'ಆಟೋ 'ಸಿನಿಮಾ ಯಶಸ್ವಿ 50 ದಿನ ಪೂರೈಸಿದ ಹಿನ್ನಲೆಯಲ್ಲಿ ಚಿತ್ರತಂಡದಿಂದ ಸ್ವಯಂ ರಕ್ತದಾನ ಶಿಬಿರ ಸೋಮವಾರ ನಡೆಯಿತು. ಚಿತ್ರದ ನಿರ್ಮಾಪಕ ಮಹೇಂದ್ರ ಮುನ್ನೋತ್ ನೇತೃತ್ವದಲ್ಲಿ ಹಾಗೂ ಭಾರತ್ ವಿಕಾಸ್ ಪರಿಷತ್ ಸಹಯೋಗದಲ್ಲಿ ಚಾಮರಾಜಪೇಟೆಯ ರಾಷ್ಟ್ರೋತ್ಪನ್ನ ರಕ್ತನಿಧಿ ಕೇಂದ್ರದಲ್ಲಿ ಈ ಶಿಬಿರ ನಡೆಯಿತು.ಚಿತ್ರದ ನಾಯಕ ಸತ್ಯ ಸೇರಿದಂತೆ ನಿರ್ಮಾಪಕರು ಮತ್ತು ಚಿತ್ರತಂಡ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು.
ಬೆಂಗಳೂರು, ಜ.16: ಪಿ.ಶೇಷಾದ್ರಿ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ 'ಅತಿಥಿ' ಚಿತ್ರದ ವಿಶೇಷ ಪ್ರದರ್ಶನವನ್ನು ಅವಿರತ ಟ್ರಸ್ಟ್ ಹಮ್ಮಿಕೊಂಡಿದೆ. ದಾರಿ ತಪ್ಪುತ್ತಿರುವ ಇಂದಿನ ಯುವ ಪೀಳಿಗೆಗೆ ತಿಳಿಹೇಳುವ ಕಥೆಯನ್ನು ಹೊಂದಿರುವ ಕಾರಣ ಗಣತಂತ್ರ ದಿನದಂದು ಈ ಚಿತ್ರ ಪ್ರದರ್ಶನವನ್ನು ಹಮ್ಮಿಕೊಂಡಿದ್ದೇವೆ ಎಂದು ಅವಿರತ ಟ್ರಸ್ಟ್ ನ ಅಧ್ಯಕ್ಷ ಕೆ.ಟಿ. ಸತೀಶ್ ಗೌಡ ತಿಳಿಸಿದರು. ವಿದ್ಯಾವಂತ ಯುವಕರು
ರಾಜ್ಯ ಪ್ರಶಸ್ತಿ ವಿಜೇತ(ವಿಶೇಷ ಜ್ಯೂರಿ) ದಾಟು ಚಿತ್ರದ ವಿಶೇಷ ಪ್ರದರ್ಶನವನ್ನು ನವದೆಹಲಿಯ ಕರ್ನಾಟಕ ಸಂಘದಲ್ಲಿ ಏರ್ಪಡಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಹಾಗೂ ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಈ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ.ಈ ಚಿತ್ರದಲ್ಲಿ ನಿರ್ಮಾಪಕಿ ರೂಪಾ ಅಯ್ಯರ್ ಪ್ರಮುಖ ಪಾತ್ರ ನಿರ್ವಹಿಸಿದ್ದು, ದತ್ತಣ್ಣ, ಕಿರುತೆರೆ ನಟ ರಾಜೇಶ್ ಮುಂತಾದವರಿದ್ದಾರೆ. ಸದಭಿರುಚಿ ಚಿತ್ರಗಳನ್ನು ನೀಡುತ್ತಾ ಬಂದಿರುವ ಶಿವರುದ್ರಯ್ಯ ನವರು