‘ಉಪ್ಪಿದಾದಾ ಎಂಬಿಬಿಎಸ್’ ಚಿತ್ರದ ನಾಯಕಿ, ತಮಿಳು ಚಿತ್ರರಂಗದ ಖ್ಯಾತ ನಟಿ ಉಮಾ ಅಲಿಯಾಸ್ ಡಿ.ಆರ್.ಉಮಾಶಂಕರಿ(ಉಮಾ ಮಹೇಶ್ವರಿ), ಹಸೆಮಣೆ ಹತ್ತುತ್ತಿದ್ದಾರೆ. ಉಮೆಯ ಕೈ ಹಿಡಿಯುತ್ತಿರುವ ಶಂಕರನ ಹೆಸರು ಹೆಚ್.ದುಶ್ಯಂತ್. ಹೈದರಾಬಾದ್ ಮೂಲದ ಇವರು, ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್.ಇಸ್ಕಾನ್ ದೇವಸ್ಥಾನದ ಆವರಣದಲ್ಲಿರುವ ಸಭಾಂಗಣದಲ್ಲಿ ಗುರುವಾರ(ಜೂ.15) ಬೆಳಗ್ಗೆ 5.17ಕ್ಕೆ ಮುಹೂರ್ತ . ಅದೇ ದಿನ 11.30ರಿಂದ 1ರವರೆಗೆ ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
2006 ರಿಮೇಕ್ ಚಿತ್ರಗಳ ವರ್ಷವೆ? -ಇದ್ದರೂ ಇರಬಹುದು ಎಂಬಂತೆ, ರಿಮೇಕ್ ಚಿತ್ರಗಳು ಒಂದರ ನಂತರ ಒಂದು ಸೆಟ್ಟೇರುತ್ತಿವೆ. ರಿಮೇಕ್ ಚಿತ್ರಗಳ ಪರವಾಗಿ ವಾದಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಎಲ್ಲಿಯದೋ ಕಥೆ ತಂದು, ರೀಲ್ ಸುತ್ತುವ ಕೆಲಸ ಗಾಂಧಿನಗರದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ.ಈಗ ತೆಲುಗು ಭಾಷೆಯ ‘ಮನ್ಮಥುಡು’ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗುತ್ತಿದ್ದು, ಭಾರತದ ಹೆಸರಾಂತ ಕ್ರೀಡಾಪಟು ಪ್ರಕಾಶ್ ಪಡುಕೋಣೆ ಅವರ
ಡಾ.ಎಸ್.ನರಸಿಂಹ ಮೂರ್ತಿ,ಪ್ರಾಧ್ಯಾಪಕರು, ಇಥಿಯೋಪಿಯnm_narasimha@yahoo.comನಾನು ಕತ್ತಲೆಯ ಲೋಕದಲ್ಲಿ ಸುಳಿದಾಡುತಿರೆಳನ್ನು ಕಂಡೆಕಂಡ ಕೂಡಲೆ ನನ್ನ ಬಾಳು ಸುಂದರವಾಗುವುದೆಂದು ಕನಸನ್ನು ಕಂಡೆಸರಿ, ಎಂದು ನನ್ನ ಜೀವನ ಮುಂದುವರಿಯಿತುಒಮ್ಮೊಮ್ಮೆ ಪ್ರಜ್ವಲಿಸುವಳುಒಮ್ಮೊಮ್ಮೆ ಮಂಕು ಕವಿದಂತೆ ಕಾಣುವಳುಆದರೂ, ಆ ಆತ್ಮೀಯ ಮತ್ತೊಬ್ಬರ ಬಾಳನ್ನುಬೆಳಗಲು ಕಾತುರದಿಂದ ಕಾಯುತಿರುವಳು.ತಾನು ಉರಿಯುತ್ತಿದ್ದರೂ ಮತ್ತೊಬ್ಬರಿಗೆ ದೀಪ ನೀಡುವಳುಒಮ್ಮೊಮ್ಮೆ ಗಾಳಿ ಬಂದಾಗ ಅತ್ತ ಇತ್ತ ಕದಲಿಪುನಃ ತನ್ನ ನಿಜಸ್ಥಿತಿಗೆ ಬರುವಳು.Post your
ಪ್ರಮೀಳಾ ಚೊಕ್ಕಾಡಿ, ಬೆಳ್ತಂಗಡಿ1ಜಾತಿ ಅಂತಸ್ತಿನ ಪ್ರಶ್ನೆ ನಿನ್ನಂಥ ವಿವೇಕಿಗೆಸರಿಹೊಂದುವುದಿಲ್ಲ ಅಂದಿದ್ದಳುಅಷ್ಟಕ್ಕೂ ಅವನೇನು ಕುಡುಕನೇ? ಡಕಾಯಿತನೇ?ಸುಸಂಸ್ಕೃತ ಸುಶಿಕ್ಷಿತ ಮಿಗಿಲಾಗಿಮನುಷ್ಯ ರೂಪದ ಮನುಷ್ಯನೇ ಹೌದೆಂದಿದ್ದಳುಜಪ್ಪೆನ್ನಲಿಲ್ಲ ಅಪ್ಪ2ಮಗಳು ಮನೆಬಿಟ್ಟು ದೂರದೂರು ಸೇರಿದ್ದಾಯ್ತುವರ್ಷಗಟ್ಟಲೆ ಮನೆಯವರ ಒಪ್ಪಿಸಲು ಆಗಾಗತವರೂರಿಗೆ ಅಲೆದದ್ದಾಯ್ತು ದ್ವೇಷ ಸಾರ್ವಕಾಲಿಕವಲ್ಲಕಳೆದ ಕಾಲ ಮರಳಿ ಬರುವುದಿಲ್ಲಇರುವೊಂದು ಬದುಕಿನುದ್ದ ನಮ್ಮ ನಮ್ಮೊಳಗೆಖಾಲಿತನದ ಕಾರ್ಮೋಡಗಳೇಕೆ-ಅಂಗಲಾಚಿದಳು ಮಗಳುಜಪ್ಪೆನ್ನಲಿಲ್ಲ ಅಪ್ಪ3ಮೊನ್ನೆ ಮೊನ್ನೆ ಆ್ಯಕ್ಸಿಡೆಂಟಿನಲಿತೀರಿಹೋದದ್ದೇ ಅಳಿಯಯಾಕೋ ಬಂದೇಬಿಟ್ಟ ಮಾವಮಗಳಿಗಿನ್ನೂ ಹರೆಯಕಂಬನಿಗರೆದು
ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮುದ್ದು ಅಮ್ಮ,ಹೇಗಿದ್ದೀಯಾ ? ಐವತ್ತೇಳು ತುಂಬಿ ಐವತ್ತೆಂಟಕ್ಕೆ ಬಿತ್ತಲ್ಲವಾ! ಇನ್ನೆರಡು ವರ್ಷಕ್ಕೆ ಷಷ್ಟ್ಯಬ್ಧಿ . ನನ್ನಮ್ಮನಿಗೆ ಎಷ್ಟೊಂದು ವಯಸ್ಸಾಯಿತು. ಅರವತ್ತರ ಹೊಸಿತಿಲಿನಲ್ಲೂ ಉಕ್ಕುವ ನಿನ್ನ ಹುಮ್ಮಸ್ಸು ನೆನಪಾದಾಗಲೆಲ್ಲ ನನಗೆ ನಾಚಿಕೆಯಾಗುತ್ತೆ . ಮೂವತ್ತಕ್ಕೇ ನಾನು ಮುದುಕಿಯಂತಾಗಿದ್ದೇನೆ, ಯಾರಿಗೂ ಹೇಳಬೇಡ ಮತ್ತೆ !ಅಪ್ಪ ಹೇಗಿದ್ದಾರೆ ? ನಿನಗೆ ನಾನು ನನಗೆ ನೀನು ಎನ್ನುವಂತೆ ಒಬ್ಬರನೊಬ್ಬರು ಚೆನ್ನಾಗಿ
ರವಿ ಬೆಳಗೆರೆನಿಮ್ಮ ಮಗಳು ಏನಾಗಬೇಕು ಅಂತ ನೀವು ನಿರ್ಧರಿಸಿದ್ದೀರಾ? ಅವಳಿಗೆ ಈಗಾಗಲೇ ಐದು ವರ್ಷಗಳಾಗಿದ್ದು, ಅವಳೇನಾಗಬೇಕು ಅಂತ ನೀವಿನ್ನೂ ನಿರ್ಧರಿಸಿಲ್ಲವಾದರೆ- ನೀವು ಬೇಜವಾಬ್ದಾರಿ ತಂದೆ.‘ನನ್ನ ಮಗಳನ್ನು ಒಳ್ಳೆಯ ಕನ್ನಡ, ಒಳ್ಳೆಯ ಇಂಗ್ಲಿಷು ಕಲಿಸುವ ಶಾಲೆಗೆ ಸೇರಿಸಿದ್ದೇನೆ’ ಅಂತ ನೀವು ಉತ್ತರಿಸಿದರೆ, ನೀವು ಅರ್ಧ ಜವಾಬ್ದಾರಿಯುಳ್ಳ ತಂದೆ.‘ ಈಗ ಚಂದನೆಯ ಕನ್ನಡ, ಇಂಗ್ಲಿಷು ಕಲಿಯುತ್ತಿದ್ದಾಳೆ. ಪಿಯುಸಿಗೆ ಬರುವ ಹೊತ್ತಿಗೆ
*ಶ್ರೀವತ್ಸ ಜೋಶಿ‘ಲೈಟಾಗಿರೋದನ್ನು ಬಯಸುವವರ ವಾರಾನ್ನ...’ ಎಂಬುದು ಈ ಅಂಕಣದ ಯು.ಎಸ್.ಪಿ (Unique Selling Proposition). ಇಲ್ಲಿಯವರೆಗೆ ಹೆಚ್ಚು ಕಡಿಮೆ ಎಲ್ಲ ಅಂಕಗಳಲ್ಲೂ ‘ತುಟಿಯಂಚಿನಲ್ಲಿ ನಗೆಮಿಂಚು’ ಮೂಡಿಸುವ ಪ್ರಯತ್ನವನ್ನೇ ಮಾಡಿದ್ದು. ಅದಕ್ಕೆ ಅಪವಾದವೆಂಬಂತೆ ಈ ವಾರ ಮಾತ್ರ ಸ್ವಲ್ಪ ‘ಸೆಂಟಿಮೆಂಟಲ್ ಸ್ಟಫ್’ ಒಂದನ್ನು ನಿಮ್ಮ ಮುಂದಿಡುತ್ತಿದ್ದೇನೆ, ಆಗಬಹುದೇ?ಈ ಅಂಕಣವನ್ನು ಓದುವ, ಓದಿ ಪ್ರತಿಕ್ರಿಯಿಸುವ, ಉತ್ಸಾಹದಿಂದ ಸ್ಪರ್ಧೆಗಳಲ್ಲೂ ಭಾಗವಹಿಸುವ ಓದುಗರಲ್ಲಿ
ಮೈಸೂರು : ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮಹಿಳೆಯಾಬ್ಬರು, ತೆರೆದ ಬಾವಿಗೆ ಹಾರಿ ಶನಿವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೈಸೂರು ತಾಲೂಕಿನ ಆನಂದೂರು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಮೃತಪಟ್ಟ ನತದೃಷ್ಟರನ್ನು ಭಾಗ್ಯಮ್ಮ(30), ಲತಾ(13), ಲಾವಣ್ಯ(10) ಎಂದು ಗುರ್ತಿಸಲಾಗಿದೆ. ಶವಗಳ ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್.ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು.ಈ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ತನಿಖೆ ಮುಂದುವರೆದಿದೆ ಎಂದು
ತಾಯಿ, ಮಗುವಿನ ಜೀವ ನುಂಗಿದ ಖಾಸಗಿ ಶಾಲೆಯ ಡೊನೇಶನ್ ಭೂತಶಾಲೆಯ ಡೊನೇಶನ್ ಕೊಡಲಾಗದ ಕಾರಣಕ್ಕೆ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ನಾರಿ..ಬೆಂಗಳೂರು: ನಗರದ ರಾಜಾಜಿನಗರ ಬಡಾವಣೆಯ ಕಹಳೆ ಟ್ಯಾಬ್ಲಾಯ್ಡ್ ಪತ್ರಿಕೆಯ ಸಂಪಾದಕರಾದ ಸತ್ಯನಾರಾಯಣ ಅವರ ಮಡದಿ ತನ್ನ ನಾಲ್ಕು ವರ್ಷದ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಖಾಸಗಿ ಶಾಲೆಯಾಂದಕ್ಕೆ ಮಗಳನ್ನು ಸೇರಿಸಲು ಹೋದ ರೂಪಾ
ಅಯ್ಯೋ ನಾ ಫೇಲಾದೆ! ವಿದ್ಯಾರ್ಥಿನಿಯರ ಆತ್ಮಹತ್ಯೆಎಂಜಿನಿಯರಿಂಗ್ ಪರೀಕ್ಷೆ ಫಲಿತಾಂಶ ಸಾವಿನ ಮನೆ ದಾರಿ ತೋರಿಸಿತು! ಬೆಂಗಳೂರು : ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ, ಹೈಕೋರ್ಟ್ ನ್ಯಾಯಮೂರ್ತಿಯಾಬ್ಬರ ಪುತ್ರಿಯೂ ಸೇರಿದಂತೆ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ನಗರದಲ್ಲಿ ನಡೆದಿದೆ. ಸಿಎಂಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾಸಂಸ್ಥೆಯ ಬಯೋಟೆಕ್ ಎಂಜಿನಿಯರಿಂಗ್ ಪದವಿಯ ಮೂರನೇ ಸೆಮಿಸ್ಟರ್ನಲ್ಲಿ ಓದುತ್ತಿದ್ದ ನ್ಯಾಯಮೂರ್ತಿ