ಮರುಗುಳಿ ಸುಬ್ಬ ಬೆಳಗಿನ ಜಾವ ಇನ್ನೇನು ಸ್ನಾನಕ್ಕೆ ಹೋಗಬೇಕು ಆಗ ನೆನಪಾಯಿತು. ಎಂಥಾ ಅಚಾತುರ್ಯ ನಡೆದುಹೋಯಿತು ಅಂತ ದಡಬಡಿಸಿ, ಟವಲ್ಲನ್ನು ಅಲ್ಲೇ ಎಸೆದು ತನ್ನ ಬಾಸ್ಗೆ ಫೋನಾಯಿಸಿದ."ಸಾರ್ ದಯವಿಟ್ಟು ಕ್ಷಮಿಸಿ. ನಿನ್ನೆ ನಿಮಗೊಂದು ವಿಷಯ ಹೇಳಬೇಕೆಂದುಕೊಂಡಿದ್ದೆ ಮರೆತೇಬಿಟ್ಟೆ" ಅಂತ ಗಾಬರಿಯ ಧ್ವನಿಯಲ್ಲಿ ಹೇಳಿದ.ಸುಬ್ಬ ಮಹಾನ್ ಮರೆಗುಳಿ ಅಂತ ತಿಳಿದಿದ್ದ ಬಾಸ್, "ಪರವಾಗಿಲ್ಲ ಹೇಳಿ ಸುಬ್ಬು, ಏನು ತೊಂದರೆಯಿಲ್ಲ"
ಜೀವ ಇಲ್ಲದ ಘಟನೆಗಳಿಗೆ ಎಂ.ಎಸ್.ನರಸಿಂಹಮೂರ್ತಿ ಬರೆದ ಮಾತುಗಳು ಉಸಿರು ನೀಡುತ್ತವೆ. ಇವರಿಲ್ಲದಿದ್ದರೆ ಬಹುಶಃ ಕತ್ತೆ ಇನ್ನಷ್ಟು ಸೊರಗುವ ಅಪಾಯವಿತ್ತು . ಕೆಲವೊಂದು ದೃಶ್ಯಗಳನ್ನು ಕಮಲ್ ಮತ್ತು ಗೋವಿಂದ ನಟಿಸಿದ ಚಿತ್ರಗಳಿಂದ ಮುಜುಗರವಿಲ್ಲದೆ ಎತ್ತಿದ್ದು ಶೇಮ್ ಶೇಮ್. ಎರಡನೇ ಭಾಗದಲ್ಲಿ ಹೊಸತನವಿಲ್ಲ , ಕುತೂಹಲವಂತೂ ಉಳಿಯುವುದೇ ಇಲ್ಲ .ಎಸ್.ನಾರಾಯಣ್ಗಿಂತ ರಮೇಶ್, ರಮೇಶ್ಗಿಂತ ಕೋಮಲ್ ಒಂದೊಂದು ಹೆಜ್ಜೆ ಮುಂದಿದ್ದಾರೆಂದರೆ ರಮ್ಮಿ-ನಾಣಿ
‘ಚಿತ್ರದುದ್ದಕ್ಕೂ ನಾನು ಮತ್ತು ರಮೇಶ್ ಬಂಗಾರ ಬಣ್ಣದ ಕೂದಲಿನ ವಿಗ್ ಹಾಕಿದ್ದೇವೆ. ಅದು ಕೆಲವರಿಗೆ ಕೋಡಂಗಿತನದಂತೆ ಕಂಡಿತು. ಎಷ್ಟೋ ಜನ ಕಿವಿಗೆ ಕೇಳಿಸುವಂತೆ ಪೆಕರ ನನ್ಮಕ್ಕಳು ಅಂದರು. ನಿಜ ಹೇಳಬೇಕೆಂದರೆ ಅದೆಲ್ಲ ಸಾಮ್ರಾಜ್ಯ ಶಾಹಿಯ ಗಾಢ ಪರಿಣಾಮದ ಪ್ರತಿಫಲವೆಂದು ತೆಗಳುವವರಿಗೆ ಗೊತ್ತೇ ಇಲ್ಲ .’‘ರಮೇಶ್ ಯಾವ ಮಟ್ಟದ ಕಲಾವಿದನೆಂದು ಅರಿಯಲು ಅದೊಂದು ದೃಶ್ಯ ಸಾಕೆನಿಸುತ್ತದೆ. ಅಮೃತ ವರ್ಷಿಣಿಯ
ನಿತ್ಯವಿಡೀ ಫೈಲುಗಳ ನಡುವೆ ಹುದುಗಿಹೋಗುವ ಆಸಾಮಿ ಸಂಜೆ ಮನೆಗೆ ಹೋಗಿ ಶೂಸು ಬಿಚ್ಚುವುದಕ್ಕೂ ತಾತ್ಕಾಲಿಕ ವಿರಾಮ ಕೊಟ್ಟು, ಸೋಫಾ ಮೇಲೆ ಬೆನ್ನು ಹಾಸಿ, ಪಾಪ ಪಾಂಡು ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಾನೆ. ಸಿಲ್ಲಿ ಎನಿಸಿದರೂ ಊಟದ ನಡುವೆ ನಂಚಿಕೆಗೆ ಉಪ್ಪಿನಕಾಯಿ ಥರ ಅಂತ ‘ಸಿಲ್ಲಿ ಲಲ್ಲಿ’ ಧಾರಾವಾಹಿಯ ಮ್ಯಾನರಿಸಂ ನೋಡಿ ಸಂತೋಷ ಪಡುತ್ತಾನೆ. ಚಾರ್ಲಿ ಚಾಪ್ಲಿನ್ ಯಾವತ್ತೂ
‘ವನಿತಾಶ್ರೀ ನಿಮಗೆ ಗೊತ್ತಂತೆ, ಹೌದೆ?’‘ಯಾರು, ಸಿನಿಮಾ ನಟಿ ವನಿತಾಶ್ರೀ ತಾನೆ? ಓಹೋ, ಗೊತ್ತು. ನಮ್ಮನೆ ಪಕ್ಕದಲ್ಲೇ ಇದ್ದಳು. ಪಾಪ, ಅವಳಿಗೆ ಬೆಳವಣಿಗೇನೇ ಇಲ್ಲ’‘ಯಾಕೆ? ಏನಾಯ್ತು ಅವಳಿಗೆ?’‘ನೋಡಿ, ಮೂವತ್ತು ವರ್ಷದಿಂದ ನಮ್ಮನೆ ಪಕ್ಕದಲ್ಲೇ ಇದ್ದಾಳೆ ಅವಳು. ಅವಳ ವಯಸ್ಸು ಮಾತ್ರ ಇಪ್ಪತ್ತು ಮೀರಲೇ ಇಲ್ಲ! ’*ಮಿ.ಜಾಣ -ರೀ, ನನಗೆ ಎರಡು ಟಿಕೆಟ್ ಕೊಡಿ.ಬಸ್ ಕಂಡಕ್ಟರ್ -ನಿನಗ್ಯಾಕಯ್ಯ ಎರಡು ಟಿಕೆಟ್?ಮಿ.ಜಾಣ
ಬೊಮ್ಮನಹಳ್ಳಿಯ ಬೋರಕ್ಕನ ಮಗ ಅಮೆರಿಕದಲ್ಲಿ ಒಂದು ದೊಡ್ಡ ಕೆಲಸದಲ್ಲಿದ್ದ. ಅವಳಿಗೆ ಇವನೊಬ್ಬನೇ ಮಗ. ಸರಿ ಮಗ ಬಲವಂತ ಮಾಡ್ದಾಂತ ಒಂದು ದಿನ ಬೋರಕ್ಕ ಅಮೆರಿಕಕ್ಕೆ ಹೊರಟೇ ಬಿಟ್ಟಳು. ಮೊದಲ ವಿಮಾನಯಾನ, ಕಿಟಕಿ ಇರುವ ಜಾಗವನ್ನೇ ನೋಡಿ ಕುಳಿತುಕೊಂಡಳು.ಅಷ್ಟರಲ್ಲಿ ಒಬ್ಬಾತ ಬಂದು ‘ನೀವು ನನ್ನ ಸೀಟಿನಲ್ಲಿ ಕುಳಿತಿದ್ದೀರಿ ಜಾಗ ಬಿಡಿ’ ಎಂದು ಕೇಳಿಕೊಂಡ. ಬಸ್ಸುಗಳಲ್ಲಿ ನುಗ್ಗಿ ಸೀಟನ್ನು ಹಿಡಿದುಕೊಳ್ಳುವುದರಲ್ಲಿ
ಪಾಪ ಪಾಂಡು : ಸ್ವಾಮಿ, ನನ್ನ ಹೆಂಡತಿ ಕಾಣೆಯಾಗಿದ್ದಾಳೆ. ಪೋಸ್ಟ್ಮಾಸ್ಟರ್ : ಇದು ಪೋಸ್ಟ್ ಆಫೀಸ್. ಪೊಲೀಸ್ ಸ್ಟೇಶನ್ನಲ್ಲಿ ಕಂಪ್ಲೆಂಟ್ ಕೊಡಿ. ಪಾಪ ಪಾಂಡು : ಏನು ಮಾಡ್ಲಿ ಸ್ವಾಮಿ? ನನಗೆ ಬಹಳ ಖುಷಿಯಾಗಿದೆ. ಆ ಖುಷಿಯಲ್ಲಿ ಎಲ್ಲಿಗೆ ಹೋಗಬೇಕೋ ಅರ್ಥಾನೇ ಆಗ್ತಿಲ್ಲ. *** ರಾಮು : ಜೀವನದಲ್ಲಿ ನೀನು ಏನು ಆಗಬೇಕೆಂದು ಆಸೆ ಪಟ್ಟಿದ್ದೀಯಾ? ಶಾಮು
ಇತ್ತೀಚೆಗೆ ಸ್ವರ್ಗಲೋಕದಲ್ಲಿನ ‘ದ್ವಾಪರಯುಗ ಕಂಪಾರ್ಟ್ಮೆಂಟ್’ನಲ್ಲಿ ಕನ್ನಡ ಗೀತೆಗಳ ರಸಸಂಜೆ ನಡೆಯಿತು! ಕೇಳುಗರು ಬಹಳ ಸಂತಸದಿಂದ ಆಲಿಸಿ, ಖುಷಿಪಟ್ಟರು. ನಂತರ ಯಾರ್ಯಾರಿಗೆ ಯಾವ ಗೀತೆ ಹಿಡಿಸಿತು ಎಂದು ಕೇಳಿದಾಗ, ಅವರುಗಳಿಂದ ತಿಳಿದಿದ್ದು ಇದು. ಯಾಕೆ ಎಂಬುದು ನಿಮಗೂ ಗೊತ್ತು!ಭೀಷ್ಮ : ಏನು ಮಾಡಲಿ, ನಾನು, ಏನು ಹೇಳಲಿ. ಕಣ್ಣುಗಳಿದ್ದೂ ಕುರುಡರ ಹಾಗೆ ಹಲವರು ನಡೆಯುವರು, ಎಲ್ಲಾ ಬಲ್ಲೆನು ಎನ್ನುತ
‘ರೈಲು ಹರಿದು 18 ಸರ್ದಾಜಿಗಳ ಸಾವು, ಒಬ್ಬ ಸರ್ದಾರ್ಜಿ ಪಾರು’ ಎಂಬ ಸುದ್ದಿ ಕೇಳಿದ ನಮ್ಮ ಪತ್ರಕರ್ತನಿಗೆ ಅಚ್ಚರಿಯೋ ಅಚ್ಚರಿ. ಅರೆ !! ಇದು ಹೇಗೆ ಸಾಧ್ಯ? ಕೇಳಿ ಬಿಡೋಣ ಎಂದು ಬದುಕಿ ಉಳಿದಿದ್ದ ಒಬ್ಬ ಸರ್ದಾಜಿಯನ್ನು ಹುಡುಕಿಕೊಂಡು ಹೊರಟ.ಕಡೆಗೂ ಸರ್ದಾಜಿ ಸಿಕ್ಕ. ಅದರೆ ಸರ್ದಾರ್ಜಿ ತುಂಬಾ ದುಃಖದಲ್ಲಿದ್ದಂತೆ ಕಂಡು ಬಂತು.ಪತ್ರಕರ್ತ : ಯಾಕೆ ಸರ್ದಾಜಿ ನೀವು
ಹೊಸ ವರ್ಷದ ಸಂಕಲ್ಪಗಳು ಹೀಗಿದ್ದರೆ ಚೆನ್ನ. ಯಾಕೆಂದರೆ ಪಾಲಿಸೋದು ಸಕತ್ತು ಸುಲಭ!ಈ ವರ್ಷ ಕನಿಷ್ಠ 20 ಕೆಜಿ ತೂಕ ಹೆಚ್ಚಿಸಿಕೊಳ್ಳುವೆ.ದಿನಕ್ಕೆ ಇನ್ನೂ ಎರಡು ಗಂಟೆ ಹೆಚ್ಚು ಹೊತ್ತು ಟೀವಿ ನೋಡುವೆ.ಮನೆಯಿಂದ ಊಟ ತರೋದು ನಿಲ್ಲಿಸುವೆ. ಹೋಟೆಲ್ಗೆ ಹೋಗುವೆ.ಒಂದಾದರೂ ಹೊಸ ಹವ್ಯಾಸಗಳ ಬೆಳೆಸಿಕೊಳ್ಳುವೆ. ಉದಾ : ಸಿಗರೇಟ್ ಸ್ಮೋಕಿಂಗ್*ಅವನು : ಸಾರ್, ನೀವು ಚೈನ್ ಸ್ಮೋಕರ್ ಅಂತೆ ಹೌದಾ