ಅ೦ದು ತು೦ಗೆ ಬಹಳ ಹೊತ್ತು ಕೂಗಿಕೊಳ್ಳರಾ೦ಭಿಸಿದಳು. ಆಗಿನ್ನೂ ರಾತ್ರಿ ಸುಮಾರು ಎರಡು ಗ೦ಟೆಯ ಸಮಯವಿರಬಹುದು. ಮನೆಯೊಡತಿ ಗಿರಿಜವ್ವ ಅದೇನೆ೦ದು ನೋಡಲು ಸಣ್ಣದಾಗಿದ್ದ ಲಾ೦ದ್ರದ ಬೆಳಕನ್ನು ದೊಡ್ಡದುಮಾಡಿ ತನ್ನ ಮಲಗುವ ಕೋಣೆಯಿ೦ದ ಹೊರಬ೦ದು, ಕೆಲಸದ ಆಳು ರ೦ಗನನ್ನು ಕೂಗಿ ಕರೆದೆಬ್ಬಿಸಿ, ಕೊಟ್ಟಿಗೆಯಕಡೆ ನಡೆದಳು. ಆವೇಳೆಗಾಗಲೆ ತು೦ಗೆಗೆ ಪ್ರಸವವಾಗಿ, ಮುದ್ದಾದ ಕ೦ದು ಬಣ್ಣದ ಕರುವೊ೦ದನ್ನು ಹೊರ ಹಾಕಿ ಹೂ೦ಕರಿಸುತ್ತಿದ್ದಳು. ಕರುವನ್ನು
(ಕಥೆ ಮುಂದುವರಿದಿದೆ...)ಗೌಡರು ಗಾಡಿಯ ನೊಗಕ್ಕೆ ಈ ಎರಡು ಎತ್ತುಗಳನ್ನು ಕಟ್ಟಿ ಗಾಡಿಯನ್ನು ಎಳೆಯುವಲ್ಲಿ ತರಬೇತಿ ಕೊಡಹತ್ತಿದರು. ಈ ತರಬೇತಿಯಲ್ಲಿ ಸಾಕಷ್ಟು ಛಡಿ ಏಟುಗಳನ್ನು ಬಸವ ಹಾಗೂ ಅವನ ಸ೦ಗಡಿಗ ತಿನ್ನಬೇಕಾಗಿ ಬ೦ದು, ಗಾಡಿಯ ನೊಗವನ್ನು ಹೆಗಲಿನಿ೦ದ ತೆಗೆದಾಗ ಕತ್ತಿನ ಮೇಲ್ಬಾಗದಲ್ಲಿ ಚರ್ಮವು ಜಡ್ಡು ಕಟ್ಟಿ ಅವರಿಬ್ಬರ ಕಣ್ಣಲ್ಲೂ ನೀರು, ಹಾಗು ಮೈಮೇಲಿನ ಬೆತ್ತದ ಛಡಿಯೇಟಿನ ಗುರುತು ಪ್ರಾಣಿ
* ಪ್ರೇಮಶೇಖರ, ನವದೆಹಲಿ ಬೆಟ್ಟದ ಹಾದಿಯಲ್ಲಿ ವಾರಗಟ್ಟಲೆ ನಡೆದು ಅವನು ಬಸವಳಿದಿದ್ದ. ಅಮ್ಮ ಕಟ್ಟಿಕೊಟ್ಟಿದ್ದ ಬುತ್ತಿ ಮುಗಿಯುತ್ತಾ ಬಂದಿತ್ತು. ನೀರು ಮುಗಿದು ಅದೆಷ್ಟೋ ಕಾಲವಾಗಿತ್ತು. ಕೆರೆಕುಂಟೆಗಳಿದ್ದೆಡೆ ನಿಂತು ಒಣರೊಟ್ಟಿ ತಿಂದು ನೀರು ಕುಡಿಯುತ್ತಿದ್ದ. ಬೆಟ್ಟವೇರತೊಡಗಿದಂತೆ ಕೆರೆಕುಂಟೆಗಳು ಕಾಣದಾದವು. ಅಲ್ಲಲ್ಲಿ ಒರತೆಗಳು ಕಂಡರೂ ದಾರಿ ಸಾಗಿದಂತೆ ಒಂದೊಂದಾಗಿ ಅವೂ ಮರೆಯಾಗಿಹೋದವು. ಸಿಕ್ಕಿದ ಗುಡಿಸಲುಗಳಲ್ಲಿ ನೀರು ಕೇಳಿದ. ಒಂದಿಬ್ಬರು ಕೊಟ್ಟರು.
ಆ೦ಧ್ರ-ಮಹಾರಾಷ್ಟ್ರ ಗಡಿಯ ಒ೦ದು ಊರು. ಕಡುಬಡವರಾದ ಆ ಊರಿನ ರೈತ ದ೦ಪತಿಗಳಿಗೆ ವಿದ್ಯೆಯಲ್ಲಿ ಶ್ರೀಮ೦ತನಾಗಿದ್ದ ಒಬ್ಬನೇ ಮಗ ಇದ್ದ. ಎಲ್ಲಾ ತರಗತಿಯಲ್ಲೂ ಮೊದಲ ಸ್ಥಾನಗಳಿಸಿ ಸ್ಕಾಲರ್ಶಿಪ್ಪಿನಲ್ಲೇ ಎ೦ಜಿನಿಯರಿ೦ಗ್ ಮಾಡಿಮುಗಿಸಿದಾಗ ತ೦ದೆ-ತಾಯಿಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಇನ್ನೇನು ಮಗ ಕೆಲಸಕ್ಕೆ ಸೇರಿಕೊ೦ಡು ತಮ್ಮ ಜೀವನಕ್ಕೆ ಆಧಾರವಾಗಿರುತ್ತಾನೆ ಅ೦ದುಕೊಳ್ಳುತ್ತಿರುವಾಗ ಹುಡುಗ ಬೇರೆಯದೇ ಯೋಚನೆ ಮಾಡಿದ. ಆ೦ಧ್ರದ ಬಹುತೇಕ ಹುಡುಗರ೦ತೆ ಅವನೂ
ರಿಸೆಷನ್ ಎಂಬ ಭೂತ ಎಂಥವರನ್ನೂ ಕಂಗೆಡಿಸಿಬಿಡುತ್ತದೆ. ಆರ್ಥಿಕವಾಗಿ ಎಂಥ ಬಲಾಡ್ಯವಾಗಿದ್ದರೂ ಬಿಕ್ಕಟ್ಟಿನ ಛಳಕು ನಡುಕ ಹುಟ್ಟಿಸಿಬಿಡುತ್ತದೆ. ತಳ್ಳುವ ಪ್ರತಿದಿನವೂ ಸೂಜಿ ಮೊನೆಯ ಮೇಲೆ ತಪಸ್ಸು ಆಚರಿಸಿತಂಥ ಅನುಭವ. ಆ ಸುಳಿಗೆ ಸಿಕ್ಕವನ ಯೋಜನಾ ಲಹರಿಯ ದಿಕ್ಕನ್ನು ಕೂಡ ತಪ್ಪಿಸಿಬಿಡುತ್ತದೆ. ಆತ ಕೂಡ ಅಂಥದೇ ಸುಳಿಗೆ ಸಿಲುಕಿದ್ದ...* ರಾಧಿಕಾ ಎಮ್.ಜಿ., ಬೆಂಗಳೂರುI am not convinced with this
ಮಿಚಿಗನ್ ನಲ್ಲಿ ನಮ್ಮ ಅಪಾರ್ಟ್ಮೆ೦ಟಿನ ಎದುರು ಮನೆಯವರು ಆ೦ಧ್ರದವರು, ಒಳ್ಳೆಯ ಸ್ನೇಹಿತರಾಗಿದ್ದೆವು. ಭಾರತದವರಲ್ಲವೇ, ವೀಕೆ೦ಡಲ್ಲಿ ಸಮಯ ಸಿಕ್ಕಾಗ ಹೀಗೇ ಹರಟೆ ಕೊಚ್ಚುತ್ತಿದ್ದೆವು. ಅವತ್ತಿನ ವಿಷಯ, ಅವರ ಮನೆಯಲ್ಲೇ ಇದ್ದುಕೊ೦ಡು ಎಮ್ಮೆಸ್ ಮಾಡಿದ ಅವರ ಹೆ೦ಡತಿಯ ತಮ್ಮನ (ಬಾವ ಮೈದ) ಮದುವೆಯ ವೃತ್ತಾ೦ತ. ಅವರು ಹೇಳಿದ ಕಥೆಯನ್ನು ಇಲ್ಲಿ ಸರಳಗೊಳಿಸಿ ನಿಮಗೆ ಹೇಳುವೆ.* ವೆಂಕಟೇಶ್ ದೊಡ್ಮನೆ, ತಲಕಾಲಕೊಪ್ಪಒಳ್ಳೆಯ
"ಛಂದ ಪುಸ್ತಕ - 2009"ರ ಬಹುಮಾನವನ್ನು ಸಂದೀಪ ನಾಯಕರವರು ತಮ್ಮ ಕಥಾಸಂಕಲನದ ಹಸ್ತಪ್ರತಿಗಾಗಿ ಪಡೆದುಕೊಂಡಿದ್ದಾರೆ. ಈ ಬಹುಮಾನವು ಪುಸ್ತಕದ ಪ್ರಕಟಣೆ, ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಜುಲೈ 2009ರಲ್ಲಿ ನಡೆಸಲಾಗುತ್ತದೆ. ಕನ್ನಡದ ಹೊಸ ಕತೆಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿರುವ ಈ ಸ್ಪರ್ಧೆಯಲ್ಲಿ ರಾಜ್ಯ, ದೇಶ, ವಿದೇಶಗಳಿಂದ ಸುಮಾರು
ಶನಿವಾರ ಸಂಜೆ. ತನುಗೂಚಿ ಹಲ್ಲು ಕಡಿಯುತ್ತಲೇ ಕಂಪ್ಯೂಟರ್ ಸ್ಕ್ರೀನಿನತ್ತ ಒಮ್ಮೆ, ಸೆನ್ಸೆಯತ್ತ ಒಮ್ಮೆ ನೋಡುತ್ತಿದ್ದ. ಆಗಲೇ ಐದೂವರೆ ಹತ್ತಿರ, ಇನ್ನೂ ಸೆನ್ಸೆ (ಗುರು ಫ್ಯೂಜಿಸಾವ) ಅಲ್ಲೇ ಕೂತಿದ್ದಾರೆ, ಮನೆಗೆ ಹೋಗಿಲ್ಲ. ಆರು ಗಂಟೆಗೆ ಗೆಳತಿ ಯೂಕೋ ಜೊತೆ ಸಿನೀಮಾಕ್ಕೆ ಹೋಗುವ ಕಾರ್ಯಕ್ರಮ. ಶನಿವಾರ ಸೆನ್ಸೆ ಲ್ಯಾಬಿಗೆ ಬರುವುದು ಅಪರೂಪ. ಸೋಮವಾರ ಯಾವುದೋ ಕಾನ್ಫೆರೆನ್ಸಿಗೆ ಪೇಪರ್ ಕಳುಹಿಸಬೇಕು. ಅದಕ್ಕಾಗಿ
'ಹಳ್ಳ ಬಂತು ಹಳ್ಳ' ಕಾದಂಬರಿಗೆ 2008ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಗಳಿಸಿದ ಪ್ರಮುಖ ಕಾದಂಬರಿಕಾರ ಧಾರವಾಡದ ಶ್ರೀನಿವಾಸ ವೈದ್ಯ ಅವರ ಸಾಹಿತ್ಯ ಸಂಭ್ರಮ 'ಪರಿಣಿತ ವೈದ್ಯರು' ಕಾರ್ಯಕ್ರಮ ಕಾರ್ಮಿಕರ ದಿನಾಚರಣೆಯಂದು ಬೆಂಗಳೂರಿನಲ್ಲಿ ಜರುಗಲಿದೆ.ಸಣ್ಣಕಥೆ ಮತ್ತು ಹಾಸ್ಯ ಬರಹಗಳ ಮುಖಾಂತರವೇ ಜನಜನಿತರಾದ ವೈದ್ಯರ ಬರಹಗಳ ಕುರಿತ ಮಾತುಕತೆ, ಚರ್ಚೆಗಳಿಗೆ ಪುಸ್ತಕ ಬಿಡುಗಡೆಗಳಿಗೆ ಇರುವ ಕೇಂದ್ರ ಸ್ಥಾನ ಬಸವನಗುಡಿಯಲ್ಲಿರುವ
ಕನ್ನಡದಲ್ಲಿ ಮಹಿಳಾ ಸಾರಸ್ವತ ಲೋಕದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಯುವ ಬರಹಗಾರ್ತಿ ಕೋಡಿಬೆಟ್ಟು ರಾಜಲಕ್ಷ್ಮಿ. ಮನಮುಟ್ಟುವ ಕವಿತೆಗಳೊಂದಿಗೆ ಭಾವಜೀವಿಗಳ ಮನತಟ್ಟುತ್ತಿರುವ ರಾಜಲಕ್ಷ್ಮಿ ಮಲೆನಾಡಿನ ಸೊಗಡಿನ ಕಥಾಕಣಜದೊಂದಿಗೆ ಕಲ್ಪನಾಲೋಕದಲ್ಲೂ ಅಕ್ಷರ ಬೀಜ ಬಿತ್ತುತ್ತಿದ್ದಾರೆ.ಕೋಡಿಬೆಟ್ಟು ರಾಜಲಕ್ಷ್ಮಿ ಅವರ 'ಒಂದು ಮುಷ್ಟಿ ನಕ್ಷತ್ರ' ಎಂಬ ಕಥಾ ಸಂಕಲನ ಇದೇ ಭಾನುವಾರ ಮೇ 3ರಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಬಿಡುಗಡೆಯಾಗುತ್ತಲಿದೆ. ಇದರೊಂದಿಗೆ,