ಬೆಂಗಳೂರು, ನ. 21 : ಪ್ರೀತಿಯ ನಾಟಕವಾಡಿ ಕೆಲಸ ಕೊಡಿಸುವ ನೆಪವೊಡ್ಡಿ ಮಹಿಳೆಯೊಬ್ಬಳನ್ನು ದುಬೈನ ಶ್ರೀಮಂತನೊಬ್ಬನಿಗೆ ಮಾರಾಟ ಮಾಡಲೆತ್ನಿಸಿದ ಇಬ್ಬರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಇಂದು ಬಂಧಿಸಿದ್ದಾರೆ.ನಕಲಿ ಪಾಸ್ಪೋರ್ಟ್ ಸೃಷ್ಟಿಸಿ ಸರಸ್ವತಿ ಎಂಬ ಮಹಿಳೆಯನ್ನು ದುಬೈನ ಶ್ರೀಮಂತ ಶೇಕ್ ಎಂಬುವವನಿಗೆ ಒಂದೂವರೆ ಲಕ್ಷಕ್ಕೆ ಮಾರಾಟ ಮಾಡಲೆತ್ನಿಸಿದ್ದ ಮಂಗಳೂರು ಮೂಲದ ಅಬ್ದುಲ್ ರಜಾಕ್ ಮತ್ತು ಜಾಕಿರ್
ಮಾಗಡಿ, ನ. 12 : ಸಾಮಾನ್ಯವಾಗಿ ಪ್ರೀತಿಯ ಬಲೆಗೆ ಸಿಕ್ಕಿಕೊಂಡ ಪ್ರೇಮಿಗಳಿಗೆ ವಿವಾಹವಾಗಲು ಪೋಷಕರು ಅಡ್ಡಿಯಾಗುತ್ತಾರೆ. ಆದರೆ ಪೋಷಕರ ಒಪ್ಪಿಗೆ ಪಡೆದು ಅಂತರ್ಜಾತಿಯ ಪ್ರೇಮವಿವಾಹವಾದ ಯುವ ಜೋಡಿಗಳು ತಮ್ಮ ಕುಲಬಾಂಧವರಿಂದಲೇ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ದುಡುಪನಹಳ್ಳಿಯಲ್ಲಿ ಸೋಲಿಗ ಜನಾಂಗದ ಯುವಕ ಗಂಗಾಮತಸ್ಥ ಜನಾಂಗದ ಯುವತಿಯನ್ನ ವರಿಸಿದ್ದಕ್ಕಾಗಿ ಬಹಿಷ್ಕಾರದ ಶಿಕ್ಷೆಯನ್ನೆದುರಿಸಬೇಕಾಗಿದೆ.ಸಮಾಜದಲ್ಲಿ ಸಮಾನತೆ ಮೂಡಿಸಬೇಕಾಗಿರುವ ಇಂತಹ
ಅಚ್ಚುಕಟ್ಟಾಗಿ ನೇಯ್ದಿರುವ ಕಥೆ, ಅತ್ಯದ್ಭುತ ಸಂಭಾಷಣೆ, ಬರಿದಾದ ಗುಡ್ಡವನ್ನೂ ಸುಂದರ ಕಲಾಕೃತಿಯಂತಾಗಿಸುವ ಛಾಯಾಗ್ರಹಣ, ಇವೆಲ್ಲಕ್ಕೆ ಕಲಶವಿಟ್ಟಂತೆ ಕಥೆಯೊಂದಿಗೆ ಹರಿವ ಮಾಧುರ್ಯ ತುಂಬಿದ ಹಾಡುಗಳು... ಇವೆಲ್ಲವನ್ನು ಅದ್ಭುತ ದಿಗ್ದರ್ಶನದಿಂದ ಹಿಡಿದಿಟ್ಟು ಯೋಗರಾಜ ಭಟ್ಟರು 'ಮನಸಾರೆ'ಯಲ್ಲಿ ಒಂದೇ ಒಂದು ಮಳೆಯ ಹನಿಯಿಲ್ಲದೇ ಪ್ರೀತಿಯ ಹುಚ್ಚು ಮಳೆ ಸುರಿಸಿದ್ದಾರೆ, ತುಂತುರು ಹನಿಯಿಲ್ಲದೇ ಕಾಮನಬಿಲ್ಲಿನ ತೋರಣ ಕಟ್ಟಿದ್ದಾರೆ.* ಪ್ರಸಾದ ನಾಯಿಕಬಹುಶಃ ಪುಟ್ಟಣ್ಣ ಕಣಗಾಲರ
ಅಷ್ಟು ಪ್ರೀತಿಯಿಂದ ನೀನು ಯಾವತ್ತೂ ಉಣಬಡಿಸಿರಲಿಲ್ಲವೇನೋ? ಬೆರಳ ತುದಿಯಲ್ಲಿ ಮೊಸರಕೆನೆ ನೆಕ್ಕಿಸಿದವಳು ಯಾವಾಗ ಜೇನು ಬೆರೆಸಿದ್ದೆಯೋ? ನೀನು ಒಂದೊಂದಾಗಿ ಕಿಟಕಿಯ ಪರದೆಗಳನ್ನು ಹಾಕುತ್ತ ಬಂದೆ. ಅದು ಮೇಘ ಮಂಥನದ ಆಹ್ವಾನ. ನನ್ನೊಳಗಿನ ನಾಭಿಯಾಳದಲ್ಲಿ ಪ್ರಾಣ ಬಂದಿತ್ತು. ನಿನ್ನ ಮೈಯ ಘಮದಲ್ಲಿ ಈಸು ಬಿದ್ದ ಘಳಿಗೆ, ನನ್ನನ್ನು ನಾನು ಇಡಿಯಾಗಿ ಮರೆತಿದ್ದೆ.* ನಿನ್ನವನುಒಂದ್ನಿಮಿಷ! ಹೊರಡುವ ನಿನ್ನ ಸಡಗರಕ್ಕೆ ನಾನು
ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಜೋತು ಬಿದ್ದರೆ, ಆತುಕೊಂಡರೆಮುಜುಗರವಿಲ್ಲ.ನವಿರ ಪುಳಕಕೆ ಬೇಲಿಯಿಲ್ಲ,ಎಡವಿ ಬಿಟ್ಟರೆ ಕಲರವವಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಬಳುಕಿ ಸೆಳೆವ, ತುಳುಕಿ ತೋರುವಕರ್ಮವಿಲ್ಲ.ತೊಳಲಾಟದ ಪ್ರೇಮಿಗಳಿಲ್ಲ,ಒಳನೋಟದ ನೋಡುಗರಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಹಳಸು ರಂಗಿನ, ಹುಸಿ ಗಂಧದಲೇಪವಿಲ್ಲ.ಕಮರಿದ ಮಲ್ಲಿಗೆಯಿಲ್ಲ,ಸೊಕ್ಕಿನ ಪಲ್ಲಂಗವಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ತೆರೆವ ಗುಂಡಿಯ ಮರೆತು ಬಿಡುವಸೋಗು ಬೇಕಿಲ್ಲ.ಮೀಟುವ ವಿಕೃತಿಗಳಿಲ್ಲ,ಕತೆಯಾಗುವ ಸರಕುಗಳಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.
ತುಂಬ ಒಳ್ಳೆಯವನು, ತುಂಬ ನಂಬಿಗಸ್ಥ, ಕಪಟವಿಲ್ಲದವನು ಅನ್ನಿಸಿಕೊಂಡು ಬಿಟ್ಟ ಮಾತ್ರಕ್ಕೆ ಒಬ್ಬನ ಮೇಲೆ ನಂಬಿಕೆ ಮೂಡುವುದಿಲ್ಲ. ಅವನು ಎಷ್ಟರ ಮಟ್ಟಿಗೆ ದಕ್ಷ ಎಂಬುದು ಮುಖ್ಯವಾಗುತ್ತದೆ. ನೀನು ಎಷ್ಟು ಪ್ರಾಮಾಣಿಕ ಎಂಬುದು ಎಷ್ಟು ಮುಖ್ಯವೋ, ನಿನ್ನ ಕರ್ತೃತ್ವ ಶಕ್ತಿ ಎಷ್ಟಿದೆ ಎಂಬುದೂ ಮುಖ್ಯವಾಗುತ್ತದೆ. ಅಂತಿಮವಾಗಿ ನಮ್ಮ ಕ್ಯಾರೆಕ್ಟರು ಎಂಬುದೊಂದಿರುತ್ತದಲ್ಲ? ಅದು ಇಡೀ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ನಂಬಿಕೆಗೆ
ತಿರುವಳ್ಳುವರ್ ತಮಿಳುನಾಡಿನ ಮಹಾನ್ ಕವಿ. ಮಧುರೆ ಜಿಲ್ಲೆಯ ಕಾವೇರಿ ತೀರದ ಪೂ೦ಪುಹಾರ್ ಹಳ್ಳಿಯಲ್ಲಿ ಹುಟ್ಟಿದರೆ೦ದು ಕೆಲವರ ಅಭಿಪ್ರಾಯ. ಮತ್ತೆ ಕೆಲವರು ಚೆನ್ನೈನಲ್ಲಿರುವ ಮೈಲಾಪುರ್ ಸ್ಥಳದವರೆನ್ನುತ್ತಾರೆ. ತಿರುವಳ್ಳುವರ್ ಅವರು 133 ಅಧ್ಯಾಯದ ತಿರುಕ್ಕುರಳ್ ಎ೦ಬ ಮಹಾ ಗ್ರ೦ಥ ರಚಿಸಿದ ಕವಿ. ಈತನ ಕಾಲ ನಿಗದಿಯಾಗಿಲ್ಲವಾದರೂ ಕ್ರಿಸ್ತಪೂರ್ವ 2ರಿಂದ ಹಿಡಿದು ಕ್ರಿಸ್ತಶಕ 8ವರೆಗೆ ಇರಬಹುದು ಎ೦ದು ಹೇಳಲಾಗಿದೆ. ಇವರ ಹೆಸರಿನಲ್ಲಿ
* ಎಸ್. ಕೆ. ಮಧುಸೂದನ, ಹೊಸದುರ್ಗಹಾ! ತೊರೆದ ಒಲುಮೆ ಜೀವಕೆ ತಾರದ ಬಲುಮೆ?!ಒಳಮೊರೆತ ಮೊಗೆದೊಗೆದ ಜೀವಸರಕುಒಳದನಿಗೆ ಕಿವಿಗೊಡದ ಅರಸಿ ತೊರೆದ ಅರಸೊತ್ತಿಗೆಎನಿತೋ ಗರಿಗೆದರಿ ಕಾಲ ಕರುಣಿಸಿದ ಕರುಳದನಿಮರವಾಗಿಹಿಗ್ಗಿ ದಾರಿದೂರವಹಾರಿ ಕಿವಿಗೊಲಿದ ವರವೆ!ದನಿತೆಗೆದು ಕೋರದ ಒಳಗಣ್ಣ ಇನಿದನಿಗೆ ಸಂದ ಮನೋರಥಇಹತೀರ್ಥಯಾತ್ರೆ ನೆಪ ನೇಪಥ್ಯದ ಸೂತ್ರಕಾರ! ಮನ ಮಾತುತಿದಿಯೊತ್ತಿ ಹಾಯಿದೋಣಿಗೆ ಬಿಗಿದ ಲಂಗರುದಿನದಿನದ ಪಯಣಕೆ ಸಜ್ಜುಗೊಳಿಸಿದ ತಿಳಿಯೊಲವುಮಾಸದ ನೆನಪೆ ತುಂಬು
ಆಗೊಮ್ಮೆ-ಈಗೊಮ್ಮೆ ನಾನು ಅವಳನ್ನು ನೋಡ್ತಾ ಇದೆ. ಅವಳು ನನ್ನ ಕಡೆ ನೋಡಿದ ಕೂಡಲೇ ಬೇರೆ ಕಡೆಗೆ ನೋಟ. ಹಾಗೆಯೇ ಅವಳು ನನ್ನ ಮೇಲೆ ಕಣ್ಣು ಹಾಯಿಸ್ತಾ ಇದ್ದಳು. ನಾನು ನೋಡಿದ ಕೂಡಲೇ ನೋಟ ಬೇರೆಡೆಗೆ ಪಲಾಯನ. ಹೀಗೆ, ನನ್ನ-ಅವಳ ಕಣ್ಣುಗಳು ಆಗಾಗ ಸಂಪರ್-ಕಿಸ್-ಉತ್ತಿದವು. ಇಷ್ಟೆಲ್ಲಾ ಕಣ್ಣಲ್ಲಿ ನಡೆಯುತ್ತಿದ್ದಾಗ...* ಕಿರಣ ಕಾಟವಾ, ಬೆಂಗಳೂರು ಪಿ.ಯು.ಸಿ 2ನೇ ವರ್ಷ. ನಾನು,
* ಕೆ.ಆರ್.ಎಸ್. ಮೂರ್ತಿ, ಅಮೆರಿಕನೋಡೋಣ ಬನ್ನಿ, ಬೇವು ಬೆಲ್ಲವ ತನ್ನಿ, ನಮ್ನಿಮ್ಮ ಒಡನಾಟದ ಮಾಯವಿದುಕಹಿಯೆಲ್ಲ ಸಿಹಿಯಾಯ್ತು, ಮನಸೆಲ್ಲ ಹಗುರಾಯ್ತು, ನಮ್ಮೆಲ್ಲರ ಊರಿದುಉಗಾದಿಯ ಉಲ್ಲಾಸಕೆ ಎನ್ನ ಬುಟ್ಟಿಯ ಫುಲ್ಲ ಕುಸುಮವೂ ನಗೆ ಬೀರುತಿದೆಬನ್ನಿರಿ ನೀವೆಲ್ಲಾ ನೋಡೋಣ ಹೆಮ್ಮೆಯಲಿ ನಮ್ಮೂರ ಸಂತಸದ ಹಬ್ಬವಿದುಹಸಿರು ತೋರಣ, ಚಿಗುರು ಮಾವಿನ ಎಲೆ, ಹಸಿರು ಗೊಂಚಲು ಕೈ ಬೀಸಿ ಕರೆಯುತಿದೆರಂಗು ರಂಗಿನ ರಂಗವಲ್ಲಿಯೂ ಸಂಭ್ರಮವ