ಕನ್ನಡದಲ್ಲಿ ಚಿತ್ರದ ಶೀರ್ಷಿಕೆಗಳಿಗೇನು ಬರವಿಲ್ಲದಿದ್ದರೂ ಹಿಂದಿನ ಚಿತ್ರದ ಹೆಸರನ್ನು ತಮ್ಮ ಚಿತ್ರಕ್ಕಿಟ್ಟುಕೊಳ್ಳುವುದು ಇಂದು ಮುಂದುವರೆದಿದೆ. `ಮಾಸ್ಟರ್` `ಸ್ಕೂಲ್ಮಾಸ್ಟರ್` ಆಗಿ ಬದಲಾಗಿದ್ದು ಮೇಲಿನ ಮಾತಿಗೆ ಒಂದು ಉದಾಹರಣೆ. ಇದೇ ಸಾಲಿಗೆ ಈ ವಾರ ಮತ್ತೊಂದು ಸೇರ್ಪಡೆ `ಕೆಸರಿನ ಕಮಲ`. ಎಪ್ಪತ್ತರ ದಶಕದಲ್ಲಿ ಖ್ಯಾತ ಸಾಹಿತಿ ದಿವಂಗತ ಆರ್.ಎನ್.ಜಯಗೋಪಾಲ್ ಕೋಮಲ್ ಪ್ರೊಡಕ್ಷನ್ಸ್ ಸಂಸ್ಥೆಗಾಗಿ ನಾಗರಾಜ್, ಕಲ್ಪನ ಅಭಿನಯದಲ್ಲಿ ಈ ಹೆಸರಿನ
ಇದು ಆಡಳಿತ ಪಕ್ಷದ ಪ್ರಾರ್ಥನಾಗೀತೆಯಲ್ಲ. ಕೆಸರಿನ ಕಮಲದ ಹಾಡು. ಸಿನೆಮಾ ಮನೋರಂಜನ ಕ್ಷೇತ್ರ. ಇದರಿಂದ ತಿಳಿದುಕೊಳ್ಳುವುದು ಏನಿಲ್ಲ ಎನ್ನುವ ಮಂದಿಗೆ ‘ಕೆಸರಿನ ಕಮಲ‘ ಉತ್ತರ ನೀಡಲಿದೆ. ಚಿತ್ರದ ‘ನಾಮಧಾತೆ ಶಾರದಮಾತೆ ಲೋಕವಿಧೆಯತೆ ನಿನ್ನಯ ಗೀತೆ‘ ಎಂಬ ಹಾಡಿನ ಚಿತ್ರೀಕರಣ ಮಾಸ್ಟರ್ ಶ್ರೀನಿವಾಸ್ ಅಭಿನಯದಲ್ಲಿ ಕಡಬಗೆರೆಯ ಪ್ರೌಡಶಾಲೆಯಲ್ಲಿ ಚಿತ್ರೀಕೃತವಾಯಿತು. ಈ ಗೀತೆಯನ್ನು ಆಲಿಸಿದ ಶಾಲಾ ಮುಖ್ಯೋಪಾದ್ಯಾಯರು ಮೇಲಿನ ಗೀತೆಯನ್ನು