55ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ಅಕ್ಟೋಬರ್ 21ರಂದು ದೆಹಲಿಯ ವಿಜ್ಞಾನ್ ಭವನದಲ್ಲಿ ನಡೆಯಲಿದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಪ್ರಶಸ್ತಿ ಪ್ರದಾನಮಾಡುತ್ತಾರೆ. ಹಿರಿಯ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ , ಗಾಯಕ ಮನ್ನಾ ಡೇ ಮುಂತಾದ ದಿಗ್ಗಜರು ಹಾಜರಿರಲಿದ್ದಾರೆ. ಮನ್ನಾ ಡೇ ಅವರು ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಕನ್ನಡದ ಉಮಾಶ್ರೀ ಅವರು `ಗುಲಾಬಿ
ಮುಂಬೈ, ಸೆ. 30 : ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಮಗ ರಾಜೇಂದ್ರ ಅಲಿಯಾಸ್ ರಾವ್ ಸಾಹೇಬ್ ಶೇಖಾವತ್ ಸ್ಪರ್ಧಿಸಿದ್ದಾರೆ. ಇವರ ಒಟ್ಟು ಆಸ್ತಿ 6.68 ಕೋಟಿ ರುಪಾಯಿಗಳು. ಅಮರಾವತಿ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸುವಾಗ ಅವರು ನೀಡಿರುವ ಅಫಿಡವಿಟ್ ನಲ್ಲಿ ಈ ವಿವರಗಳಿವೆ. ಕಾಂಗ್ರೆಸ್ ಟಿಕೆಟ್ ಸಿಗದೆ ಬಂಡಾಯ ಅಭ್ಯರ್ಥಿಯಾಗಿ
2007ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಹಿಂದಿ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಮನ್ನಾ ಡೇ ಅವರಿಗೆ ಲಭಿಸಿದೆ. ತೊಂಬತ್ತರ ಹರಯದ ಮನ್ನಾ ಡೇ ಅವರಿಗೆ ಈಗಾಗಲೇ ಪದ್ಮಭೂಷಣ, ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಕೊಟ್ಟು ಗೌರವಿಸಲಾಗಿದೆ. ಕೋಲ್ಕತ್ತಾದಲ್ಲಿ ಹುಟ್ಟಿದ ಮನ್ನಾ ಅವರು ಕನ್ನಡ ಸೇರಿದಂತೆ ಹನ್ನೊಂದು ಭಾಷೆಗಳಲ್ಲಿ 3500 ಹಾಡುಗಳನ್ನು ಹಾಡಿದ್ದಾರೆ.
ಅಹಮದಾಬಾದ್, ಜು. 28 : ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಮಾರ್ಪಾಡಿಗೆ ರಾಷ್ಟ್ರಪತಿಗಳು ನೀಡಿದ್ದ ಸಲಹೆ ಸೂಚನೆಗಳನ್ನು ದಿಕ್ಕರಿಸಿ ಯಾವುದೇ ಬದಲಾವಣೆಗಳನ್ನು ಮಾಡದೆ ಇಂದು ಗುಜರಾತ್ ಸರಕಾರ ವಿಧಾನಸಭೆಯಲ್ಲಿ ಸರ್ವನುಮತದಿಂದ ಕಾಯ್ದೆಯನ್ನು ಅಂಗೀಕರಿಸಿತು. ಕರ್ನಾಟಕದ ಕೋಕಾ ಮತ್ತು ಮಹಾರಾಷ್ಟ್ರದಲ್ಲಿರುವ ಮೋಕಾ ಕಾಯ್ದೆಯಂತೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಗುಜಕೋಕಾ (GUJCOC) ಕಾಯ್ದೆಗೆ ಹಸಿರು ನಿಶಾನೆ ತೋರಿಸಿದ್ದಾರೆ. 2004ರಲ್ಲಿ
ನವದೆಹಲಿ, ಜೂ. 12 : ಭಾರತದ ಹೃದಯ ಕೇಂದ್ರ ಸಂಸತ್ ಮೇಲೆ ದಾಳಿ ನಡೆಸಿದ್ದ ಪಾಕಿಸ್ತಾನ ಮೂಲದ ಉಗ್ರರ ಮುಖಂಡ ಅಫ್ಜಲ್ ಗುರುನನ್ನು ಹೇಗಾದರು ಮಾಡಿ ಗಲ್ಲು ಶಿಕ್ಷೆಯಿಂದ ಪಾರು ಮಾಡಬೇಕು ಎನ್ನುವ ಪ್ರಯತ್ನಗಳು ನಡೆಯುತ್ತಿವೆಯೇ? ದೇಶದ ಸರ್ವೋಚ್ಚ ನ್ಯಾಯಾಲಯದಿಂದ ನೇಣಿಗೇರಿಸಿ ಎಂದು ಆದೇಶ ಹೊರಬಿದ್ದು ಹಲವು ವರ್ಷಗಳು ಕಳೆದರೂ ಅಫ್ಜಲ್ ಗುರುಗೆ ಶಿಕ್ಷೆ ನೀಡಲು ಕೇಂದ್ರ
ನವದೆಹಲಿ, ಜೂ. 9 : ಭಯೋತ್ಪಾದನೆಗೆ ಸಂಬಂಧಿಸಿದಂತೆ ಕಠಿಣ ನಿಲುವನ್ನು ಪಾಕಿಸ್ತಾನಕ್ಕೆ ರವಾನಿಸಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಭಾರತದ ನೆಲೆದಲ್ಲಿ ಸಂಘಟಿತ ಭಯೋತ್ಪಾದನೆ ಕೃತ್ಯ ಎಸಗಿ ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅವರು ತಾಕೀತು ಮಾಡಿದ್ದಾರೆ. ಭಯೋತ್ಪಾದನೆ ವಿರುದ್ಧ ಭಾರತ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಿದ್ದು, ದೇಶದ್ರೋಹಿಗಳ ವಿರುದ್ಧ ಹೋರಾಟ ನಿರಂತರ ಎಂದು ಸಿಂಗ್ ಸ್ಪಷ್ಟಪಡಿಸಿದರು. ಲೋಕಸಭೆಯಲ್ಲಿಂದು
ನವದೆಹಲಿ, ಜೂ.5: ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆಯಡಿ ಪ್ರತಿಯೊಂದು ಕಡುಬಡ (ಬಿಪಿಎಲ್) ಕುಟುಂಬಕ್ಕೆ ಕೆಜಿಗೆ 3 ರುಪಾಯಿ ದರದಲ್ಲಿ ತಿಂಗಳಿಗೆ 25 ಕೆಜಿ ಅಕ್ಕಿ ಅಥವಾ ಗೋಧಿ ಪೂರೈಸುವುದಾಗಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಗುರುವಾರ ಸಂಸತ್ತಿನಲ್ಲಿ ಪ್ರಕಟಿಸಿದರು. ಆಹಾರ ಭದ್ರತೆ ಕಲ್ಪಿಸುವುದರೊಂದುಗೆ ಹತ್ತು ವಿಸ್ತೃತ ಕ್ಷೇತ್ರಗಳಲ್ಲಿ ಮುಂದಿನ 5 ವರ್ಷಗಳಲ್ಲಿ ಮಹತ್ತರ ಮುನ್ನಡೆ ಸಾಧಿಸುವ ಮಾರ್ಗ
ನವದೆಹಲಿ, ಜೂ.3: ಲೋಕಸಭೆ ಸ್ಪೀಕರ್ ಆಗಿ ಮಾಜಿ ಕೇಂದ್ರ ಸಚಿವೆ ಮೀರಾ ಕುಮಾರ್ ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸ್ಪೀಕರ್ ಹುದ್ದೆಗೆ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದರು. ಸ್ಪೀಕರ್ ಹುದ್ದೆಗೆ ಮತ್ತಿನ್ಯಾರು ನಾಮಪತ್ರ ಸಲ್ಲಿಸದ ಕಾರಣ ಅವರು ಅವರ ಆಯ್ಕೆ ಸುಲಭಸಾಧ್ಯವಾಗಿದೆ.ಪ್ರಧಾನಿ ಮನಮೋಹನ್ ಸಿಂಗ್, ವಿರೋಧ ಪಕ್ಷದ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಮೀರಾ ಅವರನ್ನು
ನವದೆಹಲಿ, ಜೂ.1: ಇಡೀ ದೇಶ ಕಾತುರದಿಂದ ಎದುರು ನೋಡುತ್ತಿರುವ ಹದಿನೈದನೇ ಲೋಕಾಸಭೆಯ ಮೊದಲ ಅಧಿವೇಶನ ಸೋಮವಾರ, ಜೂ.1ರಂದು ನಡೆಯಲಿದೆ. ಅಧಿಕಾರದ ಚುಕ್ಕಾಣಿ ಹಿಡಿದಿರುವ ಯುಪಿಎ ನೇತೃತ್ವದ ಸರಕಾರಕ್ಕೆ ಎರಡನೇ ಬಾರಿ ದೇಶವನ್ನು ಆಳಲು ಸಿದ್ಧವಾಗಿದೆ. ಯುಪಿಎ ಸರಕಾರದ ಕಾರ್ಯಕ್ರಮಗಳಿಗೆ ಈ ಅಧಿವೇಶನ ವೇದಿಕೆಯಾಗಲಿದೆ. ಹಾಗೆಯೇ ರಾಷ್ಟ್ರಪತಿಗಳ ಭಾಷಣ, ಲೋಕಸಭಾಧ್ಯಕ್ಷರ ಆಯ್ಕೆ ಪ್ರಮುಖ ಅಂಶಗಳು. ಹಿರಿಯ
ನವದೆಹಲಿ, ಮೇ.31 : ಮೊದಲ ಬಾರಿಗೆ ಮಹಿಳೆಯನ್ನು ರಾಷ್ಟ್ರಪತಿ ಸ್ಥಾನದಲ್ಲಿ ಕೂರಿಸಿದ ಹೆಗ್ಗಳಿಕೆ ಹೊಂದಿರುವ ಯುಪಿಎ ಸರ್ಕಾರ , ಈಗ ಮೊದಲ ಬಾರಿಗೆ ಲೋಕಸಭಾ ಸ್ಪೀಕರ್ ಸ್ಥಾನವನ್ನು ದಲಿತ ಮಹಿಳೆಯೊಬ್ಬರಿಗೆ ನೀಡುವ ಚಿಂತನೆ ನಡೆಸಿದೆ. ಹಾಲಿ ಜಲಸಂಪನ್ಮೂಲ ಸಚಿವೆ ಮೀರಾ ಕುಮಾರ್ ಅವರು ಹುದ್ದೆಯನ್ನು ಅಲಂಕರಿಸುವುದು ಬಹುತೇಕ ಖಚಿತವಾಗಿದೆ.64 ವರ್ಷದ ಮೀರಾಕುಮಾರ್ ಅವರು ಐದು ಬಾರಿ