ನಾಗಪುರ, ಫೆ. 9 : ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಇಲ್ಲದ ಮಧ್ಯಮ ಕ್ರಮಾಂಕ ಎಷ್ಟೊಂದು ದುರ್ಬಲ ಎನ್ನುವುದಕ್ಕೆ ನಾಗಪುರ ಟೆಸ್ಟ್ ಸಾಕ್ಷಿಯಾಯಿತು. ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಗೆ ತತ್ತರಿಸಿದ ಸದ್ಯದ ವಿಶ್ವದ ನಂಬರ್ 1 ಪಡೆ ಪ್ರವಾಸಿ ದಕ್ಷಿಣ ಆಫ್ರಿಕಾ ಎದುರು ಇನ್ನಿಂಗ್ಸ್ ಮತ್ತು ಆರು ರನ್ ಗಳಿಂದ ಸೋಲು ಅನುಭವಿಸಿ ವಿಶ್ವ ಚಾಂಪಿಯನ್
ನವದೆಹಲಿ,ಫೆ.8: ಫೆ.28 ರಿಂದ ಆರಂಭವಾಗಲಿರುವ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಸಾರಥ್ಯವನ್ನು ರಾಜ್‌ಪಾಲ್ ಸಿಂಗ್ ಅವರೇ ವಹಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಹಾಕಿ ತಂಡದ ನಾಯಕತ್ವ ಕುರಿತು ಎದ್ದಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ. 18 ಮಂದಿಯ ತಂಡವನ್ನು ಭಾನುವಾರ ಪ್ರಕಟಿಸಲಾಗಿದ್ದು ತಂಡದಲ್ಲಿ ಯಾವುದೇ ಅಚ್ಚರಿಯ ಪ್ರಗತಿಗಳು ಕಂಡುಬಂದಿಲ್ಲ.ಆದರೆ ನಾಯಕತ್ವಕ್ಕೆ ಕೇಳಿ ಬರುತ್ತಿದ್ದ ಪ್ರಭ್ಜೋತ್ ಸಿಂಗ್ ಮತ್ತು ತಂಡದ ಉಪನಾಯಕತ್ವ
ಮುಂಬೈ, ಫೆ. 5: ಭಾರತವು ಟೆಸ್ಟ್ ಸರಣಿ ಜಯಿಸಿದರೆ ಭಾರತದ ಅಗ್ರಶ್ರೇಯಾಂಕ ಇನ್ನಷ್ಟು ಬಲಗೊಳ್ಳುವುದಷ್ಟೇ ಅಲ್ಲದೆ ಭಾರತಕ್ಕೆ ಟೆಸ್ಟ್ ಚಾಂಪಿಯನ್ ಷಿಪ್ ನ ಕಿರೀಟವೂ ದೊರಕಲಿದೆ ಹಾಗೂ 1,75,000 ಡಾಲರ್ ಬಹುಮಾನ ನಿಧಿಯೂ ಮಹೇಂದ್ರ ಧೋನಿ ಬಳಗಕ್ಕೆ ಸಿಗಲಿದೆ.`ಯಾರೇ ಗೆದ್ದರೂ ಆ ತಂಡಕ್ಕೆ 1,75,000ಡಾಲರ್ ಬಹುಮಾನ ನಿಧಿ ದೊರಕಲಿದೆ. ಆಸ್ಟ್ರೇಲಿಯಾ ದ್ವಿತೀಯ ಸ್ಥಾನ ಪಡೆಯುವುದು ನಿಶ್ಚಿತವಾಗಿದ್ದು ಅದಕ್ಕೆ
ನವದೆಹಲಿ, ಫೆ. 5 : ಮುಂಬೈ ಮರಾಠಿಗಳಿಗೆ ಮಾತ್ರ ಸೀಮಿತ ಎಂಬ ಕೀಳುಮಟ್ಟದ ಮಾತಾಡುವುದನ್ನು ತಕ್ಷಣ ನಿಲ್ಲಿಸಿ; ಭಾರತ ಒಂದು, ಭಾರತೀಯರೆಲ್ಲ ಒಂದು ಎಂಬ ಉದಾತ್ತವಾದ ಮಂತ್ರದಲ್ಲಿ ನಂಬಿಕೆ, ವಿಶ್ವಾಸ ಇಡಿ ಎಂದು ಶಿವಸೇನೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸಮಿತಿಗೆ ಶ್ರೀ ರವಿಶಂಕರ್ ಮುಲಾಜಿಲ್ಲದೆ ಹೇಳಿದ್ದಾರೆ.ವಿವಿಧತೆಯಲ್ಲಿ ಏಕತೆಯೇ ಭಾರತದ ಸೊಗಸು ಎಂದು ಹೇಳಿದ ಶ್ರೀರವಿಶಂಕರ್ ,
ಮೆಲ್ಬೋನ್, ಫೆ.1: ಭಾರತದ ಲಿಯಾಂಡರ್ ಪೇಸ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ಪ್ರಶಸ್ತಿ ಗೆಲ್ಲುವ ಮೂಲಕ 11 ಗ್ರ್ಯಾಂಡ್‌ಸ್ಲಾಮ್ ಗೆದ್ದಿರುವ ಮಹೇಶ್ ಭೂಪತಿಯವರ ಸಾಧನೆಯನ್ನು ಸರಿಗಟ್ಟಿದ್ದಾರೆ. ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಜತೆಗೂಡಿ ಆಡಿದ ಪೇಸ್ ಭಾನುವಾರ ನಡೆದ ಫೈನಲ್‌ನಲ್ಲಿ 7-5, 6-3 ನೇರ ಸೆಟ್‌ಗಳಿಂದ ರಷ್ಯಾದ ಕಟೇರಿನ ಮಕರೋವಾ ಮತ್ತು ಜೆಕೊಸ್ಲೊವಿಯಾದ ಜೆರಸ್ಲೊವ್
ವೆಲ್ಲಿಂಗ್ಟನ್, ಜ. 29: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ)ಯ ಪ್ರಮುಖ ಆಟಗಾರ ನ್ಯೂಜಿಲ್ಯಾಂಡಿನ ಬ್ಯಾಟ್ಸ್ ಮನ್ ಜೆಸ್ಸಿ ರೈಡರ್ ಅವರು ಗಾಯದ ಸಮಸ್ಯೆಯಿಂದ ಐಪಿಎಲ್ -3ರಿಂದ ಹೊರಗುಳಿಯಲಿದ್ದಾರೆ. ತೊಡೆಸಂದಿನ ಗಾಯದಿಂದ ಬಳಲುತ್ತಿರುವ ರೈಡರ್ , ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯಾವಳಿ ಆರಂಭದ ಹೊತ್ತಿಗೆ ಗುಣಮುಖರಾಗುವುದು ಅನುಮಾನವಾಗಿರುವ ಕಾರಣ ಕ್ರೈಸ್ಟ್ ಚರ್ಚ್ ನಲ್ಲೇ ಉಳಿದು ವೈದ್ಯರ ಸಲಹೆಯಂತೆ
ಮುಂಬೈ, ಜ. 28 : ದಕ್ಷಿಣ ಆಫ್ರಿಕಾ ವಿರುದ್ಧ ಭಾರತದಲ್ಲಿ ಫೆಬ್ರವರಿ 6ರಿಂದ ನಡೆಯಲಿರುವ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು, ಮೊದಲ ಟೆಸ್ಟ್ ಗೆ ಕನ್ನಡಿಗ, ವೇಗದ ಬೌಲರ್ ಮಿಥುನ್ ಅಭಿಮನ್ಯು ಆಯ್ಕೆಯಾಗಿದ್ದಾರೆ. ಪಶ್ಚಿಮ ಬಂಗಾಳದ ವೃದ್ಧಿಮಾನ್ ಸಹಾ ಅವರು ಸಹ ಮೊದಲ ಬಾರಿಗೆ ಭಾರತದ ಕ್ಯಾಪ್ ಧರಿಸಲಿದ್ದಾರೆ.ಗಾಯಗೊಂಡಿರುವ ಹಿರಿಯ ಆಟಗಾರರಾದ ರಾಹುಲ್ ದ್ರಾವಿಡ್
ಕೊಲಂಬೊ ಜ 27 : ಎರಡನೇ ಬಾರಿಗೆ ಶ್ರೀಲಂಕಾದ ರಾಷ್ಟ್ರಾಧ್ಯಕ್ಷರಾಗಿ ಮಹೇಂದ್ರ ರಾಜಪಕ್ಸ ಭಾರಿ ಅಂತರದಿಂದ ವಿಜಯ ಸಾಧಿಸಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಮಾಜಿ ಸೇನಾ ಮುಖ್ಯಸ್ಥ ಶರತ್ ಫೊನ್ಸೇಕಾ ಅವರನ್ನು 18ಲಕ್ಷ ಮತಗಳ ಅಂತರಗಳಿಂದ ಸೋಲಿಸಿದ್ದಾರೆಂದು ಶ್ರೀಲಂಕಾ ಸರಕಾರದ ಟಿವಿ ವಾಹಿನಿ ರೂಪವಾಹಿನಿ ಟೆಲೆವಿಷನ್ ವರದಿ ಮಾಡಿದೆ.ಎಲ್ಟಿಟಿಇ ನಿರ್ನಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ
ಮುಂಬೈ, ಜ .27: ಬಾಂಗ್ಲಾದೇಶ ವಿರುದ್ಧ ನಡೆದ ಟೆಸ್ಟ್ ಎರಡನೇ ಟೆಸ್ಟ್ ಪಂದ್ಯ ಹಾಗೂ ಸರಣಿ ಗೆದ್ದು, ಸಂಭ್ರಮದಲ್ಲಿರುವ ಭಾರತಕ್ಕೆ ಪ್ರಮುಖ ಆಟಗಾರರು ಗಾಯಾಳುಗಳಾಗಿರುವುದು ಸಮಸ್ಯೆಯಾಗಿದೆ. ಯುವರಾಜ್ ಸಿಂಗ್, ಸಚಿನ್ ,ಲಕ್ಷ್ಮಣ್ ಹಾಗೂ ರಾಹುಲ್ ದ್ರಾವಿಡ್ ಮುಂಬರುವ ದಕ್ಷಿಣ ಅಫ್ರಿಕಾ ವಿರುದ್ಧ ಸರಣಿಗೆ ಆಯ್ಕೆಯಾಗುವುದು ಅನುಮಾನವಾಗಿದೆ. ಇವರ ಸ್ಥಾನದಲ್ಲಿ ಯುವ ಆಟಗಾರರಾದ ವಿರಾಟ್ ಕೊಹ್ಲಿ,
ನವದೆಹಲಿ, ಜ. 22 : ಪೂರ್ವ ವಲಯ ಸೇನಾಪಡೆಯ ಕಮಾಂಡೆಂಟ್ ಲೆಫ್ಟಿನೆಂಟ್ ಜನರಲ್ ವಿ ಕೆ ಸಿಂಗ್ ಅವರು ಭಾರತೀಯ ಸೇನಾಪಡೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಪ್ರಸ್ತುತ ಸೇನಾಪಡೆ ಮುಖ್ಯಸ್ಥರಾಗಿರುವ ದೀಪಕ್ ಕಪೂರ್ ಅವರ ಅಧಿಕಾರಾವಧಿ ಮಾರ್ಚ್ 31 ಕ್ಕೆ ಕೊನೆಗೊಳ್ಳಲಿದ್ದು, ಅಂದೇ ವಿ ಕೆ ಸಿಂಗ್ ಅಧಿಕಾರ ಸ್ವೀಕರಿಸಲಿದ್ದಾರೆ. 1970 ರಲ್ಲಿ ಸೇನಾಪಡೆಯ ರಜಪೂತ್ ರಜಿಮೆಂಟ್