ಸಮುದಾಯ ಚಿತ್ರೋತ್ಸವ 2009 ಸಮಾಜಮುಖಿ ಚಿತ್ರಗಳ ಪ್ರದರ್ಶನ ಅಕ್ಟೋಬರ್ 30ರಿಂದ ನವೆಂಬರ್ 5ರವರೆಗೂ ನಡೆಯಲಿದೆ. ಕಲಾಚಿತ್ರಗಳ ಪ್ರದರ್ಶನಕ್ಕೆ ಬೆಂಗಳೂರಿನ ಕೈಲಾಷ್ ಚಿತ್ರಮಂದಿರ ಸಜ್ಜಾಗಿದೆ. ಈ ಚಲನಚಿತ್ರ ಜಾತ್ರೆಯಲ್ಲಿ ಅಪೂರ್ವ ಕನ್ನಡ ಚಲನಚಿತ್ರಗಳನ್ನು ವೀಕ್ಷಿಸಬಹುದು. ಈ ನಿಟ್ಟಿನಲ್ಲಿ ಕೆ. ಶಿವರುದ್ರಯ್ಯನವರ 'ದಾಟು', ಅಭಯಸಿಂಹರ 'ಗುಬ್ಬಚ್ಚಿಗಳು', ಉಮಾಶಂಕರ್ ಸ್ವಾಮಿಯವರ 'ಬನದ ನೆರಳು', ಬಿ. ಸುರೇಶ ಅವರ 'ಅರ್ಥ' ಈ ನಾಲ್ಕು
ಕೆ.ಶಿವರುದ್ರಯ್ಯ ನಿರ್ದೇಶನದ ಕನ್ನಡದ 'ದಾಟು' ಚಿತ್ರ ಜಿಂಬಾಬ್ವೆಯ ಅಂತಾರಾಷ್ಟ್ರೀಯ ಮಹಿಳಾ ಚಿತ್ರೋತ್ಸವ 2008ರಲ್ಲಿ ಅತ್ಯುತ್ತಮ ಮಹಿಳಾ ಚಿತ್ರವಾಗಿ ಆಯ್ಕೆಯಾಗಿದೆ. ಮಹಿಳೆಯೊಬ್ಬಳ ಹೋರಾಟ ಕುರಿತ ಚಿತ್ರ ಇದಾಗಿದ್ದು ಮುಖ್ಯಭೂಮಿಕೆಯಲ್ಲಿ 'ಮುಖಪುಟ'ಖ್ಯಾತಿಯ ರೂಪಾ ಅಯ್ಯರ್ ಅಭಿನಯಿಸಿದ್ದಾರೆ.ಚಲನ ಚಿತ್ರೋತ್ಸವ ನಿರ್ದೇಶನಾಲಯದ (ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ) ಹಿರಿಯ ಉಪ ನಿರ್ದೇಶಕ ಶಂಕರ್ ಅವರಿಗೆ ಜಿಂಬಾಬ್ವೆ ಚಲನಚಿತ್ರೋತ್ಸವವ ನಿರ್ದೇಶಕರು ಪತ್ರ
ಇಪ್ಪತ್ತಾರು ಕನ್ನಡ ಚಲನಚಿತ್ರಗಳನ್ನು ಸಬ್ಸಿಡಿ ಆಯ್ಕೆ ಸಮಿತಿ ಗುಣಾತ್ಮಕ ಚಲನಚಿತ್ರಗಳೆಂದು ಆಯ್ಕೆ ಮಾಡಿದೆ. ನಿರೀಕ್ಷಿಸಿದಂತೆ ಪಟ್ಟಿಯಲ್ಲಿ ದಾಟು, ಜನಪದ, ಆ ದಿನಗಳು, ಮೀರಾ ಮಾದವ ರಾಘವ, ಅವ್ವ , ಪಲ್ಲಕ್ಕಿ, ಮಿಲನ, ಲಂಚ ಸಾಮ್ರಾಜ್ಯ, ಕರುನಾಡು, ಧೀಮಂತ ಮನುಷ್ಯ, ಕುಸುಮ, ಬಿರ್ಸೆ(ತುಳು), ಯುಗಯುಗಗಳೆಸಾಗಲಿ, ನಿನದೇ ನೆನಪು, ಅಮೃತವಾಣಿ, ಸ್ನೇಹಪರ್ವ, ಸೌಂದರ್ಯ, ಗಂಡನಮನೆ,
ರಾಜ್ಯ ಪ್ರಶಸ್ತಿ ವಿಜೇತ(ವಿಶೇಷ ಜ್ಯೂರಿ) ದಾಟು ಚಿತ್ರದ ವಿಶೇಷ ಪ್ರದರ್ಶನವನ್ನು ನವದೆಹಲಿಯ ಕರ್ನಾಟಕ ಸಂಘದಲ್ಲಿ ಏರ್ಪಡಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಹಾಗೂ ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಈ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ.ಈ ಚಿತ್ರದಲ್ಲಿ ನಿರ್ಮಾಪಕಿ ರೂಪಾ ಅಯ್ಯರ್ ಪ್ರಮುಖ ಪಾತ್ರ ನಿರ್ವಹಿಸಿದ್ದು, ದತ್ತಣ್ಣ, ಕಿರುತೆರೆ ನಟ ರಾಜೇಶ್ ಮುಂತಾದವರಿದ್ದಾರೆ. ಸದಭಿರುಚಿ ಚಿತ್ರಗಳನ್ನು ನೀಡುತ್ತಾ ಬಂದಿರುವ ಶಿವರುದ್ರಯ್ಯ ನವರು
ನವದೆಹಲಿ, ಜ. 11: ಚಲನಚಿತ್ರ ಮಾಧ್ಯಮವು ಸಮಾಜಕ್ಕೆ ಹೊಸ ದಿಕ್ಕು ತೋರಿಸುವ, ಬದಲಾವಣೆಗೆ ಕಾರಣವಾಗಬಹುದಾದ ಮಾಧ್ಯಮವಾಗಿದ್ದು, ಅದನ್ನು ಕೆ. ಶಿವರುದ್ರಯ್ಯ ಅವರು ಮಾನವೀಯ ನೆಲೆಯಲ್ಲಿ ಅತ್ಯಂತ ಸಮರ್ಥವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ವಿ. ಗೋಪಿನಾಥ್ ಶನಿವಾರದಂದು ಇಲ್ಲಿ ಹೇಳಿದರು.ಅವರು, ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯ ದೆಹಲಿಯಲ್ಲಿನ ಕರ್ನಾಟಕ ವಾರ್ತಾ ಕೇಂದ್ರವು ಇಂದು