ಬೆಳಗಾವಿ, ನ. 14: ಬಿಜೆಪಿ ಹಿರಿಯ ಸಚಿವರಿಂದ ಎಚ್ಡಿಕೆ ಭೇಟಿ ಎಂಬ ವರದಿಗೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ ಅದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ. ಕುಮಾರಸ್ವಾಮಿ ಅವರ ಮಾತು ನಂಬಲರ್ಹವಲ್ಲ ಎಂದರು. ತಮ್ಮನ್ನು 'ಅಶಕ್ತ ಸಿಎಂ' ಎಂದು ಜರಿದಿರುವ ಸಿದ್ದರಾಮಯ್ಯ ಅವರ ಮಾತಿಗೆ ಬೇಸರಿಸದೆ , ಅದು ಅವರು ನೀಡಿದ ಸರ್ಟಿಫಿಕೇಟ್ ಎಂದು ಭಾವಿಸುವೆ ಅಭಿವೃದ್ಧಿ ಕಾರ್ಯಗಳ
ಬೆಂಗಳೂರು ನ 14: ಬಿಜೆಪಿಯ ಹಿರಿಯ ಸಚಿವರೊಬ್ಬರು ಗುರುವಾರ (ನ 12) ರಾತ್ರಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ನಗರದ ಹೋಟೆಲ್ ನಲ್ಲಿ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಹಿಂದೆ ಮೈತ್ರಿ ಸರಕಾರ ರಚನೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದ ಸಚಿವರೇ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದರು ಎಂದು ತಿಳಿದು ಬಂದಿದೆ.
ಕನ್ನಡ ಚಿತ್ರನಟಿ ರಾಧಿಕಾ ಮಾಡಿದ ನಾಗಮಂಡಲ ಪೂಜೆ ಫಲ ಕೊಟ್ಟಿದೆ. ಆಕೆ ಈಗ ತಾಯಿಯಾಗಲು ಸಿದ್ಧರಾಗಿದ್ದಾರೆ. ಬೆಂಗಳೂರಿನ ಸುಸಜ್ಜಿತ ಹೆರಿಗೆ ಆಸ್ಪತ್ರೆಗಳಲ್ಲಿ ಒಂದಾದ ಜಯನಗರದ ಕ್ರೆಡಲ್ ನಲ್ಲಿ ಸುಸೂತ್ರ ಹೆರಿಗಾಗಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಆಸ್ಪತ್ರೆಯಲ್ಲಿ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ರ ಹೆಂಡತಿ ರೇಣುಕಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದನ್ನು ಸ್ಮರಿಸಬಹುದು.
ಶಿವಮೊಗ್ಗ, ಸೆ.21: ಶೀಘ್ರದಲ್ಲೇ ಶಿಕಾರಿಪುರವನ್ನು ಜಿಲ್ಲಾ ಕೇಂದ್ರ ಎಂದು ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ತವರು ಕ್ಷೇತ್ರವನ್ನು ಜಿಲ್ಲೆಯಾಗಿಸುವ ಬಗ್ಗೆ ತುಟಿ ಬಿಚ್ಚಿಲ್ಲ. ಹಲವಾರು ದಿನಗಳಿಂದ ಹರಡಿದ್ದ ವದಂತಿಗೆ ಸಿಎಂ ಬಿಎಸ್ ವೈ ಅವರಪುತ್ರ ಬಿವೈ ರಾಘವೇಂದ್ರ ಅವರು ಬಹಿರಂಗವಾಗಿ ಸೂಚನೆ
ಬೆಂಗಳೂರು, ಸೆ 21: ಕಳೆದ ವಿಧಾನಮಂಡಲದ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ನಡುವಳಿಕೆ ನೋಡಿದರೆ, ಕಾಂಗ್ರೆಸ್ ಬಿಜೆಪಿ ಜೊತೆ ಒಳಒಪ್ಪಂದ ಮಾಡಿಕೊಂಡಿರುವ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.ಮುಖ್ಯಮಂತ್ರಿಗಳ ಹೇಳಿಕೆ ಮತ್ತು ಕಾಂಗ್ರೆಸ್ ನಾಯಕರ ವರ್ತನೆ ನನ್ನ ಸಂಶಯವನ್ನು ಇನ್ನೂ ಹೆಚ್ಚಿಸುತ್ತಿದೆ. ಜವಾಬ್ದಾರಿಯುತ ಪ್ರತಿಪಕ್ಷ ಸ್ಥಾನದಲ್ಲಿದ್ದು ಕಾಂಗ್ರೆಸ್ ಸರಕಾರದ ಹಗರಣದ ವಿರುದ್ದ
ವಿಜಾಪುರ, ಸೆ. 11 : ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರು ಅಭಿವೃದ್ದಿ ಕಾರ್ಯಗಳನ್ನು ಮಾಡುವುದಾದರೆ 224 ಶಾಸಕರು ಏಕೆ ಬೇಕು ? ಅವರನ್ನೇ ಮುಖ್ಯಮಂತ್ರಿಗಳನ್ನಾಗಿ ಮಾಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ರಾಜ್ಯದ ಅಭಿವೃದ್ಧಿ ಕಾರ್ಯಗಳ ಜವಾಬ್ದಾರಿಯನ್ನು ಡಾ ವೀರೇಂದ್ರ ಹೆಗ್ಗಡೆಯವರಿಗೆ ವಹಿಸೋಣ. ಅಧಿಕಾರಿಗಳು
ಹಾಸನ, ಆ. 25: ''ರೇವಣ್ಣ ನೇತೃತ್ವದ ಜೆಡಿಎಸ್ ಮುಖಂಡರು ರಾಜ್ಯದಲ್ಲಿ, ನಾನು ಮತ್ತು ಕುಮಾರಸ್ವಾಮಿ ಕೇಂದ್ರದಲ್ಲಿ ರೈತರ ಪರವಾಗಿ ಹೋರಾಟ ನಡೆಸುತ್ತಿದ್ದೇವೆ. ರೈತರ ಸಮಸ್ಯೆಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಸರಿಯಾಗಿ ಸ್ಪಂದಿಸದಿದ್ದಲ್ಲಿ ಮುಂಬರುವ ಅಧಿವೇಶನದಲ್ಲಿ ಎಲ್ಲಾ ಹಂತದ ಹೋರಾಟ ನಡೆಸುತ್ತೇವೆ'' ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಎಚ್ಚರಿಕೆ ನೀಡಿದ್ದಾರೆ. ಈ ಸರಕಾರದ
ಬೆಂಗಳೂರು ಆ 10: ವಸತಿ ಮತ್ತು ಮುಜರಾಯಿ ಸಚಿವ ವಿ ಸೋಮಣ್ಣ ಅವರು ಬಿಜೆಪಿಯ ಆಪರೇಷನ್ ಕಮಲದ ಗಿರಾಕಿ. ಇಂತಹ ಗಿರಾಕಿಗಳಿಗೆ ನಮ್ಮ ಬೆಂಬಲವಿಲ್ಲ. ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಜಾತ್ಯತೀತ ಜನತಾದಳದ ಅಧ್ಯಕ್ಷ ಎಚ್ ಡಿ ದೇವೇಗೌಡ ಕರೆ ನೀಡಿದ್ದಾರೆ.ಆಪರೇಷನ್ ಕಮಲಕ್ಕೆ ಒಳಗಾಗುವವರ ಮನೆಗೆ ಮೊದಲು ಲಕ್ಷ್ಮಿ ಹೋಗುತ್ತದೆ ನಂತರ ರಾಜಲಕ್ಷ್ಮಿ
ಬೆಂಗಳೂರು, ಜು. 12 : ಮೈಸೂರು ಗಲಭೆಗೆ ಬಿಜೆಪಿ ಅಂಗ ಸಂಸ್ಥೆಗಳು ನಡೆಸಿದ ಷಡ್ಯಂತ್ರ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಖಾಸಗಿ ಹೋಟೆಲ್ ನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಸಭೆಗೆ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆರ್ಎಸ್ಎಸ್ ನೇತೃತ್ವದ ಸಂಘ ಪರಿವಾರಗಳು ಮೈಸೂರಿನ ಶಾಂತಿಗೆ ಭಂಗ ತಂದಿವೆ ಎಂದು ತರಾಟೆಗೆ ತೆಗೆದುಕೊಂಡರು.
ನವದೆಹಲಿ/ ಬೆಂಗಳೂರು, ಜು.4: ಕೇರಳದ ಜೆಡಿಎಸ್ ನಾಯಕ ವೀರೇಂದ್ರ ಕುಮಾರ್ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಅವರ ನಡುವಿನ ಭಿನ್ನಾಭಿಪ್ರಾಯಗಳು ಮುಗಿಲು ಮುಟ್ಟಿದ್ದು, ಇಂದು ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಈ ಮೂಲಕ ಜಾತ್ಯಾತೀತ ಜನತಾದಳ ಮತ್ತೆ ಹೋಳಾಗುವುದು ಹೆಚ್ಚೂ ಕಡಿಮೆ ಖಚಿತವಾದಂತಾಗಿದೆ.ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹಿನ್ನೆಡೆ, ಪ್ರಚಲಿತ ರಾಜಕೀಯ ವಿದ್ಯಮಾನಗಳು,