ಬೆಂಗಳೂರು, ಅ. 13 : ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ದೇಶದ ಯುವಕರ ಕಣ್ಮಣಿ. ಅವರ ದೂರದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಕಳೆದ ಲೋಕಸಭೆ ಚುನಾವಣೆ ಅಭೂತಪೂರ್ವ ಜಯಗಳಿಸಿತು. ಮುಂದೆಂದೂ ದಿನ ರಾಹುಲ್ ಗಾಂಧಿ ದೇಶದ ಪ್ರಧಾನಮಂತ್ರಿಯಾಗಲಿದ್ದಾರೆ. ಇದು ನನ್ನ ವೈಯಕ್ತಿಕ ಆಸೆಯೂ ಹೌದು. ಪಕ್ಷದ ಅಭಿಲಾಷೆಯೂ ಹೌದು ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್
ನವದೆಹಲಿ, ಸೆ. 2 : ಆರ್ಎಸ್ಎಸ್ ಸರಸಂಘ ಸಂಚಾಲಕ ಮೋಹನ್ ಭಾಗವತ್ ಬಿಜೆಪಿಯ ಆಂತರಿಕ ವಿಷಯದಲ್ಲಿ ಸಂಘ ತಲೆ ಹಾಕುವುದಿಲ್ಲ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ಆರ್ಎಸ್ ಎಸ್ ಪ್ರಮುಖ ಸದಸ್ಯರೊಬ್ಬರು ಅಡ್ವಾಣಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಲೇಖನವೊಂದು ಸಂಘದ ಮುಖವಾಣಿ ಪಾಂಚಜನ್ಯದಲ್ಲಿ ಪ್ರಕಟವಾಗಿದೆ. ಸಂಘಟನೆಯ ಮುಖವಾಣಿ 'ಪಾಂಚಜನ್ಯ' ದಲ್ಲಿನ ಲೇಖನವೊಂದರಲ್ಲಿ ಹಿರಿಯ ಮುಖಂಡ ದೇವೇಂದ್ರ
ಬೆಂಗಳೂರು, ಜು. 14 : ಅನಾರೋಗ್ಯದಿಂದ ಬಳಲುತ್ತಿದ್ದ ಚಿತ್ರದುರ್ಗದ ಲೋಕಸಭಾ ಸದಸ್ಯ ಜನಾರ್ಧನಸ್ವಾಮಿಯವರ ತಂದೆ ಡಿ. ವೆಂಕಟಪ್ಪ (89) ಅವರು ಸೋಮವಾರ ನಿಧನರಾದರು. ವೆಂಕಟಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.ಚಿತ್ರದುರ್ಗ ಜಿಲ್ಲೆಯ ಕಳ್ಳಹಟ್ಟಿಯವರಾದ ವೆಂಕಟಪ್ಪನವರು ವೃತ್ತಿಯಿಂದ ಶಿಕ್ಷಕರಾಗಿದ್ದರು. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ಅವರ ಕುಟುಂಬ
ಹಿರಿಯ ಚಿತ್ರನಟ ಮತ್ತು ಕಾಂಗ್ರೆಸ್ ನಾಯಕ ಅಂಬರೀಷ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದ್ದಕ್ಕೆ ಕ್ಷಮೆ ಕೋರದಿದ್ದರೆ ಬಿಜೆಪಿ ನಾಯಕ ಜಗ್ಗೇಶ್ ಅವರ ಹೊಸಚಿತ್ರ 'ಎದ್ದೇಳು ಮಂಜುನಾಥ' ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘ ಎಚ್ಚರಿಕೆ ನೀಡಿದೆ. 'ಎದ್ದೇಳು ಮಂಜುನಾಥ' ಚಿತ್ರ ಜುಲೈ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಬೆಂಗಳೂರು ಸೇರಿದಂತೆ ರಾಜ್ಯದ ಯಾವ
ನವದೆಹಲಿ, ಜು. 8 : ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ನಂತರ ಪಕ್ಷದಲ್ಲಿ ಆಳಿಗೊಬ್ಬರಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪ್ರಕರಣಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರು, ಪಕ್ಷದಲ್ಲಿ ನೂರೆಂಟು ವಕ್ತಾರರಿದ್ದಾರೆ ಎಂದು ತಮ್ಮ ಆಕ್ರೋಶವನ್ನು ಬಹಿರಂಗಪಡಿಸಿದ್ದರು. ಅದರ ಜೊತೆಗೆ ಬಿಜೆಪಿ ನಾಯಕರ ಹಾಗೂ ಸಂಸದರು ಹೇಗೆ ವರ್ತಿಸಬೇಕು ಸಲಹೆ ಸೂಚನೆಗಳನ್ನು
ಬಳ್ಳಾರಿ, ಜು. 3 : ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮತಿಭ್ರಮಣೆಯಾಗಿದೆ. ಮುಖ್ಯಮಂತ್ರಿಯಂತೆ ಅವರು ವರ್ತಿಸುತ್ತಿದ್ದಾರೆ. ಕೂಡಲೇ ಅವರು ವರ್ತನೆ ಸರಿಪಡಿಸಿಕೊಳ್ಳುವುದು ಲೇಸು ಎಂದು ಪ್ರವಾಸೋದ್ಯಮ ಸಚಿವ ಜನಾರ್ದನರೆಡ್ಡಿ ಕಿಡಿಕಾರಿದ್ದಾರೆ. ಇತ್ತೀಚೆಗೆ ಸಿದ್ದರಾಮಯ್ಯ ಅವರು ಬಳ್ಳಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೆಡ್ಡಿಗಳ ವಿರುದ್ಧ ತೀವ್ರ ಆಕ್ರೋಶಪಡಿಸಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಡಿಮೆ ಅಂತರದಲ್ಲಿ ಜಯಗಳಿಸಿದೆ. ಅದರಲ್ಲಿ
ವಿರಾಜಪೇಟೆ, ಡೂ. 24 : ಮತ್ತೊಮ್ಮೆ ಪಕ್ಷದ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳುವ ಇಚ್ಚೆ ತಮಗಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಹೇಳಿದ್ದಾರೆ. ವಿಶ್ರಾಂತಿಗಾಗಿ ಕೊಡಗಿಗೆ ಆಗಮಿಸಿರುವ ಅಡ್ವಾಣಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ತಾವು ಮತ್ತೊಮ್ಮೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಬಗ್ಗೆ ದಿಲ್ಲಿಯ ಮಾಧ್ಯಮಗಳ್ಳಿ ವರದಿ ಪ್ರಕಟವಾಗಿದೆ.
ನವದೆಹಲಿ, ಜೂ. 17 : ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ವೈಯಕ್ತಿಕ ಟೀಕೆಗಳನ್ನು ಮಾಡಿ ಹಾವು ಮುಂಗುಸುಗಳಂತೆ ಕಚ್ಚಾಡಿದ್ದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಪರಸ್ಪರ ಕ್ಷಮೆ ಯಾಚಿಸಿಕೊಂಡಿದ್ದಾರೆ. ಚುನಾವಣೆ ಸಮಯದಲ್ಲಿ ನಡೆದಿರುವ ಕಹಿ ಘಟನೆಗಳನ್ನು ಮರೆತು ಬಿಡಿ ಎಂದು ಉಭಯ ನಾಯಕ ರಾಜೀ ಸಂಧಾನ ಮಾಡಿಕೊಂಡಿದ್ದಾರೆ. ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ
ನವದೆಹಲಿ, ಜೂ. 16 : ಲೋಕಸಭೆ ಚುನಾವಣೆ ರಣತಂತ್ರ ರೂಪಿಸಿದ್ದ ಬಿಜೆಪಿ ಹಿರಿಯ ಮುಖಂಡ ಅರುಣ್ ಜೈಟ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಅತೀ ಶಿಸ್ತಿನ ಪಕ್ಷವೆಂದು ತನ್ನು ಬೆನ್ನು ತಟ್ಟಿಕೊಳ್ಳುವ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳ ಹೊಗೆಯಾಡುತ್ತಿದ್ದ ಪಕ್ಷದಲ್ಲಿ ಅಸಮಾಧಾನದ ರೌದ್ರಾವತಾರ ತಾಳಿದೆ.ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಬಿಜೆಪಿಯಲ್ಲಿ
ಶಿವಮೊಗ್ಗ, ಜೂ. 15 : ಇನ್ನು ಮೇಲೆ ನಾನು ಚಳವಳಿಗಳನ್ನು ಮಾಡುವುದಿಲ್ಲ. ಜನರಿಗೆ ಚಳವಳಿ ಮಾಡಬೇಕು ಅಂತ ಅನ್ನಿಸಿದರೆ ಮೊದಲು ಅವರೇ ಚಳವಳಿ ಮಾಡಲಿ. ನಾನು ಸೋತಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಥವಾ ಅವರ ಮಗನ ವಿರುದ್ಧ ಅಲ್ಲ. ಹಣ, ಹೆಂಡಕ್ಕೆ ನಾನು ಸೋಲುವಂತಾಯಿತು ಎಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಸೋಲಿಗೆ ಕಾರಣ ಕಂಡುಕೊಂಡಿದ್ದಾರೆ.ಭಾನುವಾರದಂದು ಸಂಜೆ ಇಲ್ಲಿನ ಪ್ರವಾಸಿ