ರಾಮನಗರ, ನ. 5 : ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ರವರ ಸ್ವಗ್ರಾಮ ರಾಮನಗರ ಜಿಲ್ಲೆ ದೊಡ್ಡಾಲಹಳ್ಳಿಯ ಕುಟುಂಬವೊಂದು ಸಾಲಬಾಧೆ ತಾಳಲಾರದೆ ಸಾಮೂಹಿಕ ಆತ್ಯಹತ್ಯೆಗೆ ಶರಣಾಗಿದೆ. ಕಳೆದೆರಡು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ದಂಪತಿ ಮತ್ತು ಮಕ್ಕಳು ನಿನ್ನೆ ರಾತ್ರಿ ಎಲ್ಲರೂ ಮೃತಪಟ್ಟಿದ್ದಾರೆ.ಮೃತರ ಅಂತ್ಯಕ್ರಿಯೆ ಇಂದು ದೊಡ್ಡಾಲಹಳ್ಳಿಯಲ್ಲಿ ನಡೆಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಯಿಂದ ವಾಪಸಾಗಿ ಅಂತ್ಯಕ್ರಿಯೆಯಲ್ಲಿ
ರಾಮನಗರ, ಅ. 25 : ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುದೂರು ಪೋಲೀಸ್ ಠಾಣಾ ವ್ಯಾಪ್ತಿಯ ತಾಳೆಕೆರೆ ಹ್ಯಾಂಡ್ಪೋಸ್ಟ್ ಬಳಿಯ ಚಿಕ್ಕಕಲ್ಯಾ ಕ್ರಾಸ್ ಬಳಿ ಅಪರಿಚಿತ ವಿವಾಹಿತ ಮಹಿಳೆಯ ಶವಪತ್ತೆಯಾಗಿದೆ.ಸುಮಾರು 5.2 ಅಡಿ ಎತ್ತರವಿರುವ ಮಹಿಳೆಯ ಬಲಗೈ ಮೇಲೆ ಹಿಂದಿಯಲ್ಲಿ ಓಂಕಾರದ ಹಚ್ಚೆ ಗುರುತಿದೆ. ಮಹಿಳೆಯ ಕೈ ಮತ್ತು ಕಾಲು ಮೇಲೆ ಹಾಕಿರುವ ಮೆಹಂದಿಯ ಗುರುತು ಕೂಡ
ಚನ್ನಪಟ್ಟಣ, ಅ. 5 : ತೆಂಗು ಬೆಳೆಗೆ ಸರ್ಕಾರ ಬೆಂಬಲಬೆಲೆ ನೀಡಬೇಕೆಂದು ಆಗ್ರಹಿಸಿ ತೆಂಗು ಬೆಳೆಗಾರರ ಹೋರಾಟ ಸಮಿತಿ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ರಸ್ತೆಯಲ್ಲಿ ತೆಂಗಿನಕಾಯಿ ಈಡುಗಾಯಿ ಒಡೆಯುವುದರ ಮೂಲಕ ಸೋಮವಾರ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಸಂದರ್ಭದಲ್ಲಿ ಕೆಲಕಾಲ ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.ತೆಂಗುಬೆಳೆಯನ್ನೇ ಪ್ರಧಾನ ಕೃಷಿಯನ್ನಾಗಿಸಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿರುವ ರೈತಾಪಿ
ಚನ್ನಪಟ್ಟಣ, ಸೆ. 30 : ಸರ್ಕಾರ ಸಾರಾಯಿ ನಿಷೇಧ ಮಾಡಿ ಯಾರಿಗೆ ಉಪಕಾರ ಮಾಡಿದೆಯೋ ಗೊತ್ತಿಲ್ಲ. ಆದರೆ ಬಾರ್, ವೈನ್ಸ್ಟೋರ್ ಮಾಲೀಕರಿಗೆ ಮಾತ್ರ ಡಬಲ್ ಧಮಾಕ ನೀಡಿ, ಅವರ ಖಜಾನೆಯನ್ನು ತುಂಬಿಸುವತ್ತ ಮಹತ್ವದ ಹೆಜ್ಜೆ ಹಾಕಿದೆ.ಇದು ಅಸಲಿ ಸತ್ಯ. ಬಡಕುಟುಂಬಗಳು ಸಾರಾಯಿಯಿಂದ ಅನುಭವಿಸುತ್ತಿದ್ದ ಕಷ್ಟಗಳನ್ನು ಹೋಗಲಾಡಿಸಲು ಸರ್ಕಾರ ಸಾರಾಯಿ ನಿಷೇಧ ಜಾರಿಗೆ ತಂದಿರುವುದು ಸಂತೋಷದ ವಿಚಾರವಾದರೂ,
ನಟಿ ರಾಧಿಕಾ ಮತ್ತೆ ಸುದ್ದಿಯಾಗಿದ್ದಾರೆ! ವೆಂಕಟೇಶ್ ಎಂಬ ಅಭಿಮಾನಿಯೊಬ್ಬ ರಾಧಿಕಾ ಹಿಂದೆ ಬಿದ್ದಿದ್ದಾನೆ. ವಿಶೇಷವೆಂದರೆ ಈತ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರತಿನಿಧಿಸುವ ರಾಮನಗರ ಮೂಲದವನು. ಆದರೆ ರಾಧಿಕಾ ಅವರಿಗೆ ಮಾತ್ರ ಈ ಅಭಿಮಾನಿಯ ಬಗ್ಗೆ ಎಳ್ಳಷ್ಟು ಗೊತ್ತಿಲ್ಲ. ಈತ ಮಾತ್ರ ಮೈಮೇಲೆಲ್ಲಾ ಹಚ್ಚೆ ಹಾಕಿಸಿಕೊಂಡು ರಾಧಿಕಾಗಾಗಿ ಅಲೆದಾಡುತ್ತಿದ್ದಾನೆ. ವೆಂಕಟೇಶನ ಅಭಿಮಾನವೋ, ಅತಿರೇಕವೋ ರಾಧಿಕಾ ಹೆಸರು
ರಾಮನಗರ, ಸೆ. 15 : ಎಚ್1ಎನ್1 ಸೋಂಕು ರಾಜ್ಯವ್ಯಾಪಿ ಹರಡಿ ಮರಣ ಮೃದಂಗ ಬಾರಿಸುತ್ತಿದೆ. ಸೋಂಕಿಗಿಂತ ರೋಗ ಕುರಿತ ಹೆದರಿಕೆಯೇ ಜನರನ್ನು ಮತ್ತಷ್ಟು ಹಣ್ಣುನೀರು ಮಾಡಿದೆ. ಸೋಂಕಿನಿಂದ ಜನ ಬಲಿಯಾಗುತ್ತಿರುವುದು ಒಂದೆಡೆಯಾದರೆ ಈ ರೋಗವನ್ನು ಹಂದಿಜ್ವರ ಎಂದು ಹೆಸರಿರುವುದರಿಂದ ಹಂದಿ(ವರಾಹ) ಉದ್ಯಮಕ್ಕೆ ಬೇಡಿಕೆ ಇಲ್ಲದೇ ಬಾರೀ ಹೊಡೆತ ಬಿದ್ದಿದೆ.ಎಚ್1ಎನ್1 ರೋಗಕ್ಕೂ ಹಂದಿಗೂ ಯಾವ ಸಂಬಂಧವಿಲ್ಲದಿದ್ದರೂ ಜನರಿಗೆ ತಿಳಿವಳಿಕೆ
ಚನ್ನಪಟ್ಟಣ, ಸೆ. 7 : ಅವಾಗಾವಾಗ ಮಳೆಯಾಗುತ್ತಲೇ ಇದೆ, ಆದರೆ ಕೆರೆಗಳಲ್ಲಿ ಮಾತ್ರ ನೀರು ಸಂಗ್ರಹಣೆಯಾಗಿಲ್ಲ. ಮಳೆ ಬೀಳುವುದನ್ನು ನೋಡಿ ರೈತ ಸಮುದಾಯ ಸಂತಸದಿಂದಲೇ ಇದೆ. ಆದರೂ ಭವಿಷ್ಯದ ಬೆಳೆಯ ಬಗ್ಗೆ ಚಿಂತಾಕ್ರಾಂತವಾಗಿದೆ. ಇದು ತಾಲೂಕಿನ ಸಧ್ಯದ ಸ್ಥಿತಿ.ಕಳೆದ ಐದಾರು ವರ್ಷಗಳಿಂದ ಅತ್ತ ಬರವೂ ಅಲ್ಲದೆ, ಇತ್ತ ಮಳೆಯೂ ಇಲ್ಲದೆ ತ್ರಿಶಂಕು ಸ್ಥಿತಿಯಲ್ಲಿ ಕಾಲ ದೂಡುತ್ತಿರುವ ತಾಲೂಕಿನ
ಚನ್ನಪಟ್ಟಣ, ಆ. 24 : ಚನ್ನಪಟ್ಟಣದ ಮರು ಚುನಾವಣೆಯಲ್ಲಿ ಪರಾಭಗೊಂಡ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಸಿ.ಪಿ. ಯೋಗೀಶ್ವರ್ ನಿವಾಸಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವರುಗಳಾದ ಕಟ್ಟಾ ಸುಬ್ರಮಣ್ಯ ನಾಯ್ಡು, ಹರತಾಳು ಹಾಲಪ್ಪ ಭಾನುವಾರ ಭೇಟಿ ನೀಡಿ ಶಾತ್ವನ ಹೇಳಿದರು.ಮಳೆ ನೀರು ನಂಬಿ ಗಡಿಗೆಯಲ್ಲಿದ್ದ ನೀರು ಚಲ್ಲಿದ ಎಂಬಂತೆ ಯೋಗೀಶ್ವರ್ ಕಾಂಗ್ರೆಸ್ ತೊರೆದು 'ಆಪರೇಷನ್
ರಾಮನಗರ, ಆ. 22 : ಬ್ರಿಟೀಷರ ಕಾಲದಲ್ಲಿ ಕ್ಲೋಸ್ಪೇಟೆಯಾಗಿದ್ದ ರಾಮನಗರ ಬ್ರಿಟೀಷರ ವಾಣಿಜ್ಯ ಕೇಂದ್ರವಾಗಿದ್ದ ಇತಿಹಾಸವಿದೆ. ರೇಷ್ಮೆನಗರಿ ಎಂಬ ಖ್ಯಾತಿಯಿರುವ ರಾಮನಗರವನ್ನ ಎಚ್.ಡಿ.ಕುಮಾರಸ್ವಾಮಿಯವರ ಆಡಳಿತಾವಧಿಯಲ್ಲಿ ಜಿಲ್ಲಾ ಕೇಂದ್ರವನ್ನಾಗಿ ಮಾಡಿ ನಾಳೆ ಆಗಸ್ಟ್ 23ಕ್ಕೆ ಎರಡು ವರ್ಷವಾಗಲಿದೆ.ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿದಾಗಿನಿಂದ ಇಂದಿನವರೆಗೂ ಕ್ಷೇತ್ರದಲ್ಲಿ ನಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರಂಭಿಸಿದ್ದ
ಬೆಂಗಳೂರು, ಆ.21: ರಾಜ್ಯದ ಐದು ವಿಧಾನಸಭೆ ಕ್ಷೇತ್ರಗಳಾದ ಚಿತ್ತಾಪುರ, ಗೋವಿಂದರಾಜನಗರ, ಕೊಳ್ಳೇಗಾಲ, ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ಆಗಸ್ಟ್ 18 ರಂದು ಮತದಾನ ನಡೆದಿತ್ತು. ಈ ಐದು ಕ್ಷೇತ್ರಗಳಲ್ಲಿ ಗೆದ್ದ, ಸೋತ ಅಭ್ಯರ್ಥಿಗಳು ಹಾಗೂಗೆಲುವಿನ ಅಂತರದ ವಿವರ ಕೆಳಗಿನಂತಿದೆ. ಕ್ಷೇತ್ರ