ಇದು ಭಾಗ್ಯದ ಬಳೆಗಾರ ಚಿತ್ರದ ವ್ಯಥೆಯ ಕಥೆ. ಶಿವರಾಜ್ಕುಮಾರ್ ಮೇಲಿನ ಪ್ರೀತಿಯಿಂದ ಚಿತ್ರಕ್ಕೆ ಸಂಭಾಷಣೆ ಬರೆಯಲು ಮಳವಳ್ಳಿ ಒಪ್ಪಿಕೊಂಡರು. ಸೆಟ್ಗೇ ಹೋಗಿ ಸಂಭಾಷಣೆ ತಿದ್ದುವ ಕೆಲಸವೂ ಸೇರಿದಂತೆ ಎರಡು ಲಕ್ಷ ರೂಪಾಯಿಗೆ ಮಾತುಕತೆಯಾಗಿತ್ತು. ಚಿತ್ರದಲ್ಲಿ ಸಾಯಿ ಒಂದು ಪಾತ್ರವನ್ನೂ ನಿರ್ವಹಿಸಿದ್ದರು. ಅದಕ್ಕೆ ಸಂಭಾವನೆಯೇನೂ ಇಲ್ಲ. ಆದರೆ, ಚಿತ್ರ ಮುಗಿದ ನಂತರವೂ ಅವರ ಸಂಭಾಷಣೆಗೆ ಬಾಕಿ ಸಂದಾಯವಾಗಲೇ ಇಲ್ಲ.
ಸಿಂಹಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ಕಶ್ಯಪ್ ಅವರು ನಿರ್ಮಿಸಿರುವ ‘ಭಾಗ್ಯದ ಬಳೆಗಾರ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಗ್ರಾಮೀಣ ಸೊಗಡಿನ ಸುಂದರ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರದ ನಾಯಕ ಶಿವರಾಜಕುಮಾರ್. ಬೆಡಗಿ ನವ್ಯಾ ನಾಯರ್ ‘ಭಾಗ್ಯದ ಬಳೆಗಾರ’ನ ನಾಯಕಿ. ಈ ಜೋಡಿಯೊಂದಿಗೆ ಆದಿ ಲೋಕೇಶ್, ಸುಧಾರಾಣಿ, ಅನು ಪ್ರಭಾಕರ್, ಸತ್ಯಜಿತ್, ಅಮೃತ, ಪದ್ಮಾವಾಸಂತಿ, ಸುಧಾ ಬೆಳವಾಡಿ,
ಇಂದು ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವ ಬಹಳಷ್ಟು ಚಿತ್ರಗಳು ಭೂಗತ ಜಗತ್ತು, ನಗರ ಜೀವನದ ಕಥಾ ಹಂದರದ್ದಾಗಿವೆ. ಯುವ ನಟರಂತೂ ಹೆಚ್ಚಾಗಿ ಮಚ್ಚು, ಲಾಂಗಿನ ಕತೆಗಳಿಗೆ ಸೀಮಿತವಾಗುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರಾಮೀಣ ನೇಪಥ್ಯದ ಕತೆಯೊಂದನ್ನು ಕೈಗೆತ್ತಿಕೊಂಡಿದ್ದೇನೆ ಎನ್ನುತ್ತಾರೆ ನಿರ್ದೇಶಕ ಸಾಯಿ ಪ್ರಕಾಶ್. ಹೌದು ಅವರು ಮಾತನಾಡುತ್ತಿರುವು ಶಿವರಾಜ್ ಕುಮಾರ್ ನಾಯಕ ನಟನಾಗಿ ಅಭಿನಯಿಸುತ್ತಿರುವ 'ಭಾಗ್ಯದ ಬಳೆಗಾರ' ಚಿತ್ರದ ಬಗ್ಗೆ.
ಸಿಂಹಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಭಾಗ್ಯದ ಬಳೆಗಾರ' ಚಿತ್ರಕ್ಕಾಗಿ ನಾಗೇಂದ್ರ ಪ್ರಸಾದ್ ರಚಿಸಿರುವ 'ನಾಳೆ ನಡೆಯೋದ್ ಹೇಳ್ತಾನೆ, ಹೇಳ್ತಾನೆ ಕೋಳಿ ಕೂಗೋಕ್ ಮುಂಚೆನೇ ಬುಡ್ಬುಡ್ ಕೈಯಾ ಬುಡ್ಬುಡ್ಕ್ಕೆ - ಸತ್ಯ ಒಂದೇ ಹೇಳ್ತಾನೆ, ಹೇಳ್ತಾನೆ, ಸುದ್ದಿ ಒಂದು ತಂದೌನೆ, ತಂದೌನೆ -ಬುಡ್ಬುಡ್ ಕೈಯಾ ಬುಡ್ಬುಡ್ಕ್ಕೆ ಎಂಬ ಗೀತೆ ಚನ್ನಪಟ್ಟಣದ ಆಸುಪಾಸಿನಲ್ಲಿ ಚಿತ್ರೀಕರಣಗೊಂಡಿದೆ. ತಾರಾ
'ಭಾಗ್ಯದ ಬಳೆಗಾರ' ಚಿತ್ರದ ಜಾನಪದ ಗೀತೆಗೆ ಜನಪ್ರಿಯ ನಟಿಯರಾದ ಸುಧಾರಾಣಿ ಮತ್ತು ಅನು ಪ್ರಭಾಕರ್ ಹೆಜ್ಜೆಹಾಕಿದ್ದಾರೆ. ಚಿತ್ರದ ಶೀರ್ಷಿಕೆ ಗೀತೆ ''ಭಾಗ್ಯದ ಬಳೆಗಾರ ಬಾಗಿಲಿಗೆ ಬಂದ...'' ಹಾಡಿಗೆ ಜಾನಪದ ದಿರಿಸಿನಲ್ಲಿದ್ದ ಸುಧಾರಾಣಿ ಹೆಜ್ಜೆಹಾಕಿದ್ದಾರೆ. ತಮ್ಮ ಸಿನಿಮಾ ವೃತ್ತಿಜೀವನದ ಮೊದಲ ಹೀರೋ ಶಿವರಾಜ್ ಕುಮಾರ್ ಅವರೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.ಶಿವರಾಜ್ ಕುಮಾರ್ ಅಭಿನಯದ ಆನಂದ್ ಚಿತ್ರ ಸುಧಾರಾಣಿ ಅವರ
ಸಂಗೀತ, ಸಾಹಿತ್ಯ, ಸಾಹಸ ಮುಂತಾದವುಗಳಲ್ಲಿ ಒಂದನ್ನು ಅಭ್ಯಾಸ ಮಾಡಿ ಅದರಲ್ಲಿ ಪರಿಣಿತಿ ಹೊಂದುವುದರಲ್ಲಿ ಹೈರಾಣವಾಗಿ ಹೋಗಿರುತ್ತದೆ. ಅಂತದ್ದರಲ್ಲಿ ಎಲ್ಲಾ ವಿದ್ಯೆಗಳನ್ನು ಕಲಿತು ಎಲ್ಲರಿಂದಲ್ಲೂ ಪ್ರಶಂಸೆ ಪಡೆದುಕೊಂಡವನು ಅಸಮಾನ್ಯ ಕಲಾವಿದ ಎಂಬ ಬಿರುದಿಗೆ ಭಾಜನನಾಗುತ್ತಾನೆ. ಇದು ಕೆಲವರಿಂದ ಮಾತ್ರ ಸಾದ್ಯ. ‘ಭಾಗ್ಯದ ಬಳೆಗಾರ’ನೂ ಹೀಗೆ. ಇಂಪಾದ ಹಾಡುಗಾರನಾದ ಈತ ಒಳ್ಳೆಯ ನೃತ್ಯಗಾರ ಕೂಡ. ದುಷ್ಟಹಾದಿ ತುಳಿದವರ ಮಟ್ಟ ಹಾಕುವ
ಶಿವಣ್ಣನ 'ಭಾಗ್ಯದ ಬಳೆಗಾರ'ನಿಗೆ ಸೂಕ್ತ ಜೋಡಿಯಾಗಿ ಮೋಹಕ ನಟಿ ನವ್ಯಾ ನಾಯರ್ ನಟಿಸಲಿದ್ದಾರೆ. ಪ್ರಸ್ತುತ ಭಾಗ್ಯದ ಬಳೆಗಾರನ ಚಿತ್ರೀಕರಣವು ರಾಮನಗರದ ಸುತ್ತ ಮುತ್ತ ಸುಂದರ ತಾಣಗಳಲ್ಲಿ ಭರದಿಂದ ಸಾಗುತ್ತಿದೆ. ನವ್ಯಾ ನಾಯರ್ ಈ ಹಿಂದೆ 'ಗಜ' ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ನಟಿಸಿದ್ದರು. ದರ್ಶನ್ ರ ಮತ್ತೊಂದು ಚಿತ್ರ 'ಬಾಸ್'ನಲ್ಲೂ ನವ್ಯಾನಾಯರ್ ನಟಿಸುತ್ತಿದ್ದಾರೆ. ಪ್ರಸ್ತುತ
ಪಾತ್ರ ನಿರ್ವಹಣೆಯಲ್ಲಿ ಶಿವರಾಜಕುಮಾರ್ ತಂದೆಯನ್ನೇ ಹೋಲುತ್ತಾರೆ. ವಾತ್ಸಲ್ಯಮಯಿ ಚಿತ್ರಗಳಲ್ಲಿ ಪ್ರೇಕ್ಷಕರ ಮನಸೂರೆಗೊಂಡ ಶಿವಣ್ಣ ‘ಜೋಗಿ‘ಯಾಗೂ ಗೆದ್ದವರು. ಪ್ರಸ್ತುತ ಅವರ ಅಭಿನಯದ ‘ಭಾಗ್ಯದ ಬಳೆಗಾರ‘ ಚಿತ್ರಕ್ಕೆ ರಾಮನಗರದ ಸುತ್ತಮುತ್ತ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಖಳನಟ ಆದಿಲೋಕೇಶ್ ತನ್ನ ಸಹಚರ ಮಳವಳ್ಳಿ ಸಾಯಿಕೃಷ್ಣರೊಟ್ಟಿಗೆ ಸಾಗಿ ಬರುತ್ತಿದ್ದಾಗ ಹಳ್ಳಿಯ ಚೆಲುವೆಯೊಬ್ಬಳು ಎದುರಾಗುತ್ತಾಳೆ. ಅವಳ ಮೇಲೆ ಮೋಹಿತನಾದ ಆದಿಲೋಕೇಶ್ ಆಕೆ ನನ್ನವಳಾಗಬೇಕು ಎಂಬ