ಬಳ್ಳಾರಿ, ಅ. 31 : ಕರ್ನಾಟಕದ ಏಕೈಕ ಮಹಿಳಾ ಸಂಸದೆ ಜೆ. ಶಾಂತಾ ಅವರು ಕರ್ನಾಟಕದ ಏಕೈಕ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ವಿರುದ್ಧ ತಿರುಗಿಬಿದ್ದಿದ್ದಾರೆ. ಯಡಿಯೂರಪ್ಪ ವಿರುದ್ಧ ಯುದ್ಧ ಸಾರಿರುವ ರೆಡ್ಡಿ ಬ್ರದರ್ಸ್ ಸೋದರಿ ಶಾಂತಾ ಏಕವಚನದಲ್ಲಿ ಶೋಭಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಶೋಭಾ ಕರಂದ್ಲಾಜೆ ಕಾರ್ಯವೈಖರಿ, ವಿವಿಧ ಇಲಾಖೆಯಲ್ಲಿನ ಹಸ್ತಕ್ಷೇಪ, ಸಚಿವ-ಸಂಸದರ ನಿರ್ಲಕ್ಷ್ಯದ ವಿರುದ್ಧ ರೆಡ್ಡಿ
* ಅರುಣ್ ರೆಡ್ಡಿಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ,ಕರ್ನಾಟಕದ ಬಿಜೆಪಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಪ್ರಜ್ಞಾವಂತರಿಗಿರಲಿ ತೀರ ಜನಸಾಮಾನ್ಯರಿಗೂ ಜಿಗುಪ್ಸೆ ತಂದಿವೆ. ನಿಮ್ಮ ಪಕ್ಷದ ಭಿನ್ನಮತೀಯ ಚಟುವಟಿಕೆಗಳು ಕರ್ನಾಟಕದ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಜನತೆ ನಿಮ್ಮಲ್ಲಿ ಇಟ್ಟ ನಂಬಿಕೆಗೆ ಧೋಕಾ ಆಗಿದೆ.ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು, ನೀವು ಉಪಯೋಗಿಸಿಕೊಂಡ ವ್ಯಕ್ತಿಗಳು ಮತ್ತು ಅವರ ಸಂಪನ್ಮೂಲಗಳು ಇಂದು ನಿಮ್ಮ ಪಾಲಿಗೆ ದಿನನಿತ್ಯದ ಕಂಟಕಗಳಾಗಿ
ಬೆಂಗಳೂರು, ಅ. 28 : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಎಂಥ ಜೋಕಿಗೂ ನಗುವುದಿಲ್ಲ. ನಗುವುದು ಹೋಗಲಿ ಮುಗುಳ್ನಗುವುದೂ ಇಲ್ಲ. ಎಂಥದೇ ತಮಾಷೆಯ ವಿಷಯವಿದ್ದರೂ ಗಂಭೀರವದನರಾಗಿಯೇ ಇರುತ್ತಾರೆ. ಇನ್ನು ಗಂಭೀರ ವಿಷಯವಾಗಿದ್ದರಂತೂ ತಮ್ಮ ಎಂದಿನ 'ದೀರ್ಘ ಚಿಂತನೆ'ಗೆ ಜಾರಿಬಿಡುತ್ತಾರೆ.ಈ ಎಲ್ಲ ಅವರ ಬಗೆಗಿನ ಅನಿಸಿಕೆಗಳನ್ನು ದೇವೇಗೌಡರು ಸುಳ್ಳುಮಾಡಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿ ಗಹಗಹಿಸಿ ನಕ್ಕಿದ್ದಾರೆ,
ಯಡಿಯೂರಪ್ಪ ಸರಕಾರದ ಪತನಕ್ಕೆ ಬಳ್ಳಾರಿಯ ಗಣಿಧಣಿಗಳೇ ಮುಹೂರ್ತ ರೆಡಿ ಮಾಡಿದ್ದಾರೆ. ಯಡಿಯೂರಪ್ಪನವರ ಮುಖಭಾವವೇ ಎಲ್ಲ ಹೇಳುತ್ತಿದೆ. ಮೊದಲಿನಿಂದ ಮುಖ್ಯಮಂತ್ರಿಯನ್ನು ಧಿಕ್ಕರಿಸಿಕೊಂಡೇ ಬಂದಿರುವ ಈಶ್ವರಪ್ಪ ಕೂಡ ತಾಂಡವ ನೃತ್ಯ ಶುರುಮಾಡಿದ್ದಾರೆ. ಅವರಿಗೆ ಬೆಂಬಲವಾಗಿ ಜಗದೀಶ್ ಶೆಟ್ಟರ್ ಕೂಡ ಹೆಗಲು ಕೊಟ್ಟರೆ ಅಚ್ಚರಿಯಿಲ್ಲ. ಅತಿಯಾದ ಆತ್ಮವಿಶ್ವಾಸ, ದುರಹಂಕಾರಿ ಸ್ವಭಾವ ಯಡಿಯೂರಪ್ಪನವರಿಗೆ ಮುಳುವಾಗಲಿದೆಯೇ? ಉತ್ತರ ಸದ್ಯಕ್ಕೇ ದೊರೆಯಲಿದೆ. ಈ ಎಲ್ಲ ಬೆಳವಣಿಗೆ
ಓದುಗ ಮಿತ್ರರೇ, ನಿಮ್ಮಲ್ಲಿ ಕೆಲವರಿಗೆ ಈ ಭಾಷೆ ಹೊಸದೆನಿಸಬಹುದು. ಇದು ಸಾಮಾನ್ಯವಾಗಿ ಸೊರಬ,ಸಾಗರ, ಸಿರ್ಸಿ-ಸಿದ್ದಾಪುರ ಮು೦ತಾದ ಮಲೆನಾಡಿನಕಡೆ ಪ್ರಚಲಿತವಿರುವ ಆಡು ಭಾಷೆ. ಇದರಲ್ಲಿ ಉತ್ತರ ಕರ್ನಾಟಕದ ಗ೦ಡುಭಾಷೆ, ಹವ್ಯಕರ ಹವಿಗನ್ನಡ, ಒಕ್ಕಲಿಗರ ಮನೆಭಾಷೆ ಮತ್ತು ಪುಸ್ತಕದ ಕನ್ನಡ... ಎಲ್ಲದರ ಮಿಶ್ರಣ ಇದೆ. ನಮ್ಮ ಬ೦ಗಾರಪ್ನೋರದ್ದೂ ಮನೆ ಭಾಷೆ ಹೆಚ್ಚುಕಮ್ಮಿ ಇದೇ ಅನ್ನೋದು ನಿಮಗೆ ಗೊತ್ತಿರಲಿ ಅಂತ!.....ಎ೦ಜಾಯ್ ಮಾಡಿ.*
ಮಾಜಿ ಮುಖ್ಯಮಂತ್ರಿ ಮತ್ತು ಕೆಲವೇ ಗಂಟೆಗಳಲ್ಲಿ ಮಾಜಿ ರಾಜ್ಯಪಾಲ ಎನಿಸಿಕೊಳ್ಳಲಿರುವ ಎಸ್. ಎಂ. ಕೃಷ್ಣ ಅವರ ಮತ್ತೊಂದು ರಾಜಕೀಯ ಇನ್ನಿಂಗ್ಸ್ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಕರ್ನಾಟಕ ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿಯುವುದರ ಬಗೆಗೆ ಅವರು ಏನೂ ಹೇಳಿಲ್ಲವಾದರೂ, ಸೋನಿಯಾ ಗಾಂಧೀ ಆದೇಶ ಕೊಟ್ಟ ಮೇಲೆ ಅವರು ಗಂಟೂಮೂಟೆ ಕಟ್ಟಿಕೊಂಡು, ಪ್ರೇಮಾ ಅವರನ್ನು ಕರೆದುಕೊಂಡು ಬೆಂಗಳೂರಿಗೆ ವಾಪಸ್ಸಾಗಲೇಬೇಕು. ರಾಜ್ಯ ಕಾಂಗ್ರೆಸ್ಸಿನ
ಬೆಂಗಳೂರು, ನ.12 : ರಾಜ್ಯ ವಿಧಾನಸಭೆಯಲ್ಲಿ ನ.23ರಂದು ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸಮತ ಯಾಚಿಸಲಿದ್ದಾರೆ. ಸುದ್ದಿಗಾರರ ಜೊತೆ ಸೋಮವಾರ(ನ.12) ಮಾತನಾಡುತ್ತಿದ್ದ ಯಡಿಯೂರಪ್ಪ, ತಮ್ಮ ಐವರು ನೂತನ ಸಚಿವರ ಚೊಚ್ಚಲ ಸಂಪುಟ ಸಭೆ ನಂತರ ಮಾತನಾಡುತ್ತ ಈ ವಿಚಾರ ತಿಳಿಸಿದರು. ಮುಂದಿನ ನಾಲ್ಕು ದಿನಗಳಲ್ಲಿ ಜೆಡಿಎಸ್ ಪಕ್ಷದ ಶಾಸಕರು, ಸಂಪುಟ ಪ್ರವೇಶಿಸಲಿದ್ದಾರೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ
ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನಮಸ್ಕಾರ. ಕತ್ತಲು ಬೆಳಕು ನಿಮಗೇನು ಹೊಸತಲ್ಲ. ಎಲ್ಲವೂ ಮುಗಿಯಿತು ಎನ್ನುವಾಗಲೇ, ದೀಪಾವಳಿಯ ಬೆಳಕು ನಿಮ್ಮ ಬದುಕಿಗೆ ಪ್ರವೇಶಿಸಿದೆ. ಇಂದು ಬೆಳಗ್ಗೆ ವಿಧಾನಸೌಧದ ಮೆಟ್ಟಿಲ ಮೇಲೆ ನಿಂತು ಪ್ರಮಾಣ ವಚನ ಸ್ವೀಕರಿಸುವಾಗ, ನಿಮ್ಮ ಮುಖದಲ್ಲಿನ ಭಾವಗಳು ನಮಗೆ ಅರ್ಥವಾದವು. ರಾಜ್ಯದ ಸಿಎಂ ಕುರ್ಚಿ ಸಿಕ್ಕಿದ ಸಂತೋಷ ಒಂದು ಕಡೆ.. ಜವಾಬ್ದಾರಿ ಪೂರೈಸಿ
ಬೆಂಗಳೂರು, ನ.12 : ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ, ಬಿಜೆಪಿಯ ನಾಲ್ವರು ಶಾಸಕರು ಸಚಿವರಾಗಿ ಇಂದು ಮಧ್ಯಾಹ್ನ 12ಗಂಟೆಗೆ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭ ಕೇವಲ ಹತ್ತೆ ನಿಮಿಷಗಳಲ್ಲಿ ಮುಕ್ತಾಯವಾಯಿತು. ಬಿಜೆಪಿಯ ಜಗದೀಶ್ ಶೆಟ್ಟರ್, ಆರ್.ಅಶೋಕ್, ಗೋವಿಂದ ಕಾರಜೋಳ, ಬಿ.ಎಸ್.ಆಚಾರ್ಯ ಅವರಿಗೆ ರಾಜ್ಯಪಾಲ ರಾಮೇಶ್ವರ ಠಾಕೂರು ಪ್ರಮಾಣ ವಚನ ಬೋಧಿಸಿದರು. ಉಪಮುಖ್ಯಮಂತ್ರಿಯಾಗಿ ಯಾರೂ ಪ್ರಮಾಣ
ಬೆಂಗಳೂರು, ನ.12 : ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಸೋಮವಾರ(ನ.12)ಮಧ್ಯಾಹ್ನ 12.00ಕ್ಕೆ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ರಾಮೇಶ್ವರ ಠಾಕೂರು ಪ್ರಮಾಣ ವಚನ ಬೋಧಿಸಿದರು. ವಿಧಾನಸೌಧದ ಮುಂಭಾಗ ನಡೆದ ಸಮಾರಂಭದಲ್ಲಿ ಸುಮಾರು 20ಸಾವಿರಕ್ಕೂ ಅಧಿಕ ಜನರು ಹಾಜರಿದ್ದರು. ಮಂಡ್ಯ ಮತ್ತು ಶಿವಮೊಗ್ಗ ಜಿಲ್ಲೆಯಿಂದ ಯಡಿಯೂರಪ್ಪ ಅವರ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ಶಿಕಾರಿಪುರ ಒಂದರಿಂದಲೇ