ಸೂರ್ಯಾಸ್ತವಾಗುತ್ತಿತ್ತು. ಸಂಜೆ, 6.30ಯ ಸಮಯ. ಕೈಕಾಲು ಮುಖ ತೊಳೆದು, ಟ್ರಿಮ್ ಆಗಿ ಡ್ರೆಸ್ ಮಾಡಿಕೊಂಡು ಅವಳ ಮನೆಗೆ ಹೊರಟೆ. ನನ್ನ ಹತ್ರ ಆ ದೂದ್ವಾಲಾ ಟೈಪ್ ಹ್ಯಾಂಡಲ್ ಇರುವ ಅಟ್ಲಸ್ ಸೈಕಲ್ ಇತ್ತು. ಅದನ್ನು ತೆಗೆದುಕೊಂಡು ಹೋಗೋಕೆ ಇಷ್ಟವಾಗಲಿಲ್ಲ. ನಡೆದುಕೊಂಡೆ ಹೋದೆ. ಅವಳಿಗಿನ್ನು ಕಾಲೇಜ್ ಶುರುವಾಗಿರಲಿಲ್ಲ. ನನಗೆ ಶುರುವಾಗಿ 15 ದಿವಸಗಳಾಗಿದ್ದವು. ಅವಳಿಗೇನೋ ಕಾಲೇಜ್ ಬಗ್ಗೆ ತಿಳಿದುಕೊಳ್ಳಬೇಕಿತ್ತಂತೆ.
ಎಆರ್ ಮಣಿಕಾಂತ ಅವರ 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಸಾಕಷ್ಟು ಚರ್ಚಿತವಾಗಿದೆ, ಮಾರಾಟದಲ್ಲಿ ದಾಖಲೆಯನ್ನೂ ಸೃಷ್ಟಿಸಿದೆ. ಪ್ರತಿಬಾರಿ ಓದಿದಾಗಲೂ ಹೊಸತೊಂದು ಅನುಭವದ ಪರಿಚಯ ಮಾಡಿಕೊಡುತ್ತದೆ. ಅವು ಸಕಾರಾತ್ಮಕವಾಗಿ ನಮ್ಮ ಮೇಲೆ ಪ್ರಭಾವ ಬೀರುತ್ತವೆ, ಹೊಸ ಬೆಳಕು ಚೆಲ್ಲುತ್ತವೆ, ನಮ್ಮ ತಪ್ಪು ನಿರ್ಧಾರಗಳನ್ನು ಬದಲಿಸಲು ಸಹಕರಿಸುತ್ತವೆ. ನಮ್ಮ ಮನ ಮುಟ್ಟುತ್ತವೆ, ಬೆನ್ನು ತಟ್ಟುತ್ತವೆ, ಹೃದಯ ಮಿಡಿಯುತ್ತವೆ.* ಡಾ| 'ಜೀವಿ'
ತಾಳಿ ಕಟ್ಟಿದವನೊಂದಿಗೆ ಹಾಗೂ ಹೀಗೂ ಬಡಿದಾಡಿಕೊಂಡು ಸಾಯಬಹುದು ಆದರೆ, ನೀವು ಏನೇ ಹೇಳಿ, ತಾಳಿ ಕಿತ್ತಿ ಆಚೆಬಂದವರು ಸಮಾಜದೊಂದಿಗೆ ಬಡಿದಾಡಿಕೊಂಡು ಬದುಕುವುದು ಕಷ್ಟಕ್ಕಿಂತ ಕಷ್ಟ. ವಿಚ್ಛೇದನೆಗೊಂಡಿದ್ದರೂ ಸ್ವಾಭಿಮಾನದಿಂದ ಜೀವನ ಸಾಗಿಸುತ್ತಿದ್ದ ಸಂಭ್ರಮಳಿಗೆ ಆ ಒಂದು ಕ್ಷಣವಂತೂ ತೀರ ಕ್ರೂರವೆನಿಸಿರಬೇಕು. ನಾನು ನನ್ನಿಷ್ಟ ಎಂಬ ಮಂತ್ರ ಜಪಿಸಿಕೊಂಡು, ಕುಂಟು ನೆಪ ಹೇಳಿ ಒಂದು ದಿನ ಮನೆ ಬಿಟ್ಟ ಅವಳು
ಶಿವಮೊಗ್ಗ, ಸೆ. 21 : ಜನಹಿತ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆ (ರಿ), ಪ್ರೆಸ್ ಪಬ್ಲಿಸಿಟಿ ಹಾಗೂ ವಿವಿಧ ಕನ್ನಡ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನವೆಂಬರ್ ತಿಂಗಳಿನಲ್ಲಿ ಕನ್ನಡದ ಹಬ್ಬ ವಿಶೇಷ ಕಾರ್ಯಕ್ರಮಗಳನ್ನು ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಕನ್ನಡದ ಹಬ್ಬದ ವಿಶೇಷ ನೆನಪಿಗಾಗಿ ಸಾಹಿತ್ಯದ ವಿವಿಧ ಪ್ರಾಕಾರಗಳಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಯಿತು.ಕವನ ಸಂಕಲನ, ಕಥಾ
ಶನಿವಾರ ಸಂಜೆ. ತನುಗೂಚಿ ಹಲ್ಲು ಕಡಿಯುತ್ತಲೇ ಕಂಪ್ಯೂಟರ್ ಸ್ಕ್ರೀನಿನತ್ತ ಒಮ್ಮೆ, ಸೆನ್ಸೆಯತ್ತ ಒಮ್ಮೆ ನೋಡುತ್ತಿದ್ದ. ಆಗಲೇ ಐದೂವರೆ ಹತ್ತಿರ, ಇನ್ನೂ ಸೆನ್ಸೆ (ಗುರು ಫ್ಯೂಜಿಸಾವ) ಅಲ್ಲೇ ಕೂತಿದ್ದಾರೆ, ಮನೆಗೆ ಹೋಗಿಲ್ಲ. ಆರು ಗಂಟೆಗೆ ಗೆಳತಿ ಯೂಕೋ ಜೊತೆ ಸಿನೀಮಾಕ್ಕೆ ಹೋಗುವ ಕಾರ್ಯಕ್ರಮ. ಶನಿವಾರ ಸೆನ್ಸೆ ಲ್ಯಾಬಿಗೆ ಬರುವುದು ಅಪರೂಪ. ಸೋಮವಾರ ಯಾವುದೋ ಕಾನ್ಫೆರೆನ್ಸಿಗೆ ಪೇಪರ್ ಕಳುಹಿಸಬೇಕು. ಅದಕ್ಕಾಗಿ
ಹೊಕ್ಕಳಬಳ್ಳಿ ಛಳಕ್ಕೆಂದೊಡನೆ ಮನಸ್ಸಿನ ಸ್ಥಿಮಿತ ಕಳೆದುಕೊಂಡು ಮಠಾಧಿಪತಿಯನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದ ಆತನ ಬಗ್ಗೆ ಸ್ವಾಮೀಜಿ ಎಳ್ಳಷ್ಟೂ ಕೋಪಗೊಳ್ಳದಿದ್ದುದು ಸ್ವಾಮೀಜಿ ಬೆಂಬಲಿಗರಿಗೆ ಬಿಸಿ ತುಪ್ಪದಂತಾಗಿತ್ತು. ಅಷ್ಟಕ್ಕೂ ತನಗರಿವಿಲ್ಲದಂತೆ ಆತ ಅನ್ನುತ್ತಿದ್ದಾದರೂ ಏನು? ಆತ ಹೇಳುತ್ತಿದ್ದುದು ತಪ್ಪಾ, ಸರಿಯಾ? ಸ್ವಾಮೀಜಿ ಇದಕ್ಕೆ ಕಂಡುಕೊಂಡ ಪರಿಹಾರವಾದರೂ ಎಂಥದು?* ಆರ್.ಶರ್ಮಾ, ತಲವಾಟಅವನಿಗೆ ಮತ್ತೆ ವಿಚಿತ್ರ ಅನುಭವವಾಗತೊಡಗಿತು. ಹೊಟ್ಟೆಯೊಳಗಿನಿಂದ ಯೋಚನೆಗಳು ಭುಗಿಲೇಳುತ್ತಿದ್ದವು. ಅವುಗಳನ್ನು
(ಕಥೆ ಮುಂದುವರಿದಿದೆ)ಅವನಿಗೆ ಕುಳಿತಲ್ಲಿ ನಿಂತಲ್ಲಿ ನಿಯಂತ್ರಣ ಮೀರಿದ ತನ್ನ ವರ್ತನೆಯ ಭಯ ಆವರಿಸತೊಡಗಿತು. ಸ್ವಾಮೀಜಿಯ ಬಳಿ ಕ್ಷಮಾಪಣೆ ಕೇಳಲು ಅವನು ಸಿದ್ಧನಿದ್ದ. ಆದರೆ ಸ್ವಾಮೀಜಿಯ ಪರಿವಾರ ಇವನನ್ನು ಮಠದ ಆವರಣ ಪ್ರವೇಶಕ್ಕೆ ಅವಕಾಶ ಕೊಡಲಿಲ್ಲ. ಸ್ವಾಮೀಜಿ ದರ್ಶನಕ್ಕೆ ಪೂರ್ಣ ಪ್ರಮಾಣದ ಮನಸ್ಸಿನಿಂದ ಆತನಿಗೆ ಹೋಗಲು ಧೈರ್ಯವಿರಲಿಲ್ಲ. ಮತ್ತೆ ಮೊದಲಿನಂತೆ ಆದರೆ ಎಂಬ ಹೆದರಿಕೆ. ಮನೋವೈದ್ಯರ ಭೇಟಿ ಮಾಡುವುದೇ
(ಕಥೆ ಮುಂದುವರಿದಿದೆ)ಸ್ವಾಮೀಜಿಗಳನ್ನು ಮಂತ್ರಘೋಷಗಳ ಜತೆಗೆ ಪೂರ್ಣಕುಂಭದೊಂದಿಗೆ ಊರಿಗೆ ಸ್ವಾಗತಿಸಲಾಯಿತು. ಸ್ವಾಮೀಜಿ ಪೀಠವನ್ನು ಅಲಂಕರಿಸಿದರು. ಅವನು ತನ್ನ ಕುಟುಂಬದೊಂದಿಗೆ ಒಂದು ಕಡೆ ಹತಾಶನಾಗಿ ಕುಳಿತಿದ್ದ. ನೂರಾರು ಜನರು ಸೇರಿದ್ದರು. ಗುರುಪೀಠವನ್ನು ವಿರೋಧಿಸುವ ಗುಂಪು ಕೂಡ ಈ ವಿಷಯದಲ್ಲಿ ರಾಜಿಯಾದಂತೆ ಅಲ್ಲಿ ಸೇರಿದ್ದರು. ನಾಸ್ತಿಕರಿಗೂ ಕುತೂಹಲ ಹಾಗಾಗಿ ಅವರೂ ಅಂಗಿ ಬಿಚ್ಚಿ ಶಲ್ಯ ಹೊದ್ದು ಬಂದಿದ್ದರು. ಮಠಕ್ಕೆ ದೇಣಿಗೆ
(ಕಥೆ ಮುಂದುವರಿದಿದೆ)ಸ್ವಾಮೀಜಿಗಳನ್ನು ಮಂತ್ರಘೋಷಗಳ ಜತೆಗೆ ಪೂರ್ಣಕುಂಭದೊಂದಿಗೆ ಊರಿಗೆ ಸ್ವಾಗತಿಸಲಾಯಿತು. ಸ್ವಾಮೀಜಿ ಪೀಠವನ್ನು ಅಲಂಕರಿಸಿದರು. ಅವನು ತನ್ನ ಕುಟುಂಬದೊಂದಿಗೆ ಒಂದು ಕಡೆ ಹತಾಶನಾಗಿ ಕುಳಿತಿದ್ದ. ನೂರಾರು ಜನರು ಸೇರಿದ್ದರು. ಗುರುಪೀಠವನ್ನು ವಿರೋಧಿಸುವ ಗುಂಪು ಕೂಡ ಈ ವಿಷಯದಲ್ಲಿ ರಾಜಿಯಾದಂತೆ ಅಲ್ಲಿ ಸೇರಿದ್ದರು. ನಾಸ್ತಿಕರಿಗೂ ಕುತೂಹಲ ಹಾಗಾಗಿ ಅವರೂ ಅಂಗಿ ಬಿಚ್ಚಿ ಶಲ್ಯ ಹೊದ್ದು ಬಂದಿದ್ದರು. ಮಠಕ್ಕೆ ದೇಣಿಗೆ
ರಾತ್ರಿಯ 10-30ರ ಸಮಯ ತಲೆಯ ಮೇಲೆ ಕೆಂಪು ದೀಪವನ್ನಿಟ್ಟು ಕೊಂಡು ಮಲ್ಯ ಆಸ್ಪತ್ರೆಯ ಅಂಬ್ಯುಲೆನ್ಸ್ ಪುಣೆ ಹೈವೆಯಲ್ಲಿ ಚಿತ್ರದುರ್ಗ ಮಾರ್ಗವಾಗಿ ಹೋಗುತ್ತಿತ್ತು. ಡ್ರೈವರ್ ಆನಂದ ಸತತವಾಗಿ ಅಳುತ್ತಿದ್ದ ಸಂತೂವನ್ನು ಸಮಾಧಾನಪಡಿಸಲು ಹೆಣಗಾಡಿ ಸೋತಿದ್ದ. ಪಿತೃವಿಯೋಗ ಎಂದರೆ ಕೆಲವರಿಗೆ ಹಾಗೆಯೇ ಒಂದು ದಿನದಲ್ಲಿ ಅತ್ತೂ ಕರೆದು ಖಾಲಿ ಆಗುವುದಲ್ಲ. ಅದರಲ್ಲಿಯೂ ಸಂತೂ ಉರೂಫ್ ಸಂತೋಷನಿಗೆ ಸ್ವಪ್ನದಲ್ಲಿಯೂ ತಂದೆಯನ್ನ ಬಿಟ್ಟು