Search results for "ಸೂರ್ಯ ನಮಸ್ಕಾರ" in Oneindia Kannada
ಹೊಸವರ್ಷಕ್ಕೆ ಸ್ವಾಗತ ಬಯಸುವಾಗ ಕಳೆದ ವರ್ಷದಲ್ಲಿಯ ಆಗುಹೋಗುಗಳ ಬಗ್ಗೆ ಒಂದು ಸಿಂಹಾವಲೋಕನ ಮಾಡುವ ಪದ್ಧತಿ ಇರುತ್ತದೆ. ವೈಯಕ್ತಿಕ ಜೀವನದಲ್ಲಿ ಪ್ರತಿಯೊಬ್ಬರೂ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಸಫಲವಾಗಲಿ ಎಂದು ಹಾರೈಸಿ ಒಂದು ಬಗೆಯ ಸಂಕಲ್ಪ ಮಾಡುತ್ತಾರೆ. ಇಂಗ್ಲೀಷಿನಲ್ಲಿ `ನ್ಯು ಇಯರ್ ರೆಸೊಲ್ಯುಶನ್' ಎನ್ನುತ್ತಾರೆ. ಹೊಸ ವರ್ಷಕ್ಕಾಗಿ ಏನು ಮಾಡಬೇಕು, ಏನು ಬಿಡಬೇಕು ಎಂಬ ನಿರ್ಧಾರ ಕೈಕೊಳ್ಳುತ್ತಾರೆ.
ದಿನಾಲೂ ಬೆಳಿಗ್ಗೆ ವಾಯುವಿಹಾರ ಮಾಡಿರಿ, ದೇಹಕ್ಕೆ ಅವಶ್ಯಕ ಆಕ್ಸಿಜನ್ ದೊರೆಯುವುದುಒಂದಾದರೂ ಒಳ್ಳೆಯ ವಿಚಾರ ಪ್ರತಿದಿನ ಓದಿರಿ, ಚಿಂತಿಸಿರಿ, ಮನಕೆ ನೆಮ್ಮದಿ ಲಭಿಸುವುದುದೈನಂದಿನ ವ್ಯವಹಾರ ಆಯ-ವ್ಯಯ, ತಪ್ಪು-ಒಪ್ಪು, ದಿನಚರಿಯಲ್ಲಿ ಒಂದು ಪುಟ ಬರೆದಿಡಿಜೀವ-ರಥದ ಲಗಾಮು ನಿಮ್ಮ ಕೈಗೆ ಸಿಗುವದು. ಕನಿಷ್ಠ ಒಬ್ಬರಿಗಾದರೂ ಸಹಾಯ ಮಾಡಿರಿ,ಮನ ಪ್ರಫುಲ್ಲಿತವಾಗುವದು. ಒಳ್ಳೆಯ ಉಕ್ತಿ ಬರೆದು ಗೋಡೆಗೆ ತಾಗಿಸಿರಿ, ಅದರಿಂದಸುವಿಚಾರ ನಿಮ್ಮ ಧಮನಿಯಲಿ ಹರಿಯುವುದು,
ಗೀತೆಯಲ್ಲಿ ಪರಮಾತ್ಮನು ಯೋಗಾಭ್ಯಾಸದ ಕಡೆಗೆ ಮನವು ಒಲಿಯಬೇಕಾದರೆ ಜನ್ಮಾಂತರದ ಸಂಸ್ಕಾರವಿರಬೇಕು ಎಂದು ಹೇಳುತ್ತಾನೆ. ಮನವು ಶಾಂತವಾಗದೇ ಯಾವ ಕೆಲಸವನ್ನು ಮಾಡಿದರೂ ಅದು ಪೂರ್ಣವಾಗಲಾರದು. ಚಿರಂತನವಾದ ದುಃಖ ಭೋಗದಿಂದ ರೋಗವೇ ವಿನಾ ಯೋಗವು ಲಭಿಸಲಾರದು. ಯೋಗವು ರೋಗವೆಂಬ ಪಿಶಾಚಿಯಿಂದ ಬಿಡುಗಡೆ ಮಾಡುವುದು. ಮನವು ಯೋಗದಲ್ಲಿ ನೆಲಸಿದರೆ ಭೋಗವೂ ಯೋಗವಾಗುವುದು. ಅಂಕಣಕಾರ : ಡಾ. 'ಜೀವಿ' ಕುಲಕರ್ಣಿ, ಮುಂಬಯಿ