ಮುಂಬೈ, ನ. 22 : ನನ್ನ ನೂರಾರು ಸಹೋದರ-ಸಹೋದರಿಯರ ಸಾವಿಗೆ ಕಾರಣವಾಗಿರುವ ಪಾಕಿಸ್ತಾನದ ಅಜ್ಮಲ್ ಅಮೀರ್ ಕಸಬ್ ನನ್ನು ನನ್ನ ಕೈಗೊಪ್ಪಿಸಿದರೆ ಸ್ಥಳದಲ್ಲೇ ಆತನನ್ನು ಕೊಂದು ಹಾಕುತ್ತೇನೆ ಎಂದು ಡಬ್ಲ್ಯು ಡಬ್ಲ್ಯು ಇ ಕುಸ್ತಿಪಟು ಗ್ರೇಟ್ ಖಲಿ ಅಲಿಯಾಸ್ ದಿಲೀಪ್ ಸಿಂಗ್ ರಾಣಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯವನ್ನು ರಕ್ಷಿಸಲು ಕಾನೂನು ಇದೆ ಎಂಬುದು ನನಗೆ ಗೊತ್ತು. ಆದರೂ
ಮುಂಬೈನ ತಾಜ್ ಹೋಟೆಲ್ ಮೇಲಿನ ದಾಳಿಯ (26/11) ಪ್ರಮುಖ ರೂವಾರಿ ಎನ್ನಲಾಗಿರುವ ಡೇವಿಡ್ ಹೆಡ್ಲಿಗೆ ಬಾಲಿವುಡ್ ನ ಹಲವು ನಟ, ನಟಿಯರೊಂದಿಗೆ ಸಂಪರ್ಕ ಇದೆ ಎಂಬುದು ಇದೀಗ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್ ಇ ತೋಯ್ಬಾ ಸದಸ್ಯನಾಗಿರುವ ಹೆಡ್ಲಿ ಭಾರತಕ್ಕೆ ಇದುವರೆಗೂ ಒಂಭತ್ತು ಬಾರಿ ಭೇಟಿ ನೀಡಿದ್ದಾನೆಂದು ತನಿಖಾ ವರದಿಗಳು ದೃಢಪಡಿಸುತ್ತಿವೆ. ಹೆಡ್ಲಿ
ನವದೆಹಲಿ, ಆ. 17 : ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ನಡೆದ ಮುಂಬೈ ಭಯೋತ್ಪಾದನೆ ಮಾದರಿಯಲ್ಲಿ ಭಾರತದ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ಸಂಚು ರೂಪಿಸಿರುವ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹೇಳಿದರು. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ವ್ಯಾಪಕ ಭಾರಿ ಬಿಗಿ ಬಂದೋಬಸ್ತ್ ಕ್ರಮ ಕೈಗೊಳ್ಳಲು ಸೂಚನೆ
ನವದೆಹಲಿ, ಆ. 12 : ಕಳೆದ ವರ್ಷ ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿರುವ ಉಗ್ರರಿಗೆ ಶೀಘ್ರದಲ್ಲಿ ಶಿಕ್ಷೆ ನೀಡಬೇಕು ಎಂದು ಅಮೆರಿಕ ಪಾಕಿಸ್ತಾನಕ್ಕೆ ಮತ್ತೊಮ್ಮೆ ತಾಕೀತು ಮಾಡಿದೆ. ಈ ಮಧ್ಯೆ ಅಮೆರಿಕ ಗುಪ್ತಚರ ಇಲಾಖೆ ಫೆಡರಲ್ ಬ್ಯೂರೋ ಆಫ್ ಇನ್ ವೆಸ್ಟಿಗೇಷನ್ (ಎಫ್ ಬಿಐ) ಮುಂಬೈ ದಾಳಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನ
ನವದೆಹಲಿ, ಜು. 4 : ಮುಂಬೈ ಭಯೋತ್ಪಾದನೆಯ ಪ್ರಮುಖ ರೂವಾರಿ ಹಫೀಜ್ ಮೊಹ್ಮದ್ ಸಯೀದ್ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಅವರ ವಿಚಾರಣೆಯನ್ನು ಪಾಕಿಸ್ತಾನದ ಸುಪ್ರಿಂಕೋರ್ಟ್ ಅನಿರ್ಧಿಷ್ಟಾವಧಿವರೆಗೆ ಮುಂದೂಡಿರುವ ಕ್ರಮ ಇಂದು ಸಂಸತ್ ನಲ್ಲಿ ಪ್ರತಿಧ್ವನಿಸಿ ಭಾರಿ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು.ಪಾಕಿಸ್ತಾನದ ಸುಪ್ರಿಂಕೋರ್ಟ್ ಮುಂಬೈನ ದಾಳಿಕೋರ ಸಯೀದ್ ವಿಚಾರಣೆ ಅನಿರ್ಧಿಷ್ಟಾವಧಿಗೆ ಮುಂದೂಡಿರುವ ಕುರಿತು ಸಮಾಜವಾದಿ ಮುಖಂಡ ಮುಲಾಯಂ
ಇಸ್ಲಾಮಾಬಾದ್, ಆ. 3 : ಕಳೆದ ವರ್ಷ ಮುಂಬೈನಲ್ಲಿ ನಡೆದ ಭಯೋತ್ಪಾದನೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿಯಾಗಿರುವ ಜಮಾತೆ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಮಹ್ಮದ್ ಸಯೀದ್ ಅವರ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ ಇರುವುದರಿಂದ ಅವರ ಮೇಲಿನ ವಿಚಾರಣೆಯನ್ನು ಪಾಕಿಸ್ತಾನದ ಸುಪ್ರಿಂಕೋರ್ಟ್ ಅನಿರ್ಧಿಷ್ಟಾವಧಿವರೆಗೆ ಮುಂದೂಡಿದೆ. ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಸರಕಾರಕ್ಕೆ
ನವದೆಹಲಿ, ಜು. 29 : ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ನೀಡಬೇಕಿರುವ ಎಲ್ಲ ಸಾಕ್ಷ್ಯಾಧಾರಗಳನ್ನು ನೀಡಲಾಗಿದೆ. ಮರುಪ್ರಶ್ನೆ ಕೇಳದೆ ಪಾಕಿಸ್ತಾನದ ಮುಂಬೈ ದಾಳಿಯಲ್ಲಿ ಕೈವಾಡವಿರುವ ಉಗ್ರರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಗೃಹ ಸಚಿವ ಪಿ ಚಿದಂಬರಂ ಆಗ್ರಹಿಸಿದ್ದಾರೆ. ಮುಂಬೈ ದಾಳಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಜಮಾತೆ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಅವರನ್ನು ಬಂಧಿಸಲು
ಇಸ್ಲಾಮಾಬಾದ್, ಜು. 28 : ಮುಂಬೈ ದಾಳಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಜಮಾತೆ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಅವರನ್ನು ಬಂಧಿಸಲು ಆಗುವುದಿಲ್ಲ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ. ಈ ಕುರಿತು ಜಿಯೋ ಟಿವಿಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಆಂತರಿಕ ಇಲಾಖೆ ಸಚಿವ ರೆಹಮಾನ್ ಮಲಿಕ್, ಕಳೆದ ವರ್ಷ ಮುಂಬೈನಲ್ಲಿ ನಡೆದ ಭಯೋತ್ಪಾದನೆಯಲ್ಲಿ ಸಯೀದ್ ಅವರ ಕೈವಾಡವಿರುವ
ಮುಂಬೈ, ಜು. 23 : ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಎದುರು ತಪ್ಪೊಪ್ಪಿಕೊಂಡಿರುವ ಉಗ್ರ ಅಜ್ಮಲ್ ಅಮೀರ್ ಕಸಬ್ ನನ್ನು ಸಾರ್ವಜನಿಕ ಸ್ಥಳದಲ್ಲಿ ನೇಣಿಗೇರಿಸಬೇಕು ಎಂದು ಶಿವಸೇನೆ ಮುಖಂಡ ಬಾಳಾ ಠಾಕ್ರೆ ಒತ್ತಾಯಿಸಿದ್ದಾರೆ. ಮುಂಬೈ ಭಯೋತ್ಪಾದನೆಯಲ್ಲಿ ವೀರಮರಣವನ್ನಪ್ಪಿದ ಹೇಮಂತ್ ಕರ್ಕರೆ ಪತ್ನಿ ಕವಿತಾ ಕರ್ಕರೆ ಕೂಡಾ ಉಗ್ರ ಕಸಬ್ ಗೆ ಬಹಿರಂಗ ಸ್ಥಳದಲ್ಲಿ ನೇಣಿಗೇರಿಸಬೇಕು ಎಂದು ಆಗ್ರಹಿಸಿದ್ದರು.
ಮುಂಬೈ, ಜು. 15 : ಅಬ್ಬರಿಸುತ್ತಿರುವ ವರುಣನ ಹೊಡೆತಕ್ಕೆ ತತ್ತರಿಸಿರುವ ಮುಂಬೈ ಮೇಲೆ ಇದೀಗ ಮತ್ತೊಮ್ಮೆ ಉಗ್ರರು ಅಟ್ಟಹಾಸ ಮೆರೆಯಲು ಸಂಚು ರೂಪಿಸಿರುವ ಘಟನೆಯನ್ನು ಕೇಂದ್ರ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ಮುಂಬೈ ಸೇರಿದಂತೆ ಮಹಾರಾಷ್ಟ್ರದ ಏಳು ಪ್ರಮುಖ ಸ್ಥಳಗಳ ಮೇಲೆ ಭಯೋತ್ಪಾದಕ ಕೃತ್ಯ ನಡೆಸಲು ಭಾರಿ ಸಂಚು ರೂಪಿತವಾಗಿದೆ ಎನ್ನುವ ವಿಷಯ ಬೆಳಕಿಗೆ ಬಂದಿದೆ.