ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಉಲ್ಲಾಸ ಉತ್ಸಾಹ' ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಿದೆ. ಧ್ವನಿಸುರುಳಿಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭಾನುವಾರ ಬೆಳಗ್ಗ್ಗೆ ಬೆಂಗಳೂರಿನ ಸಿಟಿ ಇನಿಸ್ಟಿಟ್ಯೂಟ್ ನಲ್ಲಿ ಬಿಡುಗಡೆ ಮಾಡಿದರು. ತೆಲುಗಿನ 'ಉಲ್ಲಾಸಂಗಾ ಉತ್ಸಾಹಂಗ' ಚಿತ್ರರೀಮೇಕ್ ಇದಾಗಿದ್ದು, ಮೂಲ ಚಿತ್ರದಲ್ಲಿ ಯಶೋಸಾಗರ್ ಮತ್ತು ಸ್ನೇಹಾ ಉಲ್ಲಾಳ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಲ್ಲಾಸ ಉತ್ಸಾಹಕ್ಕೆ
ಕಾಂತಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಬಿ.ಪಿ.ತ್ಯಾಗರಾಜ್ ನಿರ್ಮಿಸುತ್ತಿರುವ ‘ಉಲ್ಲಾಸ ಉತ್ಸಾಹ‘ ಚಿತ್ರಕ್ಕೆ ನಗರದ ಆಕಾಶ್ ಸ್ಟೂಡಿಯೋದಲ್ಲಿ ಡಿ.ಟಿ.ಎಸ್ ಅಳವಡಿಕೆ ಪ್ರಕ್ರಿಯೆನಡೆಯುತ್ತಿದೆ. ಕರ್ನಾಟಕದ ರಮ್ಯ ತಾಣಗಳಲ್ಲಲ್ಲದೆ ಹೊರ ರಾಜ್ಯಗಳಲ್ಲೂ ಚಿತ್ರೀಕರಣಗೊಂಡಿರುವ ಈ ಚಿತ್ರ ಸಂಪೂರ್ಣ ಮನೋರಂಜನೆಯಿಂದ ಕೂಡಿದೆ ಹಾಗೂ ಹದಿಹರೆಯದವರಿಗೆ ಹತ್ತಿರವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.ತಮ್ಮ ಅಮೋಘ ಅಭಿನಯದಿಂದ ಅಭಿಮಾನಿಗಳ ಮನ ಗೆದ್ದಿರುವ ಅಪರೂಪದ ಕಲಾವಿದ ಗಣೇಶ್ ಈ
ಖ್ಯಾತ ನಟ ಗಣೇಶ್ ಅಭಿನಯದಲ್ಲಿ ಮೂಡಿಬರುತ್ತಿರುವ ಚಿತ್ರ ‘ಉಲ್ಲಾಸ ಉತ್ಸಾಹ‘. ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿರುವ ಈ ಚಿತ್ರಕ್ಕೆ ಪ್ರಸ್ತುತ ಮುತ್ತಿನ ನಗರ ಹೈದರಾಬಾದ್ನಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆದಿದೆ. ‘ಮುಂಗಾರು ಮಳೆ‘ಗೆ ಮಧುರ ಗೀತೆಗಳನ್ನು ಬರೆದು ಜನಪ್ರಿಯರಾದ ಜಯಂತ ಕಾಯ್ಕಿಣಿ ಅವರು ರಚಿಸಿರುವ ‘ಚಲಿಸುವ ಚೆಲುವೆ ನಾಹೇಳಲೇ ಬೇಕೆಂದ ವಿಷಯ ಮರೆತೆ ಹೋಯಿತಲ್ಲಾ ನಿನ್ನ ಮುಂದೆ‘
ಕಾಂತಿ ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಉಲ್ಲಾಸ ಉತ್ಸಾಹ' ಚಿತ್ರಕ್ಕೆ ನಗರದ ಆಕಾಶ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ನಿರ್ಮಾಪಕ ಬಿ.ಪಿ.ತ್ಯಾಗರಾಜ್ ತಿಳಿಸಿದ್ದಾರೆ.ಕರುನಾಡ ಪ್ರತಿಭೆಗಳಾದ ಯಶೋ ಸಾಗರ್ ಹಾಗೂ ಸ್ನೇಹ ಉಲ್ಲಾಳ್ ನಾಯಕ-ನಾಯಕಿಯರಾಗಿ ಅಭಿನಯಿಸಿದ ‘ಉಲ್ಲಾಸಂಗ ಉತ್ಸಾಹಂಗ‘ ತೆಲುಗಿನಲ್ಲಿ ಯಶಸ್ವಿಯಾದ ಚಿತ್ರ. ಇದೇ ಚಿತ್ರ ಕನ್ನಡದಲ್ಲಿ 'ಉಲ್ಲಾಸ ಉತ್ಸಾಹ' ಶೀರ್ಷಿಕೆಯಿಂದ ಹೊರ ಹೊಮ್ಮುತ್ತಿದ್ದು ಖ್ಯಾತ
ಹಿಂದಿ ಕಿರುತೆರೆಯಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ಯಾಮಿ ಗೌತಮ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಆಮದು ಮಾಡಿಕೊಳ್ಳಲಾಗಿದೆ. ಗೋಲ್ಡನ್ ಸ್ಟಾರ್ ಗಣೇಶರ ಮತ್ತೊಂದು ರಿಮೇಕ್ ಚಿತ್ರ"ಉಲ್ಲಾಸ ಉತ್ಸಾಹ"(ತೆಲುಗಿನ ಉಲ್ಲಾಸಂಗಾ ಉತ್ಸಾಹಂಗಾ) ಕ್ಕೆ ನಾಯಕಿಯಾಗಿ ಯಾಮಿ ಆಯ್ಕೆಯಾಗಿದ್ದಾರೆ. ಸದ್ಯ ಹೈದರಾಬಾದಿನಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಐಎಎಸ್ ಅಧಿಕಾರಿ ಆಗಬೇಕು ಎಂದು ಕನಸು ಕಂಡಿದ್ದ ಚಂದೀಗಢದ ಹುಡುಗಿ ಯಾಮಿ,
ಗೋಲ್ಡನ್ ಸ್ಟಾರ್ ಗಣೇಶ್ ವರ್ಷದ ಆರಂಭದಲ್ಲೇ ಉತ್ಸಾಹಿತರಾಗಿದ್ದಾರೆ. ಸರ್ಕಸ್ ಚಿತ್ರದ ಹಾಡುಗಳು ಜನರ ಬಾಯಲ್ಲಿ ನಲಿದಾಡುತ್ತಿವೆ. ಇದರ ಜೊತೆಗೆ ಹೊಸ ಚಿತ್ರಗಳು ಸೆಟ್ಟೇರುತ್ತಿದೆ.ಈಗಾಗಲೇ ದಟ್ಸ್ ಕನ್ನಡದಲ್ಲಿ ಪ್ರಕಟವಾದಂತೆ, ಉಲ್ಲಾಸಂಗಾ ಉತ್ಸಾಹಂಗಾ ಚಿತ್ರದ ಕನ್ನಡ ರಿಮೇಕ್ ಉಲ್ಲಾಸ ಉತ್ಸಾಹ ದ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಎರಡು ಶೆಡ್ಯೂಲ್ ಚಿತ್ರೀಕರಣ ಪೂರ್ಣಗೊಂಡಿದೆ. ಕಳೆದ ವರ್ಷದ ಕೊನೇ
ಮೈಸೂರಿನಲ್ಲಿ ‘ಉಲ್ಲಾಸ ಉತ್ಸಾಹ‘ ಮನೆ ಮಾಡಲು ಈಗೇನು ದಸರೆಯ ಸಮಯವಲ್ಲ ಎಂಬ ಚಿಂತೆಬೇಡ. ಏಕೆಂದರೆ ಉಲ್ಲಾಸದ ಹುಡುಗ, ಉತ್ಸಾಹಿ ಯುವಕ ಗಣೇಶ್ ಅಭಿನಯದ ಇದೇ ಹೆಸರಿನ ಚಿತ್ರಕ್ಕೆ ಚಾಮುಂಡಿ ತವರಿನಲ್ಲಿ ಭರದ ಚಿತ್ರೀಕರಣ ನಡೆಯುತ್ತಿದೆ. ಸಾಂಸ್ಕೃತಿಕ ರಾಜಧಾನಿಯ ಸುಂದರ ಪರಿಸರದ ಮೈಸೂರು ಯುನಿವರ್ಸಿಟಿ ಬಳಿಯಲ್ಲಿ ಇತ್ತೀಚೆಗೆ ಗಣೇಶ್, ಯಾಮಿಗೌತಮಿ, ವಿಶ್ವ, ಮಿತ್ರ ಮುಂತಾದ ಸಹಕಲಾವಿದರ ಅಭಿನಯದಲ್ಲಿ ಹಲವು
ಹದಿಹರಯದ ವಯಸ್ಸಿನಲ್ಲಿ ತುಂಟಾಟವಾಡುವುದು ಸಹಜ. ಹುಡುಗಾಟದ ಹುಡುಗ ಗಣೇಶ್ ಕೂಡ ಯಾವ ತುಂಟರಿಗೂ ಕಡಿಮೆ ಇಲ್ಲ. ಅಪ್ಪ ರಂಗಾಯಣರಘು ಗ್ಯಾರೆಜ್ನ ಮಾಲೀಕ. ಹಲವು ದುಬಾರಿ ಬೆಲೆಯ ಕಾರುಗಳು ದುರಸ್ತಿಗೆ ಬರುವ ಸ್ಥಳವದು. ಹೀಗೆ ಐವತ್ತು ಲಕ್ಷ ಬೆಲೆಯ ಕಾರೊಂದು ದುರಸ್ತಿಗೆ ಬರುತ್ತದೆ. ಅಪ್ಪ ಇಲ್ಲದ ಸಮಯವನ್ನು ಹೊಂಚು ಹಾಕುತ್ತಿದ ಗಣೇಶ್ ತನ್ನ ಸಹಪಾಠಿಗಳೊಂದಿಗೆ ದುಬಾರಿ ಕಾರಿನಲ್ಲಿ ಸುತ್ತಾಟಕ್ಕೆ
ಚಿತ್ರ ವೈಭವೋಪೇತವಾಗಿ ಮೂಡಿ ಬರಲು ಹಾಡುಗಳು ಪ್ರಮುಖ ಪಾತ್ರವಹಿಸುತ್ತದೆ. ಕೆಲವು ಚಿತ್ರಗಳಿಗಿಂತ ಅದರ ಹಾಡುಗಳೇ ಯಶಸ್ವಿಯಾದ ಉದಾಹರಣೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟಿವೆ. ಪ್ರತಿಯೊಬ್ಬ ನಿರ್ಮಾಪಕ ತನ್ನ ಚಿತ್ರದ ಗೀತೆಗಳು ಶ್ರೀಮಂತಿಕೆಯಿಂದ ಮೂಡಿಬರಲು ಮುತುವರ್ಜಿ ವಹಿಸುತ್ತಾನೆ.ಕಾಂತಿಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಉಲ್ಲಾಸ ಉತ್ಸಾಹ‘ ಚಿತ್ರದ ಎರಡು ಹಾಡುಗಳು ಅದ್ದೂರಿಯಾಗಿ ಚಿತ್ರೀಕೃತವಾಗಿದೆ. ಕವಿರಾಜ್ ರಚಿಸಿರುವ ~~~~ಹಲೋ ನಮಸ್ತೆ ಮಾಡೋಣ