ಬೆಂಗಳೂರು, ಮೇ. 7 : ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಹೇಳಿಕೆ ಹಿನ್ನೆಲೆಯಲ್ಲಿ ಸಾಫ್ಟವೇರ್ ಉದ್ಯಮಿಗಳ ಆತಂಕ ದೂರ ಮಾಡಲು ರಾಜ್ಯ ಸರಕಾರ ಶೀಘ್ರದಲ್ಲೇ ಉದ್ಯಮದ ಪ್ರಮುಖರೊಂದಿಗೆ ಸಭೆ ನಡೆಯಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು. ಹೊರಗುತ್ತಿಗೆ ಸಂಬಂಧಿದಂತೆ ಅಮೆರಿಕ ಅಧ್ಯಕ್ಷರ ಮಾತಿಗೆ ಐಟಿ ಉದ್ಯಮ ಭಯಪಡುವ ಅಗತ್ಯವಿಲ್ಲ. ಉದ್ಯಮದ ಬೆನ್ನಿಗೆ ಸರಕಾರ
ಸ್ಯಾನ್ ಫ್ರಾನ್ಸಿಕೋ, ಏ. 24 : 23 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಾಫ್ಟ್ ವೇರ್ ಜಗತ್ತಿನ ದೈತ್ಯ ಕಂಪನಿ ಮೈಕ್ರೋ ಸಾಫ್ಟ್ ತನ್ನ ತ್ರೈಮಾಸಿಕ ಲಾಭಾಂಶದಲ್ಲಿ ಗಣನೀಯ ಹಿನ್ನೆಡೆ ಕಂಡಿದೆ. 1986ರಿಂದ ಈ ವರೆಗೂ ಮೈಕ್ರೋ ಸಾಫ್ಟ್ ಇಂಟರ್ ನೆಟ್ ಕಂಪನಿ ಎಂದಿಗೂ ಹಿಂತಿರುಗಿ ನೋಡಿರಲಿಲ್ಲ. ಆದರೆ, ಈ ಸಲ ಆರ್ಥಿಕ ಹಿಂಜರಿತದ
ನ್ಯೂಯಾರ್ಕ್, ಅ.31: ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ಅಮೆರಿಕದ ದೊಡ್ಡ ದೊಡ್ಡ ಕಂಪನಿಗಳಿಗೂ ಸೋಕಲು ಶುರುವಾಗಿದೆ. ಅಮೆರಿಕ ಮೊಬೈಲ್ ಫೋನ್ ಮಾರುಕಟ್ಟೆಯ ಅತಿದೊಡ್ಡ ಉತ್ಪಾದನಾ ಕಂಪನಿ ಮೋಟರೋಲಾ ತನ್ನ 3,000 ನೌಕರರನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ. ಮೋಟಾರೋಲಾ ಕಂಪನಿಯ ಸೆಲ್ ಫೋನ್ ಘಟಕ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಕಂಪನಿ ಈ ನಿರ್ಧಾರಕ್ಕೆ ಬಂದಿದೆ. ಹಾಗೆಯೇ ಮೊಬೈಲ್ ಉತ್ಪಾದನಾ
ಹೈದರಾಬಾದ್, ಅ.16: ಜಾಗತಿಕವಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ವಿಮಾನಯಾನ ಕ್ಷೇತ್ರಕ್ಕೂ ಹಬ್ಬಿದ್ದು ಅದರ ರೆಕ್ಕೆಗಳನ್ನು ಅಲುಗಾಡಿಸುತ್ತಿದೆ. ನೆನ್ನೆ ಜೆಟ್ ಏರ್ ವೇಸ್ ತನ್ನ 850 ಕ್ಯಾಬಿನ್ ಸಿಬ್ಬಂದಿಯನ್ನು ಯಾವುದೇ ಸೂಚನೆ ನೀಡದೆ ಮನೆಗೆ ಕಳುಹಿಸಿತು. ಈಗ ಏರ್ ಇಂಡಿಯಾಗೆ ಸೇರಿದ 15,000 ಮಂದಿ ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ. ಏರ್ ಇಂಡಿಯಾ ತನ್ನ 15,000 ನೌಕರರಿಗೆ 3ರಿಂದ 5
ಕೋಲ್ಕತ್ತಾ, ಅ.14: ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಭಾರತದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ತನ್ನ ಸಿಬ್ಬಂದಿಯ ಮಾರ್ಪಾಟಿಗೊಳಗಾಗುವ ವೇತನವನ್ನು(ವೇರಿಯಬಲ್ ಪೇ) ಕಡಿತಗೊಳಿಸಲು ನಿರ್ಧರಿಸಿದೆಯೆ? ಜಾಗತಿಕ ಆರ್ಥಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ 2008-09ನೇ ಸಾಲಿನ ತ್ರೈಮಾಸಿಕ ಅವಧಿಯಲ್ಲಿ ಟಿಸಿಎಸ್ ತನ್ನ ಸಿಬ್ಬಂದಿಯ ವೇರಿಯಬಲ್ ಪೇಯನ್ನು ಕಡಿತ ಮಾಡಲು ನಿರ್ಧರಿಸಿದೆ. ಈ ಹಿಂದೆ ಕಂಪನಿ ತನ್ನ
ನವದೆಹಲಿ, ಜ. 7 : ವಂಚನೆ ಹಾಗೂ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಭಾರಿ ಟೀಕೆಗೆ ಗುರಿಯಾಗಿದ್ದ ದೇಶದ ಪ್ರತಿಷ್ಠಿತ ಸಾಫ್ಟವೇರ್ ಕಂಪನಿ ಸತ್ಯಂ ಕಂಪ್ಯೂಟರ್ಸ್ ನ ಸಂಸ್ಥಾಪಕ ಹಾಗೂ ಚೇರಮನ್ ರಾಮಲಿಂಗರಾಜು ಅವರು ಕಂಪನಿಯ ಅಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ಸತ್ಯಂ ಕಂಪ್ಯೂಟರ್ಸ್ ಭಾರಿ ಸುದ್ದಿಯಲ್ಲಿತ್ತು. ಸತ್ಯಂ ಚೇರಮನ್
ನವದೆಹಲಿ, ಜ. 7 : ಸತ್ಯಂ ಕಂಪ್ಯೂಟರ್ ನಲ್ಲಿ ನಡೆದಿರುವ ಭಾರಿ ಮಟ್ಟದ ಅವ್ಯವಹಾರದ ಸಮಗ್ರ ತನಿಖೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಸತ್ಯಂ ಪ್ರಕರಣವನ್ನು ಕೇಂದ್ರದ ಹಣಕಾಸು ಅವ್ಯವಹಾರ ತನಿಖಾ ಇಲಾಖೆಗೆ ( Serious Fraud Investigation Office) ವಹಿಸಲು ಕೇಂದ್ರ ತೀರ್ಮಾನಿಸಿದೆ. ಸತ್ಯಂ ಘಟನೆ ನಾಚಿಕೆಗೇಡಿನ ಸಂಗತಿಯಾಗಿದೆ.
ಹೈದರಾಬಾದ್, ಜ.8: ಸತ್ಯಂ ಕಂಪ್ಯೂಟರ್ಸ್ ರಾಮಲಿಂಗಾರಾಜು ಭಾರಿ ಅವ್ಯವಹಾರಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಸಮಗ್ರ ವಿಚಾರಣೆ ನಡೆಸಬೇಕೆಂದು ಸೆಬಿ ನಿರ್ಣಯಿಸಿತ್ತು. ಈ ಸಂಬಂಧ ಆದಷ್ಟು ಶೀಘ್ರವಾಗಿ ವಿಚಾರಣೆ ನಡೆಸಬೇಕೆಂದು ಸೆಬಿ ಅಧಿಕಾರಿಗಳು ಗುರುವಾರ ಮುಂಜಾನೆಯೇ ಹೈದಾರಾಬಾದ್ ಸೇರಿಕೊಂಡರು. ಆದರೆ ಸತ್ಯಂ ಕಂಪ್ಯೂಟರ್ಸ್ ನ ರಾಮಲಿಂಗಾರಾಜು ನಾಪತ್ತೆ!!!ರಾಮಲಿಂಗಾರಾಜು ಎಲ್ಲಿದ್ದಾರೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು
ಮೈಸೂರು, ಫೆ. 25 : ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಆರ್ಥಿಕ ಕುಸಿತ ಎಲ್ಲ ಉದ್ಯಮದ ಮೇಲೂ ಗಂಭೀರ ಪರಿಣಾಮ ಬೀರಿದೆ. ಭಾರತ ದೇಶ ಈ ಗಂಭೀರ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿದೆ. ಮುಂದಿನ ಎರಡು ವರ್ಷ ಭಾರತದ ಮಾರುಕಟ್ಟೆ ಸಂಪೂರ್ಣವಾಗಿ ಇದರ ಕರಿನೆರಳಿನಿಂದ ಹೊರಬರಲಿದೆ ಎಂದು ಇಸ್ ಫೋಸಿಸ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ ಗೋಪಾಲಕೃಷ್ಣ ಹೇಳಿದರು.
ಬೆಂಗಳೂರು, ಮಾ. 6 : ಹಣಕಾಸು ಕ್ಷೇತ್ರದ ಮೇಲೆ ಬಿದ್ದಿರುವ ಭಾರಿ ಹೊಡತದಿಂದ ಜಾಗತಿಕ ಮಾರುಕಟ್ಟೆಯ ಸೇವೆ ವಲಯ ತೀವ್ರ ಸಂಕಷ್ಟ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸೇವಾ ವಲಯದ ಕಂಪನಿಗಳು ನೂತನ ಹೊರಗುತ್ತಿಗೆಗಳ ಕೊರತೆಯನ್ನು ಅನುಭವಿಸುವಂತಾಗಿದೆ ಎಂದು ಇನ್ ಫೋಸಿಸ್ ಕಂಪನಿಯ ಹಣಕಾಸು ವಿಭಾಗದ ಮುಖ್ಯಸ್ಥ ವಿ ಬಾಲಕೃಷ್ಣ ಹೇಳಿದರು. ಅಮೆರಿಕ ಸೇರಿದಂತೆ ಜಗತ್ತಿನ ಎಲ್ಲ ದೇಶಗಳ