ಆನಂದ್ ಸಿನಿಮಾಜ್ ಲಾಂಛನದಲ್ಲಿ ಮಹೇಂದ್ರ ಮುನೋತ್ ನಿರ್ಮಿಸಿರುವ ಮಲ್ಲಿಕಾರ್ಜುನ್ ಮುತ್ತಲಗೇರಿ ನಿರ್ದೇಶನದ ಆಟೋ ಚಿತ್ರವು ಈ ವಾರ(ಏ.24) ಬಿಡುಗಡೆಯಾಗಿದೆ. ಚಿತ್ರದ ಛಾಯಾಗ್ರಹಣ - ಸತೀಶ್ ಕುಮಾರ್.ಎಸ್, ಸಂಗೀತ ವಿಜಯಕೃಷ್ಣ ಮೈಸೂರು, ಸಂಕಲನ ಶ್ರೀಕಾಂತ್ ರಘುಚಂದ್ರನ್, ನೃತ್ಯ ಮದನ್ ಹರಿಣಿ, ಅರವಿಂದ್, ಮಾಲೂರು ಶ್ರೀನಿವಾಸ್. ತಾರಾಗಣದಲ್ಲಿ ಸತ್ಯ, ಶ್ರಾವಣಿ, ಸ್ವರ್ಣ, ರೋಶಿನಿ, ಕೃತ್ತಿಕಾ, ದತ್ತಣ್ಣ,
ಎಂ.ಡಿ.ಆತ ಹಾಡುತ್ತಿದ್ದಾನೆ. ಆಕೆ ಯಾಕೋ ಮುನಿಸಿಕೊಂಡಿದ್ದಾಳೆ. ಎಳೆ ಎಳೆಯಾದ ಎಳೆನೀರು ತಂದು ಕೊಟ್ಟರೂ ಆಕೆ ಮುಖವನ್ನು ಉಬ್ಬಿಸಿಕೊಂಡೇ ಇರುತ್ತಾಳೆ. ಆಗ ಅವನು ಬರಿಗೈಯಿಂದಲೇ ಮಾಟ-ಮಂತ್ರ ಮಾಡಿ ಎಳೆನೀರನ್ನು ಪಾರಿವಾಳ ಮಾಡುತ್ತಾನೆ. ಅದನ್ನು ನೋಡಿ ಆಕೆ ಮುಖ ಅರಳಿಸುತ್ತಾಳೆ. ಹಾರಿಬಿಟ್ಟು ಗಲಗಲ ನಗುತ್ತಾಳೆ. ಇದರ ಮೂಲಕ ನಿರ್ದೇಶಕ ಏನು ಹೇಳಲು ಹೊರಟಿದ್ದಾನೆಂದು ಚರ್ಚೆ ಮಾಡತೊಡಗಿದರೆ ತಲೆ ಸಾವಿರ ಹೋಳಾದೀತು.
ಹ.ಚ. ನಟೇಶ್ಬಾಬುಪಾಪ ಪಾಂಡು ಮತ್ತು ಸಿಲ್ಲಿಲಲ್ಲಿ ಮಾದರಿಯ ಸೀರಿಯಲ್ ಮೆಚ್ಚುವ ಮಂದಿಗೆ ಜೋಕ್ಫಾಲ್ಸ್ ಇಷ್ಟವಾಗುತ್ತದೆ. ಪ್ರಪಂಚದಲ್ಲಿರೋದೆ 50 ಜೋಕ್ಸ್. ಅವುಗಳನ್ನೇ ಹಿಂದೆ ಮುಂದೆ ಮಾಡಿದರೆ ಹೊಸ ಜೋಕ್ ಹುಟ್ಟುತ್ತದೆ ಎನ್ನುವುದನ್ನು ಜೋಕ್ಫಾಲ್ಸ್ ಮೂಲಕ ನಿರ್ದೇಶಕರು ಸಾಬೀತುಪಡಿಸಿದ್ದಾರೆ.ಚಿತ್ರದಲ್ಲಿ ಜೋಕ್ಗಳ ಸರಪಳಿಯೇ ಇದೆ. ಒಂದರ ಹಿಂದೊಂದು ಲಗ್ಗೆ ಹಾಕುವ ಜೋಕುಗಳು ಪ್ರೇಕ್ಷಕರನ್ನು ನಗಿಸಲೇ ಬೇಕೆಂದು ಪಣ ತೊಟ್ಟಂತಿವೆ. ಆದರೆ ಕೆಲವು
*ಶಾಮ್‘ದಿವ್ಯ’ದ ನಂತರ ಯು.ಆರ್.ಅನಂತಮೂರ್ತಿ ಏನು ಬರೆಯುತ್ತಿದ್ದಾರೆ? ಅನಂತಮೂರ್ತಿ ಏನು ಬರೆಯುತ್ತಿದ್ದಾರೊ ಗೊತ್ತಿಲ್ಲ , ದಿವ್ಯಮೌನದಲ್ಲಂತೂ ಮುಳುಗಿಲ್ಲ . ತಮ್ಮ ಇನ್ನೊಂದು ಕಥೆ ಸಿನಿಮಾ ಆಗುತ್ತಿರುವ ಕುತೂಹಲದಲ್ಲಿ ಅವರಿದ್ದಾರೆ. ತನ್ನ ಕಥೆ ದೃಶ್ಯರೂಪ ಹೊಂದುವ ಕುರಿತು ಕಥೆಗಾರನಿಗೆ ಕುತೂಹಲ ಇಲ್ಲದಿರುತ್ತಾ ? ಅಂದಹಾಗೆ, ಸಿನಿಮಾ ಆಗುತ್ತಿರುವ ಅನಂತಮೂರ್ತಿ ಅವರ ಕಥೆಯ ಹೆಸರು- ‘ಮೌನಿ’. ಹದಿನೆಂಟು ಪುಟಗಳ ಈ ಪ್ರಸಿದ್ಧ
ದಟ್ಸ್ ಕನ್ನಡ ಬ್ಯೂರೊಜನಪ್ರಿಯ ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ ಚಿತ್ರಗಳ ಚಿತ್ರೋತ್ಸವ ಮಂಗಳವಾರದಿಂದ (ಅ.28) ಬೆಣ್ಣೆದೋಸೆ ನಗರಿ ದಾವಣಗೆರೆಯಲ್ಲಿ ಆರಂಭವಾಯಿತು. ನಾಗತಿ ಹಳ್ಳಿ ನಿರ್ಮಾಣದ ಹಿಟ್ ಚಿತ್ರ ಅಮೆರಿಕಾ ಅಮೆರಿಕಾದ ಬಗ್ಗೆ ಚಿತ್ರೋತ್ಸವ ಉದ್ಘಾಟನೆ ವೇಳೆ ಸಾಕಷ್ಟು ಚರ್ಚೆಯಾಯಿತು. ಚಿತ್ರೋದ್ಯಮದ ಬಗ್ಗೆ ಮಾತನಾಡಿದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ರಿಮೇಕ್ ಟ್ರೆಂಡ್ ಬಗ್ಗೆ ಮೂಗು ಮುರಿದರು. ನಾನೆಂದೆಂದೂ
ದಟ್ಸ್ಕನ್ನಡ ಡೆಸ್ಕ್‘ರಕ್ತ ಕಣ್ಣೀರಿ’ನ ಬಾ ಬಾರೋ ರಸಿಕ... ಹಾಡು 2003ರ ಸೂಪರ್ಹಿಟ್ ಹಾಡುಗಳಲ್ಲೊಂದು. ನಾಗಮಂಗಲದ ನಂಗಾನಾಚ್ನಲ್ಲಿ ಬಿತ್ತರವಾದದ್ದು ಇದೇ ಹಾಡು ! ಇದೀಗ ಈ ಹಾಡಿನ ಸಾಲು ಚಿತ್ರವೊಂದರ ಶೀರ್ಷಿಕೆಯೂ ಹಾಗಿದೆ !‘ಶಾಂತಿ ಕ್ರಿಯೇಷನ್ಸ್’ ಲಾಂಛನದಲ್ಲಿ ಜಿ. ಪ್ರಸಾದ ರೆಡ್ಡಿ ಹಾಗೂ ಡಿ. ಸಾಯೀಂದ್ರ ರೆಡ್ಡಿ ಅವರು ‘ಬಾ ಬಾರೋ ರಸಿಕ...’ ಎನ್ನುವ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರದ
ಕಡಲ ತಡಿಗಳು ಮರಳ ಹಲಗೆಯ ಮೇಲೆ ಬರೆದಿವೆ ಮುನ್ನುಡಿಒಡಲ ನೋವಿನ ಚಿತ್ರ ರೂಪಕ ತೆರೆದ ಮನಸಿನ ಕನ್ನಡಿ...ಬೊಳುವಾರು ಮೊಹಮ್ಮದ್ ಕುಂಞ್ಞ ಅವರ ‘ಮುತ್ತುಚ್ಚೇರ’ ಸಣ್ಣ ಕತೆಯನ್ನು ಅಚ್ಚುಕಟ್ಟಾದ ಸಿನಿಮಾ ಆಗಿಸಿದ ಪಿ.ಶೇಷಾದ್ರಿ ನಿರ್ದೇಶನದ ಚಿತ್ರ ಮುನ್ನುಡಿ ಅಮೆರಿಕೆಗೆ ಬರಲಿದೆ. ಇಂಥಾ ಅಪರೂಪದ, ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳ ಕೊಳ್ಳೆ ಹೊಡೆದಿರುವ ಚಿತ್ರವನ್ನು ಅಮೆರಿಕನ್ನಡಿಗರ ಬಳಿಗೆ
ರವಿ ಬೆಳಗೆರೆನನ್ನ ಅತ್ಯಂತ ಪ್ರೀತಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರಿಗೆ, ನಿಮ್ಮ ‘ತೂಗು ಮಂಚ’ದೆದುರು ನಿಂತು ನನ್ನದೊಂದು ನಮಸ್ಕಾರ. ಮೊನ್ನೆ ಯಾರೋ ನಿಮಗೆ ಅರವತ್ತಾಯಿತು ಅಂದರು. ಇತ್ತೀಚೆಗೆ ನಿಮ್ಮ ಮೊಮ್ಮಗಳಿಗಾಗಿ ನೀವು ಬರೆದ ಪದ್ಯಗಳನ್ನು ಓದಿದ್ದೆ . ‘ಅರವತ್ತಾಯಿತು, ನಿಜ : ಎಚ್ಚೆಸ್ವಿಗೆ ವಯಸ್ಸಾಯಿತು ಬಿಡು’ ಅಂದುಕೊಂಡಿದ್ದೆ. ಆದರೆ ‘ತೂಗುಮಂಚ’ದ ಹಾಡುಗಳನ್ನು ಕೇಳಿಸಿಕೊಂಡೆ ನೋಡಿ? ನನ್ನದೇ ನಲವತ್ತೆೈದರ ವಯಸ್ಸು
ಬೆಂಗಳೂರು, ಜ.16: ಪಿ.ಶೇಷಾದ್ರಿ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ 'ಅತಿಥಿ' ಚಿತ್ರದ ವಿಶೇಷ ಪ್ರದರ್ಶನವನ್ನು ಅವಿರತ ಟ್ರಸ್ಟ್ ಹಮ್ಮಿಕೊಂಡಿದೆ. ದಾರಿ ತಪ್ಪುತ್ತಿರುವ ಇಂದಿನ ಯುವ ಪೀಳಿಗೆಗೆ ತಿಳಿಹೇಳುವ ಕಥೆಯನ್ನು ಹೊಂದಿರುವ ಕಾರಣ ಗಣತಂತ್ರ ದಿನದಂದು ಈ ಚಿತ್ರ ಪ್ರದರ್ಶನವನ್ನು ಹಮ್ಮಿಕೊಂಡಿದ್ದೇವೆ ಎಂದು ಅವಿರತ ಟ್ರಸ್ಟ್ ನ ಅಧ್ಯಕ್ಷ ಕೆ.ಟಿ. ಸತೀಶ್ ಗೌಡ ತಿಳಿಸಿದರು. ವಿದ್ಯಾವಂತ ಯುವಕರು
ರಾಜ್ಯ ಪ್ರಶಸ್ತಿ ವಿಜೇತ(ವಿಶೇಷ ಜ್ಯೂರಿ) ದಾಟು ಚಿತ್ರದ ವಿಶೇಷ ಪ್ರದರ್ಶನವನ್ನು ನವದೆಹಲಿಯ ಕರ್ನಾಟಕ ಸಂಘದಲ್ಲಿ ಏರ್ಪಡಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಹಾಗೂ ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಈ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ.ಈ ಚಿತ್ರದಲ್ಲಿ ನಿರ್ಮಾಪಕಿ ರೂಪಾ ಅಯ್ಯರ್ ಪ್ರಮುಖ ಪಾತ್ರ ನಿರ್ವಹಿಸಿದ್ದು, ದತ್ತಣ್ಣ, ಕಿರುತೆರೆ ನಟ ರಾಜೇಶ್ ಮುಂತಾದವರಿದ್ದಾರೆ. ಸದಭಿರುಚಿ ಚಿತ್ರಗಳನ್ನು ನೀಡುತ್ತಾ ಬಂದಿರುವ ಶಿವರುದ್ರಯ್ಯ ನವರು