ಭಾರತೀಯ ಜನಪಾ ಪಕ್ಷ ಹುಟ್ಟಿ 27 ಸಂವತ್ಸರಗಳು ಕಂಡಿದೆ. ಎಷ್ಟೋ ಏಳು-ಬೀಳು, ಸೊಲು-ಗೆಲುವುಗಳನ್ನು ನೋಡಿದೆ. ಕಾಂಗ್ರೆಸ್ ನಂತರ ಅತ್ಯಲ್ಪ ವೇಳೆಯಲ್ಲಿ ಬೆಳೆದ ಒಂದೇ ಏಕೈಕ ರಾಷ್ಟ್ರಿಯ ಪಕ್ಷ ಅಂದ್ರೆ ಬಿಜೆಪಿ. 1952ರ ಜನ ಸಂಘದ ನಾಲ್ಕಾರು ಸದಸ್ಯರಿಂದ ಹಿಡಿದು 1982ರಲ್ಲಿ ಬಿಜೆಪಿಯಾಗಿ ಪರಿವರ್ತನೆಯಾಗಿ 2 ಸೀಟು ಬಂದಾಗಲೂ ವೀರೋಧ ಪಕ್ಷದಲ್ಲಿ ಕೂತು ಹೆಸರು ಮಾಡಿದ ಪಕ್ಷ.
ಶಿವಮೊಗ್ಗ,ಸೆ. 18 : ನಗರದ ದುರ್ಗಿ ಗುಡಿಯಲ್ಲಿ ನಿನ್ನೆ ಮಧ್ಯರಾತ್ರಿ ಸಮಯದಲ್ಲಿ ಕಳ್ಳರು ಕೆಲವು ಅಂಗಡಿಗಳ ಬಾಗಿಲನ್ನು ಮುರಿದು ಕಳ್ಳತನ ಮಾಡಲು ವಿಫಲ ಯತ್ನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.ದುರ್ಗಿಗುಡಿಯ ಶನಿಮಹಾತ್ಮ ದೇವಸ್ಥಾನದ ಬಳಿಯಿರುವ ಎಸ್.ಎಲ್.ವಿ.ಮೊಬೈಲ್ ಅಂಗಡಿ, ಭರತ್ ಕಮ್ಯೂನಿಕೇಷನ್ ಹಾಗೂ ತ್ರಿಲೋಕ್ ಬಟ್ಟೆ ಅಂಗಡಿಯ ಬಾಗಿಲನ್ನು ಕಳ್ಳರು ಮುರಿದಿರುವ ಘಟನೆ ನಡೆದಿದೆ. ಆದರೆ, ತ್ರಿಲೋಕ್ ಬಟ್ಟೆ
ಶಿವಮೊಗ್ಗ, ಸೆ. 15 : ನಗರದ ಸವಾರ್ಲೈನ್ ರಸ್ತೆಯನ್ನು ಅಗಲೀಕರಣ ವಿರೋಧಿಸಿ ಸವಾರ್ಲೈನ್ ರಸ್ತೆ ನಿವಾಸಿಗಳು ಮತ್ತು ವ್ಯಾಪಾರಸ್ಥರ ಹಿತರಕ್ಷಣಾ ಸಮಿತಿ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿ ನಂತರ ಮನವಿ ಸಲ್ಲಿಸಿದರು.ಸವಾರ್ಲೈನ್ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 300ರಷ್ಟು ಕುಟುಂಬಗಳು ವಾಸವಾಗಿದ್ದು, ಹೂ ಮಾರಾಟ ಮತ್ತು ತಳ್ಳುಗಾಡಿಗಳನ್ನು ನಡೆಸಿ ಜೀವನ ನಡೆಸುವ ಕುಟುಂಬಗಳು ಇಲ್ಲಿವೆ. ಒಂದು
ರಾಮನಗರ, ಸೆ. 15 : ಎಚ್1ಎನ್1 ಸೋಂಕು ರಾಜ್ಯವ್ಯಾಪಿ ಹರಡಿ ಮರಣ ಮೃದಂಗ ಬಾರಿಸುತ್ತಿದೆ. ಸೋಂಕಿಗಿಂತ ರೋಗ ಕುರಿತ ಹೆದರಿಕೆಯೇ ಜನರನ್ನು ಮತ್ತಷ್ಟು ಹಣ್ಣುನೀರು ಮಾಡಿದೆ. ಸೋಂಕಿನಿಂದ ಜನ ಬಲಿಯಾಗುತ್ತಿರುವುದು ಒಂದೆಡೆಯಾದರೆ ಈ ರೋಗವನ್ನು ಹಂದಿಜ್ವರ ಎಂದು ಹೆಸರಿರುವುದರಿಂದ ಹಂದಿ(ವರಾಹ) ಉದ್ಯಮಕ್ಕೆ ಬೇಡಿಕೆ ಇಲ್ಲದೇ ಬಾರೀ ಹೊಡೆತ ಬಿದ್ದಿದೆ.ಎಚ್1ಎನ್1 ರೋಗಕ್ಕೂ ಹಂದಿಗೂ ಯಾವ ಸಂಬಂಧವಿಲ್ಲದಿದ್ದರೂ ಜನರಿಗೆ ತಿಳಿವಳಿಕೆ
ಚನ್ನಪಟ್ಟಣ, ಸೆ. 14 : ಬೆಂಗಳೂರು ಮೈಸೂರು ಹೆದ್ದಾರಿ ಚತುಷ್ಪಥ ರಸ್ತೆಯಾಗಿ ಅದ್ಯಾವ ರಾಹುಕಾಲದಲ್ಲಿ ಬದಲಾಯಿತೋ ಏನೋ? ಚತುಷ್ಪಥ ಸಂಚಾರಕ್ಕೆ ಅವಕಾಶ ನೀಡಿದಾಗಿನಿಂದಲೂ ಈ ಹೆದ್ದಾರಿ ಮರಣಮೃದಂಗ ಬಾರಿಸುತ್ತಲೇ ಇದೆ. ಬೆಂಗಳೂರಿನಿಂದ ಮೈಸೂರಿಗೆ, ಮೈಸೂರಿನಿಂದ ಬೆಂಗಳೂರಿಗೆ ಪ್ರತಿನಿತ್ಯ ಈ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಇವುಗಳಿಗೆ ಹೆದ್ದಾರಿ ಪಕ್ಕದ ಗ್ರಾಮವಾಸಿಗಳು ಬಲಿಯಾಗುತ್ತಿರುವುದು ಮಾತ್ರ ದುರ್ದೈವದ ಸಂಗತಿಯಾಗಿದೆ.ಸೂರ್ಯೋದಯಕ್ಕೂ ಮುನ್ನ
ಉನ್ನತ ಶಿಕ್ಷಣ ಸಚಿವರಾದಂತಹ ಅರವಿಂದ ಲಿಂಬಾವಳಿಯವರು ಶಿಕ್ಷಕರ ವರ್ಗಾವಣೆಯ ವಿಷಯದಲ್ಲಿ ತೆಗೆದುಕೊಂಡಿರುವ ಯೋಜನೆಯ ನಿರ್ಧಾರದ ಬಗ್ಗೆ ಮೊನ್ನೆ ಭೇಟಿಯಾದ ಹಿರಿಯರೊಬ್ಬರು ತಿಳಿಸಿದಾಗ ಆಶ್ಚರ್ಯ ಹಾಗೂ ಸಂತೋಷ ಎರಡೂ ಒಟ್ಟಿಗೆ ಅಟ್ಟಿಸಿಕೊಂಡು ಬಂದವು.ಮಾನ್ಯ ಸಚಿವರು ಶಿಕ್ಷಕರ ವರ್ಗಾವಣೆಯಲ್ಲಿ ನಡೆಯುವ ಅಕ್ರಮ, ಅವ್ಯವಹಾರಗಳನ್ನು ತಡೆಯುವ ನಿಟ್ಟಿನಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಅವಶ್ಯವಿರುವ ಶಿಕ್ಷಕರನ್ನು ಸಂದರ್ಶನ ಮಾಡಿ, ಅವರು ಇಚ್ಚಿಸಿದ ಸ್ಥಳಗಳಲ್ಲಿ
ಶಿವಮೊಗ್ಗ,ಸೆ. 5 : ಸುಮಾರು 5 ಜನರಿದ್ದ ಮುಸುಕುಧಾರಿಗಳ ತಂಡ ಮನೆಯೊಂದಕ್ಕೆ ನುಗ್ಗಿ ಬಂಗಾರದ ಆಭರಣಗಳನ್ನು ಹಾಗೂ ನಗದು ಹಣವನ್ನು ದೋಚಿಕೊಂಡು ಪರಾರಿಯಾದ ಘಟನೆ ಶುಕ್ರವಾರದಂದು ಸಂಜೆ ಗೋಪಾಲಗೌಡ ಬಡಾವಣೆಯಲ್ಲಿ ನಡೆದಿದೆ.ಮಾರುತಿ ಸ್ವಿಫ್ಟ್ ಕಾರಲ್ಲಿ ಬಂದ ಐದು ಜನ ಮುಸುಕುಧಾರಿಗಳು ನೇರವಾಗಿ ಗೋಪಾಲಗೌಡ ಬಡಾವಣೆಯಲ್ಲಿ ವಾಸವಾಗಿರುವ ಬಿ.ಆರ್.ಪಿ.ಯ ಶ್ರೀರಂಭಾಪುರಿ ಕಾಲೇಜಿನ ಉಪನ್ಯಾಸಕ ಲೋಕೇಶಪ್ಪ(51)ರವರ ಮನೆಗೆ ನುಗ್ಗಿದರು. ನಂತರ,
ಶಿವಮೊಗ್ಗ. ಸೆ. 1 : ಜಿಲ್ಲೆಯಲ್ಲಿ ಮಳೆಯಿಂದ ಸುಮಾರು 21 ಕೋಟಿ ರೂ. ನಷ್ಟವಾಗಿದ್ದು, ಇದರ ವಿವರವನ್ನು ಜಿಲ್ಲಾಧಿಕಾರಿ ಪಂಕಜ್ ಕುಮಾರ್ ಪಾಂಡೆ ಸೋಮವಾರ ಬೆಳಿಗ್ಗೆ ಕೇಂದ್ರ ನೆರೆ ಪರಿಹಾರ ತಂಡಕ್ಕೆ ನೀಡಿದರು.ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಆದ ನಷ್ಟದ ವಿವರವನ್ನು ನೀಡಿದ ಜಿಲ್ಲಾಧಿಕಾರಿಗಳು ಪರಿಹಾರಕ್ಕೆ ಮನವಿ ಮಾಡಿದರು. ಜಿಲ್ಲೆಯಲ್ಲಿ ಮಳೆ ಮತ್ತು ನೆರೆಯಿಂದ
ಶಿವಮೊಗ್ಗ, ಆ. 30 : ಹೊಳೆಹೊನ್ನೂರು ರಸ್ತೆಯಲ್ಲಿರುವ ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ ಇಬ್ಬರು ಗೂರ್ಖಾಗಳ ಮೇಲೆ ದರೋಡೆಕೋರರು ಮಾರಣಾಂತಿಕ ದಾಳಿ ನಡೆಸಿ, 1 ಲಕ್ಷಕ್ಕೂ ಹೆಚ್ಚಿನ ಹಣವನ್ನು ದೋಚಿದ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.ಸುಮಾರು 15ರಿಂದ 20 ಜನರಿದ್ದ ದರೋಡೆಕೋರರ ತಂಡವೊಂದು ಬೆಳಗಿನ ಜಾವ ಜ್ಞಾನದೀಪ ಶಾಲೆಗೆ ದಾಳಿ ಮಾಡಿ, ಸನಾತನ್ ಕ್ರೋ(26) ಹಾಗೂ ದೋರಾ
ಶಿವಮೊಗ್ಗ, ಆ. 27 : ಹೈದರಾಬಾದ್ ಮೂಲದ ಸ್ವಸಹಾಯ ಗುಂಪಿನ ಏಜೆಂಟರಿಬ್ಬರ ಮೇಲೆ ಏಕಾಏಕೀ ದಾಳಿ ಮಾಡಿದ ಇಬ್ಬರು ಆಗಂತುಕರು ದೊಣ್ಣೆಗಳಿಂದ ತಲೆಯ ಮೇಲೆ ಹೊಡೆದು ಓರ್ವನನ್ನು ಕೊಂದಿದ್ದಲ್ಲದೆ, ಮತ್ತೋರ್ವನಿಗೆ ಎಚ್ಚರ ತಪ್ಪಿಸಿ, ಅವರ ಬಳಿಯಿದ್ದ 1.6 ಲಕ್ಷ ರೂ.ಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಇಂದು ಬೆಳಿಗ್ಗೆ ಲಕ್ಕಿನಕೊಪ್ಪದಲ್ಲಿ ನಡೆದಿದೆ.ಹೈದರಾಬಾದ್ ಮೂಲದ ಎಸ್.ಕೆ.ಎಸ್ ಸ್ವಸಹಾಯ ಸಂಘದ ಏಜೆಂಟರಾದ