ಉದ್ಯಮಿ ಅಶೋಕ್ ಖೇಣಿ ಅವರ 60ನೇ ಹುಟ್ಟುಹಬ್ಬ ಸಂಭ್ರಮ ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆಯಿತು. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ನಟರು ಹುಟ್ಟುಹಬ್ಬ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮಹಾರಾಜ ಕಾಲೇಜು ಮೈದಾನದಲ್ಲಿ ಸರಿ ಸುಮಾರು 30,000ಕ್ಕೂ ಹೆಚ್ಚು ಅಶೋಕ್ ಖೇಣಿ ಅಭಿಮಾನಿಗಳ ಜಾತ್ರೆಯೇ ನೆರೆದಿತ್ತು. ಭಾನುವಾರ ಮಂಡ್ಯದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಅಶೋಕ್ ಖೇಣಿ ಸೋಮವಾರ
ಬೆಂಗಳೂರು, ಅ. 1 : ಅಕ್ಟೋಬರ್ 15 ರೊಳಗೆ ನೈಸ್ ಸಂಸ್ಥೆಯ ಬಿಎಂಐಸಿ ಯೋಜನೆಯ ಎಲ್ಲಾ ಅಕ್ರಮಗಳನ್ನು ಕುರಿತು ಚರ್ಚಿಸಲು ಅಧಿವೇಶನ ಕರೆಯುವ ದಿನಾಂಕ ಪ್ರಕಟಿಸದಿದ್ದರೆ ರೈತರನ್ನು ಒಗ್ಗೂಡಿಸಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಪಕ್ಷದ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು, ಬಿಎಂಐಸಿ ಯೋಜನೆಯ
ಬೆಂಗಳೂರು, ಸೆ. 9 : ಗೊಟ್ಟಿಗೆರೆ ಬಳಿ ನಿರ್ಮಿಸಲು ಉದ್ದೇಶಿಸಿರುವ ಪೆರಿಫೆರಲ್ ರಸ್ತೆ ಸಂಬಂಧ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಹಾಗೂ ಇತರ ಎಂಟು ನಿರ್ದೇಶಕರಿಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ. ಎಚ್ ವಿ ವಿಜಯರಾಘವನ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಹಾಗೂ ಜವ್ವಾದ್ ರಹೀಂ ಅವರ ಪೀಠ ಆದೇಶ ನೀಡಿದೆ.
ಬೆಂಗಳೂರು, ಸೆ. 1 : ನೈಸ್ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ವಿಚಾರಣೆ ನಡೆಸಿದ ಹೈಕೋರ್ಟ್ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕಂದಾಯ ಸಚಿವ ಕರುಣಾಕರರೆಡ್ಡಿ ಹಾಗೂ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ಬನ್ನೇರುಘಟ್ಟ ರಸ್ತೆ, ಗೊಟ್ಟಗೆರೆ ಬಳಿ ನೈಸ್ ರಸ್ತೆ ನಿರ್ಮಾಣ ಸಂಬಂಧ ನ್ಯಾಯಾಲಯ ನೀಡಿರುವ ತೀರ್ಪನ್ನು ಉಲ್ಲಂಘಿಸಿರುವ
ಬೆಂಗಳೂರು ಮಾ 30: ಜನತಾದಳ ವರಿಷ್ಠ ದೇವೇಗೌಡ ವಿರುದ್ದ ಸ್ಪರ್ಧಿಸುವುದಾಗಿ ಬಹಿರಂಗ ಹೇಳಿಕೆ ನೀಡಿದ್ದ ನೈಸ್ ಕಂಪನಿಯ ಅಶೋಕ್ ಖೇಣಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಕುಟುಂಬದವರ ಒತ್ತಾಯದ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.ನೈಸ್ ಮುಖ್ಯಸ್ಥ ಅಶೋಕ್ ಖೇಣಿ ದೇವೇಗೌಡರ ವಿರುದ್ದ ಹಾಸನ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು.
ಬೆಂಗಳೂರು, ಮಾ. 22 : ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಹಾಸನ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒಂದಕ್ಕಿಂತ ಹೆಚ್ಚು ಪಕ್ಷಗಳು ತಮ್ಮನ್ನು ಕೇಳಿಕೊಂಡಿವೆ. ಆದರೆ, ಈ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಮುಂದಿನ ನಾಲ್ಕು ದಿನಗಳಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬರಲಿದೆ ಎಂದು ಖೇಣಿ ಹೇಳಿದ್ದಾರೆ.
ಬೆಂಗಳೂರು, ಮಾ. 20 : ನೈಸ್ ಸಂಸ್ಥೆಯ ಅಶೋಕ್ ಯಾವ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದರೆ, ಅದೇ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವೆ ಎಂದು ಮಾಜಿ ಪ್ರಧಾನಮಂತ್ರಿ ದೇವೇಗೌಡ ಮರು ಸವಾಲು ಹಾಕಿದ್ದಾರೆ. ಈ ಮೂಲಕ ನೈಸ್ ಕಾರಿಡಾರ್ ರಸ್ತೆಗೆ ಮಾತ್ರ ಸೀಮಿತವಾಗಿದ್ದ ದೇವೇಗೌಡ-ಖೇಣಿ ಜಗಳ ರಾಜಕೀಯದೊಳಗೆ ಪ್ರವೇಶ ಪಡೆದುಕೊಂಡಂತಾಗಿದೆ. ಈ ಹಿಂದೆ ಖೇಣಿ ದೇವೇಗೌಡರ ವಿರುದ್ಧ ಸ್ಪರ್ಧಿಸುವುದಾಗಿ
ಬೆಂಗಳೂರು, ಮಾ. 19 : ವಿವಾದಿತ ಗೊಟ್ಟಿಗೆರೆ ಕೆರೆ ಮಧ್ಯೆ ರಸ್ತೆ ನಿರ್ಮಿಸಲು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ರಾಜ್ಯ ಹೈಕೋರ್ಟ್ ಇಂದು ವಜಾಗೊಳಿಸಿ ಆದೇಶ ನೀಡಿದೆ. ಇದರಿಂದ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಕುಟುಂಬ ಹಾಗೂ ನೈಸ್ ಸಂಸ್ಥೆಯ ನಡುವಣ ಇರುವ ಕಾನೂನು ತೊಡಕುಗಳಲ್ಲೊಂದಾದ ಗೊಟ್ಟಿಗೆರೆ ಕೆರೆ
ಬೆಂಗಳೂರು, ಅ. 7 : ಬೆಂಗಳೂರು ಮೈಸೂರು ಕಾರಿಡಾರ್ ಎಕ್ಸ್ ಪ್ರೆಸ್ (ಬಿಎಂಐಸಿ) ಯೊಜನೆಯ ಜಮೀನು ವಿವಾದ ಕುರಿತಂತೆ ತನಿಖೆ ಮಾಡಲು ನೇಮಿಸಲಾಗಿದ್ದ ನ್ಯಾಯಾಧೀಶ ಬಿ.ಸಿ.ಪಾಟೀಲ್ ನೇತೃತ್ವದ ಆಯೋಗವನ್ನು ರದ್ದುಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಬಿ.ಸಿ.ಪಾಟೀಲ್ ಅವರು ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಹಾಗೂ ಪ್ರಕರಣ ಸುಪ್ರಿಂಕೋರ್ಟ್ ನಲ್ಲಿ
ಬೆಂಗಳೂರು, ನ.30 : ಭೂಮಿ ಕಳ್ಳರಲ್ಲಿ ಗಣ್ಯಾತಿಗಣ್ಯರು ಇರುವ ಸಂಗತಿ ಬೆಳಕಿಗೆ ಬಂದಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿನ ಅಕ್ರಮ ಭೂಒತ್ತುವರಿ ಬಗ್ಗೆ ತನಿಖೆ ನಡೆಸಿದ ಎ.ಟಿ.ರಾಮಸ್ವಾಮಿ ನೇತೃತ್ವದ ಸಮಿತಿ, ವಿಧಾನಸಭಾಧ್ಯಕ್ಷರಿಗೆ ವರದಿ ಸಲ್ಲಿಸಿದೆ. ಈ ಪಟ್ಟಿಯಲ್ಲಿ ಬಾಲಗಂಗಾಧರ ನಾಥ ಸ್ವಾಮೀಜಿ ಅವರ ಹೆಸರೂ ಸಹಾ ಇದೆ. ಒಬ್ಬರಲ್ಲ , ಇಬ್ಬರಲ್ಲ ಸುಮಾರು