ಬೆಂಗಳೂರು, ಆ. 29 : ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಸಿಟಿ ಟ್ಯಾಕ್ಸಿ ಲಾರಿಗೆ ಡಿಕ್ಕಿ ಹೊಡೆದು ವಿಪ್ರೋ ಕಂಪನಿಯ ಜನರಲ್ ಮ್ಯಾನೇಜರ್ ಮೃತಪಟ್ಟು ಕಾರು ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗಿನಜಾವ ನಡೆದಿದೆ. ಜೆಪಿ ನಗರದ ನಿವಾಸಿ ಸುರೇಶವೀರ್ ರಾಘವ್ (40) ಮೃತಪಟ್ಟವರು. ಚಾಲಕ ದಯಾನಂದ್ ಎಂಬುವರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೆನ್ನೈ
ವಿವಾದಾತ್ಮಕ ಚಿತ್ರಗಳ ಸಾಲಿಗೆ ಮತ್ತೊಂದು ಕನ್ನಡ ಚಿತ್ರ 'ದೇವನಹಳ್ಳಿ' ಹೊಸದಾಗಿ ಸೇರ್ಪಡೆಯಾಗಿದೆ. ಈ ಚಿತ್ರದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಅವರ ಮಗ ಕುಮಾರಸ್ವಾಮಿ ಮತ್ತು ನಟಿ ರಾಧಿಕಾ ಮೇಲೆ ತೀಕ್ಷ್ಣ ವಿಡಂಬನೆಯ ಹಾಡೊಂದನ್ನು ರಚಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧ ಪಟ್ಟ ವಿವಾದಾತ್ಮಕ ಅಂಶಗಳನ್ನು ಈ ಚಿತ್ರ ಸ್ಪರ್ಶಿಸಿದೆ.
ಬೆಂಗಳೂರು, ಜೂ. 26 : ಮುಂಬೈಗೆ ತೆರಳಬೇಕಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಬಾಂಬ್ ಇರುವುದಾಗಿ ಅದರ ಪೈಲೆಟ್ ಗೆ ಕರೆ ಮಾಡಿ ಬೆದರಿಕೆ ಹಾಕಿದ ಆರೋಪದ ಮೇಲೆ ವಾಯುಪಡೆಯ ವೈದ್ಯನೊಬ್ಬನನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿರುವ ಘಟನೆ ಗುರುವಾರ ನಡೆದಿದೆ. ಮುಂಬೈನ ಡಾ ಅಕ್ಷಯ್ ಗೋಯಲ್ (35) ಬಂಧಿತ ಆರೋಪಿ. ಕೆಲಸದ ನಿಮಿತ್ತ ನಗರಕ್ಕೆ
ಬೆಂಗಳೂರು, ಜೂ. 18 : ಕಳೆದ ಕೆಲ ದಿನಗಳ ಹಿಂದೆ ಅಮೆರಿಕದಿಂದ ಬೆಂಗಳೂರಿಗೆ ಬಂದಿದ್ ಇಬ್ಬರಲ್ಲಿ ಕಾಣಿಸಿಕೊಂಡಿದ್ದ ಹಂದಿಜ್ವರ, ಇದೀಗ ಮತ್ತೆ ಮೂವರಿಗೆ ಎಚ್ 1 ಎನ್ 1 ವೈರಾಣು ಇರುವುದು ಪತ್ತೆಯಾಗಿದೆ. ಅಮೆರಿಕದಿಂದ ಬಂದ 12 ವರ್ಷದ ಹಾಗೂ ಬ್ಯಾಂಕಾಕ್ ನಿಂದ ಬಂದಿರುವ ಇಬ್ಬರಿಗೆ ಈ ವೈರಸ್ ಇರುವುದು ಪತ್ತೆ ಹಚ್ಚಲಾಗಿದೆ. ಎಚ್ 1ಎನ್ 2
ಬೆಂಗಳೂರು, ಜೂ.13: ಬೆಂಗಳೂರಿನಲ್ಲಿ ನಾಲ್ಕು ಮಂದಿಗೆ ಎಚ್1ಎನ್1ಸೋಂಕು ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಚ್1ಎನ್1 ಶಂಕಿತ ರೋಗಿಗಳು ಪತ್ತೆಯಾಗಿದ್ದು ಅವರ ರಕ್ತದ ಮಾದರಿಗಳನ್ನು ಪುಣೆಯ ನ್ಯಾಶನಲ್ ಇನಿಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಸಾಫ್ಟ್ ವೇರ್ ದಂಪತಿ ಸೇರಿದಂತೆ ತಾಯಿ, ಮಗಳಿಗೆ ಎಚ್1ಎನ್1 ಸೋಂಕು ಇರುವ ಬಗ್ಗೆ ಶಂಕೆ
ನವದೆಹಲಿ, ಜೂ. 10: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಕೇಂದ್ರ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಅವರು ಮಂಗಳವಾರ ಕರ್ನಾಟಕದಿಂದ ಡಾ. ಹೇಮಚಂದ್ರ ಸಾಗರ್ ನೇತೃತ್ವದಲ್ಲಿ ಆಗಮಿಸಿದ್ದ ಶಾಸಕರ ನಿಯೋಗಕ್ಕೆ ಭರವಸೆ ನೀಡಿದರು.ಬೆಂಗಳೂರು ವಿಮಾನಯಾನ ಅಭಿವೃದ್ಧಿ ಜಂಟಿ ಸದನ ಸಮೀಕ್ಷೆ ಸಮಿತಿ ಯ 20 ಜನ ಶಾಸಕರ ನಿಯೋಗವು ಪ್ರಫುಲ್ ಪಟೇಲ್
ಬೆಂಗಳೂರು, ಅ.20: ನವೆಂಬರ್ 1 ರಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯಾಧುನಿಕ ಟಾಟಾ ಮಾರ್ಕೊಪೋಲೊ ಬಸ್ ಗಳ ಸೇವೆಯನ್ನು ಆರಂಭಿಸುವುದಾಗಿ ಸಾರಿಗೆ ಸಚಿವ ಆರ್.ಅಶೋಕ್ ಇಂದು ತಿಳಿಸಿದ್ದಾರೆ. ಸಾರಿಗೆ ಸಚಿವರ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯ ಉತ್ತಮ ಬಸ್ ಸೇವೆಯನ್ನು ಒದಗಿಸಲಾಗಿದೆ. ನ.1ರಿಂದ ಮಾರ್ಕೊಪೊಲೋ ಬಸ್
ಬೆಂಗಳೂರು, ಸೆ. 10 : ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಳಪೆ ಗುಣಮಟ್ಟದ ಕುರಿತು ಕಿಡಿಕಾರಿರುವ ಮುಖ್ಯಮಂತ್ರಿ ಯಡಿಯೂರಪ್ಪ ನಗರಕ್ಕೆ ಇನ್ನೊಂದು ವಿಮಾನ ನಿಲ್ದಾಣ ಅಗತ್ಯವಿರುವ ಹಿನ್ನೆಲೆಯಲ್ಲಿ ಎಚ್ಎಎಲ್ ವಿಮಾನ ನಿಲ್ದಾಣ ಪುನಾರಂಭ ಕುರಿತು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಬೆಂಗಳೂರಿಗೆ ವಿಶ್ವ ದರ್ಜೆ ಗುಣಮಟ್ಟದ ಏರ್ ಪೋರ್ಟ್ ನಿರ್ಮಾಣ ಮಾಡಬೇಕಿತ್ತು. ಈಗ ನಿರ್ಮಾಣಗೊಂಡಿರುವ ವಿಮಾನನಿಲ್ದಾಣ ಹಾಗೂ
ಬೆಂಗಳೂರು, ಆ. 25 : ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ನ ಪ್ರಥಮ ಅಂತಾರಾಷ್ಟ್ರೀಯ ವಿಮಾನ ಯಾನ ಸೆ. 3 ರಂದು ನಗರದಿಂದ ಲಂಡನ್ ಗೆ ಹಾರುವ ಮೂಲಕ ಪ್ರಾರಂಭವಾಗಲಿದೆ. ಬೆಂಗಳೂರು ಹಾಗೂ ಲಂಡನ್ ವಿಮಾನಯಾನ ಪ್ರತಿ ನಿತ್ಯ ಇರುತ್ತದೆ. ಬೆಂಗಳೂರಿನ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಬೆಳಗ್ಗೆ 8:40 ಕ್ಕೆ ಹೊರಟ ವಿಮಾನ
ಬೆಂಗಳೂರು, ಆ. 19 : ಖಾಸಗಿ ಸಹಭಾಗಿತ್ವದಲ್ಲಿ ನಡೆಯುವ ಸರ್ಕಾರಿ ಯೋಜನೆಗಳು ರಾಜ್ಯ ಮಾಹಿತಿ ಹಕ್ಕು ಆಯೋಗದ ವ್ಯಾಪ್ತಿಯಡಿಯಲ್ಲಿ ಬರಲಿದೆ. ಈ ಹಿನ್ನೆಲೆಯಲ್ಲಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್) ರಾಜ್ಯ ಮಾಹಿತಿ ಹಕ್ಕು ಆಯೋಗದ ಮಿತಿಗೆ ಒಳಪಟ್ಟಿದೆ ಎಂದು ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತ ಕೆ.ಕೆ. ಮಿಶ್ರಾ ಹೇಳಿದ್ದಾರೆ. ರಾಜ್ಯ ಮಾಹಿತಿ ಹಕ್ಕು ಆಯೋಗದ ಮುಖ್ಯ