ಬೆಳಗಾವಿ, ನ. 2 : ಇಲ್ಲಿಯೇ ಇದ್ದುಕೊಂಡು ರಾಜ್ಯ ವಿರೋಧಿ ಧೋರಣೆ ಪ್ರದರ್ಶಿಸುತ್ತಲೇ ಬಂದಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡರು ರಾಜ್ಯೋತ್ಸವದ ದಿನ ಭಾನುವಾರ (ನ 1) ಕನ್ನಡ ದ್ವಜವನ್ನು ತುಳಿದು ಬೆಂಕಿ ಹಚ್ಚಿ ವಿದ್ಯಾರ್ಥಿಗಳನ್ನು ಥಳಿಸಿ ಮಹಾರಾಷ್ಟ್ರ ಪರ ಘೋಷಣೆ ಕೂಗುವುದಲ್ಲದೆ ಭಗವಾಧ್ವಜ ಹಾರಿಸಿ ಮತ್ತೊಮ್ಮೆ ಪುಂಡಾಟಿಕೆ ನಡೆಸಿರುವ ಘಟನೆ ನಡೆದಿದೆ.ನಗರದ ಹೊರವಲಯದ ಮಣ್ಣೂರು ಎಂಬಲ್ಲಿ
ಬೆಂಗಳೂರು, ಸೆ. 25 : ತಿರುವಳ್ಳುವರ್ ಪ್ರತಿಮೆ ಬೆಂಗಳೂರಿನಲ್ಲಿ ತ್ರಿಪದಿಗಳ ಬ್ರಹ್ಮ ಸರ್ವಜ್ಞನ ಪ್ರತಿಮೆ ಚೆನ್ನೈನಲ್ಲಿ ಸ್ಥಾಪನೆಯಾದ ನಂತರ ಉಭಯ ರಾಜ್ಯಗಳ ನಡುವಿನ ಸಂಬಂಧ ಸುಧಾರಿಸಲಿದೆ ಎಂಬ ಸರಕಾರಗಳ ನಂಬಿಕೆಗೆ ಪೂರಕವಾಗುವಂತ ವಾತಾವರಣ ನಿರ್ಮಾಣವಾಗತೊಡಗಿವೆ. ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವುದನ್ನು ವಿರೋಧಿಸಿ ತಮಿಳುನಾಡಿನ ಹಿರಿಯ ನ್ಯಾಯವಾದಿ ಆರ್ ಗಾಂಧಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಾಪಸ್ಸು ಪಡೆಯುವುದು
ಬೆಂಗಳೂರು, ಸೆ. 24 : ಬೆಂಗಳೂರು-ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ (NICE)ಯೋಜನೆಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಚರ್ಚಿಸಲು ಅಕ್ಟೋಬರ್ ತಿಂಗಳು ವಿಶೇಷ ಅಧಿವೇಶನ ಕರೆಯುವಂತೆ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಒತ್ತಾಯಿಸಿದ್ದಾರೆ. ಇನ್ನೊಂದಡೆ ತೀವ್ರ ಟೀಕೆಗಳ ಹಿನ್ನೆಲೆಯಲ್ಲಿ ನಾಲಿಗೆ ಬಿಗಿ ಹಿಡಿದು ಮಾತಾಡಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಮುಂಬೈ, ಹರಿಯಾಣ, ಸೆ. 24 : ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ (ಮಹಾರಾಷ್ಟ್ರ) ಮತ್ತು ಭಾರತೀಯ ಕ್ರಿಕೆಟ್ ತಂಡದ ಉಪನಾಯಕ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ (ಪಂಜಾಬ) ಮುಂಬರುವ ವಿಧಾನಸಭೆ ಕ್ಷೇತ್ರಗಳಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದಾರೆ. 37 ವರ್ಷದ ಕಾಂಬ್ಳಿ ಅವರ ಲೋಕಭಾರತಿ ಪಕ್ಷದಿಂದ ಮುಂಬೈನ ವಿಕ್ರೋಲಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು
ಮೈಸೂರು, ಸೆ. 23:ನಗರದ ಹೃದಯ ಭಾಗದಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಗೆಬಗೆಯ ವೇಷಭೂಷಣಗಳೊಂದಿಗೆ ಆರುನೂರಕ್ಕೂ ಹೆಚ್ಚು ಕಲಾವಿದರು ನಮ್ಮ ನಾಡಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವಂತಹ ಕಲಾ ಚಟುವಟಿಕೆಗಳನ್ನು ಪ್ರದರ್ಶಿಸಿ ಜನರನ್ನು ತನ್ನ ಕಡೆ ಆಕರ್ಷಿಸುವಂತೆ ಮಾಡಿತ್ತು.ಸಾಂಸ್ಕೃತಿಕ ನಗರಿ ಮೈಸೂರಿನ ಗತವೈಭವದ ಸಂಸ್ಕೃತಿಯನ್ನು ಸಾರುವ ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ಯಕ್ಷಗಾನ, ಭಜನೆ, ರಾಮನಾಮ,
ನವದೆಹಲಿ, ಸೆ. 15 : ಗಡಿ ಪ್ರದೇಶದಲ್ಲಿ ನುಸುಳುತ್ತಿರುವ ಭಯೋತ್ಪಾದಕರಿಗಿಂತ ದೇಶದೊಳಗಿರುವ ನಕ್ಸಲರು ಅಪಾಯಕಾರಿ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಗುಪ್ತಚರ ಇಲಾಖೆ ಸಹಯೋಗದಲ್ಲಿ ಎಲ್ಲ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರ ಉನ್ನತಮಟ್ಟದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಗಡಿ ಪ್ರದೇಶದಲ್ಲಿ ಭಯೋತ್ಪಾದಕ ನುಸುಳುವಿಕೆ ಮತ್ತು ನಕ್ಸಲ್
ಹಂದಿಜ್ವರದಿಂದ ನಿಧಾನವಾಗಿ ಹೊರಬರುತ್ತಿರುವ ಬೆಂಗಳೂರಿನ ನಿರಭಿಮಾನಿ ಕನ್ನಡಿಗ ಹಿಂದಿಜ್ವರದಿಂದ ತೀವ್ರವಾಗಿ ಬಳಲುತ್ತಿದ್ದಾನೆ. ವಿಪರ್ಯಾಸವೆಂದರೆ, ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳುವ ಯಾವ ಪ್ರಯತ್ನವನ್ನೂ ಆತ ಮಾಡುತ್ತಿಲ್ಲ. ತೀವ್ರ ಉಲ್ಬಣಾವಸ್ಥೆಗೆ ತಲುಪುತ್ತಿರುವ ಈ ರೋಗಕ್ಕೆ ಮದ್ದಾದರೂ ಇದೆಯಾ?* ಗುರು ಕುಲಕರ್ಣಿ, ಧಾರವಾಡಪ್ರಶ್ನೆ : ಹಂದಿ ಜ್ವರ ಕೇಳಿದ್ದೆ, ಇದೇನಿದು ಹಿಂದಿ ಜ್ವರ ?ಉತ್ತರ : ಇದರ ವೈಜ್ಞಾನಿಕ ಹೆಸರು ABCD
ಬೆಂಗಳೂರು, ಸೆ. 8 : ಬೆಂಗಳೂರಿನ ಹಲಸೂರು ಪ್ರದೇಶದಲ್ಲಿ ತಿರುವಳ್ಳವರ್ ಪ್ರತಿಮೆ ಅನಾವರಣದ ಸಂಭ್ರಮ ಮತ್ತು ಗಲಾಟೆ ಈಗ ಇತಿಹಾಸ. ಆದರೆ, ಅನಾವರಣ ಕಾರ್ಯಕ್ರಮ ಸಂದರ್ಭದಲ್ಲಿ ಮುಂಜಾಗ್ರತೆ ಕ್ರಮವಾಗಿ ಬಂಧನಕ್ಕೆ ಒಳಗಾಗಿದ್ದ ಆರು ಮಂದಿ ಅಮಾಯಕರಿಗೆ ನಿತ್ಯ ಸೆರೆಮನೆ ವಾಸ ತಪ್ಪಿಲ್ಲ. ಬೆಂಗಳೂರು ದಕ್ಷಿಣದಲ್ಲಿರುವ ಕೊತ್ತನೂರು ಜಂಬೂಸವಾರಿ ದಿಣ್ಣೆ ಪ್ರದೇಶದಲ್ಲಿ ಅಂದು ಬಂಧನಕ್ಕೆ ಒಳಗಾಗಿದ್ದ ಆರು ಮಂದಿ
ನವದೆಹಲಿ, ಸೆ. 2 : ಆರ್ಎಸ್ಎಸ್ ಸರಸಂಘ ಸಂಚಾಲಕ ಮೋಹನ್ ಭಾಗವತ್ ಬಿಜೆಪಿಯ ಆಂತರಿಕ ವಿಷಯದಲ್ಲಿ ಸಂಘ ತಲೆ ಹಾಕುವುದಿಲ್ಲ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ಆರ್ಎಸ್ ಎಸ್ ಪ್ರಮುಖ ಸದಸ್ಯರೊಬ್ಬರು ಅಡ್ವಾಣಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಲೇಖನವೊಂದು ಸಂಘದ ಮುಖವಾಣಿ ಪಾಂಚಜನ್ಯದಲ್ಲಿ ಪ್ರಕಟವಾಗಿದೆ. ಸಂಘಟನೆಯ ಮುಖವಾಣಿ 'ಪಾಂಚಜನ್ಯ' ದಲ್ಲಿನ ಲೇಖನವೊಂದರಲ್ಲಿ ಹಿರಿಯ ಮುಖಂಡ ದೇವೇಂದ್ರ
ಬೆಂಗಳೂರು, ಸೆ. 1 : ಇನ್ಫೋಸಿಸ್ ಕಂಪನಿ ಬಳಿ ಸಾಕಷ್ಟು ಹಣವಿದೆ. ಅದನ್ನು ಸದ್ವಿನಿಯೋಗಗೊಳಿಸುವ ಸಲುವಾಗಿ ಸೂಕ್ತ ಕಂಪನಿಗಳ ಖರೀದಿಸುವ ಇರಾದೆ ಇದೆ. ಆದರೆ, ಸೂಕ್ತ ಕಂಪನಿಗಳು ಸರಿಯಾದ ಬೆಲೆಗಳಲ್ಲಿ ಸಿಗುತ್ತಿಲ್ಲ ಎಂದು ಇನ್ಫಿ ಆವರಣದಲ್ಲಿ ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಗೋಪಾಲಕೃಷ್ಣ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.ಪ್ರಸಕ್ತ ವರ್ಷದ ಜೂನ್ ಅಂತ್ಯಕ್ಕೆ ದೇಶದ