ಬೆಂಗಳೂರು, ನ. 21 : ನಗರದ ಜಯನಗರದಲ್ಲಿರುವ ತನಿಷ್ಕ್ ಆಭರಣದಂಗಡಿಯ ದರೊಡೆ ಮಾಡಲು ಸಂಚು ಹೂಡಿದ್ದ ನಾಲ್ವರು ಯುವಕರನ್ನು ಸಂಪಿಗೆಹಳ್ಳಿ ಉಪವಿಭಾಗದ ಪೊಲೀಸರು ಶನಿವಾರ ಬಂಧಿಸಿದ್ದಾರೆ.ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಸಾಜೇಶ್, ಸರದಾರ್ ಪಾಶಾ, ಇಮ್ರಾನ್ ಮತ್ತು ತೊಹೀದ್ ಎಂಬ ನಾಲ್ವರನ್ನು ಬಂಧಿಸಲಾಗಿದ್ದು, ಅವರಿಂದ ಸಿಂಗರಿಸಲಾಗಿದ್ದ ಕ್ವಾಲಿಸ್ ವಾಹನ, ಏರ್ ಪಿಸ್ತೂಲು, ಹರಿತ ಆಯುಧ, ಮಂಕಿ ಕ್ಯಾಪ್,
ಬೆಂಗಳೂರು, ನ. 20 : ಆದಾಯ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಚಕ್ರಪಾಣಿ ಸೇರಿದಂತೆ ನಗರದ ನಾಲ್ಕು ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಏಕಾಕಾಲದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಬಳ್ಳಾರಿ ರಸ್ತೆಯಲ್ಲಿರುವ ಕೋಡಿಗೆಹಳ್ಳಿ ನಿವಾಸಿ ಕಾಂಗ್ರೆಸ್ ನಾಯಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಚಕ್ರಪಾಣಿ, ಜಯಮಹಲ್ ನಲ್ಲಿರುವ
ಬೆಂಗಳೂರು, ನ. 20 : 1967ರಲ್ಲಿ ತರೀಕೆರೆಯಲ್ಲಿ ನಡೆದ ಅಖಿಲ ಭಾರತ ಪ್ರಥಮ ಜಾನಪದ ಸಾಹಿತ್ಯ ಸಮ್ಮೇಳನ ಸ್ಮರಣ ಗ್ರಂಥ 'ಹೊನ್ನಬಿತ್ತೇವು ಹೊಲಕೆಲ್ಲ' ಮರು ಮುದ್ರಿತ ಕೃತಿ ಬಿಡುಗಡೆ ಸಮಾರಂಭ ಹಾಗೂ ಜನಪದ ಕಲಾಪ್ರದರ್ಶನವನ್ನು ನವೆಂಬರ್ 23ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದ ಸಂಸ ಬಯಲುರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ
ಬೆಂಗಳೂರು, ನ. 20 : ಏಷ್ಯಾದಲ್ಲೇ ಸಮೂಹ ಸಾರಿಗೆಯ ಅತಿ ದೊಡ್ಡ ಬಸ್ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೆಂಪೇಗೌಡ ಬಸ್ ನಿಲ್ದಾಣವನ್ನು ನವೆಂಬರ್ ಅಂತ್ಯದೊಳಗೆ ಮುಚ್ಚಲು ಸರಕಾರ ನಿರ್ಧರಿಸಿದೆ. ಇಲ್ಲಿಂದ ಕಾರ್ಯನಿರ್ವಹಿಸುತ್ತಿದ್ದ ಬಸ್ ಗಳನ್ನೂ ನಗರದ ನಾಲ್ಕು ದಿಕ್ಕಿನಲ್ಲಿ ತಾತ್ಕಾಲಿಕವಾಗಿ ನಿರ್ಮಿಸುತ್ತಿರುವ ನಿಲ್ದಾಣಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಆದರೆ, ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಮೆಟ್ರೋ
ಇದು ಲವ್ ಜಿಹಾದ್ನ ಪರಿವರ್ತಿತ ರೂಪ. ಮುಸ್ಲಿಂ ಜನಾಂಗದ ಯುವತಿಯನ್ನು ಪ್ರೀತಿಸಿದನೆಂಬ ಕಾರಣಕ್ಕೆ ಹೆಣವಾಗಿ ಹೋದ ರಿಯಲ್ ಎಸ್ಟೇಟ್ ಉದ್ಯಮಿಯ ದಾರುಣ ಕತೆ ಇದು.ಅನಾಥ ಶವ ಎಂದು ಬಿ ರಿಪೋರ್ಟ್ ಹಾಕಿ ಕೈ ಚೆಲ್ಲುತ್ತಿದ್ದ ಪೊಲೀಸರು ಅಪರೂಪಕ್ಕೆ ತೋರಿದ ಸಮಯ ಪ್ರಜ್ಞೆಯಿಂದ 8 ತಿಂಗಳ ಹಿಂದೆ ನಡೆದ ನರಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ತಮ್ಮ ಜನಾಂಗದ ಯುವತಿಯನ್ನು
ಬೆಂಗಳೂರು, ನ. 19 : ನಿಮ್ಮ ಬಡಾವಣೆಯಲ್ಲಿ ರಸ್ತೆಗಳು ಹದಗೆಟ್ಟಿವೆಯೇ ? ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲವೇ ? ಚರಂಡಿಗಳು ಹಾಳಾಗಿವೆಯೇ ? ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗಿವೆಯೇ ? ಈ ತರಹದ ನಾಗರಿಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಆನ್ ಲೈನ್ ಮೂಲಕ ನೇರವಾಗಿ ಬೆಂಗಳೂರು ಮಹಾನಗರ ಪಾಲಿಕೆಗೆ ದೂರು ನೀಡಬಹುದು ಅಲ್ಲದೇ, ಎಸ್ಎಂಎಸ್ ಸಂದೇಶ ಕಳುಹಿಸುವ ಮೂಲಕ
ಬೆಂಗಳೂರು, ನ. 19 : ಮಧ್ಯರಾತ್ರಿಯಲ್ಲಿ ಅನೈತಿಕ ಚಟುವಟಿಕೆ ಹಾಗೂ ಅಶ್ಲೀಲ ನೃತ್ಯದಲ್ಲಿ ತೊಡಗಿದ್ದ 20 ಯುವತಿಯರು ಸೇರಿದಂತೆ ಸುಮಾರು 38 ಮಂದಿಯನ್ನು ಬಂಧಿಸುವಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಸೇಂಟ್ ಮಾರ್ಕ್ಸ್ ರಸ್ತೆಯ ಶೂಲೆ ವೃತ್ತದಲ್ಲಿರುವ ಟೊಪಾಜ್ ಬಾರ್ ನಲ್ಲಿ ಬುಧವಾರ ಮಧ್ಯರಾತ್ರಿವರೆಗೂ 20 ಮಂದಿ ಯುವತಿಯರು ಅಶ್ಲೀಲ ನೃತ್ಯದಲ್ಲಿ ತೊಡಗಿದ್ದರು. ವಿಷಯ ತಿಳಿದ
ನವೆಂಬರ್ 22, ಶ್ರೀ ಸುಬ್ರಮಣ್ಯ ಷಷ್ಠಿ ಅಥವಾ ಚಂಪಾಷಷ್ಠಿ ಅಥವಾ ಸುಬ್ರಾಯನ ಷಷ್ಠಿ. ನಾಗನಿಗೆ ಪಂಚಮಿಯಾದರೆ ಸುಬ್ರಮಣ್ಯನಿಗೆ ಷಷ್ಠಿ. ಈ ಹಬ್ಬದ ಪೌರಾಣಿಕ ಹಿನ್ನೆಲೆ ಮತ್ತು ಮಹತ್ವವನ್ನು ವಿವರಿಸುವ ಲೇಖನ. ಸುಬ್ರಾಯನಲ್ಲಿ ನೀವು ಹೊತ್ತ ಹರಕೆಗಳು ಸಾಕಾರಗೊಳ್ಳಲಿ.* ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ), ಬೆಂಗಳೂರುಚಾಂದ್ರಮಾನ ಸಂವತ್ಸರದ ತಿಂಗಳುಗಳ ಎಣಿಕೆಯಲ್ಲಿ ಒಂಭತ್ತನೆಯದಾಗಿ, ಮಾರ್ಗಶೀರ್ಷ ಮಾಸವು ತನ್ನ ಹಿಂದಿನ ಎಲ್ಲ ತಿಂಗಳುಗಳಿಗಿಂತ
ನವೆಂಬರ್ 12ರಂದು Alcatel-Lucent ಐಟಿ ಕಂಪನಿಯಲ್ಲಿ ಸಂಭ್ರಮದ 52ನೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು ಸಮಾರಂಭದಲ್ಲಿ ಕನ್ನಡ ಕಲಾವಿದರು ಒಂದು ನಗೆ ನಾಟಕ ಪ್ರದರ್ಶಿಸಿದರು. ಆ ನಾಟಕದ ಕೊಂಡಿ ಇಲ್ಲಿದೆ. ನೀವೂ ನಕ್ಕು ನಕ್ಕು ನಲಿಯಿರಿ. ಇಡೀ ಅಲ್ ಕಟೆಲ್ ಕಂಪನಿಯ ಕನ್ನಡ ಕನ್ನಡ ಗೆಳೆಯ ಗೆಳತಿಯರು ಹೋ ಎಂದು ಎಬ್ಬಿಸುವ
ಕಾರ್ತೀಕ ಮಾಸ ಕೊನೆಯ ಸೋಮವಾರ, ಅಂದರೆ ಇಂದು ಬಸವನಗುಡಿಯಲ್ಲಿ ಸಂಭ್ರಮದ ಕಡಲೆಕಾಯಿ ಪರಿಷೆ. ಮದುವೆಯಾಗಿದ್ದರೆ ಹೆಂಡತಿ ಮಕ್ಕಳೊಂದಿಗೆ, ಮದುವೆಯಾಗಿರದಿದ್ದರೆ ಸ್ನೇಹಿತರೊಂದಿಗೆ ಪರಿಷೆಗೆ ಹೋಗಿ ಶೇರುಗಟ್ಟಲೆ ಕಡಲೆಕಾಯಿ ಅಥವಾ ಶೇಂಗಾ ಕೊಂಡು ಮಸ್ತ್ ಮಜಾ ಉಡಾಯಿಸುವ ಸುಸಂಧಿ. ಮಕ್ಕಳಿಗೆ ಬಲೂನು, ಹೆಂಡತಿಗೆ ನಾಲ್ಕು ಶೇರು ಕಡಲೆಕಾಯಿ ಕೊಡಿಸಿದರೆ ನಿಮ್ಮ ಜವಾಬ್ದಾರಿ ಅಲ್ಲಿಗೆ ಮುಗಿಯಿತು. ಹೆಂಡತಿ ನಿಮಗಾಗಿ ಕಡಲೆಬೀಜದ ಖಾರಾ