ತಮಗೆ ಗೊತ್ತುಂಟೋ ಇಲ್ಲವೋ? ಅಥವಾ ಎಲ್ಲೋ ಓದಿದ ಹಾಗಿದೆಯಲ್ಲಾ ಎನಿಸಲೂಬಹುದು? ಅಥವಾ ಎಲ್ಲಾ ಗೊತ್ತಿದೆ ಬಿಡ್ರೀ ಅಂದರೂ ಅನ್ನಬಹುದು. ಸಮಾಚಾರ ಏನೆಂದರೆ..ಇವತ್ತು ಕರ್ನಾಟಕ ರಾಜ್ಯವನ್ನು ಆಳುತ್ತಿರುವ ಬಿಜೆಪಿ ಸರಕಾರ ನೆನೆನೆನೆಗುದಿಗೆ ಬಿದ್ದಿದೆ. ಸರಕಾರ ಇರತ್ತೋ ಬೀಳತ್ತೋ ಎನ್ನುವಂತಹ ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ. ಈ ಸನ್ನಿವೇಶವು ದೈನಂದಿನ ರಾಜಕೀಯ ಬೆಳವಣಿಗೆಯಲ್ಲಿ ಆಸಕ್ತಿಯಿರುವ ನಾನಾ ನಮೂನೆಯ ಜನಕ್ಕೆ ನಾನಾ ಬಗೆಯ
ಹಲಸಿನ ಹಣ್ಣಿನಿಂದ ತರಹೇವಾರಿ ಸಿಹಿ ತಿಂಡಿಗಳನ್ನು ಮಾಡಬಹುದು.ಹಣ್ಣನ್ನು ಹೇರಳವಾಗಿ ಬೆಳೆಯುವ ದಕ್ಷಿಣ ಕನ್ನಡ ಮತ್ತು ಮಲೆನಾಡಿನ ಹಳ್ಳಿಗಳಲ್ಲಿ ಹಲಸು ಆಧಾರಿತ ಭಕ್ಷ್ಯ ಭೋಜ್ಯಗಳು ಜನಜನಿತ. ಹಲಸಿನ ಮುಳ್ಳು ಹೊದಿಕೆಯನ್ನು ಕೊಟ್ಟಿಗೆಗೆ ಹಾಕಿ ಕಾಯಿ, ಬೀಜ,ತೊಳೆ, ತಿರುಳಿನಿಂದ ನಮ್ಮ ಹೆಣ್ಣುಮಕ್ಕಳು ಬಗೆಬಗೆಯ ಪದಾರ್ಥಗಳನ್ನು ತಯಾರಿಸುವರು. ಹೊರಗೆ ಮಳೆ ಸುರಿಯುತ್ತಿರುವಾಗ ಒಳಗೆ ಸುಟ್ಟ ಹಲಸಿನ ಹಪ್ಪಳದ ಕುರುಕುರು ಸದ್ದು ಕೇಳಿಸುತ್ತಿದ್ದರೆ
ಹಿಂದೂಗಳ ಹಬ್ಬಗಳ ಸ್ವಾರಸ್ಯವೇ ಅಂತಹುದು. ಹಬ್ಬ ನೆಪದಲ್ಲಿ ನಾನಾತರಹದ ಆಟ, ನೆಂಟರಿಷ್ಟರ ಒಡನಾಟ. ಶ್ರಾವಣದಲ್ಲಿ ಭೀಮನ ಅಮವಾಸ್ಯೆ ನಂತರ ಬರುವ ಮೊದಲ ಹಬ್ಬವೇ ನಾಗರಪಂಚಮಿ. ನಾಗರಪಂಚಮಿಯಂದು ಮಾಡೋಣ ಗಟ್ಟಿಮುಟ್ಟಾದ ಹಲ್ಲುಗಳಿಲ್ಲದಿದ್ದರೂ ಅಚ್ಚುಕಟ್ಟಾಗಿ ಮಾಡಿದ ರುಚಿಕಟ್ಟಾದ ತಂಬಿಟ್ಟು! ಬರಹ : ಪ್ರಸಾದ ನಾಯಿಕ ನಾವು ಚಿಕ್ಕವರಿದ್ದಾಗ ನಾಗರಪಂಚಮಿ ಹಬ್ಬ ಬಂದಿತೆಂದರೆ ಒಂದು ಬಗೆಯ ಸಂತಸ ಮತ್ತು ಒಂದು ಬಗೆಯ
ಹೋಳಿಗೆ ಅಥವಾ ಒಬ್ಬಟ್ಟು ಇಲ್ಲದಿರೆ ಹಬ್ಬ ಪೂರ್ಣವಾಗಲು ಎಂತು ಸಾಧ್ಯ. ನಮ್ಮ ಹಳ್ಳಿ ಅಮ್ಮಂದರಿಗಂತೂ ಹಬ್ಬವನ್ನು ಹೊರತು ಪಡಿಸಿದರೂ- ಮಗ ಪರೀಕ್ಷೆಯಲ್ಲಿ ಪಾಸಾಗಲಿ, ಮಗಳು ಊರಿನಿಂದ ತವರಿಗೆ ಬರಲಿ, ಗಂಡನಿಗೆ ವ್ಯವಹಾರದಲ್ಲಿ ಲಾಭ ಬರಲಿ , ಎಲ್ಲ ಸಂಭ್ರಮಗಳಿಗೂ ಹೋಳಿಗೆಯೇ ಆಗಬೇಕು. ಇಂಥಾ ಹೋಳಿಗೆ ಊಟದೊಂದಿಗೇ ಯುಗಾದಿ ಅರ್ಥಪೂರ್ಣಗೊಳ್ಳುತ್ತದೆ. ವಾರ, ಹದಿನೈದು ದಿನಗಳಿಂದ ಹಬ್ಬಕ್ಕಾಗಿ ನಡೆಸಿದ ಸಿದ್ಧತೆಯ
ಈ ವಿಶೇಷವಾದ ಸಿಹಿಯನ್ನು ರಾಮನವಮಿಯ ದಿನ ಮಾಡಿ ಕೋಸಂಬರಿ, ಪಾನಕದ ಜೊತೆ ನೈವೇದ್ಯಕ್ಕೆ ಇಡುತ್ತಾರೆ. ಪ್ರಸಾದ ನಾಯಿಕ ನಮ್ಮ ತಂದೆಯ ಚಿಕ್ಕಪ್ಪನ ಮಗನ ಹೆಂಡತಿಯ ಅಕ್ಕನ ಗಂಡನ ಕಸಿನ್ನ ಮಗಳು ಒಂದು ಬಾರಿ ಯಾವುದೋ ಟಿವಿಯ ಅಡುಗೆ ಕಾರ್ಯಕ್ರಮವೊಂದರಲ್ಲಿ ಬಂದಿದ್ದಳು. ನಮ್ಮ ದೂ.....ರದ ಸಂಬಂಧಿ, ಇವಳ್ಯಾವ ಸವಿರುಚಿ ಹೇಳಬಹುದೆಂದು ನಮಗೂ ಕಾತರ. ವೈಯ್ಯಾರದಿಂದ ನಾನೀಗ ಮಾಡುತ್ತಿರುವುದು ಗುಲ್ಪೀಟ್
ನೆನೆಯುವುದು ಎಲ್ಲರಿಗೂ ಇಷ್ಟ! ಮನಸ್ಸಿಗೆ ಹತ್ತಿರವಾದವರನ್ನು ನೆನೆಯುವುದಾದರೂ ಇರಬಹುದು.. ಮಳೆಯಲ್ಲಿ ನೆನೆಯುವುದಾದರೂ ಆಗಬಹುದು.. ಒಟ್ಟಿನಲ್ಲಿ ನೆನೆಯುವ ಪ್ರಕ್ರಿಯೆಯಲ್ಲಿ ಏನೋ ಒಂದು ಸುಖವಿದೆ. ಸುಖದ ಜೊತೆಗೆ ಸ್ವಾರಸ್ಯವೂ ಇದೆ. ಈ ಬಗ್ಗೆ ವಿಚಿತ್ರಾನ್ನ 247ರಲ್ಲಿ ಏನೇನೋ ಇದೆ!ಶ್ರೀವತ್ಸ ಜೋಶಿನಿಘಂಟು ತೆರೆದು ನೋಡಿದರೆ `ನೆನೆ' ಎಂಬ ಕ್ರಿಯಾಧಾತುರೂಪದ ಶಬ್ದಕ್ಕೆ ನಿಮಗೆ ನಾನಾ ಅರ್ಥಗಳೂ, ಸಮಾನಾರ್ಥಕ ಪದಗಳೂ ಸಿಗಬಹುದು. ಆದರೆ ಸ್ಥೂಲವಾಗಿ
`ನೆನೆ' ಪದದಿಂದಲೇ ವ್ಯುತ್ಪತ್ತಿಯಾದ `ನೆನೆಗುದಿ' ಎಂಬೊಂದು ಪದ ಇದೆ. ಅನಿಶ್ಚಿತತೆ, ಪೇಚು, ತಳಮಳ ಎಂದು ಅರ್ಥ. ಬಹುಶಃ ನೆನೆಸಲು ಬಳಸುವ ನೀರು ಅತಿಬಿಸಿಯಾಗಿ ಕುದಿಯತೊಡಗಿದರೆ ಆ ವಸ್ತು ಅಥವಾ ಸಂಗತಿ ಆಗ ನೆನೆಗುದಿಯಲ್ಲಿ ಬಿದ್ದಂತೆಯೇ. `ಕಾವೇರಿ ನೀರು ಹಂಚಿಕೆಯ ಸಮಸ್ಯೆ' ನೆನೆಗುದಿಗೆ ಅತಿ ಸಮರ್ಪಕ ಉದಾಹರಣೆ. ಯಾಕೆಂದರೆ ಅದರಲ್ಲಿ ನೆನೆಸಲು ನೀರೂ ಇದೆ, ಆ ನೀರು ಸರಿಯಾಗಿ