ಗುಲ್ಬರ್ಗಾ,ನ.12: ಗುಲಬರ್ಗಾ ನಗರದ ಹೊರವಲಯದ ಸೇಡಂ ರಸ್ತೆಯಲ್ಲಿ ನಿರ್ಮಿಸಲಾದ ಬೌದ್ಧ ವಿಹಾರ ಧಾಮಕ್ಕೆ ಬೌದ್ಧ ಧರ್ಮಗುರು ದಲೈಲಾಮಾ ಅವರು 2009ರ ಡಿ.19 ಮತ್ತು 20ರಂದು ಭೇಟಿ ನೀಡಲಿದ್ದಾರೆ ಎಂದು ಗುಲಬರ್ಗಾ ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ರಜನೀಶ ಗೋಯಲ್ ಅವರು ಹೇಳಿದರು. ಅವರು ಗುಲ್ಬರ್ಗಾದಲ್ಲಿ ದಲೈಲಾಮಾ ಭೇಟಿ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಬೌದ್ಧ ಧರ್ಮಗುರು ದಲೈಲಾಮಾ
ಗುಲ್ಬರ್ಗಾ, ನ. 10 : ಜೈವಿಕ ಇಂಧನ ತಂತ್ರಜ್ಞಾನ ಉದ್ಯಾನವನ ಒಂದು ವಿನೂತನ ಯೋಜನೆಯನ್ನು ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ ಹಾಗೂ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ, ಗುಲ್ಬರ್ಗಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಾರಂಭಿಸಲಾಗಿದೆ.ಜೈವಿಕ ಇಂಧನ ತಂತ್ರಜ್ಞಾನ ಉದ್ಯಾನವನ ನಿರ್ಮಾಣ ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾದ ಒಂದು ಮಹತ್ವದ ಕಾರ್ಯಕ್ರಮವಾಗಿದೆ. ಈ ಉದ್ಯಾನವನವನ್ನು 8 ನೇ, ಜುಲೈ 2009 ರಂದು
ಬೆಂಗಳೂರು, ನ.7: ಶತಮಾನದ ಭೀಕರ ಮಳೆ, ಪ್ರವಾಹಕ್ಕೆ ಸಿಲುಕಿ ಲಕ್ಷಾಂತರ ಮಂದಿ ಉತ್ತರ ಕರ್ನಾಟಕದಲ್ಲಿ ನಿರಾಶ್ರಿತರಾಗಿದ್ದಾರೆ. ಹಳ್ಳಿ ಹಳ್ಳಿಗಳೇ ಕೊಚ್ಚಿ ಹೋಗಿ, ಬೆಳೆದು ನಿಂತ ಫಸಲು ನಾಶವಾಗಿ, ವಾಸಿಸುವ ಮನೆಗಳು ಕುಸಿದಿವೆ. ಸಂಗ್ರಹಿಸಿಟ್ಟ ಆಹಾರ ಧಾನ್ಯ ನಾಶವಾಗಿ ನಿರ್ವಸಿತರಾಗಿರುವ ಜನರು ತಮ್ಮ ಬದುಕನ್ನು ಹೊಸದಾಗಿ ಕಟ್ಟಿಕೊಳ್ಳಬೇಕಾಗಿದೆ.ಲಕ್ಷಾಂತರ ಕುಟುಂಬಗಳಿಗೆ ಶಾಶ್ವತ ನೆಲೆಕಲ್ಪಿಸುವುದರ ಜೊತೆಗೆ ಭಾರಿ ಪ್ರಮಾಣದಲ್ಲಿ ಹಾನಿಯುಂಟಾಗಿರುವ ಸಾರ್ವಜನಿಕ
ಬೆಂಗಳೂರು, ಅ. 1 : ಉತ್ತರ ಕರ್ನಾಟಕದಲ್ಲಿ ಸತತ 48 ಗಂಟೆಗಳಿಂದ ಸುರಿಯುತ್ತಿರುವ ಮಳೆಯ ಮುನಿಸಿಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬರದ ನಾಡು ಎಂದು ಬಿಂಬಿಸಲಾಗುತ್ತಿದ್ದ ಬಿಜಾಪುರ, ಬೆಳಗಾವಿ, ರಾಯಚೂರು, ಗುಲ್ಬರ್ಗಾ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಜಲಪ್ರವಾಹವೇ ಆಗಿದ್ದು, ಅನೇಕ ಗ್ರಾಮಗಳು ನೀರಿನಲ್ಲಿ ಮುಳುಗಿ ಹೋಗಿವೆ. ಬುಧವಾರದಿಂದ ಈವರೆಗೂ ಮಳೆಯ ಹೊಡೆತಕ್ಕೆ 52 ಮಂದಿ ಸಾವನ್ನಪ್ಪಿದ್ದಾರೆ.
ಬೆಂಗಳೂರು, ಸೆ. 30 : ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಯಂಕರ ಮಳೆಗೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ನೀರಿನಿಂದ ಜಲಾವೃತವಾಗಿದ್ದು, ಜಿಲ್ಲೆಗಳ ಅನೇಕ ಗ್ರಾಮಗಳು ನೀರಿನಲ್ಲಿ ಮುಳುಗಿ ಹೋಗಿವೆ. ವಿಜಾಪುರ, ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ಬಳ್ಳಾರಿ, ಗದಗ, ಗುಲ್ಬರ್ಗಾ ಮತ್ತು ಹಾವೇರಿಯಲ್ಲಿ ವರುಣ ಆರ್ಭಟ ಹೇಳತೀರದಾಗಿದೆ. ಈಗಾಗಲೇ 22 ಮಂದಿ ಮೃತಪಟ್ಟಿರುವ ವರದಿಯಾಗಿದೆ. ಕೋಟ್ಯಂತರ ರುಪಾಯಿಗಳಷ್ಟು ನಷ್ಟವಾಗಿದ್ದು,
ಗುಲ್ಬರ್ಗಾ, ಸೆ. 24 : ಗುಲ್ಬರ್ಗಾ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಮರತೂರಿನ ಅಮರ ಚೇತನ ವಿಜ್ಞಾನೇಶ್ವರರ ಉದ್ಯಾನವನ ಅಭಿವೃದ್ಧಿಪಡಿಸಲು 1.30 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು. ಗುಲಬರ್ಗಾ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಮರತೂರಿನಲ್ಲಿ ವಿಜ್ಞಾನೇಶ್ವರ ಉದ್ಯಾನವನದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ವಿಜ್ಞಾನೇಶ್ವರರ ಸಾಹಿತ್ಯವು 11 ನೇ ಶತಮಾನದ ಇತಿಹಾಸದ
ಗುಲಬರ್ಗಾ, ಸೆ. 24 : ಗ್ರಾಮೀಣ ಪ್ರದೇಶದ ಮಕ್ಕಳು ವಿಜ್ಞಾನದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಸಂಚಾರಿ ವಾಹನಗಳ ವಿಜ್ಞಾನ ಪ್ರಯೋಗಾಲಯಗಳನ್ನು ಹಳ್ಳಿ ಹಳ್ಳಿಗೂ ತಲುಪಿಸಬೇಕಾಗಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ಪ್ರೊ. ಯು.ಆರ್.ರಾವ್ ಅವರು ಹೇಳಿದರು. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ದ್ವಿತೀಯ ಸಮ್ಮೇಳನದಲ್ಲಿ ಮುಖ್ಯ
ಗುಲ್ಬರ್ಗಾ, ಸೆ. 17 : ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು. ನಗರದಲ್ಲಿ ಇಂದು ಹೈದಾರಾಬಾದ್ ಕರ್ನಾಟರ ವಿಮೋಚನಾ ದಿನಾಚರಣೆ ದ್ವಜಾರೋಹಣ ಮಾಡಿದ ನಂತರ ಅವರು ಮಾತನಾಡುತ್ತಿದ್ದರು. ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಬೇಕು
ಗುಲ್ಬರ್ಗಾ, ಆ. 28 : ಮಾತೆತ್ತಿದರೆ ನಾನು ರೈತರ ಪರ, ರೈತ ಪರ ಹೋರಾಟ ನಡೆಸಿಯೇ ನಾನು ಮುಖ್ಯಮ೦ತ್ರಿಯಾಗಿದ್ದು ಎಂದು ಕ೦ಡಕ೦ಡಲ್ಲಿ ಹೇಳುತ್ತಾ ಬರುತ್ತಿರುವ ಮುಖ್ಯಮ೦ತ್ರಿಗಳು ಬೇಡಿಕೆ ಈಡೇರಿಸಿ ಎಂದು ಬಂದ ರೈತರ ಜೊತೆ ಈ ರೀತಿಯಾ ವರ್ತಿಸುವುದೇ ? ಬೇಡಿಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಕತ್ತಲೆ ಕೋಣೆಯಲ್ಲಿಟ್ಟಿದ್ದಾರಲ್ಲಾ ಇವರೇನು ಸಿಎ೦ ಅಥವಾ ಹಿಟ್ಲರಾ ?
ಗುಲ್ಬರ್ಗಾ, ಆ. 27 : ಎರಡನೇ ಬಾರಿಗೆ ಗುಲ್ಬರ್ಗಾದಲ್ಲಿ ಸಚಿವ ಸಂಪುಟ ಸಭೆ ನಡೆಸಿದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಭರಪೂರ ಕೊಡುಗೆಯನ್ನೇ ನೀಡಿದೆ. ಮುಖ್ಯವಾಗಿ ಕಳೆದ ಸಂಪುಟ ಸಭೆಯಲ್ಲಿ ಜಿಲ್ಲೆಯಾಗಿ ಘೋಷಿಸಲಾಗಿದ್ದ ಯಾದಗಿರಿಗೆ ಇಂದಿನ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದೆ. ಸಚಿವ ಸಂಪುಟ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ ಮುಖ್ಯಮಂತ್ರಿ