ಸಾಯಿಪ್ರಕಾಶ್ ನಿರ್ಮಾಣ, ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ದೇವರು ಕೊಟ್ಟ ತಂಗಿ' ಚಿತ್ರದ ಚಿತ್ರೀಕರಣೇತರ ಚಟುವಟಿಕೆಗಳೆಲ್ಲಾ ಯಶಸ್ವಿಯಾಗಿ ಸಂಪೂರ್ಣಗೊಂಡಿದ್ದು, ಇದೀಗ ಚಿತ್ರದ ಪ್ರಥಮ ಪ್ರತಿ ಕೂಡ ಹೊರಬಂದಿದೆ. ಕಳೆದ ತಿಂಗಳು ಬಿಡುಗಡೆಯಾದ ಚಿತ್ರದ ಧ್ವನಿಸುರುಳಿಗಳು ರಾಜ್ಯಾದ್ಯಂತ ಭರ್ಜರಿ ಮಾರಾಟ ಕಂಡು ಕ್ಯಾಸೆಟ್ ಕಂಪೆನಿಗೆ ಈಗಾಗಲೇ ಲಾಭ ತಂದುಕೊಟ್ಟಿವೆ. ನಾಯಕನಾಗಿ ಶಿವರಾಜ್ಕುಮಾರ್, ತಂಗಿಯಾಗಿ ಮಲಯಾಳಂ ನಟಿ ಮೀರಾ ಜಾಸ್ಮಿನ್ ಹಾಗೂ ನಾಯಕಿಯಾಗಿ
ಕನ್ನಡ ಚಿತ್ರನಟಿ ರಾಧಿಕಾ ಮಾಡಿದ ನಾಗಮಂಡಲ ಪೂಜೆ ಫಲ ಕೊಟ್ಟಿದೆ. ಆಕೆ ಈಗ ತಾಯಿಯಾಗಲು ಸಿದ್ಧರಾಗಿದ್ದಾರೆ. ಬೆಂಗಳೂರಿನ ಸುಸಜ್ಜಿತ ಹೆರಿಗೆ ಆಸ್ಪತ್ರೆಗಳಲ್ಲಿ ಒಂದಾದ ಜಯನಗರದ ಕ್ರೆಡಲ್ ನಲ್ಲಿ ಸುಸೂತ್ರ ಹೆರಿಗಾಗಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಆಸ್ಪತ್ರೆಯಲ್ಲಿ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ರ ಹೆಂಡತಿ ರೇಣುಕಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದನ್ನು ಸ್ಮರಿಸಬಹುದು.
ಅಣ್ಣ ಶಿವರಾಜಕುಮಾರ್ ಬಂದಿರಲಿಲ್ಲ. ತಂಗಿ ಮೀರಾ ಜಾಸ್ಮಿನ್ ಹಾಜರಿರುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ. ದೇವರು ಕೊಟ್ಟ ತಂಗಿ ಚಿತ್ರದ ಬಗ್ಗೆ ಮಾತನಾಡಲಿಕ್ಕೆ ಪತ್ರಕರ್ತರ ಎದುರು ಒಂಟಿಯಾಗಿ ಕೂತಿದ್ದ ಸಾಯಿಪ್ರಕಾಶ್ ಮುಖದಲ್ಲಿ ಚಿಂತೆಯ ಗೆರೆಗಳಿದ್ದವು. ಸಾಯಿ ಅವರ ಚಿಂತೆಗೆ ಕಾರಣವಾಗಿದ್ದುದು ಶಿವಣ್ಣ ಅಥವಾ ಮೀರಾಳ ಗೈರುಹಾಜರಿಯಲ್ಲ. ಈಚಿನ ದಿನಗಳಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎನ್ನುವುದು ಅವರ ಚಿಂತೆಗೆ ಕಾರಣ. ತಂಗಿ
ವಿವಾದಾತ್ಮಕ ಚಿತ್ರಗಳ ಸಾಲಿಗೆ ಮತ್ತೊಂದು ಕನ್ನಡ ಚಿತ್ರ 'ದೇವನಹಳ್ಳಿ' ಹೊಸದಾಗಿ ಸೇರ್ಪಡೆಯಾಗಿದೆ. ಈ ಚಿತ್ರದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಅವರ ಮಗ ಕುಮಾರಸ್ವಾಮಿ ಮತ್ತು ನಟಿ ರಾಧಿಕಾ ಮೇಲೆ ತೀಕ್ಷ್ಣ ವಿಡಂಬನೆಯ ಹಾಡೊಂದನ್ನು ರಚಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧ ಪಟ್ಟ ವಿವಾದಾತ್ಮಕ ಅಂಶಗಳನ್ನು ಈ ಚಿತ್ರ ಸ್ಪರ್ಶಿಸಿದೆ.
ತಂಗಿ ಸೆಂಟಿಮೆಂಟ್ ಚಿತ್ರಗಳನ್ನು ನಿರ್ದೇಶಿಸುವಲ್ಲಿ ಓಂ ಸಾಯಿಪ್ರಕಾಶ್ ಅವರದೇ ಮೊದಲ ಸ್ಥಾನ. ಈ ಹಿಂದೆ ಶಿವರಾಜ್ಕುಮಾರ್ ಜತೆಯಲ್ಲಿ 'ತವರಿಗೆ ಬಾ ತಂಗಿ', 'ಅಣ್ಣ-ತಂಗಿ'ಯಂಥ ಯಶಸ್ವಿ ಚಿತ್ರಗಳನ್ನು ಕೊಟ್ಟ ಸಾಯಿಪ್ರಕಾಶ್ ಇದೀಗ ತಾವೇ ನಿರ್ಮಾಪಕರಾಗಿ ನಿರ್ದೇಶಿಸುತ್ತಿರುವ 'ದೇವರು ಕೊಟ್ಟ ತಂಗಿ' ಚಿತ್ರದಲ್ಲಿ ಶಿವರಾಜ್ಕುಮಾರ್ ತಂಗಿಯಾಗಿ ರಾಧಿಕಾ ಬದಲು ಮೀರಾ ಜಾಸ್ಮಿನ್ ಅಭಿನಯಿಸುತ್ತಿದ್ದಾರೆ. ಇದೂ ಕೂಡ ಸಂಪೂರ್ಣ ಗ್ರಾಮೀಣ ಕಥೆಯಾಗಿದ್ದು,
ತಂಗಿ ಸೆಂಟಿಮೆಂಟ್ ಚಿತ್ರಗಳನ್ನು ಕೊಟ್ಟ ಸಾಯಿಪ್ರಕಾಶ್ ಇದೀಗ ತಾವೇ ನಿರ್ಮಾಪಕರಾಗಿ ನಿರ್ದೇಶಿಸುತ್ತಿರುವ ' ದೇವರು ಕೊಟ್ಟ ತಂಗಿ' ಚಿತ್ರದಲ್ಲಿ ಶಿವರಾಜ್ ಕುಮಾರ್ ತಂಗಿಯಾಗಿ ಮೀರಾ ಜಾಸ್ಮಿನ್ ಅಭಿನಯಿಸುತ್ತಿದ್ದಾರೆ. ಇದು ಕೂಡ ಸಂಪೂರ್ಣ ಗ್ರಾಮೀಣ ಕಥೆಯಾಗಿದ್ದು ಸಂಭಾಷಣೆಗಳನ್ನು ಬಿ ಎ ಮಧು ಅವರು ಬರೆದಿದ್ದಾರೆ.ಕಳೆದ ತಿಂಗಳು ಆರಂಭವಾದ ಶೂಟಿಂಗ್ ಘಾಟಿ ಸುಬ್ರಮಣ್ಯ, ಶಿಂಶಾ ಜಲಪಾತ, ಅಲ್ಲದೆ ಚನ್ನಪಟ್ಟಣ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಹೊಸ ತಂಗಿ ಸಿಕ್ಕಿದ್ದಾರೆ. ತೆರೆಯ ಮೇಲೆ ಶಿವಣ್ಣನ ತಂಗಿಯಾಗಿ ನಟಿಸುತ್ತಿದ್ದ ರಾಧಿಕಾ ಚಿತ್ರರಂಗ ತೊರೆದ ಮೇಲೆ ಆ ಜಾಗ ಖಾಲಿಯಾಗಿತ್ತು. ಈಗ ಆಗ ಜಾಗಕ್ಕೆ ಮೀರಾ ಜಾಸ್ಮಿನ್ ಆಗಮಿಸಿದ್ದಾರೆ. ಓಂ ಸಾಯಿ ಪ್ರಕಾಶ್ ನಿರ್ಮಿಸಿ, ನಿರ್ದೇಶಿಸುತ್ತಿರುವ 'ದೇವರು ಕೊಟ್ಟ ತಂಗಿ' ಚಿತ್ರಕತೆಯನ್ನು ಶಿವಣ್ಣ ಆಖೈರುಗೊಳಿಸಿದ್ದಾರೆ.ಮಗಳು ನಿವೇದಿತಾ ಪರೀಕ್ಷೆಗೆ ಕೂತಿರುವ
ದಟ್ಸ್ ಕನ್ನಡ ಬ್ರೌಸ್ ಮಾಡುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬೇಸಿಗೆ ಶುಭಾಶಯಗಳು. ಅನೇಕರಿಗೆ ಈಗ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಸಮಯ. ಪರೀಕ್ಷೆಯಲ್ಲಿ ಪಾಸಾಗಿ, ಸಾರಿ, Distintion ನಲ್ಲಿ ತೇರ್ಗಡೆಯಾಗಿ ವ್ಯಾಸಂಗ ಮುಂದುವರೆಸುವ ಆಲೋಚನೆ. ಪ್ರತಿಭೆ ಇದ್ದೂ, ಚೆನ್ನಾಗಿ ಅಂಕಗಳಿಸಿಯೂ, ಪ್ರೋತ್ಸಾಹದ ಕೊರತೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಅನೇಕರಿರುತ್ತಾರೆ. ಬುದ್ದಿವಂತ ವಿದ್ಯಾರ್ಥಿಗಳಿಗೆ ವ್ಯಾಸಂಗ ಮುಂದುವರಿಕೆಗೆ ಮಾರ್ಗವಿದ್ದೇ ಇರುತ್ತದೆ. ವಿದ್ಯಾರ್ಥಿ ಫೆಲೋಷಿಪ್ ಪಡೆಯುವುದರ
ಬೆಂಗಳೂರು, ಫೆ.1: ಬೆಳದಿಂಗಳಾಗಿ ಬಾ, ನವಶಕ್ತಿ ವೈಭವ ಮತ್ತು ಕುಸುಮ ಎಂಬ ಮೂರು ಚಿತ್ರಗಳು ಒಂದೇ ದಿನದಲ್ಲಿ ತೆರೆಕಾಣುತ್ತಿವೆ. ಕನ್ನಡ ಚಿತ್ರರಂಗದಲ್ಲಿ ಒಟ್ಟಿಗೆ ಆಗುತ್ತಿರುವ ಮೂರು ಪ್ರಸವಗಳನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕಾಗಿದೆ. ಎಂ.ಎಸ್.ರಮೇಶ್ ನಿರ್ದೇಶಿಸುತ್ತಿರುವ, ಬಿ.ವಿ.ಪ್ರಮೋದ್ ನಿರ್ಮಿಸುತ್ತಿರುವ ಚಿತ್ರದಲ್ಲಿ ವಿಜಯ ರಾಘವೇಂದ್ರ ಹಾಗೂ ರಮಣೆತೋ ಚೌಧರಿ ನಟಿಸುತ್ತಿದ್ದಾರೆ. ಯುವಕರು ತೆಗೆದುಕೊಳ್ಳುವ ಆತುರದ ನಿರ್ಧಾರಗಳನ್ನು ಹೇಗೆ
ರಮ್ಯಾ ಮೇಡಂಗೆ ನಮಸ್ಕಾರ. ಹುಟ್ಟುಹಬ್ಬದ ಸಂಭ್ರಮ(ನ.29)ದಲ್ಲಿರುವ ನಿಮಗೆ ಮೊದಲು ಶುಭಾಶಯಗಳು. ನೀವು ಚೆನ್ನಾಗಿರಬೇಕು.. ಇನ್ನಷ್ಟು ಚಿತ್ರಗಳಲ್ಲಿ ಅಭಿನಯಿಸಬೇಕು... ಇದು ನನ್ನೊಬ್ಬನ ಆಶಯ ಮಾತ್ರವಲ್ಲ. ನನ್ನಂಥ ಲಕ್ಷಾಂತರ ಕನ್ನಡ ಪ್ರೇಮಿಗಳ ಆಶಯ. ಜನ್ಮದಿನದ ಖುಷಿಯಲ್ಲಿರುವ ನಿಮಗೆ ಒಂದಷ್ಟು ಕಹಿಗುಳಿಗೆ ಸಹಾ ನೀಡುತ್ತಿದ್ದೇನೆ. ಕಹಿಗುಳಿಗೆಗಳು ಆರೋಗ್ಯಕ್ಕೆ ಹಿತಕರ ಅನ್ನೋದು ನಿಮಗೆ ಗೊತ್ತಿದೆ ಎನ್ನುವುದು ನನ್ನ ಭಾವನೆ. ಈ ಮಾತು ಕೇಳಿ