'ಕಬಡ್ಡಿ' ಚಲನಚಿತ್ರ ಕನ್ನಡ ಚಿತ್ರರಂಗದಲ್ಲೊಂದು ಒಳ್ಳೆಯ ಪ್ರಯತ್ನ- ಎಂಬ ಮಾತುಗಳು ಕೇಳಿಬರುತ್ತಿರುವ ಹೊತ್ತಿನಲ್ಲೇ...'ಕಬಡ್ಡಿ' ಚಿತ್ರದ ವಿಶೇಷ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಇದೇ ಭಾನುವಾರ(ದಿನಾಂಕ:09/08/2009) ಮಧ್ಯಾಹ್ನ 2 ಗಂಟೆಗೆ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ನರೇಂದ್ರ ಬಾಬು, ನಿರ್ಮಾಪಕರು (ಡಿ.ಕೆ. ರವಿ, ಕೆ. ರಾಜು. ಜಿ. ಕಿಶೋರ್ ಕುಮಾರ್, ಅನೂಪ್ ಗೌಡ, ಎನ್. ಆಶಾ, ಡಿ.ವಿ. ರಾಜೇಂದ್ರ
ನಿರ್ದೇಶಕ ನರೇಂದ್ರಬಾಬು ಖುಷಿಯಾಗಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಲಕಲಕಿಸುತ್ತಿದ್ದ ಅವರ ಮೊಗದಲ್ಲಿ ಕಬಡ್ಡಿ ಪಂದ್ಯಾವಳಿ ಗೆದ್ದ ಸಂಭ್ರಮವಿತ್ತು. ಮೊನ್ನೆ, ಜುಲೈ 3ರ ಶುಕ್ರವಾರ ಕಬಡ್ಡಿ ತೆರೆಕಂಡಾಗ ಹೇಳಿಕೊಳ್ಳುವಂಥ ಪ್ರತಿಕ್ರಿಯೆ ಪ್ರೇಕ್ಷಕರಿಂದ ವ್ಯಕ್ತವಾಗಿರಲಿಲ್ಲ. ಇದಕ್ಕೆ ಸರಿಯಾಗಿ ಮಳೆಯ ಕಣ್ಣಾಮುಚ್ಚಾಲೆಯೂ ಸೇರಿಕೊಂಡು- ಕಬಡ್ಡಿ ಆಟ ಆರಂಭವಾಗುವ ಮೊದಲೇ ಮುಗಿಯುತ್ತಾ ಎನ್ನುವ ಅನುಮಾನ ಶುರುವಾಗಿತ್ತು. ಶನಿವಾರವೂ ಕಲೆಕ್ಷನ್ ಡಲ್ಲೋ ಡಲ್ಲು! ಆದರೆ, ಭಾನುವಾರದಿಂದ
ವರ್ಷದ ಹಿಂದಿನ ಮಾತು. ನಟ ಕಿಶೋರ್ ಬೆಂಗಳೂರು ವಿಮಾನ ನಿಲ್ದಾಣದಿಂದ ತಮ್ಮ ಬುಲೆಟ್ನಲ್ಲಿ ಸೀದಾ ಕಂಠೀರವ ಸ್ಟುಡಿಯೋಗೆ ಬಂದರು. ಅವರಿಗೆ ಸಂಬಂಧಿಸಿಲ್ಲದ ಬೇರೆ ಯಾವುದೋ ಸಿನಿಮಾ ಮುಹೂರ್ತ. ಚೆನ್ನೈನಿಂದ ನೇರವಾಗಿ ಮನೆಗೂ ಹೋಗದೆ ಅವರು ಹಾಗೆ ಬರಲು ಕಾರಣವಿತ್ತು. `ಕಬಡ್ಡಿ' ಸಿನಿಮಾ ಕಥೆಯನ್ನೇ ತಮಿಳಿನವರಿಗೆ ಹೇಳಿ, ಅದರಲ್ಲಿ ನಟಿಸುವ ಅವಕಾಶವನ್ನು ಕಿಶೋರ್ ಗಿಟ್ಟಿಸಿದ್ದಾರೆ ಅಂತ ನಿರ್ದೇಶಕ ನರೇಂದ್ರ
'ಕಬಡ್ಡಿ' ಚಿತ್ರಕನ್ನಡ ಚಿತ್ರರಂಗದಲ್ಲಿ ಮತ್ತೊಂದು 'ಲಗಾನ್' ಹಾಗೂ 'ಛಕ್ ದೇ ಇಂಡಿಯಾ' ಆಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ ಎಂಬಉತ್ಸಾಹದಲ್ಲಿ ನಿರ್ದೇಶಕ ನರೇಂದ್ರ ಬಾಬು ಇದ್ದಾರೆ. ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಆಟದ ಹಿನ್ನೆಲೆಯಲ್ಲಿ ನವಿರಾದ ಪ್ರೇಮಕಥೆಯೊಂದನ್ನು ಹೊಂದಿರುವ ಈ ಚಿತ್ರ ಜುಲೈ 3ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ನೈಜತೆಗಾಗಿಚಿತ್ರದಲ್ಲಿ ಕಬಡ್ಡಿ ಆಟಗಾರರಾದ ಬಿ ಸಿ ರಮೇಶ್, ನವೀನ್ ಮತ್ತು
ಕನ್ನಡದ ಪ್ರಬುದ್ಧ ನಟ ಕಿಶೋರ್ ಹಿಂದಿ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಇನ್ನೂ ಹೆಸರಿಡದಅಭಯ್ ಡಿಯೋಲ್ ಮತ್ತು ಕಮಲ ಹಾಸನ್ ಮಗಳು ಶ್ರುತಿ ಹಾಸನ್ ನಟಿಸುತ್ತಿರುವ ಹಿಂದಿ ಚಿತ್ರದಲ್ಲಿ ಕಿಶೋರ್ ಖಳ ನಟನಾಗಿ ಕಾಣಿಸಲಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ 'ರಾವಣ'ಚಿತ್ರದಲ್ಲೂ ಕಿಶೋರ್ ನಟಿಸುತ್ತಿರುವುದು ವಿಶೇಷ.ಕನ್ನಡದ ಮತ್ತೊಬ್ಬ ಪ್ರತಿಭಾನ್ವಿತ ನಟ ಪ್ರಕಾಶ್ ರೈ ಅವರಿಗಿಂತಲೂ ಚಿತ್ರರಂಗದಲ್ಲಿ
ಬಾಲಿವುಡ್ನಲ್ಲಿ ಲಗಾನ್, ಚಕ್ದೇ ಇಂಡಿಯಾ, ವಿಕ್ಟರಿಯಂಥ ಕ್ರೀಡೆಗಳನ್ನು ಕುರಿತು ನಿರ್ಮಾಣವಾದ ಚಿತ್ರಗಳ ಯಶಸ್ಸು ಇನ್ನೂ ಇಂಥ ಅನೇಕ ಚಿತ್ರಗಳ ನಿರ್ಮಾಣಕ್ಕೆ ಸ್ಫೂರ್ತಿಯಾಯಿತು. ಅದೇ ರೀತಿ ಈಗ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಆಟದ ಹಿನ್ನೆಲೆ ಇರುವಂಥ ಚಿತ್ರವೊಂದು ಇದೀಗ ಕನ್ನಡದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ನಿರ್ದೇಶಕ ನರೇಂದ್ರಬಾಬು, ಕಿಶೋರ್, ಹರ್ಷ ಹಾಗೂ ರಾಜು ಸೇರಿ ಕಬಡ್ಡಿ ಚಿತ್ರವನ್ನು ತಯಾರಿಸಿದ್ದಾರೆ.
*ಮಾಹಿತಿ : ಪ್ರಸನ್ನ ರಾಘವೇಂದ್ರ,ಕನ್ನಡ ಸಂಘ, ಆಸ್ಟಿನ್ಐದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಚಿನ್ಮಯ ಮಿಷನ್ ವತಿಯಿಂದ ಆಸ್ಟಿನ್ ನಗರದಲ್ಲಿ ಮಕ್ಕಳ ಬೇಸಿಗೆ ದಿನ ಶಿಬಿರ ಹಮ್ಮಿಕೊಳ್ಳಲಾಗಿದೆ. ಬಾಲವಿಹಾರದ ಉಪಾಧ್ಯಾಯರು, ಸಂಗೀತ ಬಲ್ಲವರು, ಪೋಷಕ-ಸ್ವಯಂಸೇವಕರು ಪಾಲ್ಗೊಂಡು ನಡೆಸಿಕೊಡುವ ಈ ಶಿಬಿರ ನಿಮ್ಮ ಮಕ್ಕಳಿಗೆ ವಸ್ತುಶಃ ಭಾರತ ಪ್ರವಾಸ ಇದ್ದಂತೆ. ಭಾರತ, ಭಾರತೀಯ ಸಂಸ್ಕೃತಿಯ ಬಗೆಗಿನ ಮಾಹಿತಿಯನ್ನು ಕಟ್ಟಿಕೊಡುವ
ಶಿವಮೊಗ್ಗ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಏಪ್ರಿಲ್ 15ರಂದು ಪತ್ರಕರ್ತರ ಕ್ರೀಡಾಕೂಟ ನಡೆಯಲಿದೆ.ಜಲಸಂಪನ್ಮೂಲ ಸಚಿವ ಕೆ.ಎಸ್.ಈಶ್ವರಪ್ಪ ಕ್ರೀಡಾಕೂಟ ಉದ್ಘಾಟಿಸಲಿದ್ದು, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ರಾಜಕೀಯ ಮುಖಂಡರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿದ್ದು, 100ಮೀಟರ್ ಓಟ, 400ಮೀಟರ್ ನಡಿಗೆ, ಶಾಟ್ಪುಟ್, ಕ್ರಿಕೆಟ್ ಮೊದಲಾದ ಆಟಗಳಲ್ಲಿ ಪತ್ರಕರ್ತರು ಭಾಗವಹಿಸಲಿದ್ದಾರೆ. ಕ್ರಿಕೆಟ್, ಕಬಡ್ಡಿ ಮೊದಲಾದ
ಶ್ರೀರಾಂಪುರದ ಕಿಟ್ಟಿ : ಮತ್ತೊಂದು ತಲೆ ಉರುಳಿಬಿತ್ತುರೌಡಿಸಂ ಬಿಟ್ಟು ಕಬಡ್ಡಿ ತರಬೇತುದಾರನಾಗಿದ್ದ ಕಿಟ್ಟಿ ಎಂಬ ಮಾಜಿ ರೌಡಿಯ ದುರಂತ ಅಂತ್ಯ!ಬೆಂಗಳೂರು : ‘ಭೂಗತ ಜಗತ್ತಿಗೆ ಏಕಮುಖ ದಾರಿ’ ಎನ್ನುವ ಮಾತು ಮಾಜಿ ಕುಖ್ಯಾತ ರೌಡಿ ಮತ್ತು ಹಾಲಿ ಕಬಡ್ಡಿ ತರಬೇತುದಾರ ಶ್ರೀರಾಂಪುರ ಕಿಟ್ಟಿ ಹತ್ಯೆಯ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಶನಿವಾರ ರಾತ್ರಿ ನಾಲ್ವರ ಗುಂಪೊಂದು ಬಾಪೂಜಿನಗರದಲ್ಲಿ ಕೃಷ್ಣೋಜಿರಾವ್(45)ಉರುಫ್