*ಶ್ರೀವತ್ಸ ಜೋಶಿವಿಚಿತ್ರಾನ್ನದಲ್ಲಿ ಆಗಾಗ ಯಾವುದಾದರೂ ಪುರಾವೆ ಸಾಕ್ಷ್ಯಾಧಾರ ಪ್ರತಿಪಾದನೆಗಾಗಿ ಪುರಂದರದಾಸರನ್ನು, ಅವರು ರಚಿಸಿದ ಕೃತಿಗಳನ್ನು ಅವಲಂಬಿಸಿದ್ದುಂಟು. ಹಾಗಿರುವಾಗ ಒಂದು ಇಡೀ ಸಂಚಿಕೆಯನ್ನೇ ಆ ಮಹಾಮಹಿಮ ಸಂತನಿಗೇ ಡೆಡಿಕೇಟಿಸಿದರೆ ಹೇಗೆ ಎಂಬ ಆಲೋಚನೆ ಬಂತು. ಆದರೆ ಹಾಗಂತ ಹೇಳಿ ‘ವಿಷದ ಬಟ್ಟಲಲ್ಲಿ ಹೆಂಡತಿಯ ಮೂಗುತಿ..., ಜಿಪುಣ ವ್ಯಾಪಾರಿಯಾಗಿದ್ದವ ಪುರಂದರದಾಸರಾದ ಸಂಗತಿ’ ಇತ್ಯಾದಿ ಕಥೆ ಬ(ಕೊ)ರೆದರೆ ಅದು ಚರ್ವಿತಚರ್ವಣ ಆಗುತ್ತದೆ.