ಬೆಂಗಳೂರು, ಜು. 27 : ಮಹತ್ವದ ಬೆಳವಣಿಗೆಯೊಂದರಲ್ಲಿ ಉಪಚುನಾವಣೆಯಲ್ಲಿ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟಂತಿರುವ ಬಿಜೆಪಿ ಚಿತ್ರನಟ ಅಂಬರೀಷ್ ಮತ್ತು ನಟಿ ಬಿ ಸರೋಜಾದೇವಿ ಅವರನ್ನು ಸೆಳೆಯಲು ಭಾರಿ ಕಸರತ್ತು ಆರಂಭಿಸಿದೆ. ಈ ಇಬ್ಬರಲ್ಲಿ ಯಾರಾದರೂ ಒಬ್ಬರು ಒಪ್ಪಿಗೆ ಸೂಚಿಸಿದರೆ, ರಾಮನಗರದಲ್ಲಿ ಬಿಜೆಪಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ. ಆದರೆ, ಈ ಇಬ್ಬರು ಪ್ರತಿಕ್ರಿಯೆಗಳು ಇನ್ನೂ
ಪಂಚಭಾಷಾ ತಾರೆ ಡಾ.ಬಿ ಸರೋಜಾದೇವಿ ತಮ್ಮ ಮನದಾಳದ ಆಸೆ ಆಕಾಂಕ್ಷೆಯನ್ನು ತೋಡಿಕೊಂಡಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಇತ್ತೀಚೆಗೆ ಸರೋಜಾದೇವಿ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಮಾರಂಭದಲ್ಲಿ ತಮ್ಮ ಹಲವು ದಿನಗಳ ಆಸೆಯನ್ನು ತೋಡಿಕೊಂಡರು. ಸಮಾರಂಭದಲ್ಲಿ ಹೆಸರಾಂತ ಲೇಖಕ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಸಹ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡುತ್ತಿದ್ದ ಸರೋಜಾದೇವಿ, ಬರಗೂರು ರಾಮಚಂದ್ರಪ್ಪ ಚಿತ್ರದಲ್ಲಿ ನಟಿಸಬೇಕೆಂಬ
ಚಿಕ್ಕಮಗಳೂರು: ಕಳಪೆ ಚಿತ್ರಗಳನ್ನೂ ಭ್ರಷ್ಟ ರಾಜಕಾರಣಿಗಳನ್ನೂ ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ಪದ್ಮಭೂಷಣ ಪ್ರಶಸ್ತಿ ವಿಜೇತ ಹಿರಿಯ ನಟಿ ಬಿ. ಸರೋಜಾದೇವಿ ಜನತೆಗೆ ಕರೆ ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭವನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಸರೋಜಾ ದೇವಿ ಕನ್ನಡ ಚಿತ್ರರಂಗ ಹಾದಿ ತಪ್ಪುತ್ತಿರುವ ಬಗೆಗೆ ವಿಷಾದ ವ್ಯಕ್ತಪಡಿಸಿದರು. ಭಾರತೀಯ ಸಂಸ್ಕೃತಿ
ಬೆಂಗಳೂರು : ಸಾರ್ವಜನಿಕ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರೊಂದಿಗೆ ಅನಾಗರಿಕವಾಗಿ ವರ್ತಿಸಿದ ಘಟನೆಯಲ್ಲಿ 25 ಮಂದಿಯನ್ನು ಪೊಲೀಸರು ಗುರ್ತಿಸಿದ್ದು , ಆರೋಪಿಗಳ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.ಕನ್ನಡ ಸಂಘರ್ಷ ಸಮಿತಿಯ ರಾಮಣ್ಣ ಕೋಡಿಹೊಸಳ್ಳಿ, ಪಾರ್ಥಸಾರಥಿ ಹಾಗೂ ಕನ್ನಡ ಚಳವಳಿಗಾರ ಸಮೀವುಲ್ಲಾ ಸೇರಿದಂತೆ 24 ಮಂದಿಯ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಪುನರೂರು ಅವರ ಪಂಚೆ
ಬೆಂಗಳೂರು : ಉದ್ರಿಕ್ತರ ಗುಂಪೊಂದು ಕನ್ನಡ ಸಾಹಿತ್ಯ ಪರಿಷತ್ನ ಕೃಷ್ಣರಾಜೇಂದ್ರ ಪರಿಷನ್ಮಂದಿರದ ವೇದಿಕೆಯ ಮೇಲೆಯೇ ಪರಿಷತ್ನ ಅಧ್ಯಕ್ಷರನ್ನು ಅರೆಬೆತ್ತಲೆ ಮಾಡಿದ ಘಟನೆ ಬುಧವಾರ (ಜ.21) ಸಂಜೆ ನಡೆದಿದೆ.ಅದು ಪದ್ಮಭೂಷಣ ಬಿ.ಸರೋಜಾದೇವಿ ಪ್ರಶಸ್ತಿ ಪ್ರದಾನ ಸಮಾರಂಭ. ಲೇಖಕಿ ಕುಲಶೇಖರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭ. ಮೂಡಬಿದಿರೆ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಡಾ.ಕಮಲಾ ಹಂಪನಾ, ಲೇಖಕಿ ಡಾ.ವಿಜಯಾ ಸುಬ್ಬರಾಜ್, ನಟಿ
‘ಕನ್ನಡ ಲೇಖಕಿಯರಿಗೆ ಜ್ಞಾನಪೀಠ, ದೂರಪೀಠವಾಗಿದೆ’ ಲೇಖಕಿ ಅಶ್ವಿನಿ ಅವರಿಗೆ ಪದ್ಮಭೂಷಣ ಬಿ.ಸರೋಜದೇವಿ ಪ್ರಶಸ್ತಿ ಪ್ರದಾನ ಬೆಂಗಳೂರು : ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದಾರೆ ಎಂಬುದಕ್ಕೆ, ಕನ್ನಡದ ಯಾವ ಮಹಿಳಾ ಲೇಖಕಿಗೂ ಜ್ಞಾನಪೀಠ ಪ್ರಶಸ್ತಿ ಲಭಿಸದಿರುವುದು ಜೀವಂತ ಉದಾಹರಣೆ ಎಂದು ಚಲನಚಿತ್ರ ನಟಿ ಬಿ.ಸರೋಜ ದೇವಿ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ
ಗೋವಾದಲ್ಲಿ ನಡೆಯುತ್ತಿರುವ ಸಿನಿಮಾ ಹಬ್ಬದಲ್ಲಿ ಕನ್ನಡ ಚಿತ್ರರಂಗದ ಪ್ರತಿನಿಧಿಗಳು ಎಲ್ಲಿದ್ದಾರೆ ಎಂದು ಹುಡುಕುವ ಪರಿಸ್ಥಿತಿ. ಈ ಬರದ ನಡುವೆ ಚಿಲುಮೆಯ ಉತ್ಸಾಹದಲ್ಲಿ ನಟಿ ತಾರಾ ಓಡಾಡುತ್ತಿದ್ದಾರೆ. ಅದೇನು ಉತ್ಸಾಹವೋ ಏನೋ, ಚಿತ್ರೋತ್ಸವದ ಉದ್ದಗಲಕ್ಕೂ ತಾರಾ ಓಡಾಡುತ್ತಿದ್ದಾರೆ. ಒಮ್ಮೆ ಥಿಯೇಟರ್ನಲ್ಲಿ ಕಾಣಿಸಿಕೊಂಡರೆ, ಮತ್ತೊಮ್ಮೆ ಸಂಕಿರಣವೊಂದರ ಪ್ರೇಕ್ಷಕರ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಇತರ ನಟಿಯರ ಧೋರಣೆಯಲ್ಲಿ ಯಾವುದೋ ಗತ್ತು
ಬಹುಭಾಷಾ ನಟಿ ಬಿ.ಸರೋಜಾ ದೇವಿ ಅವರಿಗೆ ತಮಿಳುನಾಡು ಸರ್ಕಾರದ ಪ್ರತಿಷ್ಠಿತ ಕಲೈಮಾಮಣಿ ಪ್ರಶಸ್ತಿ ಲಭಿಸಿದೆ. ನಟಿಯರಾದ ನಯನ ತಾರಾ, ಅಸಿನ್, ಮೀರಾ ಜಾಸ್ಮಿನ್ ಮತ್ತು ಭರತ ನಾಟ್ಯ ಕಲಾವಿದೆ ಐಶ್ವರ್ಯ ರಜನಿಕಾಂತ್ ಸೇರಿದಂತೆ ಒಟ್ಟು 70 ಮಂದಿ ಈ ಸಾಲಿನ ಕಲೈಮಾಮಣಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಸಿಕ್ಕ ಬಗ್ಗೆ ಸರೋಜಾದೇವಿ ಹರ್ಷ ವ್ಯಕ್ತಪಡಿಸಿದ್ದಾರೆ. ಅವರು