ಕನ್ನಡ ಚಿತ್ರೋದ್ಯಮದಲ್ಲಿ ಚಿತ್ರ ವಿಚಿತ್ರ ಶೀರ್ಷಿಕೆಗಳುಳ್ಳ ಸಿನಿಮಾಗಳು ಬರುತ್ತಿವೆ. ಆ ಸಾಲಿಗೆ ಈಗ ಹೊಸದಾಗಿ ಸೆಟ್ಟೇರಿರುವ 'ಪುನೀತ್' ಎಂಬ ಸಿನಿಮಾ ಸೇರ್ಪಡೆಯಾಗಿದೆ. ಜೀವಂತ ಇರುವ ವ್ಯಕ್ತಿಗಳ ಹೆಸರನ್ನು ಚಿತ್ರ ಶೀರ್ಷಿಕೆಗಳಿಗೆ ಬಳಸುವಂತಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯಮಗಳ ಹೇಳುತ್ತವೆ. ಆದರೆ ಪುನೀತ್ ಎಂದರೆ ಪುನೀತ್ ರಾಜ್ ಕುಮಾರ್ ಅವರೇ ಆಗಬೇಕು ಎಂದೇನು ಇಲ್ಲವಲ್ಲ!