ನವದೆಹಲಿ/ ಬೆಂಗಳೂರು, ಜು.4: ಕೇರಳದ ಜೆಡಿಎಸ್ ನಾಯಕ ವೀರೇಂದ್ರ ಕುಮಾರ್ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಅವರ ನಡುವಿನ ಭಿನ್ನಾಭಿಪ್ರಾಯಗಳು ಮುಗಿಲು ಮುಟ್ಟಿದ್ದು, ಇಂದು ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಈ ಮೂಲಕ ಜಾತ್ಯಾತೀತ ಜನತಾದಳ ಮತ್ತೆ ಹೋಳಾಗುವುದು ಹೆಚ್ಚೂ ಕಡಿಮೆ ಖಚಿತವಾದಂತಾಗಿದೆ.ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹಿನ್ನೆಡೆ, ಪ್ರಚಲಿತ ರಾಜಕೀಯ ವಿದ್ಯಮಾನಗಳು,
ಕೋಲ್ಕತ್ತಾ, ಜು. 28 : ಅಮೆರಿಕದೊಂದಿಗೆ ಕೇಂದ್ರ ಸರ್ಕಾರ ಮಾಡಿಕೊಳ್ಳಲು ಮುಂದಾಗಿರುವ ಅಣು ಒಪ್ಪಂದ ಬರೀ ಅಣ್ವಸ್ತ್ರ ತಯಾರಿಕೆ ಮಾತ್ರ ಎಂದು ತಿಳಿದರೆ ಅದು ತಪ್ಪು. ಈ ಒಪ್ಪಂದದಿಂದ ಭಾರತ ಅಭಿವೃದ್ಧಿ ಹೊಂದುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಶಕ್ತಿಯುತವಾದ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ವಿದೇಶಾಂಗ ಖಾತೆ ಸಚಿವ ಪ್ರಣಬ್ ಮುಖರ್ಜಿ ಸ್ಪಷ್ಟಪಡಿಸಿದರು. ಭಾನುವಾರ ನಗರದಲ್ಲಿ
ನವದೆಹಲಿ, ಜು. 8 : ಅಣು ಒಪ್ಪಂದ ಕುರಿತು ಎದುರಾಗಿರುವ ಬಿಕ್ಕಟ್ಟಿನ ಹಿನ್ನಲೆ ಯುಪಿಎ ಜತೆಗಿನ ಮೈತ್ರಿಯನ್ನು ಮುರಿದುಕೊಳ್ಳಲು 59 ಸಂಸದರನ್ನುಳ್ಳ ಎಡಪಕ್ಷಗಳು ಇಂದು ಸಭೆ ಸೇರಿ, ಅಂತಿಮ ನಿರ್ಣಯಗೊಂಡಿದೆ.. ಮಧ್ಯಾಹ್ನ 12:45 ರ ಸುಮಾರಿಗೆ ಬೆಂಬಲ ವಾಪಾಸ್ ಬಗ್ಗೆ ಪ್ರಕಾಶ್ ಕಾರಟ್ ಪ್ರಕಟಣೆ ನೀಡಿದರು. ಯುಪಿಎ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಂಡಿರುವ ಪತ್ರವನ್ನು ಪ್ರಣಬ್ ಮುಖರ್ಜಿ
ನವದೆಹಲಿ, ಜು.7: ಅಮೆರಿಕದೊಂದಿಗೆ ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ನಿಲುವು ಸ್ಪಷ್ಟಪಡಿಸಲು ಎಡಪಕ್ಷಗಳು ನೀಡಿದ ಗಡುವಿಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಪ್ರಧಾನಿ ಮನಮೋಹನ್ ಸಿಂಗ್ ಜಿ-8 ಶೃಂಗಸಭೆಗೆ ತೆರಳಲು ಸಿದ್ಧತೆ ನಡೆಸಿದ್ದಾರೆ. ರಾಜಕೀಯ ಅತಂತ್ರತೆ, ಹಣದುಬ್ಬರ ಏರಿಕೆ ಹಾಗೂ ಚುನಾವಣಾ ಸಾಧ್ಯತೆಗಳ ನಡುವೆ ಮನಮೋಹನ್ ಸಿಂಗ್ ಅವರು ಜಿ -8 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದು, ಅಮೆರಿಕಾ ಅಧ್ಯಕ್ಷ
ನವದೆಹಲಿ, ಜು. 4 : ನಾಗರಿಕ ಪರಮಾಣು ಒಪ್ಪಂದ ವಿಷಯದಲ್ಲಿ ಉಂಟಾಗಿರುವ ಬಿಕ್ಕಟ್ಟು ತೀವ್ರಗೊಂಡಿರುವ ಹಿನ್ನಲೆಯಲ್ಲಿ ಶುಕ್ರವಾರ ಎಡಪಕ್ಷಗಳ ನಡೆಸಿದ ನಿರ್ಣಾಯಕ ಸಭೆ ಮುಕ್ತಾಯಗೊಂಡಿದೆ. ಅಣು ಒಪ್ಪಂದ ಕುರಿತು ಪ್ರಧಾನಮಂತ್ರಿ ತಮ್ಮ ಸ್ಪಷ್ಟವಾದ ನಿಲುವನ್ನು ಜು. 7ರೊಳಗಾಗಿ ಘೋಷಿಸಬೇಕು ಎಂದು ಎಡಪಕ್ಷಗಳ ಮುಖಂಡರು ಯುಪಿಎ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಎಂ ಪ್ರಧಾನ
ನವದೆಹಲಿ, ಫೆ 29: ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಡಲಾಗಿದೆ; ಗ್ರಾಮೀಣ ಪ್ರದೇಶಗಳ, ಮುಖ್ಯವಾಗಿ ರೈತರ ಮತ ಗಿಟ್ಟಿಸಿಕೊಳ್ಳುವ ಗಿಮಿಕ್ ಆಗಿದೆ ; ಅಥವಾ ಶ್ರೀಸಾಮಾನ್ಯನ ಬದುಕು ಸುಧಾರಿಸುವ ಉದ್ದೇಶದ ಮುಲಾಮು ಮುಂಗಡಪತ್ರ ಆಗಿದೆ. ಹೇಗಾದರೂ ಬಣ್ಣಿಸಿರಿ.ಅಂತೂ, ಇಂದು ಪಿ. ಚಿದಂಬರಂ ಮಂಡಿಸಿದ ಮುಂಗಡಪತ್ರ ಜನಪರ ಬಜೆಟ್ ಎಂಬುದರಲ್ಲಿ ಎರಡು ಮಾತಿಲ್ಲ. 2008-09 ನೇ ಸಾಲಿನ ಕೇಂದ್ರ
ಬೆಂಗಳೂರು, ಫೆ.19 : ನಾಗರಿಕ ಅಣು ಒಪ್ಪಂದಕ್ಕೆ ಸದ್ಯದಲ್ಲಿಯೇ ಭಾರತ ಮತ್ತು ಅಮೆರಿಕ ಅಂಕಿತ ಹಾಕಲಿವೆ ಎಂದು ಅಣು ಶಕ್ತಿ ಆಯೋಗದ ಅಧ್ಯಕ್ಷ ಅನಿಲ್ ಕಾಕೋಡ್ಕರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಮಂಗಳವಾರ ಮಾತನಾಡುತ್ತಿದ್ದ ಅವರು, ಈ ವಿಷಯ ಅತ್ಯಂತ ಸೂಕ್ಷ್ಮವಾಗಿದ್ದು ಹಂತಹಂತವಾಗಿ ವ್ಯವಹರಿಸಬೇಕು. ಈ ಜಿಜ್ಞಾಸೆ ಸಮಯ
ನವದೆಹಲಿ, ಆಗಸ್ಟ್ 19: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಸ್ಥಿತಿ ಅಂತಂತ್ರವಾಗಿದೆ. ಅಣು ಒಪ್ಪಂದವನ್ನು ಬಿಡಿ ಇಲ್ಲದಿದ್ದರೆ ಕಠಿಣ ಪರಿಣಾಮ ಎದುರಿಸಿ ಎಂದು ಎಡಪಕ್ಷಗಳು ಸರ್ಕಾರಕ್ಕೆ ತಾಕೀತು ಮಾಡಿವೆ.ಯುಪಿಎ ಸರ್ಕಾರ ಈಗ ಪರಮಾಣು ಒಪ್ಪಂದ ಕೈಬಿಡಬೇಕು ಇಲ್ಲವೆ, ಎಡಪಕ್ಷಗಳನ್ನು ಕೈಬಿಡಬೇಕಾದ ಪರಿಸ್ಥಿತಿಗೆ ತಲುಪಿದೆ.ಕಾಂಗ್ರೆಸ್ ಪಕ್ಷ ತುರ್ತು ಸಭೆಯನ್ನು ಕರೆದು ಈ ಬಗ್ಗೆ ಚರ್ಚೆ ನಡೆಸುತ್ತಿದೆ. ತನ್ನ
ನವದೆಹಲಿ : ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸುವ ಕಾಲ ಸಾಧ್ಯತೆಗಳು ನಿಶ್ಚಿತವಾಗುತ್ತಿದೆ.ಗುರುವಾರ ನಡೆದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಸಭೆಯಲ್ಲಿ ಹಿರಿಯ ರಾಜಕಾರಣಿ ರಾಜಸ್ಥಾನದ ರಾಜ್ಯಪಾಲೆ ಪ್ರತಿಭಾ ಪಾಟೀಲ್ ಅವರ ಹೆಸರನ್ನು ರಾಷ್ಟ್ರಪತಿ ಸ್ಥಾನಕ್ಕೆ ಒಮ್ಮತದಿಂದ ಆರಿಸಲಾಯಿತು ಎಂದು ಸೋನಿಯಾ ಗಾಂಧಿಯವರು ಸುದ್ದಿಗಾರರಿಗೆ ತಿಳಿಸಿದರು.ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಿಂದ ಕೇಂದ್ರ ಸಚಿವ ಶಿವರಾಜ್