ಮೈಸೂರು, ನ.17: ದಿನನಿತ್ಯ ಕೋಟಿಗಟ್ಟಲೆ ಹಣ ಲೂಟಿಮಾಡುವ ಗಣಿ ಧಣಿಗಳನ್ನು ವಿಧಾನಸಭೆಗೆ ಆಯ್ಕೆ ಮಾಡುವ ಮೂಲಕ ಜನತೆ ತಪ್ಪು ಮಾಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕಸಿದ್ದರಾಮಯ್ಯ ವಿಷಾದಿಸಿದರು. ತಿ.ನರಸೀಪುರ ತಾಲೂಕಿನ ಮುಸುವಿಕೊಪ್ಪಲು ಗ್ರಾಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಬಾರ್ಡ್ ಯೋಜನೆಯಡಿ 15.84 ಲಕ್ಷ ರು. ವೆಚ್ಚದಲ್ಲಿ ಕೊಠಡಿಗಳ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.ಸ್ವಾರ್ಥಕ್ಕಾಗಿ ರೆಡ್ಡಿಗಳು ಸೃಷ್ಟಿಸಿದ ಬಿಕ್ಕಟ್ಟಿನಿಂದ
ನಲ್ಮೆಯ ಯುನೈಟೆಡ್ ಕಿಂಗ್ ಡಂ ಸ್ನೇಹಿತರೆ,ನಮ್ಮ ಕರ್ನಾಟಕದಲ್ಲಿ ಈಗಿನ ಪರಿಸ್ಥಿತಿ ಯಾವ ದೃಷ್ಟಿಕೋನದಲ್ಲಿ ನೋಡಿದರೂ ಸರಿಯಿದ್ದಂತಿಲ್ಲ. ಫಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಭಾರೀ ನೈಸರ್ಗಿಕ ಅನಾಹುತದಿಂದ ನಮ್ಮ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಚೇತರಿಸಿಕೊಂಡಿಲ್ಲ. ನೆರೆ ಪರಿಹಾರ ಕಾರ್ಯಗಳು ಅಲ್ಲಲ್ಲಿ ಆರಂಭವಾಗುತ್ತಿರುವ ಸುದ್ದಿಗಳನ್ನು ನಾವಿಲ್ಲಿ ಕುಳಿತು ಓದುತ್ತೇವಷ್ಟೆ. ಪ್ರವಾಹದ ಮಟ್ಟ ತಗ್ಗಿದರೂ ಸಂತ್ರಸ್ತರ ಬವಣೆ ತಪ್ಪಿಲ್ಲ. ಇಂಥ ಪರಿಸ್ಥಿತಿಯಲ್ಲಿಯೂ,
ಮೈಸೂರು, ನ.12 :ಟಿ. ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ನಡೆಯಲಿರುವ ಪಂಚಲಿಂಗದರ್ಶನದಲ್ಲಿ ಭಾಗವಹಿಸುವ ಭಕ್ತಾದಿಗಳು ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ನವೆಂಬರ್ 13 ರಿಂದ 27ರವರೆಗೆ ಈ ಕೆಳಕಂಡ ಮಾರ್ಗಗಳಲ್ಲಿ ಏಕಮುಖ ಸಂಚಾರವನ್ನು ಹಾಗೂ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ ಮಣಿವಣ್ಣನ್ ಅವರು ಆದೇಶ ಹೊರಡಿಸಿದ್ದಾರೆ.ಏಕಮುಖ ಸಂಚಾರದ ಮಾರ್ಗಗಳು:ಮೈಸೂರು - ಟಿ.
ಬೆಂಗಳೂರು, ನ. 9 : ಯಡಿಯೂರಪ್ಪ ಸಂಪುಟದ ಏಕೈಕ ಮಹಿಳಾ ಸಚಿವೆ ಶೋಭಾ ಕರಂದ್ಲಾಜೆ ಅವರ ತಲೆದಂಡವಾಗಿದೆ. ಕರಂದ್ಲಾಜೆ ಅವರು ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಳುಹಿಸಿದ್ದು, ಸಿಎಂ ಅದನ್ನು ಅಂಗೀಕರಿಸಿದ್ದಾರೆ. ಈ ಮೂಲಕ ಭಿನ್ನಮತೀಯ ಬಣದವರಿಗೆ ಎರಡನೇ ಜಯ ಸಿಕ್ಕಂತಾಗಿದೆ. ಯಡಿಯೂರಪ್ಪ ಅವರ ಸಂಪುಟದಲ್ಲಿ ಶೋಭಾ ಕರಂದ್ಲಾಜೆ ಅವರ ಕಾರ್ಯವೈಖರಿ ಎಲ್ಲರೂ ಮೆಚ್ಚುವಂತಹದ್ದೆ.
ಬಾಲ್ಯದ ನೆನಪುಗಳು ಅಮರ. ನೀವು ಆಗ ಹಾಡಿದ ಹಾಡು ಅಥವಾ ಸ್ವಾರಸ್ಯಕರ ಘಟನೆಯೋ ನಿಮ್ಮ ಮನದಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತದೆ. 'ಹೂ' ಚಿತ್ರದಲ್ಲೂ ಹೀಗೆ. ನಾಯಕ ತನ್ನ ಗೆಳತಿಯೊಡನೆ ಬಾಲ್ಯದಲ್ಲಿ ಒಂದು ಹಾಡು ಹಾಡಿರುತ್ತಾನೆ. ಆ ಗೀತೆಯೇ ಮುಂದೆ ಅವರಿಬ್ಬರನ್ನು ಒಂದಾಗಿಸುತ್ತದೆ.ಯಾವುದೋ ಕಾರಣಕ್ಕೆ ಗೆಳತಿ ನಾಯಕನಿಂದ ದೂರಾಗಿರುತ್ತಾಳೆ. ಈ ವಿಷಯದಿಂದ ಬೇಸರಗೊಂಡ ನಾಯಕ ಊರು ಬಿಡಲು
ಮೈಸೂರು, ನ. 4: ಮೈಸೂರು ಜಿಲ್ಲಾಡಳಿತವು ಸಂತ ಕನಕ ಜಯಂತ್ಯೋತ್ಸವ ಸಮಿತಿಯೊಂದಿಗೆ ನವೆಂಬರ್ 5ರಂದು ಸಂತ ಶ್ರೇಷ್ಠ ಕವಿ ಕನಕದಾಸರ ಜಯಂತಿಯನ್ನು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಬಿ.ವಿ. ಕಾರಂತ ರಂಗಮಂಟಪದಲ್ಲಿ ಬೆಳಿಗ್ಗೆ 11 ಗಂಟೆಗೆ ಆಚರಿಸುತ್ತಿದೆ.ಕಾಗಿನೆಲೆ ಮಹಾಸಂಸ್ಥಾನದ ಕನಕಗುರು ಪೀಠದಶಿವಾನಂದಪುರಿ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು
ಮೈಸೂರು, ಅ. 31 : ಮೈಕ್ರೋಸಾಫ್ಟ್ ಕಂಪನಿ ಇದೇ ವರ್ಷ ಜುಲೈನಲ್ಲಿ ಬಿಡುಗಡೆ ಮಾಡಿರುವ ಹೊಸ ಆಪರೇಟಿಂಗ್ ಸಿಸ್ಟಂ ವಿಂಡೋಸ್ 7 ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಲಿಟ್ಟಿದೆ. ವಿಂಡೋಸ್ ವೀಸ್ಟಾದ ಮುಂದುವರಿದ ವರ್ಶನ್ ಆಗಿರುವ ವಿಂಡೋಸ್ 7 ಸರ್ವರೀತಿಯಲ್ಲೂ ಬಳಕೆದಾರರ ಸ್ನೇಹಿ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.ಈ ಸಂಭ್ರಮವನ್ನು ಟೆಕ್ನಾಲಜಿ ಫಾರ್ ಕಾಮನ್ ಮ್ಯಾನ್, ಮೈಸೂರು/ಮಂಡ್ಯ ಟೆಕ್ನಾಲಜಿ ಯೂಸರ್
ಬೆಂಗಳೂರು, ಅ. 26 : ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಾಗವನ್ನು ತೆರವುಗೊಳಿಸುವ ಕಾರ್ಯ ಭಾನುವಾರದಿಂದ ಆರಂಭವಾಗಿದ್ದು, ಇಂದು ಒತ್ತುವರಿ ಕಾರ್ಯಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದರ ನಡುವೆಯೂ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ನಗರದ 18 ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ರಸ್ತೆಯನ್ನು ಮಳಿಗೆಗಳ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದರು. ಆ
ಮೈಸೂರು, ಅ. 25 : ಅಧಿಕಾರಕ್ಕೆ ಬಂದಾಗಿನಿಂದಲೂ ವಿವಾದದ ಕೇಂದ್ರವಾಗಿದ್ದ ಬಿ ಜಯಶ್ರೀ ಅವರು ರಂಗಾಯಣ ನಿರ್ದೇಶಕಿ ಸ್ಥಾನಕ್ಕೆ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಶನಿವಾರ ಅವರು ರಂಗಾಯಣ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹಬ್ಬಿದ್ದ ಸುದ್ದಿಗೆ ಕೊನೆಗೂ ತೆರೆ ಬಿದ್ದಿತು. ಇಂದು ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ರಂಗಾಯಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಂಗತಿಯನ್ನು ಅವರು
ಬೆಂಗಳೂರು, ಅ. 21 : ಉತ್ತರ ಕರ್ನಾಟಕ ಪ್ರವಾಹ ಪೀಡಿತರ ನೆರವಿಗೆ ಸ್ವಪ್ರೇರಣೆಯಿಂದ ದೇಣಿಗೆ ಕೊಡುವುದು ಒಂದು ವಿಚಾರ, ಬಲವಂತದಿಂದ ಹಣ ಕೀಳುವುದು ಇನ್ನೊಂದು ಪ್ರಮಾದ. ಅಭಿಮಾನದಿಂದ, ಕಳಕಳಿಯಿಂದ ಜನತೆ ಮತ್ತು ನಾನಾ ಸಂಘ ಸಂಸ್ಥೆಗಳು ಹಣ ಸಂಗ್ರಹಿಸಿ ನಿಧಿ ತುಂಬುವ, ತುಂಬುತ್ತಿರುವ ವರದಿಗಳು ಹರಿದು ಬರುತ್ತಿವೆ. ಆದರೆ, ಐಟಿ ಮತ್ತು ಐಟಿಯೇತರ ಕಂಪನಿಗಳಿಂದ ವ್ಯವಸ್ಥಿತವಾಗಿ ಹಣ