವಿವಿಧೆಡೆ ಚರ್ಚ್ ಗಳ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಭಜರಂಗದಳದ ರಾಜ್ಯ ಸಂಚಾಲಕ ಮಹೇಂದ್ರಕುಮಾರ್ ಅವರಿಗೆ ಸೋಮವಾರ ಇಲ್ಲಿನ ನ್ಯಾಯಾಲಯದಲ್ಲಿ ಜಾಮೀನು ದೊರೆತರೂ ಚಿಕ್ಕಮಗಳೂರು ಜಿಲ್ಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದ್ದರಿಂದ ಬಿಡುಗಡೆ ಸಾಧ್ಯವಾಗಲಿಲ್ಲ. ಸೋಮವಾರ ಮಧ್ಯಾಹ್ನ ಮಂಗಳೂರಿನ ಎರಡನೇ ದರ್ಜೆಯ ಜೆಎಂಎಫ್ ಸಿ ನ್ಯಾಯಾಲಯವು
ರವಿ ಬೆಳಗೆರೆಅಧಿಕಾರಕ್ಕೆ ಬಂದು ಇಷ್ಟು ದಿನಗಳ ಪೈಕಿ, ಈ ಮಟ್ಟದ ತಪ್ಪು ನಿರ್ಧಾರವೊಂದನ್ನು ಧರ್ಮಸಿಂಗ್ ಕೈಗೊಂಡದ್ದು ಇದೇ ಮೊದಲು. ಧರಂರಂತಹ ಮುತ್ಸದ್ಧಿಯಿಂದ ರಾಜ್ಯದ ಜನತೆ ಇಂಥದ್ದನ್ನು ಖಂಡಿತ ನಿರೀಕ್ಷಿಸಿರಲಿಲ್ಲ. ಅವರು ಮಲೆನಾಡಿನ ಕಾಡುಗಳೊಳಕ್ಕೆ ನಕ್ಸಲೀಯರನ್ನು ಕೊಂದುಹಾಕಲು ಎಸ್ಟಿಎಫ್ ಪಡೆಗಳನ್ನು ಕಳುಹಿಸಿದ್ದಾರೆ. ದಶಕಗಳ ಕಾಲ ಎರಡು ರಾಜ್ಯಗಳನ್ನು ಕಾಡಿ ಕಂಗೆಡಿಸಿದ ನರಹಂತಕ ವೀರಪ್ಪನ್ ಎಲ್ಲಿ ? ಕಾಡ ನಡುವಿನ
ಮಂಗಳೂರು : ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವೈದ್ಯಕೀಯ ಸಚಿವ ಡಾ.ವಿ.ಎಸ್.ಆಚಾರ್ಯ ಹೃದಯಾಘಾತಕ್ಕೊಳಗಾಗಿದ್ದು, ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಕೊಪ್ಪದಲ್ಲಿ ಸೋಮವಾರ ಅವರು ಹೃದಯಾಘಾತಕ್ಕೀಡಾಗಿದ್ದು, ಪೇಸ್ ಮೇಕರ್ ಸಹಾಯದೊಂದಿಗೆ ಅವರನ್ನು ನೋಡಿಕೊಳ್ಳಲಾಗುತ್ತಿದೆ. ಆರೋಗ್ಯ ಸ್ಥಿತಿ ನಿಯಂತ್ರಣದಲ್ಲಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.ಇದಕ್ಕೂ ಮೊದಲು ಅವರು ಕೊಪ್ಪದಲ್ಲಿ ಆಯುರ್ವೇದ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆನಂತರ ಮಾಜಿ
ಶೃಂಗೇರಿ, ಜುಲೈ 30 :ಇಲ್ಲಿನ ಶಾಂತಿ ಸಮಿತಿ ಕರೆ ನೀಡಿರುವ ಜುಲೈ 31ರ ಮಲೆನಾಡು ಬಂದ್ ಗೆ ವ್ಯಾಪಕ ಬೆಂಬಲ ದೊರೆಯುವ ನಿರೀಕ್ಷೆಯನ್ನು ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ ವ್ಯಕ್ತಪಡಿಸಿದ್ದಾರೆ.ಮಲೆನಾಡಿನಲ್ಲಿ ನಡೆದಿರುವ ಹಿಂಸಾಚಾರದ ವಿರುದ್ಧ ಬಂದ್ ಗೆ ಕರೆ ನೀಡಲಾಗಿದೆ. ಈ ಬಂದ್ ಯಾವೊಬ್ಬ ವ್ಯಕ್ತಿಯನ್ನು ಅಥವ ಸಂಘಟನೆಗಳ ವಿರುದ್ಧವಾಗಲಿ ಅಲ್ಲ . ಪ್ರಜಾಪ್ರಭುತ್ವದಲ್ಲಿ
ಕುದುರೇಮುಖದಲ್ಲಿ ಮತ್ತೆ ಚಿಗುರೊಡೆದ ನಕ್ಸಲರ ಚಟುವಟಿಕೆಗಳುಸರ್ಕಾರ ವಿರುದ್ಧದ ಜನತೆಯ ಅಸಮಾಧಾನವನ್ನು ಸಂಘಟನೆಗೆ ಬಳಸಿಕೊಳ್ಳುತ್ತಿರುವ ನಕ್ಸಲರುಕೊಪ್ಪ : ಶಂಕಿತ ನಕ್ಸಲೀಯ ಯುವತಿಯರು ಪೊಲೀಸ್ ದಾಳಿಯಲ್ಲಿ ಸತ್ತ ನಂತರ ತಣ್ಣಗಾಗಿದ್ದ ನಕ್ಸಲೀಯ ಚಟುವಟಿಕೆಗಳು ಕುದುರೆಮುಖ ಅರಣ್ಯಪ್ರದೇಶದಲ್ಲಿ ಮತ್ತೆ ಗರಿಗೆದರಿವೆ ಎಂದು ತಿಳಿದುಬಂದಿದೆ.ಕಳೆದೊಂದು ವಾರದಿಂದ ಕುದುರೆಮುಖ ಅರಣ್ಯಪ್ರದೇಶದಲ್ಲಿ ಶಂಕಿತ ನಕ್ಸಲೀಯರ ಚಟುವಟಿಕೆಗಳು ಮತ್ತೆ ಕಾಣಿಸಿಕೊಂಡಿವೆ. ಮಾಗೋಡು ಮತ್ತು ಸಿಂದೋಡಿ ಬಳಿ ನಕ್ಸಲೀಯರ
ಕೊಪ್ಪ, ಡಿ. 29 : ಅಭಿವೃದ್ಧಿ ಕಾರ್ಯಗಳು ಸರ್ಕಾರದ ಶ್ರೀರಕ್ಷೆಯಾಗಿದೆ. ಉಪಚುನಾವಣೆಯ ಎಲ್ಲ ಎಂಟು ಕ್ಷೇತ್ರಗಳಲ್ಲಿಯೂ ಭಾರತೀಯ ಜನತಾ ಪಾರ್ಟಿ ಜಯಭೇರಿ ಭಾರಿಸಲಿದೆ ಎಂದು ಮುಖ್ಯಮಂತ್ರಿ ಡಾ ಬಿಎಸ್ ಯಡಿಯೂರಪ್ಪ ವಿಶ್ವಾಸವ್ಯಕ್ತಪಡಿಸಿದರು. ಸೋಮವಾರ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು