ಬೆಂಗಳೂರು, ಸೆ. 14 : ಸರಕಾರ ಅಭದ್ರಗೊಳಿಸಲು ಕಾಂಗ್ರೆಸ್ ಸಂಚು ನಡೆಸುತ್ತಿದೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಕ್ಕೆ ಕೆಪಿಸಿಸಿ ಕೆಂಡಾಮಂಡಲವಾಗಿದೆ. ಮುಖ್ಯಮಂತ್ರಿಗಳ ಆಧಾರ ರಹಿತ ಹೇಳಿಕೆಗಳು ಮುಂದುವರೆದರೆ ಅವರ ಮಾನನಷ್ಟ ಮೊಕದ್ದಮೆ ದಾಖಲಿಸುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯುವಂತೆ ಮಾಡಿ ಸರಕಾರದ
ಚಿಕ್ಕಮಗಳೂರು ಎಂದೊಡನೆ ನೆನಪಿಗೆ ಬರುವುದು ದೊಡ್ದ ದೊಡ್ದ ಕಾಫಿ ಎಸ್ಟೆಟು, ಗುಡ್ದಗಾಡು ಪ್ರದೀಶ, ರೆಸಾರ್ಟ್ ಗಳು, ಪ್ರಶಾಂತವಾದ ವಾತಾವರಣ. ಈ ಪ್ರಶಾಂತವಾದ ವಾತಾವರಣಕ್ಕೆ ಕೋಮುಗಲಭೆ ಎಂಬ ಕಪ್ಪು ಚುಕ್ಕೆ ಶಾಪವಾಗಿ ಕಾಡುತ್ತಿದೆ. ಕೆಲವು ದಿನಗಳ ಹಿಂದೆ ದಟ್ಸ್ ಕನ್ನಡದಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಕೋಮು ಗಲಭೆ ಬಗ್ಗೆ ಓದಿದ್ದೆ. ಈ ಗಲಭೆ ಶುರುವಾದಾದುದು ಹೇಗೆ? ಇದರ ಹಿನ್ನಲೆ ಏನು?
ಮೈಸೂರು, ಜು, 29 : ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಬಳ್ಳಾರಿ ಜೈಲಿನಲ್ಲಿದ್ದ ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.ಮೈಸೂರಿನ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ ಎಂ ಕಾಮ್ಟೆ ಅವರು ಮುತಾಲಿಕ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿ 10 ಸಾವಿರ ಭದ್ರತಾ ಠೇವಣಿ ಇಟ್ಟಕೊಂಡು ಮುತಾಲಿಕ ಅವರನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿದ್ದಾರೆ.
ಭಾರತ ಸಂವಿಧಾನದಲ್ಲಿ ಪತ್ರಿಕೋದ್ಯಮವನ್ನು ಸಂವಿಧಾನದ ನಾಲ್ಕನೇ ಸ್ತಂಭ ಎಂದು ಕರೆಯುತ್ತಾರೆ . ಪತ್ರಿಕೆ ಈ ಸಮಾಜದ ಕೈಗನ್ನಡಿ. ಮಾಧ್ಯಮಕ್ಕೆ ಸ್ವತಂತ್ರವಿಲ್ಲವಾದರೆ ಹಲ್ಲು ಕಿತ್ತ ಹಾವಿನ ಹಾಗೆ ಇರುತ್ತಿತ್ತು. ಸರ್ಕಾರದ ಆಡಳಿತ, ಯೋಜನೆಗಳು ಎಲ್ಲ ಲೋಪದೋಷಗಳನು ಎತ್ತಿಹಿಡಿಯಬೇಕೆಂದು ನಮ್ಮ ಸಂವಿಧಾನದಲ್ಲಿ ಪತ್ರಿಕಾ ಸ್ವಾತಂತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ರಾಜಕಾರಣಿಗಳು, ಪ್ರಭಾವಶಾಲಿ ವ್ಯಕ್ತಿಗಳು ಅನ್ಯಾಯ, ಅಕ್ರಮಗಳನ್ನು ಭಯವಿಲ್ಲದೆ
ಬೆಂಗಳೂರು, ಜು. 12 : ಮೈಸೂರು ಗಲಭೆಗೆ ಬಿಜೆಪಿ ಅಂಗ ಸಂಸ್ಥೆಗಳು ನಡೆಸಿದ ಷಡ್ಯಂತ್ರ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಖಾಸಗಿ ಹೋಟೆಲ್ ನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಸಭೆಗೆ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆರ್ಎಸ್ಎಸ್ ನೇತೃತ್ವದ ಸಂಘ ಪರಿವಾರಗಳು ಮೈಸೂರಿನ ಶಾಂತಿಗೆ ಭಂಗ ತಂದಿವೆ ಎಂದು ತರಾಟೆಗೆ ತೆಗೆದುಕೊಂಡರು.
ಬೆಂಗಳೂರು, ಜು. 10 : ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ನಡೆಯುತ್ತಿರುವ ಕೋಮುಗಲಭೆಯೊಂದು ವ್ಯವಸ್ಥಿತ ಸಂಚು. ಸರಕಾರಕ್ಕೆ ಮಸಿ ಬಳಿಯಲು ಕಾಣದ ಕೈಗಳು ಈ ಘಟನೆಯಲ್ಲಿ ಭಾರಿ ಷಡ್ಯಂತ್ರ ರೂಪಿಸಿವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಧಾನ ಪರಿಷತ್ ನಲ್ಲಿ ಮಾತನಾಡಿದರು. ರಾಜ್ಯದ ಕೋಮುಸೌಹಾರ್ದತೆ ಹಾಗೂ ಶಾಂತಿ ಕದಡಲು ಕೆಲ ವ್ಯಕ್ತಿಗಳು ಸಂಘಟನೆಗಳ ಹೆಸರಿನಲ್ಲಿ ಗಲಭೆಗೆ ಪ್ರಚೋದನೆ
ಮೈಸೂರು, ಜು. 10 : ಕೋಮುಸೌಹಾರ್ದ ಹಾಳು ಮಾಡುತ್ತಿರುವ ಕೆಎಫ್ ಡಿ ಹಾಗೂ ಪಿಎಫ್ ಐ ಸಂಘಟನೆಗಳನ್ನು ನಿಷೇಧಿಸುವ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜೊತೆಗೆ ಚರ್ಚಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ತಿಳಿಸಿದ್ದಾರೆ. ಕಿಡಿಗೇಡಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಯುವಮೂರ್ಚಾ ಅಧ್ಯಕ್ಷ ವಿ ಗಿರಿಧರ್ ಅವರ ಆರೋಗ್ಯ ವಿಚಾರಿಸಿದ ನಂತರ ಮಾದ್ಯಮ
ಮೈಸೂರು, ಜು. 9 : ಇತ್ತೀಚೆಗೆ ನಗರದಲ್ಲಿ ನಡೆದ ಕೋಮುಗಲಭೆ ಖಂಡಿಸಿ ಪಾಫುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನಡೆಸುತ್ತಿದ್ದ ಜೈಲ್ ಭರೋ ಚಳುವಳಿ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಗಾಳಿಯಲ್ಲಿ ಗುಂಡು ಹಾಗೂ ಲಾಠಿ ಪ್ರಹಾರ ನಡೆಸಿರುವ ಘಟನೆ ಗುರುವಾರ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ನಡೆದಿದೆ.ಅತ್ತ ಇಂದು ವಿಧಾನಸಭೆಯಲ್ಲಿ ಅರಂಭವಾಗಿರುವ
ಮೈಸೂರು, ಜು. 9 :ಮೈಸೂರು ನಗರದಲ್ಲಿ ನಡೆದ ಕೋಮು ಗಲಭೆಗಳ ಹಿಂದೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಇದೆ. ಶಾಂತಿ ಕದಡುವ ಶಕ್ತಿಗಳ ವಿರುದ್ಧ ಸರ್ಕಾರ ಕೈಗೊಂಡು ಕೆಲವು ಕಠಿಣ ಕ್ರಮಗಳ ಫಲವಾಗಿ ದೊಡ್ಡ ಪ್ರಮಾಣದಲ್ಲಿ ಗಲಭೆಯಾಗುವುದನ್ನು ನಿಯಂತ್ರಿಸಲಾಗಿದೆ. ಇದರೊಟ್ಟಿಗೆ, ಸಂಬಂಧಿಸಿದವರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್
ಮೈಸೂರು, ಜು. 03 : ಮೈಸೂರು ನಗರದಲ್ಲಿ ಗಲಭೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ದೃಷ್ಟಿಯಿಂದ ತಕ್ಷಣವೇ ಮೈಸೂರು ನಗರ ಪೋಲೀಸ್ ಕಮೀಷನರೇಟ್ ವ್ಯಾಪ್ತಿಯ ಉದಯಗಿರಿ ಪೋಲೀಸ್ ಠಾಣೆ, ನರಸಿಂಹರಾಜ ಪೋಲೀಸ್ ಠಾಣೆ, ಲಷ್ಕರ್ ಪೋಲೀಸ್ ಠಾಣೆ ಮತ್ತು ಮಂಡಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆಯಿಂದ ಸೋಮವಾರ ಮಧ್ಯರಾತ್ರಿ 12 ಗಂಟೆಯವರೆಗೆ ಕಲಂ