ಗೋಲ್ಡನ್ ಸ್ಟಾರ್ ಗಣೇಶ್ ರೊಂದಿಗಿನ ಚಿತ್ರಕ್ಕೆ ಪ್ರಿಯಾಮಣಿ ರು.40 ಲಕ್ಷ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿಯನ್ನು ಆಕೆ ಅಲ್ಲಗಳೆದಿದ್ದಾರೆ. ಇನ್ನೂ ಹೆಸರಿಡದ ಗಣೇಶ್ ರೊಂದಿಗಿನ ಚಿತ್ರಕ್ಕೆ ತಾವು ಸಂಭಾವನೆ ಪಡೆದಿರುವುದು ನಿಜ. ಆದರೆ 40 ಲಕ್ಷ ರುಪಾಯಿ ಸಂಭಾವನೆ ಪಡೆದಿದ್ದೇನೆ ಎಂಬುದು ಕೇವಲ ವದಂತಿ ಎಂದು ಪ್ರಿಯಾಮಣಿ ಪ್ರತಿಕ್ರಿಯಿಸಿದ್ದಾರೆ.ಆಕೆಯ ವೈಯಕ್ತಿಕ ಖರ್ಚು ವೆಚ್ಚಗಳು, ಸಂಭಾವನೆ
ಇನ್ನೂ ಹೆಸರಿಡದ ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಚಿತ್ರಕ್ಕೆ ನಾಯಕಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತೆ ಪ್ರಿಯಾಮಣಿ ಆಯ್ಕೆಯಾಗಿದ್ದಾರೆ. ಈ ಚಿತ್ರವನ್ನು ಮುಸ್ಸಂಜೆ ಮಹೇಶ್ ನಿರ್ದೇಶಿಸುತ್ತಿದ್ದು 'ಬಿಂದಾಸ್' ನಿರ್ಮಿಸಿದ್ದ ಎಂ ಚಂದ್ರಶೇಖರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ತಮಿಳಿನಲ್ಲಿ ವಿಜಯ್ ಮತ್ತು ಜ್ಯೋತಿಕಾ ನಟಿಸಿದ್ದ ಯಶಸ್ವಿ ಚಿತ್ರ 'ಖುಷಿ'ಯನ್ನು ಚಂದ್ರಶೇಖರ್ ಕನ್ನಡಕ್ಕೆ ತರುತ್ತಿದ್ದಾರೆ. ಈಗಾಗಲೇ ಪ್ರಕಾಶ್ ನಿರ್ದೇಶನದಲ್ಲಿ 'ಖುಷಿ'ಹೆಸರಿನ
ಪ್ರವಾಸಿಗರ ಸ್ವರ್ಗ ಗೋವಾ. ಅಲ್ಲಿನ ಸಮುದ್ರ ತೀರ ಹಾಗೂ ರಮಣೀಯ ಸ್ಥಳಗಳ ಸೌಂದರ್ಯ ಬಣ್ಣಿಸಲು ಅಸಾಧ್ಯ. ಪ್ರಕೃತಿ ಮಾತೆಯ ವಿಶೇಷ ಸನ್ನಿಧಾನದಿಂದ ಕೂಡಿರುವ ಗೋವಾದಲ್ಲಿ ‘ಮಳೆಯಲಿ ಜೊತೆಯಲಿ ಚಿತ್ರದ ಹಾಡೊಂದು ಚಿತ್ರೀಕರಣಗೊಂಡಿದೆ. ಸಾಹಿತಿ ಜಯಂತ ಕಾಯ್ಕಿಣಿ ರಚಿಸಿರುವ ‘ಏನೋ ಹೇಳಬೇಕು ಅಂದೆ ಏನದು ಬೇಗ ಹೇಳು ಯಾರು ಕೇಳಬಾರದು ಸಾಕಾಯಿತು ಇನ್ನು ಈ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ಮೂಡಿಬರುತ್ತಿರುವ ಚಿತ್ರ 'ಮಳೆಯಲಿ ಜೊತೆಯಲಿ'. ಮಾತಿನ ಭಾಗದ ಚಿತ್ರೀಕರಣ ಪೂರ್ಣವಾಗಿರುವ ಚಿತ್ರಕ್ಕೆ ಹಾಡುಗಳ ಚಿತ್ರೀಕರಣ ಭರದಿಂದ ಸಾಗಿದೆ. ಸಾಹಿತಿ ಜಯಂತ್ ಕಾಯ್ಕಿಣಿ ಅವರ ರಚನೆಯ ‘ನೀ ಸನಿಹಕ್ಕೆ ಬಂದರೆ ಹೃದಯದ ಗತಿ ಏನು...’ ಎಂಬ ಗೀತೆ ಪ್ರಕೃತಿ ಮಾತೆಯ ತವರುಮನೆಯಂತಿರುವ ಕೇರಳದ ರಮ್ಯ ತಾಣಗಳಲ್ಲಿ ಚಿತ್ರೀಕರಣಗೊಂಡಿದೆ. ಖ್ಯಾತ ಗಾಯಕ ಸೋನುನಿಗಂ ಅವರ
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಬೆಂಗಳೂರಿನ ಮಕ್ಕಳ ಮನಸ್ಸನ್ನು ಗೆದ್ದಿದ್ದಾರೆ! ಬೆಂಗಳೂರಿನ ಮಕ್ಕಳು ರಮ್ಯಾ ಮತ್ತು ಗಣೇಶ್ ಅವರನ್ನು ಇಷ್ಟಪಟ್ಟಿದ್ದಾರೆ. ಆದರೆ ಬೆಂಗಳೂರಿನ ಯುವಕರು ಮಾತ್ರ ಬಾಲಿವುಡ್ ತಾರೆಗಳಿಗೆ ಹೃದಯ ಕೊಟ್ಟಿದ್ದಾರೆ ಎಂದು ಸಮೀಕ್ಷೆಯೊಂದರಿಂದ ದೃಢಪಟ್ಟಿದೆ!ಜನಪ್ರಿಯ ಮಕ್ಕಳ ವಾಹಿನಿ ಟರ್ನಲ್ ಇಂಟರ್
ಬೆಂಗಳೂರು, ಅ. 14 : ಬರಲಿರುವ 6ನೇ "ಅಕ್ಕ" ವಿಶ್ವ ಸಮ್ಮೇಳನದ ಲಾಂಛನ ಅಂಕಿತ ರಾಯಭಾರಿ (ಬ್ರಾಂಡ್ ಅಂಬಾಸಡರ್) ಆಗಿ 'ಪವರ್ ಸ್ಟಾರ್' ನಟ ಪುನೀತ್ ರಾಜ್ಕುಮಾರ್ ಅವರು ಅಲಂಕೃತರಾಗಿದ್ದಾರೆ. ಅಕ್ಕ ಬಳಗ ನೀಡಿದ ಈ ವಿಶೇಷ ಆಹ್ವಾನವನ್ನು ಪುನೀತ್ ಸಂತೋಷದಿಂದ ಒಪ್ಪಿ ಸಹಮತ ವ್ಯಕ್ತಪಡಿಸಿದ್ದಾರೆ.ಅಕ್ಕ ವಿಶ್ವ ಕನ್ನಡ ಸಮ್ಮೇಳನ 2010ರ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕಾದ
ಬೆಂಗಳೂರು ಈಗ ಚಿರಾಪುಂಜಿಯಂತಾಗಿದೆ. ಮುಸಲಧಾರೆ ಸುರಿಯುತ್ತ್ತಲೇ ಇದೆ. ಮಳೆಯಲ್ಲೇ ಮಿಂದು ಹೋಗಿದೆ ಉದ್ಯಾನ ನಗರಿ. ಇದೇ ಸಂದರ್ಭದಲ್ಲಿ ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಶಿಲ್ಪಾಗಣೇಶ್ ಅವರು ನಿರ್ಮಿಸುತ್ತಿರುವ 'ಮಳೆಯಲಿ ಜೊತೆಯಲಿ' ಚಿತ್ರದ ಹಾಡುಗಳ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಿದೆ. ನಾಯಕ ಗಣೇಶ್ ಹಾಗೂ ಅಂಜನಾ ಸುಖಾನಿ ಅವರ ಅಭಿನಯದಲ್ಲಿ ಚಿತ್ರದ ಗೀತೆಯೊಂದರ ಚಿತ್ರೀಕರಣ ನಗರದ ಗ್ಲೋಬಲ್ ವಿಲೇಜ್ನಲ್ಲಿ ಚಿತ್ರೀಕರಣಗೊಳ್ಳುವ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ಹೊರಹೊಮ್ಮುತ್ತಿರುವ ‘ಮಳೆಯಲಿ ಜೊತೆಯಲಿ’ ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ನಡೆಯುತ್ತಿದೆ ಎಂದು ನಿರ್ಮಾಪಕಿ ಶಿಲ್ಪಾಗಣೇಶ್ ತಿಳಿಸಿದ್ದಾರೆ. ‘ಮುಂಗಾರು ಮಳೆ’ಯ ಯಶಸ್ಸಿಗೆ ಕಾರಣರಾದವರಲ್ಲಿ ಕಥೆಗಾರ ಪ್ರೀತಂಗುಬ್ಬಿ ಕೂಡ ಒಬ್ಬರು. ನಂತರ ‘ಹಾಗೆ ಸುಮ್ಮನೆ’ಚಿತ್ರವನ್ನು ನಿರ್ದೇಶಿಸುವ ಮೂಲಕ ಪ್ರೀತಂ ನಿರ್ದೇಶಕನ ಸ್ಥಾನಕ್ಕೆ ಬಡ್ತಿ ಪಡೆದರು. ಪ್ರಸ್ತುತ ಚಿತ್ರದ ನಿರ್ದೇಶನದ ಹೊಣೆ ಹೊತ್ತಿರುವ
ಕಳೆದ ಒಂದು ವರ್ಷದಿಂದ ರಮ್ಯಾ ನಟನೆಯ ಒಂದೇ ಒಂದು ಚಿತ್ರವೂ ತೆರೆಕಂಡಿಲ್ಲ. ಪರಿಸ್ಥಿತಿ ಹೀಗಿದ್ದರೂ ಕನ್ನಡದಲ್ಲಿ ನಂಬರ್ ಒನ್ ಪಟ್ಟವನ್ನು ರಮ್ಯಾ ಯಾರಿಗೂ ಬಿಟ್ಟುಕೊಟ್ಟಿಲ್ಲ. ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲೂ ಇರುತ್ತಾರೆ. ಸದ್ಯಕ್ಕೆ ಪ್ರಸಿದ್ಧ ಕೇಶತೈಲ ಕಂಪನಿಯ ರಾಯಭಾರಿಯಾಗಿ ರಮ್ಯಾ ಆಯ್ಕೆಯಾಗಿದ್ದಾರೆ. ಜಾಹೀರಾತಿನ ಚಿತ್ರೀಕರಣಕ್ಕಾಗಿ ಕೇರಳಕ್ಕೆ ಪ್ರಯಾಣ ಬೆಳಸಿದ್ದಾರಂತೆ.'ಜಸ್ಟ್ ಮಾತ್ ಮಾತಲ್ಲಿ' ಹಾಡಿನ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಉಲ್ಲಾಸ ಉತ್ಸಾಹ' ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಿದೆ. ಧ್ವನಿಸುರುಳಿಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭಾನುವಾರ ಬೆಳಗ್ಗ್ಗೆ ಬೆಂಗಳೂರಿನ ಸಿಟಿ ಇನಿಸ್ಟಿಟ್ಯೂಟ್ ನಲ್ಲಿ ಬಿಡುಗಡೆ ಮಾಡಿದರು. ತೆಲುಗಿನ 'ಉಲ್ಲಾಸಂಗಾ ಉತ್ಸಾಹಂಗ' ಚಿತ್ರರೀಮೇಕ್ ಇದಾಗಿದ್ದು, ಮೂಲ ಚಿತ್ರದಲ್ಲಿ ಯಶೋಸಾಗರ್ ಮತ್ತು ಸ್ನೇಹಾ ಉಲ್ಲಾಳ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಲ್ಲಾಸ ಉತ್ಸಾಹಕ್ಕೆ